Wednesday, June 2, 2010

'ಆನೆಯ ಸೊಂಡಿಲಿನಂಥ ಮನಸು !'

ಮನುಷ್ಯನ ಮನಸ್ಸುವಿಚಿತ್ರ!ಸದಾ ಒಂದು ರೀತಿಯ ಚಡಪಡಿಕೆಯ ಸ್ಥಿತಿ!ಒಮ್ಮೆ ಕೆರಳಿದರೆ,ಒಮ್ಮೆ ನರಳುತ್ತದೆ!ಒಮ್ಮೆಅರಳಿದರೆ ,ಒಮ್ಮೆ ಇದ್ದಕ್ಕಿದ್ದಂತೆಯೇ ಮುದುಡುತ್ತದೆ!ಇದನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟಕರ!ಇನ್ನು ಇದರ ಜೊತೆ ಜೀವನ ಪೂರ್ತಿ ಏಗಬೇಕಲ್ಲಾ!ಸಾಮಾನ್ಯವಾಗಿ ಮನಸ್ಸನ್ನು' ಮರ್ಕಟಕ್ಕೆ'ಹೋಲಿಸುತ್ತಾರೆ.ಆಧ್ಯಾತ್ಮಿಕ ಗುರು ಮತ್ತು ಚಿಂತಕ ಏಕನಾಥ್ ಈಶ್ವರನ್ ಅವರ ಪುಸ್ತಕ ಒಂದರಲ್ಲಿ ಮನಸ್ಸಿನ ಚಂಚಲತೆ ಬಗ್ಗೆ ಒಂದು ವಿಶಿಷ್ಟ ರೀತಿಯ ಉದಾಹರಣೆ ಇದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯ ಗಳಂತೆ ಕೇರಳದಲ್ಲಿಯೂ ದೇವಸ್ಥಾನಗಳು ಜಾಸ್ತಿ.ದೇವಸ್ಥಾನಕ್ಕೆ ಹೋಗುವ ಇಕ್ಕಟ್ಟಾದ ದಾರಿಗಳ ಎಡ ಬಲದಲ್ಲಿ ಹಣ್ಣು ಕಾಯಿ ಮಾರುವ ಅಂಗಡಿಗಳು.ಈ ದೇವಸ್ಥಾನದ ಉತ್ಸವಗಳಲ್ಲಿ ಆನೆಗಳನ್ನು ಬಳಸುವುದು ಹೆಚ್ಚು.ಈ ಆನೆಗಳು ದೇವಸ್ಥಾನಕ್ಕೆ ಹೋಗಿ ಬರುವಾಗ ತಮ್ಮ ಸೊಂಡಿಲುಗಳನ್ನು ಅತ್ತಿತ್ತ ಆಡಿಸುತ್ತಾ ಅಂಗಡಿಗಳಲ್ಲಿ ಇಟ್ಟ ಬಾಳೆ ಹಣ್ಣಿನ ಗೊನೆಗಳನ್ನೂ ,ತೆಂಗಿನ ಕಾಯಿ ಗಳನ್ನೂ 'ಗುಳುಂ' ಮಾಡಿ ಬಿಡುತ್ತವಂತೆ ! !ಅದಕ್ಕೆ ಆ ಆನೆಗಳ ಮಾವುತರು ಒಂದು ಉಪಾಯ ಕಂಡು ಕೊಂಡಿದ್ದಾರಂತೆ!ಈ ಆನೆಗಳ ಸೊಂಡಿಲಿಗೆ ಹಿಡಿದುಕೊಳ್ಳಲು ಒಂದು ಕೋಲನ್ನು ಕೊಡುತ್ತಾರಂತೆ.ಆಗ ಆನೆಗಳ ಸೊಂಡಿಲಿಗೂ ಕೆಲಸ!ಅಂಗಡಿಗಳ ಹಣ್ಣು ಕಾಯಿ ಗಳಿಗೂ ಉಳಿಗಾಲ!ನಮ್ಮ ಮನಸ್ಸೂ ಈ ಆನೆಗಳ ಸೊಂಡಿಲಿನಂತೆ ಎನ್ನುತ್ತಾರೆ ಈಶ್ವರನ್.ಸದಾ ಅತ್ತಿತ್ತ ಚಲಿಸುವ ಆನೆಯ ಸೊಂಡಿಲಿನತಹ ನಮ್ಮ ಈ ಮನಸ್ಸು ಸುಮ್ಮನಿರಲು ಅದಕ್ಕೊಂದು ಮಂತ್ರ ಜಪವನ್ನೋ ,ಭಗವನ್ನಾಮ ಸ್ಮರಣೆಯ ಕೋಲನ್ನೋ ಕೊಡಿ ಎನ್ನುತ್ತಾರೆ.ಎಂತಹ ಒಳ್ಳೆಯ ಉದಾಹರಣೆಯಲ್ಲವೇ? 

