Saturday, July 10, 2010

'ಏನೂ ತಿನ್ನೋಲ್ಲಾ !ಆದರೂ ಶುಗರ್ರು '-ಭಾಗ 2

ಬೆಳಗಿನ ಜಾವ ಸುಮಾರು ಐದು ಗಂಟೆ .ಇನ್ನೂ ಮಸಕು ಮಸಕು ಕತ್ತಲೆ.ಡಿಸೆಂಬರ್ ತಿಂಗಳಾದ್ದರಿಂದ ಚುಮು ಚುಮು ಚಳಿ.ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದೆ .ಸ್ವಲ್ಪ ದೂರದಲ್ಲಿ ಎದುರಿನಿಂದ ಭಾರೀ ದೇಹದ ವ್ಯಕ್ತಿಯೊಬ್ಬ 'ಧಸ್ ಭುಸ್ -ಧಸ್ ಭುಸ್'ಎಂದು ಸದ್ದು ಮಾಡುತ್ತಾ ಓಡುತ್ತಾ ಬರುತ್ತಿದ್ದ.ತಕ್ಷಣ ಯಾರು ಅಂತಾ ಗುರುತು ಸಿಗಲಿಲ್ಲ.'ಹಾಯ್ ಸರ್'ಎಂಬ ರಾಜುವಿನ ಪರಿಚಿತ ದನಿ ಕೇಳಿತು.ಏದುತ್ತಲೇ ರಾಜು ಎದುರಿಗೆ ಬಂದು ನಿಂತ.ಮುಖದಲ್ಲಿ ಅದೇ ಮಾಸದ ನಗು!ಯಾರೇ ಅಗಲಿ ರಾಜುವನ್ನು ಮಾತನಾಡಿಸದೆ ಮುಂದೆ ಹೋಗುತ್ತಿರಲಿಲ್ಲ.ಅಂತಹ ವ್ಯಕ್ತಿತ್ವ ರಾಜುವಿನದು!ಆ ಚಳಿಯಲ್ಲೂ ಧಾರಾಕಾರವಾಗಿ ಬೆವರುತ್ತಿದ್ದ.ಸಾಮಾನ್ಯವಾಗಿ ಎಲ್ಲಾ ಮಧ್ಯ ವಯಸ್ಕರಂತೆಯೇ ರಾಜುವಿಗೂ 'ಮಧ್ಯ ಪ್ರದೇಶ'ವಿಸ್ತಾರವಾಗಿ ಬೆಳದಿತ್ತು .ಇದರ ಜೊತೆ ಶುಗರ್ ಬೇರೆ ಅಂಟಿಕೊಂಡಿತ್ತು.ತನ್ನ 'apple ಹೊಟ್ಟೆ'ಯನ್ನು ಕರಗಿಸಲು ಜಾಗಿಂಗು,ಶಟಲ್ ,ಜಿಮ್ಮು ಅಂತ ಏನೆಲ್ಲಾ ಕಸರತ್ತು ಮಾಡಿದರೂ ಹೊಟ್ಟೆ ಮಾತ್ರ ಒಂದಿಷ್ಟೂ ಕರಗುತ್ತಿರಲಿಲ್ಲ.ರಾಜು ಮಾತ್ರ ಸ್ವಲ್ಪವೂ ಬೇಸರವಿಲ್ಲದೆ 'ಏನ್ ಸಾರ್ ಈ ಹೊಟ್ಟೆ! ಒಳ್ಳೇ ಕನ್ನಂಬಾಡಿ ಕಟ್ಟೆ ಹಾಗಿದೆ!'ಎಂದು ತನ್ನನ್ನು ತಾನೇ ಹಾಸ್ಯ ಮಾಡಿಕೊಂಡು ನಗುತ್ತಿದ್ದ.'ಸಾರ್ ಇದೇನ್ ಸರ್ ನಿಮ್ಮ ಹೊಟ್ಟೆ!