Wednesday, September 21, 2011

"ಜೀ ಹುಜೂರ್.....ಮೈ ಹಾಜಿರ್ ಹ್ಞೂ !!! "

ಬಡ ರೈತನೊಬ್ಬ ತನ್ನ ಹೊಲವನ್ನು ಉಳುತ್ತಿರುವಾಗ ಒಂದು ಮಾಯಾ ದೀಪ ಸಿಕ್ಕಿತು.ಅದನ್ನು ಮುಟ್ಟಿದ ತಕ್ಷಣವೇ ದೈತ್ಯಾಕಾರದ ಭೂತವೊಂದು ಎದುರಿಗೆ ಕೈ ಕಟ್ಟಿ ನಿಂತಿತು.ರೈತ ಹೆದರಿ ಕಂಗಾಲಾದ.ಭೂತ ಮಾತನಾಡ ತೊಡಗಿತು "ಹೆದರ ಬೇಡ,ಇನ್ನು ಮೇಲೆ ನೀನೇ ನನಗೆ ಯಜಮಾನ.ನೀನು ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ.ಆದರೆ ನೀನು ನನಗೆ ಸದಾ ಕೆಲಸ ಕೊಡುತ್ತಿರಬೇಕು.ನನಗೆ ಕೆಲಸ ಇಲ್ಲದಿದ್ದರೆ ನಿನ್ನನ್ನು ತಿಂದು ಮುಗಿಸುತ್ತೇನೆ.ಹೇಳು ಏನು ಮಾಡಲಿ?"ಎಂದಿತು.ರೈತ ಬೇಡಿದ್ದನ್ನೆಲ್ಲ ಭೂತ ಕ್ಷಣಾರ್ಧದಲ್ಲಿ ನೆರವೆರಿಸುತ್ತಿತ್ತು.ಆಹಾರ ,ಅರಮನೆಯಂತಹ ಮನೆ,ಐಶ್ವರ್ಯ,ಆಳು ಕಾಳು ಎಲ್ಲವೂ ಸಿಕ್ಕಿದ ಮೇಲೆ ರೈತನಿಗೆ ಭೂತಕ್ಕೆ ಕೆಲಸ ಒದಗಿಸುವುದೇ ದೊಡ್ಡ ಕೆಲಸವಾಯಿತು!ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ "ಕೆಲಸ ಕೊಡು ,ಇಲ್ಲದಿದ್ದರೆ ನಿನ್ನನ್ನು ಮುಗಿಸುತ್ತೇನೆ"ಎಂದು ದುಂಬಾಲು ಬೀಳುತ್ತಿತ್ತು.ರೈತನಿಗೆ ಜೀವ ಭಯ ಕಾಡತೊಡಗಿತು.The servant had become a master!ಈ ಭೂತದ ಕಾಟದಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಊರಿನ ಬುದ್ಧಿವಂತನೊಬ್ಬನ ಸಲಹೆ ಕೇಳಿದ.ಸೂಕ್ತ ಸಲಹೆ ಸಿಕ್ಕಿತು.ಭೂತ ಅವನನ್ನು ಅಟ್ಟಿಸಿಕೊಂಡು ಬಂದು"ಕೆಲಸ ಕೊಡು"ಎಂದಿತು.ಅದಕ್ಕೆ ತನ್ನ ಮನೆಯ ಮುಂದೆ ಉದ್ದನೆಯ ಕೋಲೊಂದನ್ನು ನೆಡುವಂತೆ ಹೇಳಿದ.ಭೂತ ಕ್ಷಣಾರ್ಧದಲ್ಲಿ ಕೋಲು ನೆಟ್ಟಿತು."ಕೋಲು ನೆಟ್ಟು ಆಯಿತು.ಮುಂದೆ?"ಎಂದಿತು ಭೂತ."ನಾನು ಮುಂದಿನ ಕೆಲಸ ಹೇಳುವ ತನಕ ಈ ಕೋಲನ್ನು ಹತ್ತಿ ಇಳಿಯುತ್ತಿರು"ಎಂದ ರೈತ.ಭೂತ ತನ್ನ ಕೆಲಸ ಶುರುವಿಟ್ಟು ಕೊಂಡಿತು.ರೈತ ಭೂತದ ಕಾಟ ತಪ್ಪಿದ್ದಕ್ಕೆ ನೆಮ್ಮದಿಯ ಉಸಿರು ಬಿಟ್ಟ.


ಸ್ನೇಹಿತರೇ,ಈ ಕಥೆಯಲ್ಲಿ ನಮಗೊಂದು ಅದ್ಭುತ ಪಾಠವಿದೆ.ನಮ್ಮೆಲ್ಲರ ಮನಸ್ಸೂ ಈ ಭೂತದಂತೆ.ಸದಾ ಕಾಲ ಏನನ್ನಾದರೂ ಯೋಚಿಸುತ್ತಲೇ ಇರುತ್ತದೆ.ಕೆಲವೊಮ್ಮೆ ಆಲೋಚನೆಗಳಿಂದ ತಲೆ ಚಿಟ್ಟು ಹಿಡಿದರೂ,ಅವುಗಳಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುತ್ತೇವೆ!Again here the servant becomes a master! a bad master!! ಈ ಮನಸ್ಸೆಂಬ ಭೂತಕ್ಕೆ ಭಗವನ್ನಾಮ ಸ್ಮರಣೆ ಎನ್ನುವ 'ಕೋಲನ್ನು ಹತ್ತುವ' ಕೆಲಸ ಕೊಟ್ಟರೇ ನಮಗೆ ಅದರಿಂದ ಮುಕ್ತಿ!! ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

