ನೆನ್ನೆಯ ಪ್ರಜಾವಾಣಿಯಲ್ಲಿ ಗುರುರಾಜ್ ಕರ್ಜಗಿಯವರ 'ಕರುಣಾಳು ಬಾ ಬೆಳಕೆ'ಓದಿದೆ .ಅದರಲ್ಲಿದ್ದ ವಿಚಾರಗಳು ನಮ್ಮೆಲ್ಲರ ಕಣ್ಣು ತೆರೆಸುವಂತಹದ್ದು.ನಮ್ಮ ಅತಿಯಾದ ಪ್ರೀತಿ ನಮ್ಮ ಪ್ರೀತಿ ಪಾತ್ರರನ್ನು ಕಟ್ಟಿ ಹಾಕುತ್ತಿದೆಯೇ?ನಾವೆಲ್ಲಾ ಯೋಚಿಸ ಬೇಕಾದಂತಹ ವಿಷಯ.ಲೇಖಕರು ಸಣ್ಣವರಿದ್ದಾಗ ಅವರ ಮನೆಯಲ್ಲಿ ಸಾಕಿದ ನಾಯಿ, ಬೆಳ್ಳಗಿರುವ ಬೆಣ್ಣೆಯ ಮುದ್ದೆಯಂತಿದ್ದ ಮರಿಯೊಂದನ್ನು ಹಾಕಿತ್ತು.ಇವರಿಗೆ ಅದನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.ಸದಾಕಾಲ ಅದನ್ನು ಎದೆಗೆ ಅವುಚಿಕೊಂಡೇ ಓಡಾಡುತ್ತಿದ್ದರು .ಆ ನಾಯಿಮರಿಗೋ ಹಿಂಸೆಯಾಗಿ ಕುಂಯ್ ಗುಡುತ್ತಿತ್ತಂತೆ.ಅವರಜ್ಜ ಅವರಿಗೆ'ನೀನು ನಿಜವಾಗಿ ನಾಯಿ ಮರಿಯನ್ನು ಪ್ರೀತಿಸುತ್ತಿದ್ದರೆ,ಅದನ್ನು ಕೆಳಗೆ ಬಿಡು.ಅದು ಸುಖವಾಗಿ ಆಟವಾಡಿಕೊಂಡು ಇರುವುದನ್ನು ನೋಡಿ ಸಂತಸಪಡು' ಎಂದರು.ಅಜ್ಜನ ಮಾತು ಕೇಳಿ,ಅದನ್ನು ಕೆಳಗೆ ಬಿಟ್ಟು ಅದು ಅಲ್ಲಿ ಇಲ್ಲಿ ಬಾಲ ಅಲ್ಲಾಡಿಸಿಕೊಂಡು ಓಡಾಡುವುದನ್ನು ನೋಡಿ ಖುಷಿ ಪಟ್ಟರಂತೆ.ಈ ಘಟನೆ ಯಿಂದ ನಾನು ದೊಡ್ಡದೊಂದು ಪಾಠ ಕಲಿತೆ ಎನ್ನುತ್ತಾರೆ ಲೇಖಕರು.ನೀವು ನಿಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೀರಾ? ಹಾಗಾದರೆ ಆಕೆ ನಿಮ್ಮ ಆಜ್ಞೆಯಂತೆಯೇ ನಡೆಯ ಬೇಕೆಂಬ ಹಠ ಬಿಡಿ.ಆಕೆಯ ಮೇಲೆ ನಿಮ್ಮ ಅಧಿಕಾರ ಚಲಾಯಿಸಬೇಡಿ.ನಿಮ್ಮ ಗಂಡನ ಬಗ್ಗೆ ನಿಮಗೆ ಪ್ರೀತಿಯೇ?ಹಾಗಾದರೆ ಅವರ ಬಗ್ಗೆ ಸಂಪೂರ್ಣ ನಂಬಿಕೆಯಿರಲಿ.ಅವರ ಎಲ್ಲಾ ಸಮಯವನ್ನೂ ನನಗೆ ಮೀಸಲಿಡಬೇಕೆಂಬ ಹಠ ಬೇಡ.