ಬರಗಾಲದವರ ಹೊಟ್ಟೆ ಒಳಕ್ಕೆ ಹೋದಹಾಗೆ ಆಗಿದೆ!ಸಾರ್ ನನ್ನ ಹೊಟ್ಟೆ ಹೇಗೆ ಕಮ್ಮೀ ಮಾಡೋದು ಹೇಳಿ 'ಎಂದ. 'ರೀ ರಾಜೂ ,ತಿನ್ನೋದು ಸ್ವಲ್ಪ ಕಮ್ಮೀ ಮಾಡ್ರೀ,ನಿಮ್ ಹೊಟ್ಟೆನೂ ಕಮ್ಮೀ ಆಗುತ್ತೆ 'ಎಂದೆ .'ಮೊದಲು ತಿನ್ನೋದಕ್ಕಿಂತಾ ಅರ್ಧದಷ್ಟು ಕಮ್ಮಿಮಾಡಿದೀನಿ ಸಾರ್ ಈಗ!'ಎಂದ ರಾಜು.'ಇಡ್ಲಿ ಆದರೆ ,ಟಿಫಿನ್ ಗೆ ಎಷ್ಟು ಇಡ್ಲೀ ತಿಂತೀರ್ರೀ ?ಎಂದೆ'.'ಇಡ್ಲಿ ಆದರೆ ಹನ್ನೆರಡು ಇಡ್ಲಿ ಸಾರ್ 'ಎಂದ.'ಕಮ್ಮೀ ಮಾಡಿದ್ದೀನಿ ಅಂದ್ರೀ!ಹನ್ನೆರಡು ಇಡ್ಲಿ ಕಮ್ಮಿಏನ್ರೀ ರಾಜು!!?'ಎಂದೆ .'ಮೊದಲೆಲ್ಲಾ ಒಂದು ದೊಡ್ಡ ಇಡ್ಲಿ ಕುಕ್ಕರ್ ನ ಪೂರಾ ಒಬ್ಬೆ ,24 ಇಡ್ಲಿಯನ್ನ ನನಗೊಬ್ಬನಿಗೇ, ತಟ್ಟೆಗೆ ಹಾಗೇ ತಳ್ಳುತ್ತಾ ಇದ್ದರೂ ಸಾರ್ ಮನೆಯವರು .ಈಗ ಬರೀ ಹನ್ನೆರಡು ಇಡ್ಲಿ.ಅರ್ಧಕ್ಕರ್ಧ ಕಮ್ಮಿ ಆಯ್ತಲ್ಲಾ !'ಎಂದ.'ಅಲ್ರೀ ರಾಜೂ ,ಟಿಫಿನ್ನಿಗೆ ಹನ್ನೆರಡು ಇಡ್ಲಿ ತಿಂದರೆ ಹೊಟ್ಟೆ ಹೇಗ್ರೀ ಕಮ್ಮಿ ಆಗುತ್ತೆ?ತಿಂಡಿಗೆ  ಮೂರು ಇಡ್ಲಿ  ತಿಂದರೆ ಸಾಕಪ್ಪ'ಎಂದೆ.'ನಿಮ್ಮ ಮಾತು ಕೇಳಿ ಮೂರು ಇಡ್ಲಿ ತಿಂದರೆ ,ಒಂದು ಗಂಟೆ ಹೊತ್ತಿಗೆ ತಲೆ ತಿರುಗಿ ಬಿದ್ದು ,ಸತ್ತೇ ಹೋಗ್ತೀನಿ ಅಷ್ಟೇ!ಹೋಗೀ ಸಾರ್'ಎಂದು ಜೋರಾಗಿ ನಗುತ್ತಾ   ಜಾಗಿಂಗ್ ಮುಂದುವರೆಸಿದ ರಾಜು.ಈ ಘಟನೆ ನಡೆದು ಈಗ ಸುಮಾರು ಆರು ವರ್ಷಗಳಾಗಿವೆ.ಕೆಲವು ದಿನಗಳ ಹಿಂದೆ ರಾಜು ಸಿಕ್ಕಿದ್ದ.ತನ್ನ 'apple ಹೊಟ್ಟೆ'ಮತ್ತು ಶುಗರ್ ಎರಡನ್ನೂ ಜತನದಿಂದ ಕಾಪಾಡಿಕೊಂಡು ಬಂದಿದ್ದಾನೆ ರಾಜು!