26 comments:

  1. ತುಂಬಾ ಉತ್ತಮ ಸಲಹೆ....ಗಮನಕ್ಕೆ ತಂದದ್ದಕ್ಕಾಗಿ ಆಭಾರಿ.

    ReplyDelete
  2. ಪುಟ್ಟ ಬರಹದಲ್ಲಿ ಎಂತಹ ತತ್ವವನ್ನು ತಿಳಿಸಿದ್ದೀರಿ. ತುಂಬ ಇಷ್ಟವಾಯಿತು. ಅನೇಕ ವಂದನೆಗಳು ನಿಮಗೆ.

    ReplyDelete
  3. ನಾರಾಯಣ್ ಭಟ್ ಅವರಿಗೆ ಧನ್ಯವಾದಗಳು.ಎಲ್ಲರೂ ಅಳವಡಿಸಿಕೊಳ್ಳಬಹುದಾದ ಉತ್ತಮ ಸಲಹೆ ನೀಡಿದ್ದಾರೆ ಎನಿಸುತ್ತದೆ.ಹೇಗೋ ಒಟ್ಟಿನಲ್ಲಿ ಎಲ್ಲರೂ ಮನಶ್ಯಾಂತಿ ಸಿಗುವ ಮಾರ್ಗ ಕಂಡುಕೊಳ್ಳಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.ಸರ್ವೇ ಜನಾಃ ಸುಖಿನೋ ಭವಂತು,ಸರ್ವೇ ಮಂತು ನಿರಾಮಯ.ಬರುತ್ತಿರಿ.ನಮಸ್ಕಾರ.

    ReplyDelete
  4. ಸುಬ್ರಮಣ್ಯ ಅವರಿಗೆ ನಮಸ್ಕಾರಗಳು.ಬರಹ ನಿಮಗೆ ಇಷ್ಟವಾದದ್ದು ಸಂತೋಷ.ಮನಸ್ಸಿನ ನೆಮ್ಮದಿಗೆ ಇದೂ ಒಂದು ಒಳ್ಳೆಯ ಮಾರ್ಗ.ಬರುತ್ತಿರಿ.ಧನ್ಯವಾದಗಳು.

    ReplyDelete
  5. ಲೇಖನ ಚೆನ್ನಾಗಿದೆ ..ಉತ್ತಮ ಸಲಹೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ :)

    ReplyDelete
  6. ರಂಜಿತ ಮೇಡಂ;ನಮಸ್ಕಾರ.ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬ್ಲಾಗಿಗೆ ಬಂದು ನಿಮ್ಮ ಸಲಹೆಗಳನ್ನು ನೀಡುತ್ತಿರಿ.ನಿಮ್ಮೆಲ್ಲರ ಸಲಹೆಗಳು ನನ್ನ ಮುಂದಿನ ಬರಹಗಳಿಗೆ ಸಹಕಾರಿಯಾಗುತ್ತವೆ.

    ReplyDelete
  7. ಒ೦ದು ತತ್ವವನ್ನು ಸರಳವಾಗಿ ತಿಳಿಸಿದ ನಿಮಗೆ ಅಭಿನ೦ದನೆಗಳು.

    ReplyDelete
  8. ಸೀತಾರಾಂ ಸರ್ ;ಮನಸ್ಸಿನ ಚಂಚಲತೆಯ ಬಗ್ಗೆ ನಿಮ್ಮಿಂದ ಇನ್ನೂ ಹೆಚ್ಚಿನ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೆ.ನೀವು ಕೊಡುವ ಫೀಡ್ ಬ್ಯಾಕೇ ಒಂದು ಒಳ್ಳೆಯ ಲೇಖನದ ಹಾಗೆ ಇರುತ್ತೆ.ಧನ್ಯವಾದಗಳು.

