Saturday, October 15, 2011

"ನೀ ದೊಡ್ಡ ಶಾಣ್ಯಾ ಇದ್ದೀ...!!!"

ಅಪ್ಪಾ ತಂದೀ.............!
ಕಾಣದ ಹಾಂಗ ಕುಂತ ನೀ,
ದೊಡ್  ಶಾಣ್ಯಾ ಇದ್ದೀ !
ಹುಡುಗಿದ್ದಾಗ............,
ಆಟಕ್ ಹಚ್ಚಿದಿ.............!
ಹರೇ ಬಂದಾಗ, ಕಣ್ಣಾಗೆಲ್ಲಾ
ಬರೇ ಹುಡಿಗ್ಯಾರ್ನಿಟ್ಟಿ  !
ವಯಸ್ಸಿನಾಗ ಹೆಗಲ ಮ್ಯಾಲ
ಸಂಸಾರದ ನೊಗ ಕಟ್ಟಿ 
ಕಷ್ಟಗಳ ಚಾಟೀ ಬೀಸಿ 
ಹೈರಾಣ್ ಮಾಡಿಟ್ಟಿ!
ಸಂಸಾರ ಅಂಬೋದು 
ನಿಸ್ಸಾರ ಆದಾಗ ,
'ಸಾಕೋ ರಂಗಾ'
ಅನ್ನೋ ಹಾಂಗ,
ಬ್ಯಾನೀ...... ಕೊಟ್ಟಿ!
ಮುದಿಯಾದಾಗ ......,
ಕಂತೀ,ಕಂತೀ .......
ಚಿಂತೀ ಇಟ್ಟಿ !
ಒಟ್ಟಾಗ..................,
ನಿನ್ನ ತಂಟೀಕ್ ಬರದ ಹಾಂಗ 
ಮಾಡಿಟ್ಟಿ..................!
ಒಟ್ಟಾಗ......ಇಟ್ಟಿ  !
ಬರೀ ಇಷ್ಟರಾಗಾ .........
ಮುಗೀತಲ್ಲೋ ತಂದೀ!
ನಿನ್ನ ಚಿಂತೀ ಮಾಡೂದು 
ಯಾವ ಕಾಲಕ್ಕಂದೀ.....?!!!

20 comments:

  1. ಸೊಗಸಾಗಿದೆ.. ಡಾಕ್ಟ್ರೆ....
    ವ೦ದನೆಗಳು.

    ReplyDelete
  2. ಚುಕ್ಕಿ ಚಿತ್ತಾರಮೇಡಂ;ತಕ್ಷಣದ ಪ್ರತಿಕ್ರಿಯೆಗೆ ಧನ್ಯವಾದಗಳು.ಶಂಕರಾಚಾರ್ಯರ 'ಭಜಗೋವಿಂದಂ'ನಲ್ಲಿ ಬರುವ ಶ್ಲೋಕ ಒಂದನ್ನು ಮನನ ಮಾಡುತ್ತಿದ್ದಾಗ ಬಂದ ಕವಿತೆ ಇದು.ಧಾರವಾಡದ ಕನ್ನಡದಲ್ಲಿ ಬರೆಯುವ ಮೊದಲ ಪ್ರಯತ್ನಇದು.ನಮಸ್ಕಾರ.

    ReplyDelete
  3. ಕೃಷ್ಣಮೂರ್ತಿಯವರೆ,
    ಕವನ ಭಾಳ ಛಲೋ ಆಗೇದ. ಧಾರವಾಡದ ಪೇಢೆ ಮತ್ತು ಗಿರಮಿಟ್ಟು ತಿಂದಷ್ಟು ಸಂತೋಷ ಆತು. ನಿಮ್ಮ ಪ್ರಶ್ನೆಗೆ ಉತ್ತರಾ ಕೊಡೋದು ಆ ‘ತಂದಿ’ಗೆ ಆಗಲಿಕ್ಕಿಲ್ಲ ಅಂತ ಅನಸ್ತದ!

    ReplyDelete
  4. ಸುನಾತ್ ಕಾಕ;ನೀವು ಛಲೋ ಅದಾ ಅಂದ್ರ ಆತ ಬಿಡ್ರಿ.ಧಾರವಾಡದ ಪೇಡ ಮತ್ತು ಧಾರವಾಡದ ಭಾಷಾ ಎರಡೂ ಭಾಳಾನೇ ಇಷ್ಟಾರಿ ಸರ.ಬಂದು ಎರಡು ಛಲೋ ಮಾತು ಹೇಳಿದ್ದಕ್ಕ ಶರಣ್ರೀ.ಅಗದೀ ಅಂದ್ರ ಅಗದೀ ಖುಷಿ ಆತು ನೋಡ್ರೀ.ನಮಸ್ಕಾರ್ರೀ ಸರ.