18 comments:

  1. ಡಾಕ್ಟ್ರೇ... ನಿಮ್ಮೆಲ್ಲಾ ವೈದ್ಯ ರಹಸ್ಯಗಳನ್ನ ಬ್ಲಾಗ್ ನಲ್ಲಿ ಹಂಚಿಬಿಡಿ. ನಿಮ್ಮ ಬರಹ ಓದಿಯಾದರೂ ಎಷ್ಟು ತಿನ್ನಬೇಕು ಮತ್ತು ಏನು ತಿನ್ನಬೇಕು ಅಂತ ಯೋಚಿಸಿ ತಿನ್ನುತ್ತೇವೆ.
    ನಾವು ಈಗಿನ ಕಾಲದ ಜನಾಂಗ ಒಳ್ಳೆಯ್ದಕ್ಕಿಂತ ಹಾಳಾದ್ದು ತಿನ್ನೋದೇ ಹೆಚ್ಚು. :(

    ReplyDelete
  2. ಭಾಶೆಮೇಡಂ;ನನ್ನ ಬ್ಲಾಗಿನಲ್ಲಿ ಇನ್ನು ಮುಂದೆ ಸಾಧ್ಯವಾದಷ್ಟೂ ವೈದ್ಯಕೀಯ ಲೇಖನಗಳನ್ನು ಹಾಕಲು ಪ್ರಯತ್ನಿಸುತ್ತೇನೆ.ನಿಮ್ಮ ಅಭಿಪ್ರಾಯಗಳಿಗೆ ಧನ್ಯ ವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿ.ನಮಸ್ಕಾರ.

    ReplyDelete
  3. ಡಾಕ್ಟರ್ ಜಿ..ಭಾಶೇ ಅವರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ..ಹಾಸ್ಯ ಲೇಖನದ ಅಡಿಯಲ್ಲಿ..ಒ೦ದು ಸ೦ದೇಶ, ತಿಳುವಳಿಕೆ ನಿಮ್ಮಿ೦ದ ಅಪೇಕ್ಷಿಸುತ್ತೇವೆ.

    ಅನ೦ತ್

    ReplyDelete
  4. ಅನಂತ್ ಸರ್;ಖಂಡಿತವಾಗಿ ನನಗೆ ತಿಳಿದಷ್ಟು ವಿಷಯಗಳನ್ನು ಬ್ಲಾಗಿನಲ್ಲಿ ತಿಳಿಸಲು ಪ್ರಯತ್ನಿಸುತ್ತೇನೆ.ನಿಮ್ಮೆಲ್ಲರ ಪ್ರೋತ್ಸಾಹ ಇದೆ ರೀತಿ ಮುಂದೆಯೂ ಇರಲಿ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  5. ವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೇ ಬರುತ್ತಿರಿ.ನಮಸ್ಕಾರಗಳು.

    ReplyDelete
  6. ಈ "ಶುಗರ್" ಸೃಷ್ಟಿಕರ್ತ ಯಾರಿರಬಹುದು? "ಹೊಟ್ಟೆ ತುಂಬಾ(?)ತಿನ್ನಲಿಕ್ಕೂ ಬಿಡೋದಿಲ್ಲ" ಎಂದು ಹಿಡಿ ಶಾಪ ಹಾಕಬಹುದಿತ್ತು.