    ReplyDelete
  9. ಕೂಸು ಮುಲಿಯಳಅವರೆ ;ನಮಸ್ಕಾರಗಳು.ಅಭಿನಂದನೆಗಳು ಮೂಲ ಲೇಖಕರಾದ ಗುರು ಏಕನಾಥ್ ಈಶ್ವರನ್ ಅವರಿಗೆ ಸಲ್ಲುತ್ತದೆ.ಇವರು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ 1959-1999 ವರಗೆ ಬ್ಲೂ ಮೌಂಟನ್ ಎಂಬ ಸಂಸ್ಥೆಯನ್ನು
    ಸ್ಥಾಪಿಸಿ ಲಕ್ಷಾಂತರ ಜನಕ್ಕೆ ಧ್ಯಾನ,ಆಧ್ಯಾತ್ಮಗಳ ಅರಿವು ಮೂಡಿಸಿದ್ದಾರೆ.Jaico
    publications ನಲ್ಲಿ ಇವರ ಹಲವಾರು ಪುಸ್ತಕಗಳು ಲಭ್ಯವಿವೆ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  10. ಒಳ್ಳೆಯ ಉಪಾಯ!
    ಎಷ್ಟು ಸುಲಭದಲ್ಲಿ ಮನವೆಂಬ ಮರ್ಕಟವನ್ನು ದಾರಿ ತಪ್ಪದಂತೆ ತಡೆಯಬಹುದು ಅಲ್ವಾ?

    ReplyDelete
  11. ನಮಸ್ಕಾರ ಪ್ರವೀಣ್.ಉಪಾಯವೇನೋ ಚೆನ್ನಾಗಿದೆ.ಆದರೆ ಎಷ್ಟರಮಟ್ಟಿಗೆ ಅದನ್ನು
    ಅನುಷ್ಟಾನಕ್ಕೆ ತರುತ್ತೇವೆ ಎನ್ನುವುದು ನಮ್ಮ ಕೈಯಲ್ಲಿದೆ.ಧನ್ಯವಾದಗಳು.

    ReplyDelete
  12. Salahege dhanya... Uttama lekhana..

    ReplyDelete
  13. ರವಿಕಾಂತ ಗೋರೆ ಯವರಿಗೆ ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.
    ಲೇಖನ ನಿಮಗೆ ಇಷ್ಟವಾದದ್ದು ಸಂತೋಷ.ಹೀಗೇ ಬರುತ್ತಿರಿ,ನಿಮ್ಮ ಸಲಹೆಗಳನ್ನು ಕೊಡುತ್ತಿರಿ.ಧನ್ಯವಾದಗಳು.

    ReplyDelete
  14. transcedental meditation ಬಗ್ಗೆ
    ಉತ್ತಮ ಉದಾಹರಣೆ

    ReplyDelete
  15. ಸರ್....

    ಉತ್ತಮ ಸಲಹೆಯನ್ನೊಳಗೊಂಡ ಸುಂದರ ಲೇಖನ...ಧನ್ಯವಾದಗಳು...

    ReplyDelete
  16. Dear Ashok kumaar.H.S.;Thanks for your kind comments.I don't know exactly if this comes under T.M. As I understand probably in the initial stages of T.M.a mantra is given and in the later stages neither the mantra exists nor the mind.
    kindly correct me if Iam wrong.Regards.

    ReplyDelete
  17. Ashok kodlady;ಯವರಿಗೆ ನಮಸ್ಕಾರ.ಮನುಷ್ಯನ ಮನಸ್ಸು ಮತ್ತು ನಡವಳಿಕೆ makes an interesting study.ನಾವೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ
    ನೆಮ್ಮದಿಯ ಹುಡುಕಾಟದಲ್ಲಿ ಇದ್ದೇವೆ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
    ಮತ್ತೆ ಬನ್ನಿ.

    ReplyDelete
  18. ಕೃಷ್ಣಮೂರ್ತಿಯವರೆ...

    ನಿಮ್ಮ ಈ ಲೇಖನ ಓದಿ ...
    ಸುಖ, ಶಾಂತಿ.. ಆಧ್ಯಾತ್ಮದ ಕುರಿತು ಒಂದು ಕಥೆ ಬರೆಯುವ ಸ್ಪೂರ್ತಿ ಸಿಕ್ಕಿದೆ...

    ಶಾಂತಿ, ಸುಖ, ಸಮಾಧಾನ...
    ಎಲ್ಲೆಲ್ಲೋ ಹುಡುಕುತ್ತೀವಿ..
    ಅದು ನಮ್ಮ ಬಳಿಯೆ ಇದ್ದಿರುತ್ತದೆ..

