Thursday, September 22, 2011

"ಹೀಗೊಂದು ಅವಿಸ್ಮರಣೀಯ ಅನುಭವ!"

ಇಂದು ಮುಂಜಾನೆ ಸುಮಾರು ಹನ್ನೊಂದು ಗಂಟೆಗೆ ಆಸ್ಪತ್ರೆಯ O.P.D. ಯಲ್ಲಿ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದೆ.ಸುಮಾರು ಹದಿನೆಂಟು ವರ್ಷ ವಯಸ್ಸಿನ ಹುಡುಗನನ್ನು ಜ್ವರ ಮತ್ತು ಕೆಮ್ಮಿಗೆ ಚಿಕಿತ್ಸೆ ಕೊಡಿಸಲು ಅವನ ತಾಯಿ ಕರೆದುಕೊಂಡು ಬಂದಿದ್ದರು.ಆ ಹುಡುಗನ್ನು ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನೋಡಿದ್ದರಿಂದ ಅವನ ಓದಿನ ಬಗ್ಗೆ ವಿಚಾರಿಸಿದೆ.ಹುಡುಗ ಸಾಗರದಲ್ಲಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ .ಅವನನ್ನು  ಪರೀಕ್ಷೆ ಮಾಡಿ ಔಷದಿ ಬರೆದು ಕೊಟ್ಟೆ.ಹೋಗುವಾಗ ಅವನ ತಾಯಿ "ಸರ್.....,ಹದಿನೆಂಟು ವರ್ಷದ ಹಿಂದೆ ಚಕ್ರಾನಗರದಲ್ಲಿದ್ದಾಗ
ಈ ಹುಡುಗನ ಡೆಲಿವರಿ  ಮಾಡಿದ್ದು ನೀವೇ ಸರ್.ನಿಮಗೆ ನೆನಪಿಲ್ಲಾ ಅಂತ ಕಾಣುತ್ತೆ.ಮಗು ಹುಟ್ಟಿದ ತಕ್ಷಣ ಉಸಿರಾಟವಿಲ್ಲದೆ ಮೈ ಎಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು.ನೀವು ತಕ್ಷಣ ಬಾಯಿಯಿಂದ ಮಗುವಿನ ಬಾಯಿಗೆ ಉಸಿರು ಕೊಟ್ಟು ಮಗುವನ್ನು ಉಳಿಸಿ ಕೊಟ್ಟಿರಿ.ನಿಮ್ಮ ಉಪಕಾರವನ್ನು ನಾವು ಯಾವತ್ತೂ ಮರೆಯೋದಿಲ್ಲಾ ಸರ್"ಎಂದು ಕಣ್ಣಿನಲ್ಲಿ ನೀರು ತಂದು ಕೊಂಡರು.ಹುಡುಗ ಬಗ್ಗಿ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ.ಇದ್ದಕ್ಕಿದ್ದಂತೆ ಅವನು ನನ್ನ ಕಾಲು ಮುಟ್ಟಿದ್ದರಿಂದ ನಾನು  ಕೊಂಚ ಗಲಿಬಿಲಿ ಗೊಂಡೆ.ನನಗೆ ಏನು ಹೇಳಬೇಕೋ ತೋಚದೆ ಮಾತು ಹೊರಡಲಿಲ್ಲ.ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾ ಭಾವವಿತ್ತು.ಅವ್ಯಕ್ತ ಆನಂದದ ಒಂದು ವಿಶಿಷ್ಟ  ಅವಿಸ್ಮರಣೀಯ  ಅನುಭೂತಿ ಉಂಟಾಗಿತ್ತು!!

19 comments:

  1. nimma anubhavagaLu namage hurupu niDuttave sir...

    nimma anubhavagaLu vibhinnavaagide sir...

    ReplyDelete
  2. ವೈದ್ಯೋ ನಾರಾಯಣೋ ಹರಿಃ

    ಶ್ಲೋಕಕ್ಕೆ ಅನ್ವರ್ಥವಾಗಿದೆ ಈ ಅನುಭವ. ಅಂದು ನೀಡಿದ ಆ ಗುಕ್ಕು ಉಸಿರಿಂದ ಬದುಕಿಕೊಂಡ ಆ ಮಗು, ನಿಮ್ಮ ಎದುರಿಗೇ ನಿಂತ ಈ ಹುಡುಗ ಎಂದು ಅರಿವಾದಾಗ ನಿಮ್ಮ ಎದೆಯಲೆದ್ದ ಧನ್ಯತ್ವವೇ ದೈವತ್ವ!

    ಇದು ಮಾನವತ್ವದಿಂದ ನೀವು ದೈವತ್ವಕ್ಕೇರುವ ಗಳಿಗೆ. ಶತಮಾನಂ ಭವತಿ ಡಾಕ್ಟ್ರೇ...

    ReplyDelete
  3. ಸರ್ ಜಿ....

