"ಆತ್ಮನಿಗೆ ಆತ್ಮನೇ ಮಿತ್ರ,ಆತ್ಮನಿಗೆ ಆತ್ಮನೇಶತ್ರು!ಆತ್ಮನಿಂದಲೇ ಆತ್ಮನ ಉದ್ಧಾರ!ಆತ್ಮನಿಂದಲೇ ಆತ್ಮನ ಅವಸಾನ!"ಹೀಗೆನ್ನುತ್ತದೆ ಭಗವದ್ಗೀತೆ(೬ ನೇ ಅಧ್ಯಾಯ ೫ ನೇ ಶ್ಲೋಕ).
ಇದೇ ಭಾವ ಕೆ.ಸಿ.ಶಿವಪ್ಪ ನವರ 'ಮುದ್ದುರಾಮನ ಮನಸು'ಪುಸ್ತಕದ ಈ ಕೆಳಗಿನ ಚೌಪದಿಯಲ್ಲಿದೆ:
ಯಾರು ಮುನಿದರೆ ಏನು?ಯಾರು ಒಲಿದರೆ ಏನು?
ನಿನ್ನರಿವು ನಿನಗೆ ಮುದ ತರದಿರುವ ತನಕ ?
ಸಂಗ ಸುಖ ಶಾಶ್ವತವೆ?ಕಡಲ ಸೇರದೆ ಹೊನಲು?
ನೀ ಅತ್ಮಸಖನಾಗು-ಮುದ್ದು ರಾಮ. (333)
ನಾವು ಎಲ್ಲಿಯವರೆಗೆ ನಮ್ಮ ಸಂತೋಷಕ್ಕಾಗಿ ಹೊರಗಿನ ಪ್ರಪಂಚದ ಆಗು ಹೋಗು ಗಳ ಮೇಲೆ,ಇತರ ವ್ಯಕ್ತಿಗಳ ಮೇಲೆ ಅವಲಂಬಿತರಾಗಿರುತ್ತೆವೋ ಅಲ್ಲಿಯವರೆಗೆ ನಮಗೆ ದುಃಖ ತಪ್ಪಿದ್ದಲ್ಲ ಎನ್ನುತ್ತದೆ ಗೀತೆ.ಆತ್ಮದ ಅರಿವನ್ನು ಧ್ಯಾನದಿಂದ ಪಡೆದು 'ಆತ್ಮ ಸಖ'ನಾದರೆ ನಮಗೂ ಆನಂದ ,ನಮ್ಮ ಸುತ್ತಲಿನವರಿಗೂ ಆನಂದ!ಏನಂತೀರಿ?ನಿಮ್ಮ ಅನಿಸಿಕೆ ತಿಳಿಸಿ.
ಈ ನಾನು ನಾನಲ್ಲ ,
ReplyDeleteನಾನು ನನಗಂತ ನಾನಾಗಿಲ್ಲ
ಚಿಕ್ಕಂದಿನಲ್ಲಿ ಅಪ್ಪ ಹೊಡೆಯುವರೆಂದು
ಹೆದರಿ ಶಾಲೆಗೆ ಹೋಗುತ್ತಿದ್ದೆ,
ಯಾವಾಗಲೂ ಆಟ ಆಡಲು ಕರೆಯುತ್ತಿದ್ದ
ನನ್ನವನನು ಬೈದು.
ಹೈಸ್ಖೂಲಿನಲ್ಲಿ ಪ್ರತಿ ಬಾರಿಯೂ
ವೇದಿಕೆ ಹತ್ತಲು ಆಸೆ ಪಡುತ್ತಿದ್ದೆ,
ಯಾವಾಗಲೂ "ಇತರರು ನೋಡಿ ನಗುವರು"
ಎಂಬ ನನ್ನವನನ್ನು ಸುಮ್ಮನೆ ಕೂರಿಸಿದ್ದೆ .
ಕಾಲೇಜಿನಲ್ಲಿ ,ದೊಡ್ಡವರು ಹೇಳಿದ ದೊಡ್ಡ ಜೀವನಕೆಂದು
ಕಲೆಯನ್ನು ಬಿಟ್ಟು ,ಲ್ಯಾಬುಗಳಲ್ಲಿ ಕರಗಿ ಹೋದೆ,
ಯಾವಾಗಲೂ "ಕಲೆಯೇ ಜೀವನ"ಎಂದು ಕುಣಿಯುತ್ತಿದ್ದ
ಕನ್ನಡದ ಕುವರನನ್ನು ಮಾತನಾಡಿಸದೇ..
ಸಾಧಾರಣ ಅರ್ಹತಾ ಶ್ರೇಣಿ ಪಡೆದ ನಾನು ,
ಬಂದಿರುವೆ ಸ್ನೇಹಿತರೊಡಗೂಡಿ ತಾಂತ್ರಿಕತೆಯ ಹೊಸ ಪ್ರವಾಹಕ್ಕೆ.
