1)ಮೆಡಿಕಲ್ ಕಾಲೇಜಿನ psycho therapy department ಗೆ ಹೊಸದಾಗಿ ಬಂದಿದ್ದ ಪ್ರೊಫೆಸರ್ ರಾಮಸ್ವಾಮಿ ಯವರು ಆ ದಿನ ಬೆಳಿಗ್ಗೆ ಕೆಂಡಾಮಂಡಲ ವಾಗಿದ್ದರು.ಅವರ ಚೇಂಬರ್ ನ ಹೊರಗೆ ಅವರ ಸೈನ್ ಬೋರ್ಡ್ ನಲ್ಲಿ ಅವರ ಹೆಸರಿನ ಕೆಳಗೆ psychotherapist ಎನ್ನುವುದು psycho the rapist ಎಂದಾಗಿತ್ತು!!
2)ಹೊಸದಾಗಿ ಮದುವೆ ಆಗಿದ್ದ ಇಬ್ಬರು ವಧುಗಳು ತಮ್ಮ ಗಂಡಂದಿರ ಬಗ್ಗೆ ಮಾತಾಡುತ್ತಿದ್ದರು.
ಒಬ್ಬಳು -"ನಿನ್ನ ಗಂಡ ನಿದ್ದೆ ಮಾಡುವಾಗ ಗೊರಕೆ ಹೊಡೆಯುತ್ತಾನೆಯೇ?"
ಇನ್ನೊಬ್ಬಳು-"ಗೊತ್ತಿಲ್ಲಾ ಕಣೆ .ಮದುವೆಯಾಗಿ ಇನ್ನೂ ಎರಡು ವಾರವಾಗಿದೆ.ನಿದ್ದೆ ಮಾಡಿದಾಗ ಗಮನಿಸುತ್ತೀನಿ"
3)ಪ್ರೊಫೆಸರ್ ಕೆ.ಎಸ್.ಮಿಶ್ರಾ, ಚೆನ್ನೈ ನ ಅಪೋಲೋ ಆಸ್ಪತ್ರೆಯಲ್ಲಿ ಖ್ಯಾತ ಹೃದಯ ರೋಗ ತಜ್ಞರು.ಅವರು ವಿದ್ಯಾರ್ಥಿ ಯಾಗಿದ್ದಾಗ ನಡೆದ ಘಟನೆ .ಸೆಮಿನಾರ್ ಒಂದರಲ್ಲಿ ಅವರು ಹೇಳಿದ್ದು. C.M.C.VELLORE(ವೆಲ್ಲೂರ್ ಮೆಡಿಕಲ್ ಕಾಲೇಜ್ )ನಲ್ಲಿ ,ಎಲ್ಲಾ ಕಡೆಗಳಲ್ಲಿ 'christ never fails' ಎಂಬ ಬೋರ್ಡ್ ಗಳನ್ನು ಹಾಕಿದ್ದರಂತೆ .ಸುಮಾರು ನಲವತ್ತು ವರ್ಷಗಳ ಹಿಂದೆ ಅಲ್ಲಿ M.D.exam ಪಾಸ್ ಮಾಡುವುದು ಅತೀ ಕಷ್ಟವಾಗಿದ್ದು, ಸುಮಾರು ವಿದ್ಯಾರ್ಥಿಗಳು ನಾಲ್ಕಾರು ಸಲ fail ಆಗುತ್ತಿದ್ದರಂತೆ.ಹಾಗೆ ಹಲವಾರು ಸಲ fail ಆದ ವಿದ್ಯಾರ್ಥಿಯೊಬ್ಬ 'christ never fails' ಎಂಬ ಬೋರ್ಡ್ ಒಂದರ ಕೆಳಗೆ ದಪ್ಪ ಅಕ್ಷರಗಳಲ್ಲಿ 'Let Him take the M.D.exam'ಎಂದು ಬರೆದನಂತೆ !
4) ಪತ್ನಿಯೊಬ್ಬಳು ತನ್ನ ಪತಿಯ ಚಿಕಿತ್ಸೆಗಾಗಿ ಮನೋ ವೈದ್ಯರ ಬಳಿ ಬಂದಳು.
ಪತ್ನಿ ;" ನನ್ನ ಪತಿಗೆ ವಿಚಿತ್ರವಾದ ಖಾಯಿಲೆ ಶುರುವಾಗಿದೆ ಡಾಕ್ಟ್ರೆ .ತಾವು ಒಂದು ರೇಸ್ ಕುದುರೆ ಎಂದುಕೊಂಡಿದ್ದಾರೆ ."
ಮನೋ ವೈದ್ಯ;"ನೋಡಿಮ್ಮಾ ಈ ಖಾಯಿಲೆ ವಾಸಿ ಆಗ ಬೇಕಾದರೆ ಬಹಳ ಹಣ ಖರ್ಚಾಗುತ್ತೆ"
ಪತ್ನಿ;"ಎಷ್ಟು ಖರ್ಚಾದರೂ ಪರವಾಗಿಲ್ಲಾ ಡಾಕ್ಟ್ರೆ .ಮೊನ್ನೆ ತಾನೇ ಇವರು 'Derby Race' ನಲ್ಲಿ ಓಡಿ,ಹತ್ತು ಲಕ್ಷ ರೂಪಾಯಿ ಗೆದ್ದಿದ್ದಾರೆ!"
( ಸಂಗ್ರಹ ---ವಿವಿಧ ಮೂಲಗಳಿಂದ )
ಸೂಪರ್ ಸರ್. ನಗಿಸಿ ನಮ್ಮ ಆರೋಗ್ಯವೃದ್ಧಿ ಮಾಡುತ್ತಿರುದಕ್ಕೆ ಧನ್ಯವಾದಗಳು.
ReplyDeleteಜೋಕುಗಳ ಜೋಕಾಲಿ..ತೂಗುವ ಕೈಗಳು ನಿಮ್ಮವು..ಸುಖಿಸುವ ಮನಗಳು ನಮ್ಮವು!
ReplyDeleteಹ್ಹೆ ಹ್ಹೆ ಮಜಾವಾಗಿತ್ತು. ಸೈಕೋ ದ ರೇಪಿಸ್ಟ್! ಕ್ಲಾಸಿಕ್...
ReplyDeletekhush huva
ReplyDeleteಕನ್ನಡದ ಪತ್ರಿಕೆಗಳು ಜೋಕುಗಳಿಲ್ಲದೆ ಬಳಲುತ್ತಿವೆ. ತಾವು ಪತ್ರಿಕೆಗಳಿಗೂ ಬರೆಯಬಹುದಿತ್ತು
ReplyDelete:-) :-) super jokes.
ReplyDeleteNice,
ReplyDeletepsychotherapist ಎನ್ನುವುದು psycho the rapist ಎಂದಾಗಿತ್ತು!!
ReplyDeleteಜೋರಾಗಿ ನಕ್ಕು ಬಿಟ್ಟೆ
ನಗಿಸಿದ್ದಕ್ಕೆ ಧನ್ಯವಾದಗಳು
ಚೆನ್ನಾಗಿದೆ
ReplyDeletenice jokes!!
ReplyDeletevery nice Jokes sir....
ReplyDelete