ದೇಹವೆಂಬ ಮನೆಯಲ್ಲಿ
ಅಶಾಂತಿಯ ಬೆಂಕಿ ಹತ್ತಿ ,
ಚಿಂತೆಯ ಹೊಗೆಯಲ್ಲಿ
ದಾರಿ ಕಾಣದಾದಾಗಿ ,
ಮನೆ ,ಮನ ------,
ಹತ್ತಿ ಉರಿಯುವಾಗ ,
ಬೆಂಕಿಯನಾರಿಸಿ
ದಾರಿ ತೋರುವ,
'ಅಗ್ನಿಶಾಮಕ ದಳದ'
'ಕಾಣದ ಕೈಗಳು '
ನಮ್ಮ ನೆರವಿಗೂ
ಬರಬಹುದೆಂದು
ಕಾದು ಕೂರುವ ಬದಲು ,
ನಮಗೆ ನಾವೇ ನೀರಾಗಿ
ಬೆಂಕಿಯನಾರಿಸಿ ,
ಹೊಗೆಯ ಸರಿಸಿ
ಸಮಸ್ಯೆಯ ಸುಳಿಗಳ
ಜೊತೆ ಜೊತೆಯೇ
ತಣ್ಣಗೆ --------,
ನದಿಯಾಗಿ ಹರಿದು
ಮುಂದೆ ಸಾಗುವುದು
ಲೇಸಲ್ಲವೇ --------?
ಇಡಿಯ ಬದುಕನ್ನ ನಾಲ್ಕು ಸಾಲಿನಲ್ಲಿ ಹಿಡಿದಿಟ್ಟಿದ್ದೀರ!
ReplyDeleteನೀವು ಹೇಳುವುದೇನೋ ಸರಿ ಸರ್ , ಆದರೇನು ಮಾಡುವುದು, ಬೆಂಕಿಯನ್ನ ಸೃಷ್ಟಿಸಿದ ಮನಸ್ಸು ತಹಬಂದಿಗೆ ಬಂದರಷ್ಟೇ ನೀರಾಗುವ ಯೋಚನೆ ಬರುವುದು. ಅಂತಹ ಸ್ಥಿತಿಯನ್ನ ತಲುಪಿದ ವ್ಯಕ್ತಿ ಅಸಮಧಾನದ ದಳ್ಳುರಿಗೆ ಎಂದಿಗೂ ಸಿಕ್ಕಲಾರ ಅಲ್ಲವೇ ? ಅಶಾಂತಿಯಿಂದ ಶಾಂತಿಯೆಡೆಗೆ, ಅಸಮಾಧಾನದಿಂದ ಸಮಾಧಾನದೆಡೆಗೆ ಮನಸನ್ನ ತರುವಲ್ಲಿ ಎಷ್ಟು ಕಡಿಮೆ ಸಮಯ ವ್ಯಕ್ತಿಯೋರ್ವ ವ್ಯಯಿಸುತ್ತಾನೆ ಅನ್ನುವುದು 'ಜೀವನದ ಹಾದಿಯಲ್ಲಿ ಎಷ್ಟು ಪಕ್ವವಾಗಿದ್ದಾನೆ' ಅನ್ನುವುದರ ಮಾನದಂಡ ಅಲ್ಲವೇ?
ಗೀತೆಯವರಿಗೆ ನಮನಗಳು.ಬದುಕನ್ನು ಕುರಿತ ನಿಮ್ಮ ಆಳವಾದ ಚಿಂತನೆ ಇಷ್ಟವಾಯಿತು.ಹಿಮವು ಕರಗಿ ನೀರಾಗಬಹುದು.ನೀರು ಕುದಿಯುತ್ತಾ ಆವಿಯಾಗಬಹುದು.
