Thursday, June 24, 2010

'ಗಗನಕ್ಕೇರಿದ ತರಗೆಲೆಯೇ !'

ಹೆಸರು ,ಹೆಸರು ,ಹೆಸರು
ಎಂಬ ಕಸರು ತುಂಬಿದ ಗಾಳಿ !
ರೊಯ್ಯನೆಂದು  ಬೀಸಿ
ನಿನ್ನ  ಆಗಸಕ್ಕೆ ಏರಿಸಿ !
ನಾನೇ ಇಂದ್ರ ,ನಾನೇ ಚಂದ್ರ
ಎಂಬ ಭಾವ ಮೂಡಿ !
ನನ್ನ ಸಮನಾರಿಲ್ಲೆನುತ 
ಹೆಮ್ಮೆಯಿಂದ ಬೀಗಿ !
ಗಿರಿ, ಗಿರಿ, ಗಿರಿ, ತಿರುಗಿ! 
ಗಾಳಿ ನಿಂತ ಗಳಿಗೆ!
ಮರಳಿ ಬಿದ್ದೆ ಇಳೆಗೆ !
ಮಣ್ಣಿನಲ್ಲಿ ಮಣ್ಣಾದೆ,
ಮೆರೆದು ಒಂದು ಗಳಿಗೆ!!!
ನೆನಪೇ------ ಇರದೆ
ಸರಿದು -------ಹೋದೆ,
ಕಾಲ ಗರ್ಭದೊಳಗೆ!!!

16 comments:

 1. ನಮಗರಿವಿಲ್ಲದಂತೆ ನಾವೂ ಒಮ್ಮೊಮ್ಮೆ ತರಗೆಲೆಗಳಾಗುವುದುಂಟು!! ಕವನ ಚೆನ್ನಾಗಿದೆ

  ReplyDelete
 2. ಹೆಸರಿನ ಹಿ೦ದೆ ಬೆನ್ನತ್ತಿ ನೇಪಥ್ಯಕ್ಕೆ ಸೇರುವವರನ್ನು ಚೆನ್ನಾಗಿ ತರೆಗೆಕ್ಲೆಗೆ ಹೋಲಿಸಿದ್ದಿರಾ... ತು೦ಬಾ ಇಷ್ಟವಾಯಿತು ತಮ್ಮ ಈ ಸು೦ದರ ಕವನ.

  ReplyDelete
 3. ಸಾಗರಿಯವರಿಗೆ ನಮನಗಳು.ಇದು ಸುಮಾರು ಹದಿನೆಂಟು ವರುಷಗಳ ಹಿಂದಿನ ಕವನ.ಆಗ ನನಗೆ ನಾನೇ ಕೊಟ್ಟುಕೊಂಡ ಎಚ್ಚರಿಕೆಯ ಗಂಟೆ ಇದು.ಎಷ್ಟೋ ಜನ ಹೆಸರಿಗಾಗಿ,ಅಧಿಕಾರಕ್ಕಾಗಿ ಜೀವನವಿಡೀ ಹೊಡೆದಾಡಿ ನಂತರ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿದ್ದರೂ ನಾವೂ ನಮಗರಿವಿಲ್ಲದೆ ಅದೇ ಜಾಡಿನಲ್ಲಿ ಸಾಗುತ್ತೇವೆ!ಧನ್ಯವಾದಗಳು.

  ReplyDelete
 4. ಅದ್ಭುತ!
  ಎಷ್ಟು ನಿಜ!

  ReplyDelete
 5. ಸಾರ್, ತುಂಬಾ ಒಳ್ಳೆ ಕವನ ಕೊಟ್ಟಿದ್ದೀರಿ..ಹೆಸರುಗಳಿಸುವ ಅಮಲು ತಲೆಗೇರಿದರೆ ಏನೇನಾಗುತ್ತದೆ ಅನ್ನೋ ತಿಳುವಳಿಕೆ ನೀಡಿದ್ದೀರಿ.

  ReplyDelete
 6. ಒಳ್ಳೆ ಕವನ... ಎಷ್ಟು ನಿಜ ಅಲ್ಲವೇ... ನಾವು ತರಗೆಲೆಗಳು ಎಂಬುದು ನಮಗೆ ಗೊತ್ತೇ ಆಗುವುದಿಲ್ಲ...

  ReplyDelete
 7. ಸೀತಾರಾಮ್ ಸರ್,ನಾರಾಯಣ್ ಭಟ್ ಸರ್,ಭಾಶೆಮೇಡಂ ಮತ್ತು ಜ್ಯೋತಿ ಮೇಡಂ ;ಪ್ರತಿಕ್ರೀಯೆ ನೀಡಿದ ತಮಗೆಲ್ಲಾ ವಂದನೆಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ಧನ್ಯವಾದಗಳು.

  ReplyDelete
 8. ಕೇವಲ ಹೆಸರಿಗಾಗಿ ಹೋರಾಡಿ ಒಳಿತುಕೆಡುಕುಗಳನ್ನು ಗಾಳಿಗೆ ತೂರಿ ತರಗೆಲೆಗಳಂತೆ ಹಾರಿ............
  ಕೊನೆಗೆ ಗಾಳಿ ನಿಂತಾಗ ಭುವಿಗೆ ಬಿದ್ದು ಮಣ್ಣಾಗುವಾಗ ಪರಮ ಸತ್ಯದ ಅರಿವಾದಾಗ ಕಾಲ ಮಿಂಚಿ ಹೋಗಿರುತ್ತದೆ ಅಲ್ಲವೇ........
  ಚೆನ್ನಾಗಿದೆ, ಹೆಸರಿಗಾಗಿ ಏನೇನೋ ಮಾಡುವ ಜನರು ಒಮ್ಮೆ ನಿಮ್ಮ ಕವನ ಓದಿದರೆ ಮತ್ತೆ ಹೆಸರಿನ ಹಿಂದೆ ಓಡುವುದಿಲ್ಲ!

