ದೂರದಲ್ಲಿ ಮಿನುಗುವ ನಕ್ಷತ್ರಗಳು ,
ನೋಡಿ ಕಣ್ಣು ಮಿಟುಕಿಸಿ ನಗುತ್ತವೆ ,ಅಷ್ಟೇ !
ಅವುಗಳ ಮುಟ್ಟಲಾಗುವುದಿಲ್ಲ!
ಮುಟ್ಟಲಾಗದ ನಕ್ಷತ್ರವೊಂದು ಎದುರಿಗೇ
ಬಂದಿದೆ ನಮ್ಮ ಸ್ವರೂಪದಲ್ಲಿಯೇ !
ನಮ್ಮ ರಕ್ತ ಮಾಂಸ ,
ಮೂಳೆ ಮಜ್ಜೆಗಳನು ಹೊತ್ತು!
ನಮ್ಮೆದುರಿಗೇ ಇದೆ -----,
ಶುಭ್ರ ಧವಳಗಿರಿಯ
ಸ್ಪರ್ಶಾತೀತ ಹಿಮರಾಶಿಯಂತೆ!
ನಮ್ಮೆದುರಿಗೇ ಇದೆ -------,
ದಾರಿ ಮರೆತು ಧರೆಗಿಳಿದ,
ಗಂಧರ್ವನಂತೆ!
ನಮ್ಮೆದುರಿಗೇ ಇದೆ --------,
ಗರಿ ಸುಟ್ಟು ಭೂಮಿ ಮುಟ್ಟಿದ ,
ಗರುಡನಂತೆ!
ಬೊಗಸೆಯಲ್ಲಿ ಬಾಚಿ ತಬ್ಬಿಹಿಡಿದು ,
ಬೆರಗುಗಣ್ಣುಗಳಿಂದ ನೋಡುತ್ತಾ ,
ಆಸರೆಯ ಹಂದರ ಮೆಲುದನಿಯಲ್ಲಿ ,
ಬರೀಮೊಗ್ಗಿಗೆ ಕೇಳುವಷ್ಟೇ ದನಿಯಲ್ಲಿ ,
'ನನ್ನ ಸೂರ್ಯ'ಎನ್ನುತ್ತದೆ !
ಬೆಳಕಿನ ಮೊಗ್ಗು ಕಣ್ಣಗಲಿಸಿ ,
ದನಿ ಮೂಡಿದೆಡೆಗೆ ನೋಡುತ್ತದೆ!
ನಿಮಗೆ ಅಚ್ಚರಿ ಎನಿಸಬಹುದು ,ಇದು ಪದ್ಯವಲ್ಲ ,ಗದ್ಯ! ಎಂ.ಆರ್.ದತ್ತಾತ್ರಿ ಯವರ 'ಪೂರ್ವ ಪಶ್ಚಿಮ'(ಛಂದ ಪ್ರಕಾಶನ)ಎಂಬ ಪುಸ್ತಕದ 'ಬಳ್ಳಿಯಲ್ಲೊಂದು ಬೆಳಕಿನ ಮೊಗ್ಗು'ಎಂಬ ಲೇಖನದ ಕೊನೆಯ ಪ್ಯಾರಾದ ಸಾಲುಗಳನ್ನು ಪದ್ಯದ ರೀತಿ ಜೋಡಿಸಿದ್ದೇನೆ.ದತ್ತಾತ್ರಿಯವರು ,ಈ ರೀತಿ ಗದ್ಯವನ್ನೂ ಪದ್ಯದಂತೆ ,ಲಯಬದ್ಧವಾಗಿ ,ಲಾಲಿತ್ಯ ಪೂರ್ಣವಾಗಿ ಬರೆದಿರುವುದನ್ನು ನೋಡಿ ,ಅಚ್ಚರಿಯಿಂದ ,ಸಂತೋಷಪಟ್ಟಿದ್ದೇನೆ!ನನ್ನ ಸಂತೋಷವನ್ನೂ ,ವಿಸ್ಮಯವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲು ಬ್ಲಾಗಿನಲ್ಲಿ ಹಾಕಿದ್ದೇನೆ.ಒಂದು ನವಜಾತ ಶಿಶುವನ್ನೂ,ಅದರ ತಾಯಿಯ ಸಂಭ್ರಮವನ್ನೂ ಅವರು ಪದಗಳಲ್ಲಿ ಹಿಡಿದಿಟ್ಟಿರುವ ರೀತಿ ನಿಜಕ್ಕೂ ಅದ್ಭುತ !ದತ್ತಾತ್ರಿಯವರು ಕವಿಯೂ ಹೌದು ಎಂದು ಪುಸ್ತಕದಲ್ಲಿ ಮಾಹಿತಿಯಿದೆ.ನಾನು ಅವರ ಕವನಸಂಕಲನವನ್ನು(ಅಲೆಮಾರಿ ಕನಸುಗಳು) ಓದಿಲ್ಲ.ಈ ರೀತಿ ಸೊಗಸಾಗಿ ಕನ್ನಡದಲ್ಲಿ ಬರೆಯುವವರ ಸಂಖ್ಯೆ ಹೆಚ್ಚಲಿ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಆಕರ್ಷಿಸಲಿ .ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ ಎನ್ನುವ ಹಾರೈಕೆ.
