Tuesday, October 11, 2011

"ಸಂಪೂರ್ಣ ಶರಣಾಗತಿ"-ಒಂದು ವಿಶಿಷ್ಟ ಅನುಭವ!!

1994 ರಲ್ಲಿ ದಾಂಡೇಲಿಯ ಸಮೀಪದ ಅಂಬಿಕಾ ನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ "ಸಿದ್ಧ ಸಮಾಧಿ ಯೋಗದ"
ಹತ್ತು ದಿನಗಳ ತರಬೇತಿ ಪಡೆದು, ಬೆಳಗಾವಿ ಬಳಿಯ 'ಸೊಗಲ ಶ್ರೀ ಕ್ಷೇತ್ರ'ದಲ್ಲಿ ಮೂರು ದಿನಗಳ  A.M.C.ಯಲ್ಲಿ (Advanced meditation course) ಭಾಗ ವಹಿಸಿದ್ದೆ.ಎರಡನೇ ದಿನ ಗುರುಗಳು ಅಲ್ಲೇ ಹತ್ತಿರವಿದ್ದ ಬೆಟ್ಟವೊಂದಕ್ಕೆ ಕರೆದೊಯ್ದರು.ಬೆಟ್ಟ ಹತ್ತುವ ಮೊದಲು ಕಣ್ಣಿಗೆ ಬಟ್ಟೆ ಕಟ್ಟಲಾಯಿತು .ಮನಸ್ಸಿನಲ್ಲಿ"ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪ ಮಾಡುತ್ತಾ ಬೆಟ್ಟ ಹತ್ತುವಂತೆ ಹೇಳಿದರು.ಕಲ್ಲು ಮುಳ್ಳು ಗಳಿಂದ ಆವೃತವಾದ ಬೆಟ್ಟವನ್ನು ಹತ್ತಿಸುವ ಸಂಪೂರ್ಣ ಜವಾಬ್ದಾರಿಯನ್ನು ಜೊತೆಯಲ್ಲಿದ್ದ ಇಬ್ಬರಿಗೆ ವಹಿಸಿ,ಭಗವನ್ನಾಮ ಸ್ಮರಣೆ ಮಾಡುತ್ತಾ,ನಿಶ್ಚಿಂತೆಯಿಂದ ಸುಮಾರು ದೊಡ್ಡದಾಗಿದ್ದ ಬೆಟ್ಟವನ್ನು ಒಂದು ಗಂಟೆಯ ಅವಧಿಯಲ್ಲಿ ಅನಾಯಾಸವಾಗಿ ಹತ್ತಿದ್ದೆವು.ನಮ್ಮ ಜೊತೆಯಲ್ಲಿ ಮಂಡಿ ನೋವಿನಿದ ನರಳುತ್ತಿದ್ದ ಒಂದಿಬ್ಬರು ವಯೋ ವೃದ್ಧರೂ ಇದ್ದರು.ಅವರೂ ಯಾವ ತೊಂದರೆ ಇಲ್ಲದೆ ಬೆಟ್ಟವನ್ನು ಹತ್ತಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು!ಹತ್ತುವ ಮೊದಲು ಇಷ್ಟು ದೊಡ್ಡ ಬೆಟ್ಟವನ್ನು ಕಲ್ಲು ಮುಳ್ಳುಗಳ ಹಾದಿಯಲ್ಲಿ ಹತ್ತಲು ಸಾಧ್ಯವೇ ಎಂದು ಅನುಮಾನ ಪಟ್ಟಿದ್ದ ನಮಗೆ, ಬೆಟ್ಟದ ತುದಿ ತಲುಪಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಕೆಳಗೆ ನೋಡಿದಾಗ ನಾವು ನಿಜಕ್ಕೂ ಇಷ್ಟು ದೊಡ್ಡ ಬೆಟ್ಟವನ್ನು ,ಸ್ವಲ್ಪವೂ ಕಷ್ಟವಿಲ್ಲದೆ ಹತ್ತಿದ್ದು ಅದ್ಭುತವೆನಿಸಿತ್ತು.ಅದಕ್ಕೆ ಗುರುಗಳು 'ಭಗವನ್ನಾಮ ಸ್ಮರಣೆ ಮತ್ತು ಸಂಪೂರ್ಣ ಶರಣಾಗತಿಯಿಂದ ಜೀವನದಲ್ಲಿ ಎಂತಹ ಕಠಿಣ ಹಾದಿಯನ್ನಾದರೂ ಕ್ರಮಿಸಬಹುದು ಎನ್ನುವುದಕ್ಕೆ ಇಂದಿನ ನಿಮ್ಮ ಈ ಅನುಭವವೇ ಉದಾಹರಣೆ'ಎಂದರು.ಬೆಟ್ಟದ ತುದಿಯಲ್ಲಿ ಅಸ್ತಮಿಸುತ್ತಿದ್ದ ಕೆಂಪಾದ ಸೂರ್ಯನನ್ನು ನೋಡುತ್ತಾ ನಿಂತಿದ್ದೆವು.ಬೆಟ್ಟದ ಮೇಲಿನ ತಣ್ಣನೆ ಗಾಳಿ ಹಿತವಾಗಿ ಬೀಸಿ ಆ ವಿಶಿಷ್ಟ ಸಂಜೆ ಮತ್ತಷ್ಟು ವಿಶೇಷ ವೆನಿಸುವಂತೆ ಮಾಡಿತ್ತು

