ಯಾವ ಕರ್ಮದ ಫಲ
ನೂಕಿದ್ದಕ್ಕೋ !
ಯಾವ ಅನುಬಂಧದ ಬಲ
ಸೆಳೆದದ್ದಕ್ಕೋ!
ಜಗವೆಂಬ ಅಖಾಡಕ್ಕೆ
ಬಂದು ಬಿದ್ದ
ಜಟ್ಟಿ ನಾನು !
ನನ್ನಾಣೆ ನಾನೇ
ಬಯಸಿ ಬರಲಿಲ್ಲ!
ಕಣ್ಣು ತೆರೆಯುವ ಮೊದಲೇ
ಕಣದಲಿದ್ದೆ !
ಉಸಿರು ಬಿಡುವ ಮೊದಲೇ
ಸೆಣಸುತಲಿದ್ದೆ!
ಯಾರು ಯಾರೋ ಹಾಕಿದ
ಪಟ್ಟು ಗಳನ್ನೂ ....,
ವಿಧಿ ಹಾಕಿದ
'ಪಾತಾಳ ಗರಡಿಯನ್ನೂ'
ಬಿಡಿಸಿಕೊಳ್ಳಲು ಹೆಣಗಿ
ಅಖಾಡದ ಮಣ್ಣು ಮುಕ್ಕಿದ್ದೇನೆ!
ಸೋಲೋ.....ಗೆಲುವೋ......,
ಜಗದ ಈ ಜಂಗೀ ಕುಸ್ತಿ
ಮುಗಿಯುವುದನ್ನೇ ಕಾಯುತ್ತಾ
ಸೆಣಸುವುದೊಂದೇ ಮಂತ್ರವಾಗಿ !
ಸೆಣಸುತ್ತಲೇ .......ಇದ್ದೇನೆ !
ಇನ್ನೂ............!!
hi sir,
ReplyDeleteVivekananda says " As soon as you know the voice and understand what it is, the whole scene channges. The same world which was the ghastly battlefield of maya is now changed into something good and beautiful"
Maya jagadolage jangi kusthi
Mayeya Avarana iruvavarege mannu mukthi
Mayeya anavaranada nanthara ithappa jeevanmukthi
nice words
thank u boss
ashok
Dear Ashok;Iam very much on the path dear.By your best wishes I should be able to have a glimpse of it soon.Then may be as you say the whole world outside would transform!ಆದರೆ ನೂರಕ್ಕೆ ತೊಂಬತ್ತೊಂಬತ್ತು ಜನರ ಕೂಗು ನನ್ನ ಕವನದ ಪ್ರತಿಧ್ವನಿಯೇ ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಲೌಕಿಕ-ವಾಸ್ತವಿಕತೆಯನ್ನು ಪ್ರಸ್ತುತಿಸಿದ ಶೈಲಿ ಇಷ್ಟ ಆಯ್ತು. ಜೀವನವನ್ನು ಧನಾತ್ಮಕತೆಯ ದೃಷ್ಟಿಯಲ್ಲಿ ನೋಡಿದರೆ, ಬದುಕೊ೦ದು ಸು೦ದರ ಕವನ ಆಗಬಹುದಲ್ಲವೆ? ಡಾ.ಸರ್.
ReplyDeleteಅನ೦ತ್
ಅನಂತ್ ಸರ್;ಸುತ್ತ ಮುತ್ತಲೂ ನಡೆಯುತ್ತಿರುವ ಮೋಸ ವಂಚನೆಗಳನ್ನು ಕಂಡಾಗ ವ್ಯಕ್ತಿಗೆ ಧನಾತ್ಮಕ ದೃಷ್ಟಿ ಕಷ್ಟವಾಗುತ್ತದೆ.ಆಗ ಅವನಿಗೆ ಬದುಕು ಕಾಣುವುದು ಹೀಗೇ.ಆದರೆ ಮನುಷ್ಯ ಖಂಡಿತ ನಿರಾಶಾವಾದಿಯಾಗಬೇಕಿಲ್ಲ.ಧನಾತ್ಮಕ ಚಿಂತನೆ ಎಂದಿಗೂ ಒಳ್ಳೆಯದೇ ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಬದುಕೊಂದು ಬ್ಯಾಟಲ್ ಫೀಲ್ಡ್ - ಕವನ ತುಂಬಾ ಚೆನ್ನಾಗಿದೆ ಸರ್.