    ReplyDelete
  5. ಡಾಕ್ಟರ್ ಸಾರಾ !!!! ಬಾಳ್ ಚಲೋ ಅದೇ ಬಿಡ್ರಲಾ ಕವಿತಾ !!!! ಆ ದೇವ್ರ್ಗೆ
    "ನೀ ದೊಡ್ಡ ಶಾಣ್ಯಾ ಇದ್ದೀ...!!!" ಅಂತಾ ಕೇಳೋ ತಾಕತ್ತು ನಿಮ್ ಕವಿತಾದಾಗೆ ಬಂದದೆ ಸಾರಾ !!!! ಒಟ್ನಲ್ಲಿ ಗುಲ್ಬರ್ಗಾ ಮಿರ್ಚಿ ಬಜ್ಜಿ ತಿನ್ದಂಗಾ ಜೋತ್ಯಾಗಾ ಮೈಸೂರ್ ಪಾಕ್ ತಿಂದಂಗ್ ಆಯ್ತ್ ನೋಡ್ರಲಾ !!
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  6. ಬಾಲು ಸರ್;ಆ ದೇವರು ಬುದ್ಧಿವಂತ.He just does not want to reveal himself.ಅವನ ಕಡೆ ನಮ್ಮ ಗಮನ ಹೋಗುವುದಕ್ಕೂ ಬಿಡನು.ಸಣ್ಣ ವಯಸ್ಸಿನಿಂದಲೂ ಏನೋ ಒಂದು ಇಟ್ಟಿರುತ್ತಾನೆ ಫಿಟ್ಟಿಂಗು!ಈ ಮಾತನ್ನು ಶಂಕರಾಚಾರ್ಯರು ತಮ್ಮ 'ಭಜ ಗೋವಿಂದಂ'ಕೃತಿಯಲ್ಲಿ ಹೇಳಿದ್ದಾರೆ.ಸಂಸ್ಕೃತ ದಲ್ಲಿರುವ ಆ ಭಾವವನ್ನು ಕನ್ನಡದಲ್ಲಿ ತರುವ ಪ್ರಯತ್ನ ಇದು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಇದು ಹುಬ್ಳೀ ಕಡೆ ರೇಗಿಸುವ ಪದ! ಇದನ್ನು ಚೆನ್ನಾಗಿ ಬಳಸಿಕೊಂಡಿದ್ದೀರಿ ಸರ...

    ಹರೇ ಬಂದಾಗ, ಕಣ್ಣಾಗೆಲ್ಲಾ
    ಬರೀ ಹುಡಿಗ್ಯಾರ್ನಿಟ್ಟಿ

    ಭಾಳ ಛಲೋ ಅದಾ, ನನಗೂ ಫ್ಲ್ಯಾಷ್ ಬ್ಯಾಕ್ ಮಾಡಿಸ್ತು.

    ಸಂಸಾರ - ನಿಸ್ಸಾರ! ವಾರೆ ವಾಹ್!

    ಯಾರ್ರೀ ಅದು, ಡಾಕ್ಟ್ರನ್ನ ವಯಸ್ಸಾಗದೆ ಅಂದದ್ದು? ಇನ್ನೂ ಮೊನ್ನಿ ಶ್ರಾವಣಕ್ಕ ಮೂವತ್ತೈದು ತುಂಬಿ ಮೂವತ್ತ ನಾಲ್ಕಕ್ಕೆ ಬಿದ್ದಿದೆ. ಅವರಿನ್ನಾ ಯಂಗ್ ಗೊತ್ತೇನ್ರೀ!

    ಒಟ್ಟಗ........
    ನಿನ್ನ ತಂಟೀಕ್ ಬರದ ಹಾಂಗ
    ಮಾಡಿಟ್ಟಿ...
    ದ್ಯಾವ್ರು ಹಿಂಗೂ ಸ್ಕೆಚ್ ಹಾಕ್ತಾನ ಸರ? ತಪ್ಪಿಸ್ಕೊಂಡು ಅತ್ಲಾಗಿಂದ ಹೋಗಾದು ಅವನಿಗೆ ಗೊತ್ತದೆ ಅಂತಾತು.

    ನಿನ್ನ ಚಿಂತೀ ಮಾಡೂದು
    ಯಾವ ಕಾಲಕ್ಕಂದೀ?
    ಇಲ್ಲಿಗೆ ಮಾನವ ಜೀವಿ ಅವನ ಧ್ಯಾನವಿಲ್ಲದೆ, ಪ್ರೇರಣೆಯಿಲ್ಲದೆ ಏನನ್ನು ಸಾಧಿಸಲಾರ ಅಂತ ಚೆನ್ನಾಗಿ ಹೇಳಿದ್ದೀರಿ.