15 comments:

  1. ಒಳ್ಳೆಯ ಅನುಭವ .. ಇದು ನಮ್ಮೆಲ್ಲರಿಗೂ ಕಿವಿ ಮಾತು ಥಾಂಕ್ಯೂ ಸರ್..

    ReplyDelete
  2. Very nice write-up and example for 100% devotion.
    Nothing can be experienced without belief except some shocks & damaging acts! I remember & recollect Droupadi's story which I had narrated shortly to convey God's implied message. This is yet another beautiful story of your own experience, thanks for sharing,due to some net oriented problem couldn't comment in Kannada, thank you.

    ReplyDelete
  3. ಮನಸು ಮೇಡಂ;ಆ ಘಟನೆಯನ್ನು ನೆನಸಿಕೊಂಡರೆ ಇಂದಿಗೂ ಅಚ್ಚರಿಯಾಗುತ್ತದೆ. ಅಷ್ಟು ದೊಡ್ಡ ಬೆಟ್ಟವನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅನಾಯಾಸವಾಗಿ ಹೇಗೆ ಹತ್ತಿದೆವೋ ಗೊತ್ತಿಲ್ಲ!ಸಂಪೂರ್ಣ ಶರಣಾಗತಿಯಿಂದ ಪ್ರಾರ್ಥಿಸಿದರೆ'ಕಾಣದ ಕೈಗಳು'ಸಹಾಯಕ್ಕೆ ಬರುತ್ತವೆ ಎನ್ನುವುದನ್ನು ಮನದಟ್ಟು ಮಾಡಿಸಲೇ ಈ ಪ್ರಯೋಗಮಾಡಿಸಿದ್ದು. ನಿಜಕ್ಕೂ ಅದೊಂದು ಅಪೂರ್ವ ಅನುಭವ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ಸೀತಾರಾಂ ಸರ್;ನಿಜ ಜೀವನದಲ್ಲಿ ಸಂಪೂರ್ಣ ಶರಣಾಗತಿಗೆ ನಮ್ಮ ಅಹಂಕಾರ ಅಡ್ಡ ಬರುತ್ತದೆ.ಅದಕ್ಕೇ ನಮಗೆ ಅಷ್ಟೊಂದು ಕಷ್ಟಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಭಟ್ ಸರ್;ನಾವು ಸಂಪೂರ್ಣ ಅಸಹಾಯಕರಾಗಿ ಶರಣಾದಾಗ ಖಂಡಿತ ದೈವದ ಸಹಾಯ ಸಿಗುತ್ತದೆ.ಇದಕ್ಕೆ ಪೂರಕವಾದ ಘಟನೆಗಳನ್ನು ಮತ್ತೆಂದಾದರೂ ಬರೆಯುತ್ತೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  6. ಒಳ್ಳೆಯ ಮಾತು ಸರ್ ..

    ReplyDelete
  7. ಹೇಮು;'ತೇನವಿನ ತೃಣಮಪಿ ನ ಚರತಿ !'

