Tuesday, September 6, 2011

"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ "

ಗೋಡೆಯ ಬಿರುಕಿನಲ್ಲಿ 
ಅಲ್ಲೇ ಇರುಕಿನಲ್ಲಿ 
ಗರಿಗೆದರಿ ಚಿಗುರೊಡೆದು 
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ 
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ 
ಆರೈಕೆ ಮಾಡೆಂದು
ಗೋಗರೆಯಲಿಲ್ಲ!
ನಿನ್ನನ್ಯಾರೂ .......
ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ 
ಯಾವುದೋ ಗಾಳಿಯಲಿ
ಬೀಜವಾಗಿ ತೂರಿಬಂದು 
ಗೋಡೆಯಲಿ ಸಿಲುಕಿ 
ಮಿಡುಕದೆ 
ಸಿಡುಕದೆ 
ನಕ್ಕು ಹೊರ ಬಂದೆ 
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ
ಜೀವನೋತ್ಸಾಹಕ್ಕೆ 
ಇದೋ ..............,
ನನ್ನದೊಂದು ಸಲಾಂ! 

45 comments:

 1. ಸ್ಪೂರ್ತಿ ಕೊಡುವಂಥಹ ಭಾವಾರ್ಥ.. ಧನ್ಯವಾದಗಳು..

  ReplyDelete
 2. ಕಲರವ ಮೇಡಂ;ಓದುಗರಿಗೆ ಸಂತಸ ಕೊಡುವುದರಲ್ಲೇ ಕವನದ ಸಾರ್ಥಕತೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 3. ಪ್ರಕಾಶಣ್ಣ;ನಿಜವಾದ ಪ್ರತಿಭೆ ಕೂಡ ಈ ಚಿಗುರಿನ ಹಾಗೆ ಅಲ್ಲವೇ?ನನಗೆ ಸರಿಯಾದ ಅವಕಾಶ ಸಿಗಲಿಲ್ಲವೆಂದು ಎಂದೂ ಗೊಣಗಾಡುವುದಿಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 4. ಗುರುಗಳೇ,
  ಚಿಗುರು ಕವನ ಸೂಪರ್..........
  ಯಾರ ಹಂಗಿಲ್ಲದೆ ಬೆಳೆಯುವ ಈ ಚಿಗುರು ನಮಗೆ ಮಾದರಿಯಾಗಬೇಕು ಅಲ್ಲವೇ?

  ReplyDelete
 5. ಪ್ರವೀಣ್;ಬ್ಲಾಗಿನಲ್ಲಿ ಬಹಳ ದಿನಗಳ ನಂತರ ನಿಮ್ಮ ಪ್ರತಿಕ್ರಿಯೆಯನ್ನು ನೋಡಿ ಖುಷಿಯಾಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. wow.. yeshtu chennaagi barediddeeraa..
  ಮಣ್ಣಿನ ಹದಬೇಕೆಂದು
  ಗೊಣಗಲಿಲ್ಲ!
  ಪಾತಿ ಮಾಡಿ,ಬದು ತೋಡಿ
  ನೀರುಣಿಸಿ
  ಆರೈಕೆ ಮಾಡೆಂದು
  ಗೋಗರೆಯಲಿಲ್ಲ!... manushyanige yeshtu aaraike maadidru saakaagalve! ee chigurannu nodi kaliyuvudeshtide!!

  ReplyDelete
 7. ಸುಮನ ಮೇಡಂ;ಪ್ರಕೃತಿಯಿಂದನಾವು ಕಲಿಯುವುದು ಸಾಕಷ್ಟಿದೆ.ನಮಗೆ ಎಷ್ಟೆಲ್ಲಾ ಸವಲತ್ತುಗಳಿದ್ದರೂ ನಾವು ಗೊಣಗುವುದು,ಗೋಳಾಡುವುದು ನಡೆದೇ ಇದೆ.ತಮ್ಮ ಪ್ರತಿಕ್ರಿಯೆಗೆ ನನ್ನ ನಮನ.

  ReplyDelete
 8. ಡಾಕ್ಟ್ರೇ,
  ಚಿಗುರಿನ ಬೆಳವಣಿಗೆಗೆ ಯಾರ ಅಂಗು ಬೇಕಿಲ್ಲ. ತನ್ನಿಷ್ಟದಂತೆ ಬೆಳೆಯುವ ಅದು ನಮಗೆ ಖಂಡಿತ ಮಾದರಿ..ಚೆನ್ನಾಗಿದೆ ಪದ್ಯ..