  ReplyDelete
 9. ಹೆಸರಿಗಾಗಿ ಹೋರಾಡಿ ಕೆಸರಾದವರ ಸ್ಥಿತಿ ಯನ್ನು ಚೆನ್ನಾಗಿ ಕವನದ ಮೂಲಕ ಹೊರಹೊಮ್ಮಿಸಿದ್ದೀರಿ. ನಮ್ಮೆಲ್ಲರಿಗೂ ಇದು ಒ೦ದು ಎಚ್ಚರಿಕೆಯ ಗ೦ಟೆಯಾಗಿದೆ.

  ReplyDelete
 10. ಕವನ ಚನ್ನಾಗಿದೆ ...ಹೆಸರು ಮಾಡಬೇಕು ಅನ್ನೋ ಹಂಬಲ ತಪ್ಪಲ್ಲ ...ಆದರೆ ಆ ದಾರಿಯಲ್ಲಿ ನಾನೆ ಇಂದ್ರ ನಾನೆ ಚಂದ್ರ ಅನ್ನಹೋದರೆ ಮಾತ್ರ ನಾವು ನೆಲಕಚ್ಚುವದು ಖಚಿತ ಅಂತ ನನ್ನ ಭಾವನೆ

  ReplyDelete
 11. ಸರ್,

  ಸದಾ ಮನುಷ್ಯ ತನ್ನ ಅಹಂ ಗೋಡೆಯ ಹಿಂದೆ ನಿಂತೇ ಜಗತ್ತನ್ನು ಆಲಕ್ಷಿಸುತ್ತಾನೆ.

  ಮರಕ್ಕಿಂತ ಇನ್ನೊಂದು ಮರದೊಡ್ಡದು, ಕಪ್ಪೆ ನುಂಗುವ ಹಾವಿಗೂ ಗಿಡುಗ ಕಾದಿದ್ದಾನೆ ಎಂಬ ಸರಳ ನಿಸರ್ಗ ನಿಯಮವನ್ನೇ ಮರೆತಿದ್ದಾನೆ.

  ಅಹಂ ಬೆಲೂನನ್ನು ಒಡೆಯುವ ಪ್ರಯತ್ನ ನಿಮ್ಮ ಕವನ.

  ಸೊಗಸಾಗಿ ಮೂಡಿ ಬಂದಿದೆ. ಪದಗಳಲ್ಲಿ ಲಾಲಿತ್ಯ ಮತ್ತು ಸಾಹಿತ್ಯಿಕ ಸಂಭಾಷಣೆ ಪ್ರಾಸಂಗಿಕವಾಗಿದೆ.

  ReplyDelete
 12. ಸನ್ಮಾನ್ಯರಾದ ಪ್ರವೀಣ್,ಶ್ರೀಕಾಂತ್,NRK,ಬದ್ರಿನಾಥರವರಿಗೆ ಮತ್ತು ಶ್ರೀಮತಿ ಪ್ರಭಾಮಣಿ ಯವರಿಗೆ ನಮನಗಳು.ತಮ್ಮೆಲ್ಲರ ಪ್ರೋತ್ಸಾಹಪೂರ್ವಕ ನುಡಿಗಳಿಗೆ
  ಧನ್ಯವಾದಗಳು.ಸಮಯದ ಅಭಾವ ಹಾಗೂ ಪವರ್ ಕಟ್ ಸಮಸ್ಯೆಯಿಂದ ಪ್ರತ್ಯೇಕವಾಗಿ
  ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ.ಕ್ಷಮೆಯಿರಲಿ.ಬ್ಲಾಗಿಗೆ ಬಂದು ಮುಂದೆಯೂ ಇದೆ ರೀತಿ ಪ್ರತಿಕ್ರಿಯೆ ನೀಡುತ್ತಿರಿ.ನಮಸ್ಕಾರ.

  ReplyDelete
 13. ಮಹನೀಯರೇ ನಿಮ್ಮ ಕವನ ಓದಿ ಬಹಳ ಖುಷಿ ಪಟ್ಟು ಜಗದಮಿತ್ರನ ಮುಂಬರುವ ಕಾವ್ಯಕ್ಕೆ ನಿಮ್ಮ ನೆನಹಿನಲ್ಲಿ , ನಿಮ್ಮ ಸೆಳವಿನಲ್ಲಿ ಈಗಲೇ ಪೀಠಿಕೆ ಹಾಕಿದ್ದೇನೆ--

  ಒಂದು ತರಗೆಲೆ ಹಾರಿ ಸಂದುಗೊಂದನು ಮೀರಿ
  ಚಂದದಲಿ ಬೀಗುತ್ತ ಸೇರಲಾಗಸವ
  ಮಂದಾಸನದಿಂದ ಬಿದ್ದ ನಹುಷನಂತೆ
  ಸಂದಿತಿಳೆಗೈತಂದು | ಜಗದಮಿತ್ರ
  ----ಈ ರೀತಿ, ದಿನವೂ ತಪ್ಪದೇ ಬಂದು ಬ್ಲಾಗ್ ಓದಿ ಹರಸಿ,ಹಾರೈಸುತ್ತಿರುವ ಹಿರಿಯರಾದ ನಿಮಗೆ ಶರಣು, ತಮ್ಮ ಸಾಹಚರ್ಯೇ ಅನವರತ ಇರಲಿ.

  ReplyDelete
 14. Murthy Sir...Very Nice.....Tumbaa chennagide...

  ReplyDelete