13 comments:

  1. ಸೊಗಸಾಗಿ ಕಥೆ ನಿರೂಪಿಸುವುದು ನಿಮಗೆ ಸಿದ್ಧಿಸಿರುವ ಕಲೆ. ಬರೆಯುವ ನಾಲ್ಕಾರು ಸರಳ ಸಾಲುಗಳಲ್ಲೇ ತುಂಬಾ ವಿಚಾರಗಳನ್ನು ಹೇಳಿಕೊಡುತ್ತೀರಿ.

    ಭಗವಂತನೊಬ್ಬನೇ ಬ್ರಹ್ಮಾಂಡಕ್ಕೆಲ್ಲ ವೈದ್ಯ! ಎನ್ನುವುದನ್ನು ಸುಂದರವಾಗಿ ಚಿತ್ರಿಸಿದ್ದೀರಿ.

    ReplyDelete
  2. nija sir nimma maatu, kathe chennagide

    ReplyDelete
  3. ಕವಿ ನಾಗರಾಜ್;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ಬದರಿ;ಭೂತದಂತೆ ಬೆನ್ನು ಬಿಡದ ಮನಸ್ಸಿಗೆ ಭಗವನ್ನಾಮಸ್ಮರಣೆ ಎನ್ನುವ ಮಂತ್ರ ದಂಡವೇ ಮದ್ದು!ಪ್ರತಿಕ್ರಿಯೆಗೆಧನ್ಯವಾದಗಳು.

    ReplyDelete
  5. ಮನಸು ಮೇಡಂ;ಮನಸ್ಸೆಂಬ ಮರ್ಕಟಕ್ಕೆ ಏನಾದರೂ ಕೆಲಸ ಕೊಡಬೇಕು!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. ಚೆಂದದ ಹೋಲಿಕೆ ಮನಸ್ಸನ್ನು ಕಟ್ಟಿ ಹಾಕಲು ....

    ReplyDelete
  7. ಸೀತಾರಾಮ್ ಸರ್;ಇಷ್ಟಪಟ್ಟಿರಿ.ಸಂತೋಷ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಸ್ವಾಮೀ ಎಂತಹ ಅದ್ಭುತ ಕಲ್ಪನೆ,ಹೌದು ನಮ್ಮ ಮನಸೆಂಬ ಭೂತಕ್ಕೆ ಕೆಲಸ ಕೊಡದಿದ್ದರೆ ಅದು ನಮ್ಮನ್ನೇ ನುಂಗಿಹಾಕುವುದಂತೂ ನಿಜ. ನಿಮ್ಮ ಹಾಸ್ಯ ನಿರೂಪಣೆ ಬಗ್ಗೆ ಜೈ ಹೋ , ಜೈ ಹೋ, ಜೈ ಹೋ, ಅದು ನಿಮಗೆ ಹುಟ್ಟು ಬಳುವಳಿ ಬಂದಿದೆ ಅನ್ನಿಸುತ್ತದೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  9. ಬಾಲಣ್ಣ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರಹ ನಿಮಗೆ ಖುಷಿ ಕೊಟ್ಟಿದೆ ಎಂದು ತಿಳಿದು ಸಂತಸವಾಯಿತು.ಬರುತ್ತಿರಿ.ನಮಸ್ಕಾರ.

    ReplyDelete
  10. ತುಂಬಾ ಸರಳ ಶೈಲಿಯಲ್ಲಿ ದೇವರನಾಮದ ಪಾಠ ಹೇಳಿದ್ದಿರಿ

    ಬದುಕು ಬಹಳ ಸರಳ ಆಗಿತ್ತು, ಅದನ್ನು ಮಾನವ ಕ್ಲಿಷ್ಟ ಎಂದುಕೊಂಡು ಬದುಕಲಾರಂಬಿಸಿದ,

    ತದನಂತರ ಬದುಕನ್ನು ಆದಷ್ಟು ಸರಳ ಮಾಡಿಸಲು ಶ್ರಮಿಸಿದ

    ತನ್ನೊಳಗೆ ಇರುವ ಸರಳ ಸ್ವಭಾವ ವನ್ನು ಅರಿಯದೆ ಸುಮ್ಮನೆ ಗೊಂದಲಗಳ ಗೂಡು ಆದ

    ReplyDelete
  11. ಗುರು ಸರ್;ಮನುಷ್ಯನ ಮನಸ್ಸಿನದೇ ಈ ಎಲ್ಲ ಕಿತಾಪತಿ.ಅದರಿಂದ ನಮ್ಮನ್ನು ಅವನೇ ಕಾಪಾಡಬೇಕು ಆ ಸೀತಾಪತಿ!They say ,mind is a good servant and a bad master.If we were able to just switch it off when we don't need it,it would have been wonderful!! ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  12. your stories are like ramakisha paramahamsa s story.Good one sir.

    suragange.blogspot.com

    ReplyDelete

Note: Only a member of this blog may post a comment.