  ReplyDelete
 9. ಸರ್, inspiring lines . . .
  ಈ ನಿಸರ್ಗದಲ್ಲೇ ಎಷ್ಟೊಂದು ಕಲಿಯಬೇಕಾದ ಪಾಠಗಳಿವೆ, ಅಲ್ವಾ ?
  ಒಂದು ಒಳ್ಳೆಯ ಕವನ ನೀಡಿದ್ದಕ್ಕೆ, ಥ್ಯಾಂಕ್ಸ್.

  ReplyDelete
 10. ಶಿವು;ಪ್ರಕೃತಿಯಲ್ಲಿ ಇಂತಹ ಅನೇಕ ಉದಾಹರಣೆಗಳಿವೆ.ನಾವು ಕಣ್ಣು ತೆರೆಯಬೇಕಷ್ಟೇ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 11. NRK;ಗೋಡೆಯಲ್ಲಿಯೇ ಚಿಗುರೊಡೆದ ಗಿಡವೊಂದು ನನ್ನ ಮನೆಯ ಮುಂದೆಯೇ ಇದೆ.ಎಲ್ಲಾ ಪ್ರತಿಕೂಲ ಸಂದರ್ಭಗಳಲ್ಲೂ ಕೆಲ ಪ್ರತಿಭೆಗಳು ಹೇಗೆ ಯಾರ ಸಹಾಯವೂ ಇಲ್ಲದೆ ಮೇಲೆ ಬರುತ್ತವೋ ಹಾಗೆ ,ಸಿಮೆಂಟಿನ ಗೋಡೆಯಲ್ಲೂ ಚಿಗುರೊಡೆಯುತ್ತಿದೆ ಗಿಡ.

  ReplyDelete
 12. ಜೀವಂತಿಕೆಯ ಸಂಕೇತ, ಜೀವ-ಭಾವದ ಸಂಕೇತ, ಹುಟ್ಟಲು ಅವಕಾಶ ಇದ್ದರೆ ಮುಂದೆ ನಾ ಹೇಗೋ ಬದುಕಿಕೊಂಡೇನು ಎಂಬ ಜೀವ-ಭಾವ ಸ್ಫುರಣೆ. ಹೇಗಿದ್ದರೂ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬದುಕಲು ಕಲಿ ಎಮ್ಬ ಸಂದೇಶ ಈ ಚಿತ್ರ ಕಾವ್ಯ, ನಿಮ್ಮನೆಗೆ ನಿನ್ನೆ ಬಂದಾಗ ಸಿಕ್ಕ ಆದರದ ಆತಿಥ್ಯಕ್ಕೆ ಶರಣು, ನಿಮ್ಮಿಂದ ಇಂತಹ ಹಲವು ಭಾವಗಳು ಸಹಜವಾಗಿ ಹೊರಹೊಮ್ಮಲಿ, ಹಲವು ನವಯುವಕರಿಗೆ ಸ್ಫೂರ್ತಿ ನೀಡಲಿ ಎಂದು ಹಾರೈಸುತ್ತೇನೆ, ಧನ್ಯವಾದಗಳು ಮತ್ತು ನಮಸ್ಕಾರಗಳು ನಿಮಗೂ ಮತ್ತು ನಿಮ್ಮ ಮನೆಯವರಿಗೂ.

  ReplyDelete
 13. ನಿಮ್ಮ ಕವನದಲ್ಲಿ ತು೦ಬಿರುವ ಅದಮ್ಯ ಚೈತನ್ಯಕ್ಕೆ
  ಜೀವನೋತ್ಸಾಹಕ್ಕೆ ನನ್ನದೊಂದು ಸಲಾಂ!.. ಅಭಿನ೦ದನೆಗಳು ಸರ್.

  ಅನ೦ತ್

  ReplyDelete
 14. ತುಂಬಾ ಖುಷಿಯಾಯ್ತು.

  ReplyDelete
 15. ಡಾಕ್ಟರ್ ಸರ್ ವಾಸ್ತವವನ್ನು ಎಂತಹ ಸುಂದರ ಕವಿತೆಯನ್ನಾಗಿ ಹೆಣೆದು ತಂದಿದ್ದೀರಿ. ಪ್ರಕೃತಿಯಲ್ಲಿನ ವಿಸ್ಮಯ ಸತ್ಯಕ್ಕೆ ಎಲ್ಲರೂ ಜೈ ಎನ್ನಬೇಕು. ಹಾಗೆ ಕವಿತೆಬರೆದ ಕೈ ಬೆರಳಿಗೆ , ನೋಡಿದ ಆ ಕಣ್ಗಳಿಗೆ, ಯೋಚಿಸಿದ ಆ ಮನಸಿಗೆ ಹಾಗು ಅದರ ಒಡೆಯನಿಗೆ ಜೈ ಹೋ
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 16. ಭಟ್ ಸರ್;ನಿಮ್ಮ ಪ್ರೀತಿಗೆ ಸ್ನೇಹಕ್ಕೆ ವಿಶ್ವಾಸಕ್ಕೆ ಶರಣು.ಬರುತ್ತಿರಿ.ನಮಸ್ಕಾರ.