ReplyDeleteಬದುಕನ್ನು ಕುಸ್ತಿ ಕಣವನ್ನಾಗಿಸಿ ಸಾಂಕೆತಿಸಿದ ಕವನ ತುಂಬಾ ಚೆನ್ನಾಗಿದೆ. ಆ ಕಾಲನ ಮುಂದೆ ಒಂದಲ್ಲಾ ಒಂದು ದಿನ ಎಲ್ಲ ಜಟ್ಟಿಗಳು ಉರುಳಲೇ ಬೇಕು.
ReplyDeleteSir, love you . . . .
ReplyDeleteI can say, This ranks top.
while reading one line, i was genuinely curious about next line.
wow, such wonderful truth & true feel.
ಅಖಾಡದಲ್ಲಿ ಗುದ್ದಾಡಿ(ಸೆಣಸಿ) ಗೆಲ್ಲುತ್ತೆವಾ ?, ಗೆದ್ದು ಸೋಲುತ್ತೆವಾ ?
ಸೋತರೂ ಸರಿ, ಗುದ್ದಾಡುವುದೊಂದೇ ಗುರಿ, ಇಲ್ಲ ಇಲ್ಲಿ ಬೇರೆ ದಾರಿ . .
ಎಷ್ಟೇ ಸೆಣಸಿದರೂ, ಕೊನೆಗೆ ಬಾಳಿದ ಬದುಕು ಗೆಲ್ಲುತ್ತೆ
Thank u
ನಾರಾಯಣ್ ಭಟ್ ಸರ್ ;ನಿಮ್ಮ ಪ್ರತಿಕ್ರಿಯೆ ಡಿ.ವಿ.ಜಿ.ಯವರ ಕಗ್ಗದ ಸಾಲುಗಳನ್ನು ನೆನಪಿಸುತ್ತದೆ.'ಬದುಕೊಂದು ಕದನವೆಂದು ಅಂಜಿ ಬಿಟ್ಟೋಡುವನು ವಿಧಿಯ ಬಾಯಿಗೆ ಕವಳವಾಗದೆ ಉಳಿಯುವನೆ?'ಬಂದದ್ದನ್ನು ಎದುರಿಸಿ ಧೈರ್ಯದಿಂದ ಹೋರಾಡುವುದೇ ಜೀವನ.ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಸೀತಾರಾಂ ಸರ್;ಕುಸ್ತಿಯಲ್ಲಿ ಸೋಲು ಗೆಲುವಿಗಿಂತ ಹಾಕಿದ ಪಟ್ಟುಗಳನ್ನು ಬಿಡಿಸಿಕೊಳ್ಳುವುದು,ಮರು ಪಟ್ಟು ಹಾಕಿ ಸೆಣಸುವುದು ಮಜಾ ಕೊಡುತ್ತವೆ.ಇಲ್ಲಿ process itself is more important than the result.ಅಲ್ಲವೇ?ಧನ್ಯವಾದಗಳು.
ReplyDeletedear NRK;ಈ ಬದುಕಿನ ಕಣದಲ್ಲಿ ನಾವೆಲ್ಲರೂ ಆಕಸ್ಮಿಕವಾಗಿ ಬಂದವರೇ.ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕುಸ್ತಿ ಪಟುಗಳೇ.ಹುಟ್ಟಿನಿಂದಲೂ ಸವಾಲುಗಳನ್ನು ಎದುರಿಸುತ್ತಾ ಬಂದವರೇ.ಕುಸ್ತಿಯ ಮೊದಲರ್ಧ ಭಾಗದಲ್ಲಿ(ಐವತ್ತು ವರ್ಷ)ಕುಸ್ತಿ ಖುಷಿ ಕೊಡುತ್ತದೆ.ಆದರೆ ಸೆಕೆಂಡ್ ಹಾಫ್(ಐವತ್ತರ ನಂತರದ ಬದುಕು)ಕುಸ್ತಿಯಲ್ಲಿ ಆರೋಗ್ಯ ಕೈಕೊಟ್ಟು,ಮೈಯಲ್ಲಿ ಮೊದಲಿನ ಕಸುವು ಕಮ್ಮಿಯಾಗಿ ಕುಸ್ತಿಗಿಂತ ಸುಸ್ತಿಯೇ ಜಾಸ್ತಿ!
