Tuesday, October 25, 2011

"ಹಬ್ಬದೂಟ .....ಘಮ್ಮಗೆ !! ನೆನೆಸಿಕೊಂಡ್ರೆ ಸುಮ್ಮಗೆ !! "


"ಎಲ್ಲರಿಗೂ ............ದೀಪಾವಳಿ ಹಬ್ಬದ ............ಶುಭಾಶಯಗಳು .......



ಮನೆಯಲಿ.......ಹಬ್ಬ !!
ಅಬ್ಬಬ್ಬಾ.................!!
ಏನು ತಿಂಡಿ!ಏನೆಲ್ಲಾ ಊಟ!!
ಬೆಳಿಗ್ಗೆಗೆ ತಿಂಡಿಯ ತಳಪಾಯ!
ಎರಡು ಇಡ್ಲಿ ಮತ್ತು
ಎರಡೇ ಎರಡು  ವಡೆ !
ಮಧ್ಯಾಹ್ನದ ಊಟಕ್ಕೆ ,
ಮೆಲ್ಲಗೆ ಏಳುತ್ತಿತ್ತು
ಏಳಂತಸ್ತಿನ..........
ಮಹಡಿಯ ಗೋಡೆ.......!
ಅನ್ನ ,ತೊವ್ವೆ ತುಪ್ಪ!
ಜೊತೆಗೆ ಒಂದೇ ಒಂದು 
ಎರಿಯಪ್ಪ..........!
ಕೋಸಂಬರಿ ಮತ್ತು ಪಲ್ಯ!
ಬೆವರು ಒರಿಸಿಕೊಳ್ಳೋಕೆ,
ಇಗೋ ತಗೋಳಿ ಈ ಶಲ್ಯ!
ಹಪ್ಪಳ ಮತ್ತು ಸಂಡಿಗೆ !
ಒಂದೇ ಒಂದು ಮಂಡಿಗೆ!
ಬಿಸಿ ಬಿಸಿ ...............,
ಬಿಸಿಬೇಳೆ ಬಾತ್ !
ಅದಕ್ಕೆ ಆಲೂ ಬೋಂಡಾ 
ಸಾಥ್ ................! 
ಸ್ವಲ್ಪ ತಿನ್ನಿ ಮೊಸರನ್ನ
ಊಟ ಮುಗಿಸೋ ಮುನ್ನ.
ಆಗುತ್ತಿದೆಯೇ ಆಯಾಸ?
ಸ್ವಲ್ಪವೇ ಕುಡಿದು ಬಿಡಿ 
ಗಸ ಗಸೆ
ಪಾ 
ಯ 
ಸ 
Z Z Z Z Z Z Z Z.NIDDE.....!!!


33 comments:

  1. habbada shubhashagalu Dr. nanage aagale nidde baruttide :-)

    ReplyDelete
  2. ದೀಪಕ್;ಹಬ್ಬದ ಶುಭಾಶಯಗಳು.ಈಗಲೇ ನಿದ್ದೆ ಮಾಡಬೇಡಿ ಸಾರ್!ಇನ್ನೂ ಪಟಾಕಿ ಹೊಡೆದು.....,ತಿಂಡಿ ಹೊಡೆದು....,ಊಟ ಹೊಡೆದು,ಹರಟೆ ಹೊಡೆದು.....!ಎಷ್ಟೆಲ್ಲಾ ಕೆಲಸ ಇದೇ!!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  3. ಹ್ಮ್‌.....
    ಗಸೆಗಸೆ ಪಾಯಸ
    ಬಾಯಲ್ಲಿ ನೀರು :)
    ದೀಪಾವಳಿಗೆ witty ಕವನ..
    -ವೇಣು

    ReplyDelete
  4. ವೇಣು ವಿನೋದ್;ಬ್ಲಾಗಿಗೆ ಸ್ವಾಗತ.ಹಬ್ಬದ ಶುಭಾಶಯಗಳು.ಹಬ್ಬಕ್ಕೆ ಮಾಮೂಲಿ ಪಟಾಕಿಯ ಜೊತೆ ಸ್ವಲ್ಪ ಹಾಸ್ಯ ಚಟಾಕಿ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ದೀಪಾವಳಿಯ ಶುಭಾಶಯಗಳು..

    ReplyDelete
  6. "ಮೆಲ್ಲಗೆ ಏಳುತ್ತಿತ್ತು
    ಏಳಂತಸ್ತಿನ..........
    ಮಹಡಿಯ ಗೋಡೆ.......!" ಹೀಗೆ,
    ಒಳ್ಳೊಳ್ಳೆ ಪಂಚಭಕ್ಷ್ಯ ಪರಮಾನ್ನಗಳ ಪಟ್ಟಿ ಮಾಡಿದ್ದೀರಿ.