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
(ಇದು ಲೇಖಕರ ಅಭಿಪ್ರಾಯ.ನಿಮ್ಮ ಅಭಿಮತ ತಿಳಿದುಕೊಳ್ಳುವ ಕುತೂಹಲ ನನಗೆ.ನಿಮ್ಮ ಪ್ರತಿಕ್ರಿಯೆ ತಿಳಿಸಿ.)
enthaha arthada maatu sir........
ReplyDeletesariyaagide avara abhimata..
ಹೌದು, ಅರ್ಥಪೂರ್ಣವಾದ ಮಾತು ಸರ್. ಕಲಿಯಬೇಕಿದೆ ಮತ್ತು ಅಳವಡಿಸಿಕೊಳ್ಳಬೇಕಾದ್ದು ಅನ್ನಿಸುತ್ತಿದೆ.
ReplyDeleteದಿನಕರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಪ್ರೀತಿ ನಮ್ಮ ಪ್ರೀತಿಪಾತ್ರರಿಗೆ ಸಂಕೋಲೆಯಾಗಬಾರದು ಅಲ್ಲವೇ.
ReplyDeleteಈಶ್ವರ್ ಭಟ್;ನಮ್ಮ ವ್ಯಾಮೋಹ ನಾವು ಪ್ರೀತಿಸುವವರಿಗೆ ಕಿರಿಕಿರಿ ಉಂಟುಮಾಡಬಾರದು ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteತುಂಬಾ ಉತ್ತಮವಾದ ಬರಹಗಳು.. ಬದುಕಿನ ವಿಚಿತ್ರ ಸನ್ನಿವೇಶಗಳನ್ನೆಲ್ಲಾ ಕೇವಲ ೩ ನಿಮಿಷಗಳಲ್ಲಿ ಓದಿ ಮುಗಿಸುವ ಬರಹಗಳು. ಚಿಕ್ಕದಾದರೂ ,ಅದು ಕೊಡುವ ವಿಚಾರ ಧಾರೆ ಸ್ಪೂರ್ತಿಯುತವಾಗಿದ್ದು... ಅದನ್ನು ಓದುತ್ತಿದ್ದಂತೇ ನಮ್ಮನ್ನು ನಮಗೇ ಹೋಲಿಸಿಕೊಳ್ಳಲು ಆರಂಭಿಸುತ್ತೇವೆ. ..ಕ್ಷಣ ಹೊತ್ತು ಅಣಿ ಮುತ್ತು ಲೇಖನಗಳೂ ಇದೇ ಸಾಲಿಗೇ ಬರುತ್ತವೆ... ೩ ನಿಮಿಷದಲ್ಲಿ ಅವು ತಿಳಿಸುವ ಜೀವನದ ಪಾಠ ಅಪಾರ..
ReplyDeleteಉತ್ತಮ ಲೇಖನವನ್ನು ಬ್ಲಾಗಿಸಿದ್ದಕ್ಕೆ ಧನ್ಯವಾದಗಳು..
ಬನ್ನಿ ನಮ್ಮನೆಗೂ
http://chinmaysbhat.blogspot.com/
ಇತಿ ,ನಿಮ್ಮನೆ ಹುಡುಗ
ಚಿನ್ಮಯ ಭಟ್
ಚಿನ್ಮಯ್ ಭಟ್;ನೀವು ಹೇಳುವಂತೆ ನಿಜಕ್ಕೂ ಈ ಬರಹಗಳಲ್ಲಿ ಅಪಾರ ಜ್ಞಾನ ಭಂಡಾರವಿದೆ.ಓದಿ ನಮ್ಮ ಜೀವನದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ.ನಿಮ್ಮ ಬ್ಲಾಗಿಗೆ ಹೋಗಿ ನಿಮ್ಮ ಬರಹಕ್ಕೆ ಕಾಮೆಂಟ್ ಹಾಕಿದ್ದೇನೆ.ಧನ್ಯವಾದಗಳು.