  ReplyDelete
 17. ಅನಂತ್ ಸರ್;ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.

  ReplyDelete
 18. ನಾರಾಯಣ್ ಭಟ್;ನಿಮ್ಮ ಕಾಮೆಂಟ್ ಆನಂದ ತಂದಿದೆ.ಧನ್ಯವಾದಗಳು.

  ReplyDelete
 19. ಪ್ರೀತಿಯ ಬಾಲಣ್ಣ;ನಿಮ್ಮ ಪ್ರತಿಕ್ರಿಯೆ ಖುಷಿ ತಂದಿದೆ.ಅನಂತ ಧನ್ಯವಾದಗಳು.

  ReplyDelete
 20. ವ್ಹಾವ್, ಚಿಗುರನ್ನು ಬಿಂಬಿಸುತ್ತಾ ನಮ್ಮನ್ನೇ ತಿದ್ದುವ ಪ್ರಯತ್ನ ಇದು. ಯಾರೋ ಬಂದು ನಮ್ಮನ್ನು ಚಿಗುರಿಸುತ್ತಾರೆ, ಯಾರೋ ಬಂದು ನಮ್ಮನ್ನು ಬೆಳೆಸುತ್ತಾರೆ, ಯಾರೋ ಬಂದು ನಮ್ಮನ್ನು ಜಗತ್ ಪ್ರಸಿದ್ಧ ಮಾಡಿಬಿಡುತ್ತಾರೆ, ಎನ್ನುವ ಎಲ್ಲಾ ಸೋಮಾರಿಗಳಿಗೆ ಇದು ಛಾಟಿ ಏಟು.

  ಅದಿನ್ನೆಂತ ಜೀವನ ಪ್ರೀತಿ ನಿಮ್ಮದು. ಎಷ್ಟು ಸುಂದರವಾಗಿ ಯೋಚಿಸಬಲ್ಲ ಮನಸ್ಥಿತಿ ನಿಮ್ಮದು. ನಿಮ್ಮ ಬ್ಲಾಗ್ ಓದುವುದು ನನಗೆ ಕೋಶ ಓದಿದ ಅನುಭವ. ಸೂಪರ್...

  ಸರಳ ಸುಂದರ ರೀತಿಯಲ್ಲಿ ಬದುಕನ್ನು ವಿಷ್ಲೇಸುವ, ಅರ್ಥೈಸುವ ಕಲೆ ನಿಮಗೆ ಸಿದ್ಧಿಸಿದೆ. ಬಾಷೆಯ ಬಳಕೆಯಲ್ಲಿ ಹಿತ ಮಿತವಾದ ಹಿಡಿತವಿದೆ. ಕಾವ್ಯ ಕಬ್ಬಿಣದ ಕಡಲೆಯಾಗಬಾರದು ಎನ್ನುವ ಕೂಗಿಗೆ ಪ್ರತ್ಯುತ್ತರ ನಿಮ್ಮ ಈ ಕವಿತೆ.

  ನಿಮ್ಮ ಬ್ಲಾಗಿನಲ್ಲಿ ನಿಮ್ಮ ಕಾವ್ಯ ಕೃಷಿ ನಿರಂತರವಾಗಿರಲಿ.

  ReplyDelete
 21. ಹೌದು, ಇದೂ ಒಂದು ನೀತಿಕಥೆಯೇ :) ಚೆನ್ನಾಗಿದೆ ಸರ್ ಕವನ.

  ReplyDelete
 22. ಸುಂದರವಾದ ಕವನ. ಓದುತ್ತ ಖುಶಿಯಾಯಿತು.

  ReplyDelete
 23. ಬದರಿ;ರಂಗನ ಮುಂದೆ ಸಿಂಗನೆ?ನಿಮ್ಮ ಕವಿತೆಯ ಮುಂದೆ ನನ್ನದೇನಿಲ್ಲ ಬಿಡಿ.ನನ್ನ ಕವಿತೆಯನ್ನು ಹೊಗಳಿರುವುದು ನಿಮ್ಮ ಪ್ರೀತಿ ಮತ್ತು ಔದಾರ್ಯ.ಧನ್ಯವಾದಗಳು.

  ReplyDelete
 24. ಮನಸು ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 25. ಈಶ್ವರ್ ಭಟ್;ಅನಂತ ಧನ್ಯವಾದಗಳು.