    ಒಟ್ಟಾರೆಯಾಗಿ ನಿಮ್ಮ ಈ ಹೊಸ ಪ್ರಯತ್ನ ಸೂಪರ್ರು. ೧೦೦ ಕ್ಕೆ ೧೦೦ ಮಾರ್ಕ್ಸು.

    ReplyDelete
  8. ಹಳ್ಳಿ ಹುಡುಗ ತರುಣ್;ಬಹಳ ದಿನಗಳ ನಂತರ ನಿಮ್ಮನ್ನು ಬ್ಲಾಗಿನಲ್ಲಿ ನೋಡಿ ಸಂತಸವಾಯ್ತು!ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  9. ಬದರಿ;ಇಷ್ಟೊಂದು ವಿಸ್ತೃತವಾಗಿ,ಅದ್ಭುತವಾಗಿ ಪ್ರತಿಕ್ರಿಯೆ ಸಿಕ್ಕಿದ್ದು ತುಂಬಾ ಖುಷಿಯಾಯಿತು.ನಿಮ್ಮದು ಉದಾರ ಮನಸ್ಸು.ನೂರಕ್ಕೆ ನೂರು ಕೊಟ್ಟಿದ್ದೀರಿ.ನನ್ನ valuationನಲ್ಲಿ ಇದು ಐವತ್ತಕ್ಕೆ ಲಾಯಕ್ಕು.ಹೆಚ್ಚೆಂದರೆ ಐವತ್ತೆಂಟು
    (ನನ್ನ ವಯಸ್ಸಿನಷ್ಟು)ಕೊಡಬಹುದೇನೋ.ಮೊನ್ನೆ ರಾತ್ರಿ ಬೇಂದ್ರೆಯವರ ಕಾವ್ಯ ಓದುತ್ತಿದ್ದೆ.ಅದರ ಪ್ರಭಾವ ನನ್ನ ಧಾರವಾಡ ಭಾಷೆಯ ಈ ಪ್ರಯತ್ನ.ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  10. ವಸಂತ್;ಕವನ ನಿಮಗೆ ಇಷ್ಟವಾದದ್ದು ಸಂತಸ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. WAH KANTHI-KANTHI CHINTHI ITTI-ESTU CHALO ADA ALLA.

    ReplyDelete
  12. ಹೇಮು;ಧನ್ಯವಾದಗಳು.

    ReplyDelete
  13. ಚೆ೦ದ ಬರ್ದೀರಿ.. ಭಾಳ ಪ್ರಶ್ನೀ ಮಾಡೀರಿ.. ಹಾ೦ಗ ಬದುಕಿನ ಮಜಬೂರೀ ನೂ ಬಯಲುಗೊಳಿಸೀರಿ. ಅಭಿನ೦ದನೆಗಳು.. ಸರ್ರ......

    ಅನ೦ತ್

    ReplyDelete
  14. ಡಾಕ್ಟ್ರೇ,
    ಹುಬ್ಬಳಿ ಭಾಷೆಯಲ್ಲಿ ತುಂಬಾ ಚೆನ್ನಾಗಿ ಕವನವನ್ನು ಬರೆದಿದ್ದೀರಿ..

    ReplyDelete
  15. ಅನಂತ್ ಸರ್;ಅನಂತ ಧನ್ಯವಾದಗಳು ಸರ್.ಬರುತ್ತಿರಿ.ನಮಸ್ಕಾರ.

    ReplyDelete
  16. ಶಿವು ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  17. ಸಂಸಾರ ಅಂಬೋದು
    ನಿಸ್ಸಾರ ಆದಾಗ ,
    'ಸಾಕೋ ರಂಗಾ'
    ಅನ್ನೋ ಹಾಂಗ,
    ಬ್ಯಾನೀ...... ಕೊಟ್ಟಿ!...
    ಇಷ್ಟವಾದ ಸಾಲುಗಳು ಬಹಳ ಒಪ್ಪುವ ಕವನದಲ್ಲಿ....

    ReplyDelete
  18. ಅಜಾದ್ ಸರ್;ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  19. ಡಾ. ಟಿ. ಕೃಷ್ಣಮೂರ್ತಿಯವರೆ,
    ನಿಮ್ಮ ಪದ್ಯ ಭಾಳ ಛಲೋ ಅದರಿ. ಅದರ್ದು ಎಲ್ಲಾ ಸಾಲೂ ಛಂದ ಅವರಿ. ಒಟ್ಟ ಪದ್ಯದ್ ಭಾವ ಸೀದಾ ಮನಸ್ನ ಎಬ್ಬಸತದ್ ನೋಡ್ರಿ. ಓದಿ ಭಾಳ್ ಭಾಳ್ ಖುಶಿ ಆಯ್ತು.
    ಲೀಲಾ ಗರಡಿ

    ReplyDelete

Note: Only a member of this blog may post a comment.