    ಧನ್ಯವಾದಗಳು..

    ReplyDelete
  19. ಸಿಮೆಂಟು ಮರಳಿನ ಮದ್ಯೆ ಕಾಂಕ್ರೀಟ್ ಆದಂತಹ ತಣ್ಣಗೆ ಬರೆಯುವ ಕಲೆಯನ್ನು ಸಿದ್ಧಿಸಿಕೊಂಡಿರುವ ಪ್ರಕಾಶ್ ಹೆಗ್ಗಡೆಯವರಿಗೆ ನಮನಗಳು.ನನ್ನ ಲೇಖನ ನಿಮಗೆ
    ಕಥೆಯೊಂದಕ್ಕೆ ಸ್ಪೂರ್ತಿಯಾದದ್ದು ಸಂತೋಷ.ಬರುತ್ತಿರಿ.ಧನ್ಯವಾದಗಳು.

    ReplyDelete
  20. KOLU- NAMASMARANE / JAPAVE AGABEKENDILLA.OTTAREYAGI MANASIGONDU KOLIRABEKU.VICHARAGALU CHENNAGIVE.DHANYAVADAGALU.

    ReplyDelete
  21. ಧನ್ಯವಾದಗಳು ಹೇಮಚಂದ್ರ.ನೀವು ಹೇಳುವುದು ಸರಿ.ಕಗ್ಗದ ಈ ಸಾಲುಗಳು ನೆನಪಾದವು; ಗುಡಿಯ ಪೂಜೆಯೂ ,ಕಥೆಯೋ ,ಸೊಗಸು ನೋಟವೋ,ಹಾಡೊ|
    ಬಡವರಿಂಗೆ ಉಪಕೃತಿಯೋ,ಆವುದೋ ಮನದ |
    ಬದಿದಾಟವನು ನಿಲಿಸಿ ನೆಮ್ಮದಿಯನು ಈವೊಡದೇ|
    ಬಿದುಗಡೆಯೊ ಜೀವಕ್ಕೆ-ಮಂಕುತಿಮ್ಮ||

    ReplyDelete
  22. ನಮಸ್ಕಾರ ಸರ್ ..ನಿಜವಾಗಿ ನನಗೆ ಏನು ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ. ತುಂಬಾ ಜಟಿಲವಾದ ವಿಷಯವನ್ನ ತುಂಬಾ ಚನ್ನಾಗಿ ನಮಗೆ ತಿಳಿಸಿದ್ದಿರಿ. ನಮ್ಮ ಮನಸು ಮಂಗನ ಮಾತ್ರ ಅಲ್ಲ ಹೆಂಡ ಕುಡಿದ ,ಚೇಳು ಕಚ್ಚಿದ ಮಂಗ.ನೀವು ಮಾಸ್ಟರ್ ಆಗಬೇಕಿತ್ತು ಮಕ್ಕಳಿಗೆ ಒಳ್ಳೆ ಗುರು ಸಿಗ್ತಿದ್ರು. ನಿಮ್ಮ ಬರಹ ನೋಡಿ ನನ್ನ ಕನ್ನಡ ಮಾಸ್ಟರ್ SG ನೆನಪಾಗ್ತಾರೆ.

    ReplyDelete
  23. dear DTK
    thanx for commenting
    u under stood TM well.
    for example - the elephant with stick,i like to change as - the elephant and the chain.

    during the training session of elphant, the leg of it will be usually tide with chain to huge tree.

    as days progress, they will tie the leg o elephant to small tree and in later they act like the trainers have tie the leg, the elephant feels like, it is being tide to the huge tree.

    the almost same simily with mind also, but presentation is diffrent.
    thank u

    ReplyDelete
  24. 'ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ 'ದ ಶ್ರೀಕಾಂತ್ ಅವರಿಗೆ ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಾನು ಊರಲ್ಲಿ ಇರಲಿಲ್ಲ ವಾದ್ದರಿಂದ ಉತ್ತರಿಸುವುದು ತಡವಾಯಿತು.ನಿಮ್ಮ ಕಾಮೆಂಟ್ ಓದಿ ತುಬಾ ಸಂತೋಷವಾಯಿತು.ಬರುತ್ತಿರಿ,ಧನ್ಯವಾದಗಳು.

    ReplyDelete
  25. thank you Ashok for your kind your comments.your
    observation is right.the mind needs no control once it is free!

    ReplyDelete

Note: Only a member of this blog may post a comment.