ReplyDeleteಆದರೆ ಜಗದ ಈ ಜಂಗೀ ಕುಸ್ತಿಯಲ್ಲಿ ಕುಸ್ತಿ ಮುಗಿಯುವವರೆಗೂ ಸೆಣಸುತ್ತಲೇ ಇರಬೇಕು!ಪ್ರತಿಕ್ರಿಯೆಗೆ ಧನ್ಯವಾದಗಳು.
ಅದ್ಭುತವಾದ ಭಾವದಲ್ಲಿ ಮಿಂದೆದ್ದೆ. ವಚನ ಭಗವಧ್ಗೀತೆ ಕಗ್ಗ ಮತ್ತು ನಿಮ್ಮ ಮನೋ ಪಕ್ವತೆಯ ಸಾರ ಈ ಕವಿತೆ. ಭಾಷಾ ಬಳಕೆಯಲ್ಲಿ ಕಂದನಿಗೆ ಹಾಲುಣಿಸುವ ತಾಯ ಲಾಲಿತ್ಯವಿದೆ.
ReplyDeleteಹುಟ್ಟಿಗೂ ಮುನ್ನ ಮತ್ತು ಹುಟ್ಟಿದ ಮೇಲೂ ಬದುಕಿಗಾಗಿ ಹೋರಾಟ ಮಾಡುವ ನಮ್ಮ ಅನಿವಾರ್ಯತೆಯನ್ನು ಮನೋಙ್ಞವಾಗಿ ಚಿತ್ರಿಸಿದ್ದೀರಿ.
ಕವಿತೆಯನ್ನು ತಿದ್ದಿ ಬರೆಯುವುದರಲ್ಲಿ ಕವಿಗೆ ಪಿತೃ ವಾತ್ಸಲ್ಯ. ತಿಕ್ಕಿದಷ್ಟೂ ವಜ್ರಕ್ಕೆ ಮೆರುಗು.
ನಿಮ್ಮ ಒಲುಮೆಯ ಸಾಹಿತ್ಯ ಸಾಂಗತ್ಯದ 'ಪಾತಾಳ ಗರಡಿ'ಯಲ್ಲಿ ನಾನು ಸಿಕ್ಕಿಕೊಂಡೇ ಸುಖಃ ಕಾಣುತ್ತೇನೆ.
ಬದರಿ;ನಿಮ್ಮ ಪ್ರೀತಿಗೆ ,ನಿಮ್ಮ ರೀತಿಗೆ,ನಿಮ್ಮ ಸ್ನೇಹಕ್ಕೆ ನೀವೇ ಸಾಟಿ.ಅವಕ್ಕೆ ನಿಮ್ಮ ಕಾವ್ಯದಷ್ಟೇ ಮೆರುಗಿದೆ.ನಿಮ್ಮ ಮುಂದೆ ನಾನು ಮಾತು ಬಾರದ ಮೂಕ.ಧನ್ಯೋಸ್ಮಿ.ನಮಸ್ಕಾರ.
ReplyDeleteಸೊಗಸಾಗಿದೆ ಗುರುಗಳೇ, ಜೀವನದ ತಥ್ಯ ನವ್ಯವಾಗಿ ಹೊಮ್ಮಿದೆ. ವಂದನೆಗಳು
ReplyDeleteವಿ.ಆರ್.ಭಟ್ ಸರ್;ಅನಂತ ಧನ್ಯವಾದಗಳು.
ReplyDelete