ಡಾ. ಸರ್,
ReplyDeleteತುಂಬಾ ಧನ್ಯವಾದ ಉತ್ತಮ ಕವನದ ಬಗ್ಗೆ ತಿಳಿಸಿದ್ದಕ್ಕೆ..... ಕವಿಯ ಬಗ್ಗೆ ತಿಳಿಸಿದ್ದಕ್ಕೆ... ನಿಜಕ್ಕೂ ಸೊಗಸಾಗಿದೆ................
ದಿನಕರ್ ಮೊಗೇರ ರವರಿಗೆ ನಮನಗಳು.ಇದು ಒಂದು ಲೇಖನದ ಸಾಲುಗಳು.ಗದ್ಯವಾದರೂ ಅದರಲ್ಲಿ ಪದ್ಯದ ಲಾಲಿತ್ಯವಿದ್ದುದರಿಂದ ಅದನ್ನು ಪದ್ಯದ ರೀತಿ ಹಾಕಿದ್ದೇನೆ.ಲೇಖಕರು ಕವಿಯೂ ಆಗಿರುವುದರಿಂದ ಅವರ ಲೇಖನದಲ್ಲಿ ಅದು ಸಹಜವಾಗಿ,ಸೊಗಸಾಗಿ ಮೂಡಿ ಬಂದಿದೆ.ಧನ್ಯವಾದಗಳು.
ReplyDeleteವಸಂತ್;ನಮ್ಮಸ್ಕಾರ.ನೀವು ಪೂರ್ತಿ ಓದಲಿಲ್ಲ ಎನಿಸುತ್ತದೆ.ಅದು ದತ್ತಾತ್ರಿ ಅನ್ನುವವರ ಲೇಖನ,ಕಾವ್ಯದ ರೂಪದಲ್ಲಿದೆ!ಧನ್ಯವಾದಗಳು.
ReplyDeleteತುಂಬಾ ಚೆನ್ನಾಗಿದೆ.... ಓದಬೇಕಾಯ್ತು. ಧನ್ಯವಾದಗಳು.
ReplyDeleteWONDERFUL
ReplyDeletenice poem -Thanks to you for sharing & hats off to Mr.Dattatri.
ReplyDeleteಇದು ದಟ್ಸ್ ಕನ್ನಡ.ಕಾಮ್ ನ ಅಂಕಣ ಬರಹಗಳ ಸಂಗ್ರಹವಿರುವ,ಕೊಂಡು ಓದಲೇ ಬೇಕಾದ ಪುಸ್ತಕ.ವಂದನೆಗಳು.
ReplyDeleteHemachandra;Thank you.
ReplyDeleteSeetaaraam Sir;Thanks for your kind comments.
ReplyDeleteಚಂದದ ಸಾಲುಗಳನ್ನ ನಮ್ಮೊಂದಿಗೆ ಹಂಚಿಕೊಂಡದಕ್ಕೆ ಹಾಗೂ ಲೇಖಕರ ಬಗೆಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ :)
ReplyDeleteರಂಜಿತ ಅವರಿಗೆ ನಮನಗಳು.ಕನ್ನಡ ಸಾಹಿತ್ಯಕ್ಕೆ ಹೊಸ ಪೀಳಿಗೆಯ ಹಲವಾರು ಲೇಖಕರು ಬರುತ್ತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ.ಹೊಳೆಗೆ ಹೊಸ ನೀರು ಬಂದಂತೆ ಭಾಷೆ ಮತ್ತಷ್ಟು ಸಮೃದ್ಧ ವಾಗುತ್ತದೆ!ಧನ್ಯವಾದಗಳು.
ReplyDeleteintaha uttama saalugalnnu nammondige hanchikondiddakke dhanyavadagalu...Sundaravaagide...
ReplyDelete