ReplyDeleteಅತಿ ಪ್ರೀತಿಯು ವಿಷವಾಗಬಲ್ಲದು ಅಂತ ಅರಿವಾಯ್ತು. ಒಳ್ಳೆ ವಿಚಾರಗಳನ್ನ ಬ್ಲಾಗಿಸುವ ನಿಮ್ಮ ಸಹೃದಯತೆಗೆ ಶರಣು...
ReplyDeleteಬದರಿ;ಧನ್ಯವಾದಗಳು.
ReplyDeleteನಿಮ್ಮ ಲೇಖನದ ಪ್ರತೀ ಪದಗಳು ಸತ್ಯ ಸತ್ಯ ಸತ್ಯ. ಉತ್ತಮ ಲೇಖನಕ್ಕೆ ಜೈ ಹೋ ಡಾಕ್ಟರ್ ಜಿ
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ನಿಮ್ಮ ಲೇಖನದ ಪ್ರತೀ ಪದಗಳು ಸತ್ಯ ಸತ್ಯ ಸತ್ಯ. ಉತ್ತಮ ಲೇಖನಕ್ಕೆ ಜೈ ಹೋ ಡಾಕ್ಟರ್ ಜಿ
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
Nice article, how are you doing Sir? Hope you remember me I met you at your hospital with my in-law(Sathyanarayan).
ReplyDeleteHmm..odutta hodantella howdu heegeye iddare chanda pratiyobbarigu vyakti swatanthrya annondu beku,irabeku,kodabeku anisutte...adaru preethi paatrara mele namagondu sanna possisivns iruttadalla...adu yellavannu tadedu bidatte...! chandada lekhana....tanq...
ReplyDeleteಬಾಲೂ ಸರ್;ಧನ್ಯವಾದಗಳು.ನಿಮ್ಮ ಪ್ರತಿಕ್ರಿಯೆ ಅಮೂಲ್ಯ.ಟಾನಿಕ್ ಇದ್ದ ಹಾಗೆ.ಬರುತ್ತಿರಿ.ನಮಸ್ಕಾರ.
ReplyDeleteRAGHAV;NICE SEEING YOU IN MY BLOG.YES I REMEMBER YOU VERY WELL.HOW I CAN I FORGET THAT WONDERFUL SMILE OF YOURS.KEEP VISITING YOUNG MAN.BEST WISHES.
ReplyDeleteಮೌನ ರಾಗ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳುವುದು ಸರಿ.ಆ ಪೋಸೆಸಿವ್ ನೆಸ್ ಬಿಟ್ಟಷ್ಟೂ ಒಳ್ಳೆಯದು.ಬರುತ್ತಿರಿ.ನಮಸ್ಕಾರ.
ReplyDeleteಡಾಕ್ಟ್ರೆ,
ReplyDeleteನಾನು ಕೂಡ ಪ್ರಜಾವಾಣಿಯಲ್ಲಿ ಕರ್ಜಗಿಯವರ ಲೇಖನ ಓದಿದೆ. ಅದರಿಂದ ಕಲಿಯಬೇಕಾಗಿರುವುದು ತುಂಬಾ ಇದೆ...ಇಂಥವನ್ನು ಹುಡುಕಿ ತರುವ ನಿಮಗೆ ಧನ್ಯವಾದಗಳು.
ನಿಮ್ಮ ಮಾತುಗಳು ಸತ್ಯ. ದೂರದಿಂದ ವೀಕ್ಷಿಸಬೇಕು, ಅದನ್ನು ಬದಲಿಸುವ ಪ್ರಯತ್ನ ಸಲ್ಲ.....
ReplyDeleteಶಿವು ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಜಿತೇಂದ್ರ;ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಚೆಂದದ ಲೇಖನ
ReplyDelete