ReplyDeleteಮನುಷ್ಯನ ಮನಸ್ಸು ಕೂಡ ಅದೇ ರೀತಿ ಬದಲಾಗುವುದು ಸಾಧ್ಯ.ಸಮಸ್ಯೆಗಳು ಎದುರಾದಾಗ ಅಂಜದೆ,ಅಳುಕದೆ,ಯಾವ ದೈವಕ್ಕೂ ಕಾಯದೆ ನಮ್ಮ ಸಮಸ್ಯೆಗಳ ಪರಿಹಾರದ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕೆಂಬುದೇ ಕವಿತೆಯ ಆಶಯ.ನಿಮ್ಮ ಪ್ರಭುದ್ದವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಕವನದ ಆಶಯ ಅತ್ಯುತ್ತಮವಾಗಿದೆ. 'ಮನಸ್ಸು' ಎ೦ಥಾ ಅದ್ಭುತ ಶಕ್ತಿ ಹೊ೦ದಿದೆ ಎ೦ದರೆ ಅದಕ್ಕೆ ಅಸಾಧ್ಯವೆ೦ಬುದೇ ಇಲ್ಲ. ನಮಗೆ ನಾವೇ ಧನಾತ್ಮಕವಾಗಿ ತರಬೇತಿ ನೀಡುತ್ತಾ ಏನನ್ನು ಬೇಕಾದರೂ ಸಾಧಿಸಬಹುದು. ಧನ್ಯವಾದಗಳು.
ReplyDeleteVery True..... Good one.
ReplyDeletenija... olle kavana..
ReplyDeleteKAVANAGALU, MALEGALADA JOGADA JALAPATADANTE NIMMA BLOGININDA BEELUTTIVE.UTTAMA BADUKINA RAHASYA BAYALAGIDE.
ReplyDeleteಪ್ರಭಾಮಣಿಯವರಿಗೆ ನಮನಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಪ್ರತಿಯೊಬ್ಬರೂ ತಮ್ಮದೇ ಆದ ಸಮಸ್ಯೆಗಳ ಸುಳಿಗಳಲ್ಲಿ ಸಿಕ್ಕಿಕೊಂಡವರೇ.ಇಲ್ಲಿ ಹರಿಯುವ ನದಿಯನ್ನು
ReplyDeleteಆಶಾವಾದದ ಪ್ರತೀಕವಾಗಿ ಉಪಯೋಗಿಸಲಾಗಿದೆ.ಬದುಕು ಹರಿಯುವ ನದಿಯಾಗಬೇಕು.ನದಿಯಲ್ಲಿ ಸುಳಿಗಳು ಇದ್ದದ್ದೇ.ಪ್ರತಿಕ್ರಿಯೆಗೆ ಧನ್ಯವಾದಗಳು.
ಕವನ ಚನ್ನಾಗಿದೆ ಸರ್
ReplyDeleteತೇಜಸ್ವಿನಿ ಮೇಡಂ ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ತಮ್ಮ ಬ್ಲಾಗಿನಲ್ಲೂ ಉತ್ತಮ ಬರಹಗಳನ್ನು ನೀಡುತ್ತಿದ್ದೀರಿ.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.
ReplyDeleteನಮ್ಮೆದೆಯ ಬೆಂಕಿಗೆ ನಾವೇ ನೀರಾಗಲು ಬೇಕಿರುವ ಧೀಶಕ್ತಿ ಎಲ್ಲರಿಗು ಇರಲು ಸಾಧ್ಯವೇ?
ReplyDeleteಚಿಂತನೆಗೆ ಹಚ್ಚಿಸುವಂಥ ಕವನ.
ಜ್ಯೋತಿಯವರಿಗೆ ನಮಸ್ಕಾರ.ನಿಮ್ಮ ಕವನಗಳೂ ಚೆನ್ನಾಗಿ ಬರುತ್ತಿವೆ.ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ReplyDeleteವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮಿಂದಲೂ ಇನ್ನೂ ಒಳ್ಳೆಯ ಕವನಗಳು ಬರಲಿ ಎನ್ನುವುದು ನನ್ನ ಹಾರೈಕೆ.
ReplyDeleteಉತ್ತಮ ಆಶಯದ ಕವನ. ಮನಸಿಗೆ ಯಾವುದೂ ಅಸಾಧ್ಯವಲ್ಲ...ಮುಖ್ಯ ನಾವು ಮನಸು ಮಾಡಬೇಕಷ್ಟೇ..