    ReplyDelete
  7. ಭಟ್ಟರೇ;ನಿಮ್ಮ ಕಾಮೆಂಟ್ ತುಂಬಾ ಚೆನ್ನಾಗಿದೆ.ಡಯಾಬಿಟಿಸ್ ರೋಗಿಗಳು ಶಾಪಹಾಕ ಬೇಕಾದರೆ ಅವರವರ ಪ್ಯಾಂಕ್ರಿಯಾಸ್ ಗ್ರಂಥಿಗಳಿಗೆ ಸಾಕಸ್ಷ್ಟು ಇನ್ಸುಲಿನ್ ಅನ್ನು ಉತ್ಪತ್ತಿ ಮಾಡದೇ ಇದ್ದದ್ದಕ್ಕೆ ಶಾಪ ಹಾಕಿಕೊಳ್ಳಬಹುದು.ನೀವು ಪ್ರಶ್ನೆ ಕೇಳಿದ ಮೇಲೇ ನನಗೂ ಒಂದು ಅನುಮಾನ ಬಂತು.ಮಹಾ ಭಾರತದ ಭೀಮ,ಬಕಾಸುರ ಇವರೆಲ್ಲಾ ಬಂಡಿಗಟ್ಟಲೆ ಅನ್ನ ತಿನ್ನುತ್ತಿದ್ದರಲ್ಲಾ!ಅವರಿಗೆ ಡಯಾಬಿಟಿಸ್ ಬರುತ್ತಿರಲಿಲ್ಲವಾ?ಬಹುಷಃ ಅವರ ಪ್ಯಾಂಕ್ರಿಯಾಸ್ ಕೂಡ ಅವರಷ್ಟೇ ಗಟ್ಟಿ ಇರುತ್ತಿತ್ತೋ ಏನೋ!ಧನ್ಯವಾದಗಳು.

    ReplyDelete
  8. ಸ್ವಾಮೀ ನಿಮ್ಮ ಭಾಗ-೨ ಸಮರ್ಪಕವಾಗಿದೆ, ಅಂತೂ 'ಸಕ್ಕರೆ'ಯನ್ನು ಒಂದೇಸಲ ಕೊಟ್ಟರೆ ಜಾಸ್ತಿಯಾಗುತ್ತದೆ ಎಂದು ಎರಡು ಭಾಗ ಮಾಡಿದ್ದೀರಿ. ಭೀಮ-ಭಕಾಸುರರೆಲ್ಲ ತಿಂದ ಹಾಗೆ ಕೆಲಸಮಾಡುತ್ತಿದ್ದರು. ಅಂದಹಾಗೆ ನಿಮ್ಮ-ನಮ್ಮ ಊರಲ್ಲಿ ಕೂಲಿಯಾಳುಗಳು ತಿನ್ನುವುದು ಕಮ್ಮಿಯಿತ್ತೆ? ಇರಲಿಲ್ಲ, ಯಾಕೆಂದರೆ ಅವರು ಅಷ್ಟೇ ಬೆವರು ಹರಿಸುತ್ತಿದ್ದರು, ಕ್ಯಾಲೋರಿ ಕರಗಿ ಹೋಗುತ್ತಿತ್ತು! ಇವತ್ತಿಗೂ ನಮ್ಮೂರಲ್ಲಿ ಒಂದೇಸಲಕ್ಕೆ ಹತ್ತಾರು ಬೂಂದಿ ಲಾಡು-ಮೈಸೂರ್ ಪಾಕು, ಜಿಲೇಬಿ, ಜಹಾಂಗೀರು ಮುಂತಾದ ಸಿಹಿಯನ್ನು ತಿನ್ನುವವರೂ ಪಂಥದಮೇಲೆ ಇನ್ನೂ ಜಾಸ್ತಿ ತಿನ್ನುವವರೂ ಇದ್ದಾರೆ! ಆದರೆ ಅವರಿಗೆ ಶುಗರೇ ಇಲ್ಲ! ಹಾಯಾಗಿದ್ದಾರೆ! ಮರಹತ್ತುತ್ತಾರೆ, ಉಳುತ್ತಾರೆ, ತೋಟ-ತುಡಿಕೆಗಳಲ್ಲಿ ಸ್ವತಃ ಕೆಲಸ ಮಾಡುತ್ತಾರೆ, ಇವತ್ತಿನ ಈ ಅಧೋಗತಿಗೇ ಅರ್ಧ ಟಿ.ವಿ. ಇನ್ನರ್ಧ ಮಾನಸಿಕ ಒತ್ತಡ ಕಾರಣ. ತಿನ್ನುವುದರ ಬಗ್ಗೆ ,ಆಹಾರ ಕ್ರಮದ ಬಗ್ಗೆ ಭಾರತೀಯ ಆಯುರ್ವೇದ ಅತ್ಯಂತ ನಿರ್ಧಾರಿತ ಧೋರಣೆ ಹೊಂದಿದೆ-ಹೇಳಿದೆ, ಅನುಸರಿಸಬೇಕಲ್ಲ ? ಜನರಿಗೆ ಹಿತ್ತಳಗಿದ ಮದ್ದಲ್ಲ ! ಸತತ ಯೋಗ-ಧ್ಯಾನ-ನಿಯಮಿತ ಮತ್ತು ಹಿತಮಿತ ಆಹಾರ ಇವುಗಳಿಂದ ಮಧುಮೇಹಿಗಳೂ ಕೂಡ ಆರಾಮಾಗಿರಬಹುದು ಎಂಬುದು ತಿಳಿದುಬಂದಿದೆ. ಆದರೆ ಬೆಳಿಗ್ಗೆ ಬೇಗನೆ ಏಳುವುದು ಯಾರಿಗೆ ಬೇಕು ? ಸತತ ಟಿ.ವಿ. ನೋಡದೆ ಕಾಲಹಾಕಲು ಸಾಧ್ಯವೇ ? ಹೊಲದಲ್ಲಿ ಇರಲಿ ಮನೆಗೆಲಸಕ್ಕೂ ಆಳು ಬೇಕು! ಅದಕ್ಕೇ ಸ್ವಾಮೀ ನಮ್ಮೂರಲ್ಲಿ ಮಧುಮೇಹವನ್ನು ಶ್ರೀಮಂತರ ಕಾಯಿಲೆ ಎನ್ನುತ್ತಾರೆ ! ಎರಡು ಭಾಗ ಮಾಡಿ ತಿನ್ನಿಸಿದ ನಿಮ್ಮ ಸಕ್ಕರೆ ಮಾತ್ರೆ ಚೆನ್ನಾಗಿತ್ತು, ನಮಸ್ಕಾರ