    ವ್ಹಾವ್!

    ಅಲ್ಲಿಗೆ ನಮಗೆ ಹಸಿವೋತ್ಕರ್ಷ, ಜೊಲ್ಲೋದ್ಭವ ಮತ್ತು ಜಠರಾಂತರ್ಯ ಮೂಷಿಕ ನರ್ತನ ಶುರೂ ಮಾಡಿಸಿಬಿಟ್ರಿ ಡಾಕ್ಟ್ರೇ!

    [ಅಂದಹಾಗೆ ಊಟ ಎಷ್ಟೊತ್ತಿಗೆ ಅಂತ ಟೈಂ ಹಾಕ್ಬಿಟ್ಟಿದ್ರೇ ಸೀದಾ ಮನೆಗೆ ವಕ್ರಿಸಿ ಬಿಡ್ತಿದ್ವೀ!]

    ReplyDelete
  7. ಬೆಳಕಿನ ಹಬ್ಬ ದೀಪಾವಳಿ
    ಹೊತ್ತು ತರಲಿ
    ನಿಮ್ಮ ಹೃದಯದಲೂ
    ಸಪ್ತ ವರ್ಣಗಳ ಓಕುಳಿ

    ReplyDelete
  8. ಒಳ್ಳೆ ಊಟ ಹಾಕಿಸಿದ್ದಕ್ಕೆ ಧನ್ಯವಾದಗಳು...

    ReplyDelete
  9. ದೀಪಾವಳಿ ಹಬ್ಬದ ಶುಭಾಶಯಗಳು... ಬಾಯಲ್ಲಿ ನೀರು ತರಿಸಿದಿರಿ ನಿಮ್ಮ ಮನೆಗೆ ಲಗ್ಗೆ ಇಡೋಣ ಎನಿಸುತ್ತಿದ್ದೆ... ಆದರೆ ದೂರವಿದ್ದೀರಿ ಹೋಗಲಿ ಅಡಿಗೆ ಮಾಡಿಯೇ ತಿನ್ನೋಣವೆಂದರೆ ನೀವು ಕೊಟ್ಟಿರುವ ಲಿಸ್ಟ್ ನಲ್ಲಿರುವ ಅಡುಗೆ ಎಲ್ಲಾ ಮಾಡಲು ಕಚೇರಿಗೆ ರಜೆ ಹಾಕಬೇಕಾಗುತ್ತೆ ಹಹಹ... ಬೆಳಕು ಮನೆಮಾಡಲಿ ಸರ್..

    ReplyDelete
  10. ಮೌನ ರಾಗ ಮೇಡಂ;ನಿಮಗೂ ಹಬ್ಬದ ಶುಭಾಶಯಗಳು.

    ReplyDelete
  11. KAVANA NIJAKKOO HABBADOOTA MADISITU. ANDAHAGE PAN SUPARI YAVAGA?

    ReplyDelete
  12. ಬದರಿ;ನಿಮ್ಮ ಕಾಮೆಂಟ್ ಕೂಡ ನಿಮ್ಮ ಕವನಗಳಷ್ಟೇ ಸೂಪರ್!ನಮ್ಮ ಮನೆಗೆ ಸ್ವಾಗತ.ಹಬ್ಬ ನಿಮ್ಮ ಬದುಕಿನಲ್ಲಿ ಹೊಸ ಬೆಳಕನ್ನು ತರಲಿ.ಪ್ರತಿಕ್ರಿಯೆಗೆ ಧನ್ಯವಾದಳು.

    ReplyDelete
  13. ಸಿಂಧು ಚಂದ್ರ ಮೇಡಂ;ನನ್ನ ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  14. ಮನಸು ಮೇಡಂ;ಈ ಸಲ ಬಂದಾಗ ನಮ್ಮೂರಿಗೂ ಬನ್ನಿ.ನಿಮಗಿಷ್ಟದ ಅಡಿಗೆ ಖಂಡಿತಾ ಮಾಡಿಸುವಾ.ನಿಮಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಹಬ್ಬದ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  15. ಹೇಮು;ಹಬ್ಬದ ಶುಭಾಶಯಗಳು.ನಿದ್ದೆಯಿಂದ ಎದ್ದ ನಂತರ ಪಾನ್ ಸುಪಾರಿ!