ReplyDeleteಹೇಮಚಂದ್ರ;ನನ್ನ ಕವನಗಳನ್ನು ಮಳೆಗಾಲದ ಜೋಗದ ಜಲಪಾತಕ್ಕೆ ಹೊಲೀಸಿದ್ದೀರ.ಜೋಗದ ಜಲಪಾತ ನೋಡಲು ಯಾವಾಗ ಬರುತ್ತೀರಿ ಹೇಳಿ.ನಲವತ್ತು ವರ್ಷದ ಹಳೆಯ ಸಹಪಾಟಿಯನ್ನು ಭೇಟಿ ಮಾಡಬಹುದು.ಧನ್ಯವಾದಗಳು.
ReplyDeleteನಮಸ್ಕಾರ ಶ್ರೀಕಾಂತ್.ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಮುಂದೆಯೂ ಇರಲಿ.ಬ್ಲಾಗಿಗೆ ಬರುತ್ತಿರಿ.
ReplyDeleteಭಾಶೇಯವರೇ;ನಮಸ್ಕಾರ.ನಮ್ಮೆದೆಯ ಬೆಂಕಿಗೆ ನಾವೇ ನೀರಾಗುವ ಧೀ ಶಕ್ತಿ ನಮ್ಮಲ್ಲಿ ಖಂಡಿತಾ ಇದೆ.ನಮಗೆ ಅದರಲ್ಲಿ ನಂಬಿಕೆ ಇರಬೇಕು ಅಷ್ಟೇ.It is only a matter of belief!Belief in oneself.ಧನ್ಯವಾದಗಳು .
ReplyDeleteನಮಸ್ಕಾರ ನಾರಾಯಣ್ ಭಟ್ ಸರ್.ನಮ್ಮ ಬಾಳಿನ ನದಿ ಸಮಸ್ಯೆಗಳ ಬಂಡೆಗಳನ್ನು ಕೊರೆದುಕೊಂಡು ಮುಂದೆ ಸಾಗಲಿ.ಧನ್ಯವಾದಗಳು.
ReplyDeleteಉತ್ತಮ ಆಶಯದ ಮತ್ತು ತಿಳಿವಿನ ಕವನ ಕೊಟ್ಟಿದ್ದಕ್ಕೆ ಧನ್ಯವಾದಗಳು.
ReplyDeleteಸುಬ್ರಮಣ್ಯ;ನಮಸ್ಕಾರಗಳು.ನೀವೆಲ್ಲಾ ನನ್ನ ಬ್ಲಾಗಿಗೆ ಬಂದು ಇಷ್ಟೊಂದು ಪ್ರೋತ್ಸಾಹ ನೀಡುತ್ತಿರುವುದು ನನ್ನ ಬರವಣಿಗೆಗೆ ಪೆಟ್ರೋಲ್ ಇದ್ದ ಹಾಗೆ.ಬರುತ್ತಿರಿ.ಧನ್ಯವಾದಗಳು.
ReplyDeleteNice one sir, It's good to be self sufficient...
ReplyDeleteThanks uday.one needs lots of self esteem to cope with any crisis.Thanks again for visiting the blog and for your kind words of encouragement.
ReplyDeletetumbaa chennaagide sir, manada, jeevanada paaTa helida kavanakke dhanyavaada.......
ReplyDeleteದಿನಕರಮೊಗೇರ;ಪ್ರತಿಕ್ರಿಯೆಗೆ ಧನ್ಯವಾದಗಳು.ಕವನ ನಿಮಗೆ ಹಿಡಿಸಿದ್ದು ಸಂತೋಷ.ಹೀಗೇ ಬ್ಲಾಗಿಗೆ ಬಂದು ಪ್ರೋತ್ಸಾಹ ನೀಡುತ್ತಿರಿ.ನಮಸ್ಕಾರ.
ReplyDeletenice poem! ಚೆ೦ದ ಆಶಯದ ಕವನ.
ReplyDeletethanks Seetaaram sir,for your kind comments.
ReplyDeleteMurthy Sir,
ReplyDeletetadavaagi pratikriyisuttiruvudakke kshame iarali...
Tumbaa sundara kavana sir...ista aitu