  ReplyDelete
 26. ಸುನಾತ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 27. ತುಂಬಾ ಚೆನ್ನಾಗಿದೆ ಸರ್.

  ಕೆಲ ದಿನಗಳ ಹಿಂದೆ ಒಂದು ಮೇಲ್ಸೇತುವೆ ಹತ್ರ ಬೆಳೆದ ಗಿಡ ನೋಡಿ
  ನನ್ನ ತಂದೆ ಇದೆ ಅರ್ಥದ ಮಾತುಗಳನ್ನಾಡಿದ್ದರು . ಅನುಭವ ಬದುಕ ನೋಡುವ ರೀತಿ
  ಬಹು ಚೆನ್ನ
  ಸ್ವರ್ಣ

  ReplyDelete
 28. Dr, tumbaa sundara shabdgala sogasaada kavana

  odalu tadavaagide kshamisi

  ReplyDelete
 29. gold13;ನನ್ನ ಬ್ಲಾಗಿಗೆ ಸ್ವಾಗತ.ನೀವು ಹೇಳುವುದು ಸರಿ.ಬದುಕನ್ನು ಅನುಭವದ ಕಣ್ಣಿನಿಂದ ನೋಡಬೇಕು.ಧನ್ಯವಾದಗಳು.

  ReplyDelete
 30. ಗುರು ಸರ್;ಕವನ ನಿಮಗೆ ಇಷ್ಟವಾದದ್ದು ಖುಷಿ ಕೊಟ್ಟಿತು.ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

  ReplyDelete
 31. ಡಾ. ಟಿಡಿಕೆ..ನಿಮ್ಮ ಮನದ ಮೂಲೆಯಲ್ಲಿ ಅರಳುವ ಸೃಜನ ಬಳ್ಳಿಯ ಪ್ರತಿ ಚಿಗುರಿಗೆ ನನ್ನ ಸಲಾಂ...ಇದು ನಿಮ್ಮ ಹೃದಯವಂತಿಕೆಗೆ ಹಿಡಿದ ಕನ್ನಡಿ..ಬಹಳ ಭಾವಪೂರ್ಣವೆನಿಸುವ ಪದಬಳಕೆ.. ಏನಿದು..? ಬ್ಲಾಗಿನತ್ತ ಹೆಚ್ಚು ಬಾಗುತ್ತಿಲ್ಲವಲ್ಲ ನಮ್ಮ ಜನ ಎನ್ನುವಂತಾಗಿದ್ದ ನನ್ನ ಮನಸಿಗೆ ನಿಮ್ಮ ಪೋಸ್ಟ್ ನೋಡಿ ಸೆಳೆತ ಇದ್ರೆ ಯಾಕ್ಕಾಗೊಲ್ಲಾ ? ಅನ್ನಿಸ್ತು ...

  ReplyDelete
 32. vaaw.
  sogasaada kavana sir...

  jeevanotsaaha tumbuva kavana....

  ReplyDelete
 33. ಅಜಾದ್ ಸರ್;ಕವನವನ್ನು ಮೆಚ್ಚಿರುವುದು ನಿಮ್ಮೆಲ್ಲರ ಔದಾರ್ಯ.ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲಾ.ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ್ತಿರಿ ಸರ್.
  ನಮಸ್ಕಾರ.

  ReplyDelete
 34. ದಿನಕರ್ ಸರ್;ಕವನ ಬಹಳಷ್ಟು ಜನಕ್ಕೆ ಇಷ್ಟವಾಗಿದೆ.ಖುಷಿಯಾಯಿತು.
  ಬರುತ್ತಿರಿ.ನಮಸ್ಕಾರ.

  ReplyDelete
 35. namaskara sir,

  "urdvathege/ mokshakke mukha madida jeevagalu,
  eshwarechchege buduku bitta chethanagalu,
  Adamya chaithanya mokshakkaagiye annuthive vedagalu"

  thank u for "Adhamya spoorthige mattu Araluttiruva chethanagalige"

  nice kavana with lots of philosophy
  bye
  Ashok

  ReplyDelete
 36. ಬದುಕಿನ ಕಷ್ಟಗಳಲ್ಲಿ ಜರ್ಜರಿತರಾಗಿ ನಿರಾಷೆಅಯಲ್ಲಿ ಕೊರಗುವವರಿಗೆ ಸ್ಫೂರ್ತಿ ನೆಲೆ ನಿಮ್ಮ ಕವನ. ಜೈ ಹೋ!

  ReplyDelete
 37. Sundaravada kavithe....
  Aa chigurina chhalaveno sari... aadare vishada endare adannnu alli matte beLeyalu biduvudilla, allave?

  ReplyDelete