    ReplyDelete
  9. ವಿ.ಆರ್.ಭಟ್ ಸರ್;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಹೇಗೆ ಧನ್ಯವಾದಗಳನ್ನು ಸಲ್ಲಿಸಬೇಕೋ ತಿಳಿಯುತ್ತಿಲ್ಲ.ನಾನು ಬ್ಲಾಗಿನಲ್ಲಿ ಹೇಳಬೇಕೆಂದುಕೊಂಡಿದ್ದನೆಲ್ಲಾ ಸವಿಸ್ತಾರವಾಗಿ ವಿವರಿಸಿದ್ದೀರಿ.ನಿಮ್ಮ ಜ್ಞಾನ ವಾಹಿನಿ ಆಗಾಗ ಹೀಗೇ ನನ್ನ ಬ್ಲಾಗಿನಲ್ಲೂ ಹರಿಯುತ್ತಿರಲಿ.ಪ್ರತಿಕ್ರಿಯಿಸಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  10. saralgannadali banda sugar rogada taraleyannu tilisiddakke dhanyavadagalu jotege edakke banda pratikriyegaloo chennagive.blogbhetigarigoo vandanegalu

    ReplyDelete
  11. ಹೇಮಚಂದ್ರ ;ನಿಮ್ಮ ಪ್ರೋತ್ಸಾಹ ಪೂರ್ವಕ ನುಡಿಗಳಿಗೆ ಧನ್ಯವಾದಗಳು.ಹೀಗೇ ಬರುತ್ತಿರಿ.ನಮಸ್ಕಾರ.

    ReplyDelete
  12. naanu kooda aste... maneli iddaga minimum 30 idly tintini :)