    ReplyDelete
  16. ನೀವೊಂದು ಥರ ಚೋದ್ಯದ ವ್ಯಕ್ತಿಯಾಗಿ ಬಿಟ್ಟಿದ್ದೀರ ಸರ್ ..ಇಷ್ಟೆಲ್ಲ ಅಡುಗೆ ತಿಂಡಿಗಳ ವಿಶೇಷ ಕವನ !! ಖುಷಿಯಾಯ್ತು .. ದೀಪಾವಳಿಯ ಶುಭಾಶಯಗಳು :)

    ReplyDelete
  17. daily oats tinnutida nanage nimma kavana odidamele edina oats ge casual leave.ranganna

    ReplyDelete
  18. ಈಶ್ವರ್;ಹಬ್ಬಕ್ಕೆ ನಗೆಯ ಪಟಾಕಿ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  19. ರಂಗಣ್ಣ;ಹ...ಹ...ಹ...!!ನನ್ನ ಕವಿತೆ ಓದಿ ಸ್ಫೂರ್ತಿ ಪಡೆದು 'ಓಟ್ಸ್' ಗೆ 'ಔಟ್' ಎಂದಿದ್ದೀರಿ!ಲಾಸ್ ಏನಿಲ್ಲಾ ಬಿಡಿ!ಅತ್ತಿಗೆ ಸಖತ್ತಾಗಿ ಹಬ್ಬದ ಅಡಿಗೆ ಮಾಡಿರುತ್ತಾರೆ!ನಿಮ್ಮೆಲ್ಲರಿಗೂ ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು.

    ReplyDelete
  20. ಡಾಕ್ಟರೆ,
    ಹಬ್ಬದೂಟ ಮಾಡಿಸಿದ್ದಕ್ಕೆ ಧನ್ಯವಾದಗಳು ಹಾಗು ದೀಪಾವಳಿಯ ಶುಭಾಶಯಗಳು!

    ReplyDelete
  21. ಸುನಾತ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  22. ಈಗೆಲ್ಲ ಬರೆದು ,ಹೋಟೆಲ್ಲಿನಲ್ಲಿ ಊಟಮಾಡುವ ನಮ್ಮಂತಹ ಬ್ರಂಹಚಾರಿ ಗಳಿಗೆ ಹೊಟ್ಟೆ ಉರಿಸಬೇಡಿ
    suragange.blogsopt.com

    ReplyDelete
  23. ದಯಾನಂದ್;ನನ್ನ ಬ್ಲಾಗಿಗೆ ಸ್ವಾಗತ ಹಾಗೂ ಹಬ್ಬದ ಶುಭಾಶಯಗಳು.

    ReplyDelete
  24. ಸುಬ್ರಮಣ್ಯ;ನಿಮಗೂ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
  25. ದೀಪಾವಳಿ ಹಬ್ಬದ ಶುಭಾಶಯಗಳು.

    ReplyDelete
  26. Sir thamagu mathu thamma parivaradhavarigu Deepavali habbadha Hardhika Shubhashayagalu.

    ReplyDelete
  27. ಹಬ್ಬದ ಊಟ ತೃಪ್ತಿಯಾಗಿ ಉಂಡೆ ಸರ್. ಗಸ ಗಸೆ ಪಾಯಸ ಕೊನೆಯಲ್ಲಿ ನೀವು ನೀಡಿದ್ದು ಒಳ್ಳೆ ನಿದ್ದೆ ಕೊಟ್ಟಿತು, ಅದಕ್ಕೆ ಎಚ್ಚರವಾದಾಗ ಹಬ್ಬ ಕಳೆದು ಮುಂಜಾನೆ ಆಗಿತ್ತು. ಇಂತಾ ಊಟ ಹಾಕಿದ ನಿಮಗೆ ಜೈ ಹೋ ಸರ್. ಅಡಿಗೆ ಮಾಡಿದ ನಿಮ್ಮ ಶ್ರೀಮತಿಯವರಿಗೆ ಜೈ ಹೋ ಸರ್.ಒಳ್ಳೆಯ ರಸಭರಿತ ಕವನ.ಇಷ್ಟ ಆಯ್ತು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  28. ಮನ ಮುಕ್ತ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಶುಭಾಶಯಗಳು.

    ReplyDelete
  29. ರಾಘವ್;ದೀಪಾವಳಿಯ ಹಾರ್ದಿಕ ಶುಭಾಶಯಗಳು.

    ReplyDelete
  30. ಬಾಲೂ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಜೈ ಹೋ!

    ReplyDelete
  31. Aha baayalli neerurittu!

    "Vivaaha bhojanavidu..." haadu nenapaaytu

    ReplyDelete

Note: Only a member of this blog may post a comment.