    ReplyDelete
  8. ಈಶ್ವರ್;ಉದಾಹರಣೆ ಸಹಿತ ಒಂದು ಸತ್ಯವನ್ನು ಅರ್ಥಮಾಡಿಸಲು ಪ್ರಯತ್ನಿಸಿದ ಆ ಗುರುವಿಗೆ ನಮೋ ಎನ್ನಬೇಕು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ಓಳ್ಳೆಯ ಲೇಖನ ಸರ್..
    ಕಾಮೆಂಟ್ ನಲ್ಲಿ "ಸೀತಾರಾಂ ಸರ್;ನಿಜ ಜೀವನದಲ್ಲಿ ಸಂಪೂರ್ಣ ಶರಣಾಗತಿಗೆ ನಮ್ಮ ಅಹಂಕಾರ ಅಡ್ಡ ಬರುತ್ತದೆ.ಅದಕ್ಕೇ ನಮಗೆ ಅಷ್ಟೊಂದು ಕಷ್ಟಗಳು...."
    ತುಂಬಾ ಇಷ್ಟಾ ಆಯಿತು..ಬಹಳ ನಿಜವಾದ ಮಾತು..

    ReplyDelete
  10. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೆಲದ ಮೇಲೆ ನಡೆಯುವುದೇ ಕಷ್ಟ! ಇನ್ನು ಹಾಗೆ ಬೆಟ್ಟ ಹತ್ತಲು ಧೀ ಶಕ್ತಿ ಇರಬೇಕು ಡಾಕ್ಟ್ರೇ...

    ’ನೈನಂ ಛಿಂದಂತಿ ಶಸ್ತ್ರಾಣಿ’ ಎನ್ನುವಂತೆ ಅವನ ಅನುಮತಿಯಿಲ್ಲದೇ ನಮ್ಮಿಂದ ಕಡ್ಡಿ ಎತ್ತಿಡಲೂ ಸಾಧ್ಯವಿಲ್ಲ ಅಲ್ಲವೇ!

    ಸಿದ್ಧಿ ಸಮಾಧಿ ಯೋಗದ ಬಗ್ಗೆ ಪ್ರತ್ಯೇಕ ಪೋಸ್ಟ್ ಹಾಕಿ ಸಾರ್. ಸರಳವಾಗಿ ಬರೆದು ಅದನ್ನು ಜೀರ್ಣಿಸೋ ಶಕ್ತಿ ನಿಮ್ಮ ಬರಹಕ್ಕಿದೆ.

    ReplyDelete
  11. ಮೌನ ರಾಗ ಮೇಡಂ;ನಮ್ಮ ದಿನ ನಿತ್ಯದ ಬದುಕಿಗೆ ಸ್ವಲ್ಪ ಮಟ್ಟಿನ ಅಹಂಕಾರ ಬೇಕು.ಆದರೆ ಅದು ಜೊತೆಯಲ್ಲಿ ನೋವನ್ನೂ ತರುತ್ತದೆ.ಇಂದಿನ ಬದುಕುವ ರೀತಿಯ ಬಳುವಳಿಯಾಗಿ ನೋವೂ ಅನಿವಾರ್ಯವೇ!ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ಬದರಿ;ದೈನಂದಿನ ಒತ್ತಡದ ಬದುಕಿನಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು'ಸಿದ್ಧ ಸಮಾಧಿ ಯೋಗದಂತಹ'ಯಾವುದಾದರೂ ತರಗತಿಗೆ ಸೇರುವುದು ಒಳಿತು.ಬದುಕಿಗೊಂದು ಹೊಸ ಅರ್ಥ,ಜೊತೆಗೆ ಒಂದಷ್ಟು ಅವಶ್ಯಕವಾಗಿ ಬೇಕಿರುವ ನೆಮ್ಮದಿ ಸಿಗುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. ಉತ್ತಮ ಧನಾತ್ಮಕ ಪ್ರಯೋಗ ಡಾ. ಸರ್. ನಿಮ್ಮ ಅನುಭವವೂ ಅಮೂಲ್ಯ. ಪ್ರತಿಕ್ರೆಯೆಗಳೂ ಕೂಡ ತು೦ಬಾ ವಿಚಾರಪೂರ್ವಕವಾಗಿವೆ. ಅಭಿನ೦ದನೆಗಳು.

    @ ಬದರಿ ಸರ್ - ’ನೈನಂ ಛಿಂದಂತಿ ಶಸ್ತ್ರಾಣಿ’ - ಈ ವಾಕ್ಯವು ಆತ್ಮನನ್ನು ಕುರಿತು ಹೇಳಲಾಗಿದೆ(ಭಗವದ್ಗೀತೆ). "ತೇನವಿನ ತೃಣಮಪಿ ನ ಚಲತಿ" - ಈ ಪ್ರಯೋಗ ಸೂಕ್ತವಾಗಬಹುದು..;)..(ಅನ್ಯಥಾ ಭಾವಿಸಬೇಡಿ).

    ಅನ೦ತ್

    ReplyDelete

Note: Only a member of this blog may post a comment.