    ನಿಮ್ಮ ಅನುಭವ ಅದ್ಭುತವಾದದ್ದು...
    ಆ ಹೆಣ್ಣುಮಗಳು ನೆನಪಿಟ್ಟುಕೊಂಡು ನಿಮ್ಮನ್ನು ಧನ್ಯತಾ ಭಾವದಿಂದ ಸ್ಮರಿಸಿದಳಲ್ಲಾ.. !
    ಆ ತಾಯಿಯ ಕೃತಜ್ಞತಾ ಭಾವ ನಿಮ್ಮನ್ನು ಯಾವಾಗಲೂ ಕಾಪಾಡುವದು...

    ಸ್ಪೂರ್ತಿ ಕೊಡುವಂಥಹ ಅನುಭವ... ಧನ್ಯವಾದಗಳು...

    ReplyDelete
  4. ಉತ್ತಮ ಅನುಭವ..ನಿಜಕ್ಕೂ ಅವರ್ಣನೀಯ..

    ReplyDelete
  5. Daktre..

    These moments are truly inspirational.

    Thanks for sharing...

    ReplyDelete
  6. Doctre, yenta chandada anubhava nimmadu...inta kshangalu jeevanadalli sarthakateya bhavavannu tandu kodatte alva...?really great...

    ReplyDelete
  7. ವೈಧ್ಯ ವೃತ್ತಿ ಎಷ್ಟು ಪವಿತ್ರ ಎಂಬುದು ಅರ್ಥ ಆಗುತ್ತದೆ. ನಿಮ್ಮ ಅನುಭವಕ್ಕೆ ನನ್ನ ಸಲಾಂ, ನಿಮ್ಮ ಕೀರ್ತಿ ಇನ್ನೂ ಬೆಳಗಲಿ. ನಿಮ್ಮ ಕೀರ್ತಿ ಕೊಂಡಾಡುವ ಭಾಗ್ಯ ನಮ್ಮದಾಗಲಿ. ಜೈ ಹೋ ಜೈ ಹೋ ಜೈ ಹೋ ಸರ್ .
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  8. Wow! sir.. entha memorable moment! really heart touching!

    ReplyDelete
  9. ಅವಿಸ್ಮರಣೀಯ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಕೃತಜ್ಞತೆಗಳು....ವೈದ್ಯರೆಂದರೆ ಧರೆಗಿಳಿದ ದೇವರೆಂದೇ ನನ್ನ ನಂಬಿಕೆ.

    ReplyDelete
  10. ಡಾಕ್ಟ್ರೇ...ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

    ReplyDelete
  11. ನಿಮ್ಮ ಮನದಲ್ಲಿ ಉ೦ಟಾದ ಆ ಧನ್ಯತಾ ಭಾವದ ಅನುಭವ ನಿಜಕ್ಕೂ ಅವಿಸ್ಮರಣೀಯ. ವೈದ್ಯ ವೃತ್ತಿಗೆ ಕಿರೀಟಪ್ರಾಯರಾಗಿದ್ದೀರಿ ಸರ್, ಧನ್ಯವಾದಗಳು.

    ReplyDelete
  12. ಗುರುಗಳೇ,
    ವೈಧ್ಯಕೀಯ ಅದೆಷ್ಟು ಪವಿತ್ರ, ಅದೆಷ್ಟು ಪುಣ್ಯದ ಕೆಲಸ! ಅಲ್ಲವೇ,
    ಆ ತಾಯಿ ಮತ್ತು ಮಗ ಜೀವನ ಪೂರ್ತಿ ನಿಮ್ಮ ನೆನಪಿಟ್ಟುಕೊಳ್ಳುತ್ತಾರೆ.

    ReplyDelete
  13. Sir ji
    tamma anubhava sangraha yogya

    olle profession nimdu

    ReplyDelete
  14. ಒಳ್ಳೆ ಬರಹ. ಓದಲು ಖುಷಿಯೆನಿಸಿತು :) :)

    ReplyDelete
  15. ನಲ್ಮೆಯಿಂದ ಓದಿ ಪ್ರತಿಕ್ರಿಯೆ ನೀಡಿದ ನನ್ನ ಬ್ಲಾಗ್ ಬಂಧುಗಳಿಗೆ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ನಮಸ್ಕಾರ.

    ReplyDelete
  16. ಸರ್ , ನನ್ನ ಮನ ಕಲಕಿತು... ನಿಮ್ಮ ಜೀವನ ಸಾರ್ಥಕವಾಯಿತು ಅನ್ನುವ ಭಾವ ನನ್ನಲ್ಲಿ ಉಕ್ಕಿತು. ನನಗೂ ಅಂತಹ ಒಂದು ಭಾಗ್ಯ ಲಭಿಸಿದ್ದರೆ ದೇವರೇ.....!

    ReplyDelete
  17. ಸಾರ್ ನೀವು ಚಕ್ರ ನಗರದಲ್ಲಿ ವರ್ಕ್ ಮಾಡಿದ್ದೀರಾ ?
    ನಾವು ಅಲ್ಲಿ 1994-1998 ವರೆಗೂ ಅಲ್ಲಿ ಇದ್ದೆವು . ಮಾಸ್ತಿಕಟ್ಟೆ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ

    ReplyDelete

Note: Only a member of this blog may post a comment.