ಯಾವಗಲೂ "ಸ್ನೇಹಿತರ ಜೊತೆಗಿರು " ಎಂದು
ಮನೆಬಿಡಿಸಿದ ಒಳಗಿನ ನನ್ನವನ ಹಟಕ್ಕೆ, ಗುರಿಯಿಲ್ಲದ ಛಲಕ್ಕೆ .
ನಾನು ಏನಾಗಿದ್ದೇನೆಯೋ ಅದು ನನ್ನವನಿಂದಲ್ಲ,
ಅವನಿಲ್ಲದೆಯೂ ಅಲ್ಲ...
ಅವನು ನನ್ನವರಲ್ಲೊಬ್ಬ ,ನಾನು ಅಪ್ಪ,ಅಮ್ಮ ,ತಂಗಿ,ಸ್ನೇಹಿತರು,
ಗುರುಗಳು ,ಹಾಗೂ ಪುಸ್ತಕ ಇವರಲ್ಲೊಬ್ಬ...
ಚಿನ್ಮಯ್;ನಿಮ್ಮ ವಿಸ್ತೃತ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteWell said, sir
ReplyDeleteyes sir.
ReplyDeleteOlleya vichaara sir, aatma santoshakkaagi badukinda bandi yalli saagabeku, jana mechchuvuddakkalla...abhinandanegalu.
ReplyDeleteananth
ಗುರುಗಳೇ,
ReplyDeleteಧನ್ಯೋಸ್ಮಿ.........!
ನಾಗರಾಜ್;ಸಚ್ಚಿದಾನಂದ ಸ್ವರೂಪನಾದ ಆತ್ಮದ ಅರಿವು ಉಂಟಾದಾಗ ನಮಗೆ ಹೊರಗಿನ ಸಂಬಂಧಗಳ(ವಸ್ತು ಅಥವಾ ವ್ಯಕ್ತಿ) ಅಗಲುವಿಕೆಯಿಂದ ನೋವು ಉಂಟಾಗಲಾರದು.ಆಗ ಪ್ರೀತಿ ಇರುತ್ತದೆಯೇ ಹೊರತು ಮೋಹ ಇರುವುದಿಲ್ಲ.ಮೋಹ ಇದ್ದಲ್ಲಿ ನೋವು.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteಗುಬ್ಬಚ್ಚಿ ಸತೀಶ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteಅನಂತ್ ಸರ್;ತಮ್ಮ ಮಾತು ಒಪ್ಪತಕ್ಕಂತಹುದು.ಆತ್ಮ ಸಂತೋಷವಿದ್ದರೆ ಸಂತೋಷಕ್ಕಾಗಿ ನಾವು ಹೊರಗಿನ ವ್ಯಕ್ತಿಗಳ ಅಥವಾ ವಸ್ತುಗಳ ಮೇಲೇ ಅವಲಂಬಿತರಾಗುವುದು ತಪ್ಪುತ್ತದೆ.ಯಾವುದೇ ವಸ್ತು ಅಥವಾ ವ್ಯಕ್ತಿ ನಮಗೇ ಮೀಸಲು ಎನ್ನುವ ಮೋಹ ಹೋಗಬೇಕು.ಆಗ ನಮಗೂ ನಮ್ಮ ಸುತ್ತಲಿನವರಿಗೂ ನೆಮ್ಮದಿ,ಸಂತೋಷ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.
ReplyDeleteಪ್ರವೀಣ್;ನಾನೂ ಕೂಡ ಧನ್ಯೋಸ್ಮಿ.ಬರುತ್ತಿರಿ.ನಮಸ್ಕಾರ.
ReplyDeleteನಾನು ಮುದ್ದುರಾಮನನ್ನ ಓದಲೇ ಬೇಕಿದೆ. ಭಗವಧ್ಗೀತೆಯನ್ನು ಅಥೈಸಲು ನೀವು ಬಳಸುವ ಕ್ರಮ ಬಹಳ ಸುಲಭ ಸಾಧನ ಸಾರ್!
ReplyDeleteಡಾಕ್ಟ್ರೆ,
ReplyDeleteಖಂಡಿತ ನಿಮ್ಮ ಮಾತು ಸತ್ಯ.ಯಾವುದನ್ನು ಯಾರಿಂದಲೂ ನಿರೀಕ್ಷಿಸದೇ ಇದ್ದಾಗ ಸಿಗುವ ಆನಂದವೇ ನಿಜವಾದದು...
ಬದರಿ;ಖಂಡಿತ ಓದಿ.ಅದ್ಭುತ ಪುಸ್ತಕ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಶಿವು ಸರ್;ನೀವು ಹೇಳುವುದುಸತ್ಯವಾದ ಮಾತು.ನಿರೀಕ್ಷೆ ಇಲ್ಲದ ಸಂತಸ ನಿಜವಾದ ಸಂತಸ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಚೆನ್ನಾಗಿದೆ, ಯಾವುದೋ ಲೈಬ್ರರಿಯಲ್ಲಿ ಒದಿದ ಪುಸ್ತಕ. ಮುದ್ದುರಾಮನ ಮನಸ್ಸು ಪ್ರೇರಿತ ಕವನಗಳು .. ನಿಮ್ಮ ಅರ್ಥಗಳು ಸೊಗಸು .