    ReplyDelete
  13. ಹಿಂದಿನ ಕಾಲದಲ್ಲಿ ಸೋಮಾರಿಜನರು ಮೂತ್ರ-ಶೌಚವೆಂದು ೪-೫ಕಿಮಿ ನಡೆಯುತ್ತಿದ್ದರು ಭಾವಿಯಿಂದ ನೀರು ಸೇದಿ ಹಂಡೆಗೆ ಹಾಕಿ ಹಂಡೆಯಿಂದ ಚೋಮ್ಬಿನಿಂದ ತೆಗೆದು ಬಕೆಟ್ಟಿಗೆ ತುಂಬಿ, ಬಕೆಟಿನ್ನಿಂದ ಚೋಮ್ಬಿನಿಂದ ಗೋರಿ ಮೈ ಮೇಲೆ ಹಾಕಿಕೊಂಡು ( ಹೊಗೆ ಕುಡಿವ ಬಚ್ಚಲಲ್ಲಿ)ಸ್ನಾನ ಮಾಡುತ್ತಿದ್ದರು. ಇನ್ನು ಆಹಾರವೋ, ರೊಟ್ಟಿ, ಗಂಜಿ, ತಿಳಿಸಾರು ಸೊಪ್ಪು ಇತ್ಯಾದಿ. ಇಡ್ಲಿ ವಡೆ -ದೋಸೆ ಸಿಹಿ -ಇತ್ಯಾದಿ ಹಬ್ಬ ಹರಿದಿನಕ್ಕೆ ಸೀಮಿತವಾಗಿತ್ತು. ಆದರೆ ಇಂದಿನ ದಿನದಲ್ಲಿ ಮನೆಯಲ್ಲಿಯೇ ಎಲ್ಲ ದೈನಂದಿನ ಕೆಲಸಗಳು ಮುಗಿಯುತ್ತವೆ. ಶವರನಿಂದ ನೀರು ಮೈಮೇಲೆ ಹರಿಯುತ್ತೆ!. ಪುರಿ ಉಪ್ಪಿಟ್ಟು ದೋಸೆ ಸಿಹಿ ಎಂಬ ತರಾವರಿ ಅಡಿಗೆಗಳು ದಿನನಿತ್ಯದ್ದಾಗಿವೆ ಮತ್ತೆ ವಾರಕ್ಕೊಂದೆರಡು ಹೊರ ಪಾರ್ಟಿಗಳು ದಿನಾಲು ಪೇಯಗಳು.
    ಹೀಗಾಗಿ ದುಡಿತ ಕಡಿಮೆಯಾಗಿದೆ ಮತ್ತು ಊಟ ಉತ್ಕೃಷ್ಟವಾಗಿದೆ. ಅಂದರೆ ಕ್ಯಾಲೋರೀ ತೆಗೆದುಕೊಳ್ಳುವದು ಹೆಚ್ಚಾಗಿದೆ ಮತ್ತು ದೇಹ ಅದನ್ನು ಉಪಯೋಗಿಸುವದು ಕಡಿಮೆಯಾಗಿದೆ.
    ನಮ್ಮ ಆಹಾರ ಕ್ರಮ ಮತ್ತು ಜೀವನಶೈಲಿಯಲ್ಲಿನ ಬದಲಾವಣೆ ಇಂದು ಮಧುಮೇಹ ಹೆಚ್ಚಾಗಲು ಕಾರಣವಾಗಿದೆ ಎಂದು ನನ್ನ ಅಭಿಪ್ರಾಯ. ಚೆಂದದ ಲೇಖನ.

    ReplyDelete
  14. ಶಿವಪ್ರಕಾಶ್;ನಾವೆಲ್ಲಾ ಸಣ್ಣವರಿರುವಾಗ ಮೂವತ್ತು ಇಡ್ಲಿ ತಿಂದವರೇ.ಆದರೆ ವಯಸ್ಸಾಗುತ್ತಾ ಕಡಿಮೆ ತಿಂದು ಹೆಚ್ಚು ಚಟುವಟಿಕೆಯಿಂದ ಇರುವುದು ಆರೋಗ್ಯಕ್ಕೆ ಒಳ್ಳೆಯದು.ಧನ್ಯವಾದಗಳು.

    ReplyDelete
  15. ಸೀತಾರಾಂಸರ್;ನಿಮ್ಮ ವಿಸ್ತೃತ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  16. ತೇಜಸ್ವಿನಿ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. Murthy Sir,,,

    tumbaa uttama lekhana...intaha vaidyakeeya lekhanagalu hecchu hecchu barali...dhanyavaadagalu....

    ReplyDelete

Note: Only a member of this blog may post a comment.