ReplyDeleteಈಶ್ವರ್ ಭಟ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಸರ್,
ReplyDeleteನನ್ನೊಳಗಿನ ನಾನು ಹೊರಬರದು ಹೊರತು
ಇನ್ನೇನು ರುಚಿಸದು ಮನಕೆ
ಬಾಹ್ಯ ಆಕರ್ಷಣೆ ಗಳಿಹುದು ನಿಜಾ
ನನ್ನೊಳಗಿನ ನನಗೆ ಹಿಡಿಸದ ಹೊತ್ತು, ಜ್ಞಾನರ್ಜನೆಯ ಬಿತ್ತು
ತುಂಬಾ ಸುಂದರ ಬರಹ ಸರ್
khandita nija maatu...
ReplyDeletenimma baraha tumbaa manamuttuttade...
dhanyavaada sir......
ಗುರು ಸರ್;ನೀವು ಹೇಳಿದ ಹಾಗೆ ನನ್ನೊಳಗಿನ 'ನಿಜವಾದ ನಾನು'ಅರ್ಥವಾದಾಗ ಹೊರಗಿನ ಪ್ರಪಂಚದ ಆಗು ಹೋಗುಗಳು ಅಷ್ಟಾಗಿ ಬಾಧಿಸವು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteದಿನಕರ್;ಬರಹ ಇಷ್ಟವಾಯಿತೆಂದು ಕೇಳಿ ಸಂತೋಷವಾಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteತುಂಬಾ ಇಷ್ಟವಾಯ್ತು..
ReplyDeleteನಾರಾಯಣ್ ಭಟ್;ತುಂಬಾ ಧನ್ಯವಾದಗಳು.ಹೇಗಿದ್ದೀರಿ ಸರ್.ಎಲ್ಲಾ ವಿಷಯಕ್ಕೂ ಈ-ಮೈಲ್ ಮಾಡಿ.ನಮಸ್ಕಾರ.
ReplyDeleteADAKKEE HELUVADU- NISSANGIYAGIRU ENDU
ReplyDeleteTILIGANNADADA MUDDURAMANA GUDDU JORAGIDE
ಆತ್ಮ ಶುದ್ಧಿಯೇ ಅಂತರಂಗದ ಶುದ್ಧಿ .....
ReplyDelete"ಉದ್ದರೆಥ್ ಆತ್ಮಾನಂ " ಬಾಲ ವಿಕಾಸದಲ್ಲಿ ಕಲಿತಾಗ
ReplyDeleteಏನೂ ಅರ್ಥ ವಾಗಿರಲಿಲ್ಲ (ಈಗ ಆಗಿದೆ ಎಂದಲ್ಲ :-) )
ಆದರೆ ಈ ಶ್ಲೋಕದ ಪ್ರಸ ಚೆನ್ನಾಗಿದೆ.
ನೀವು ಅರ್ಥ ಹೇಳಿರುವ ರೀತಿಯೂ ಸುಂದರ ವಾಗಿದೆ.
ಮುದ್ದು ರಾಮನನ್ನ ಓದ ಬೇಕು
ಸ್ವರ್ಣ
ಹೇಮಣ್ಣ;'ನಿಸ್ಸಂಗಿಯಾಗುವ'ಅರ್ಥ ನಿಜಕ್ಕೂ ಅದ್ಭುತವಾಗಿದೆ.ಮುದ್ದುರಾಮ ನಿಜಕ್ಕೂ ಮುದ್ದುರಾಮನೆ ಸೈ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಗಿರೀಶ್;ನೀವು ಹೇಳುವುದು ಸರಿ.ಆತ್ಮ ಶುದ್ಧಿಯೇ ಅಂತರಂಗ ಶುದ್ಧಿ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಸ್ವರ್ಣ;ಪ್ರತಿಕ್ರಿಯೆಗೆ ಧನ್ಯವಾದಗಳು.'ಮುದ್ದು ರಾಮನ ಮನಸ್ಸನ್ನು' ಖಂಡಿತ ಓದಿ.
ReplyDeleteಡಾಕ್ಟ್ರೆ...
ReplyDeleteತುಂಬಾ ಸತ್ಯವಾದ ಮಾತುಗಳು... ಧನ್ಯವಾದಗಳು...
prakaashanna;thank you
ReplyDelete`ನೀ ಅತ್ಮಸಖನಾಗು' ಬಹಳ ಅಮೂಲ್ಯವಾದ ಮಾತು ಸರ್, ಮುದ್ದುರಾಮನನ್ನು ಪರಿಚಯಿಸಿದ್ದುದಕ್ಕಾಗಿ ಧನ್ಯವಾದಗಳು.
ReplyDeleteಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಚೆನ್ನಾಗಿದೆ
ReplyDelete