ಮೊನ್ನೆ ನಮ್ಮ ಆಸ್ಪತ್ರೆಯ ಹೊರ ರೋಗಿಗಳ ವಿಭಾಗಕ್ಕೆ ಹಳ್ಳಿಯವನಂತೆಕಾಣುತ್ತಿದ್ದ ಅಜ್ಜನೊಬ್ಬ ತನ್ನ ಹೆಂಡತಿಯೊಡನೆ
ಬಂದ.ತನ್ನ ಸರದಿ ಬಂದಾಗ ನನ್ನ ಪರೀಕ್ಷಾ ಕೋಣೆಯೊಳಗೆ ಬಂದು ರೋಗಿಗಳಿಗಾಗಿ ಇದ್ದ ಸ್ಟೂಲಿನ ಮೇಲೆ ಕುಳಿತ.
ಪಕ್ಕದಲ್ಲಿ ಅಜ್ಜಿ ನಿಂತಿದ್ದಳು.ನಾನು ಎಲ್ಲರನ್ನೂ ಕೇಳುವಂತೆ'ಎನಜ್ಜಾ ಏನು ತೊಂದರೆ 'ಎಂದು ಕೇಳಿದೆ.ಅಜ್ಜ
ಮಾತಾಡದೆ ಸುಮ್ಮನೆ ಕೂತಿದ್ದ.ಅಜ್ಜಿ ರಾಗವಾಗಿ 'ಬಹಳ ಕಡಿ ತೋರಸೀವ್ರೀ,ಗುಣಾನೇ ಆಗಿಲ್ಲಾ 'ಎಂದು ಉತ್ತರ ಕೊಟ್ಟಳು.
ಏನು ತೊಂದರೆ ಎಂದು ಹೇಳದೆ ಸತಾಯಿಸುತಿದ್ದಾರಲ್ಲಾ ಎಂದು ಸ್ವಲ್ಪ ತಲೆ ಬಿಸಿಯಾಯಿತು.ಬಹುಷಃ ಕಿವಿ ಸರಿಯಾಗಿ
ಕೇಳಿಸುತ್ತಿರಲಿಕ್ಕಿಲ್ಲ ಎಂದುಕೊಂಡು ದನಿ ಎತ್ತರಿಸಿ 'ಅಜ್ಜಾ ಏನು ತೊಂದರೆ?ತೊಂದ್ರೇ ಏನು ?'ಎಂದು ಎರಡೆರಡು ಸಲ
ಕೇಳಿದೆ.ಅಜ್ಜ 'ಬೇಜಾರು ಮಾಡಿಕೊಳ್ಳಬೇಡಿ ಸರ್ 'ಎಂದು ಹೇಳಿನನ್ನ ಮುಂಗೈಯನ್ನು ಜೋರಾಗಿ ಚಿವುಟಿ 'ಇಲ್ಲಿ,ಹೀಗೆ,
ನೋವಾಗುತ್ತೆ ನೋಡ್ರೀಸರ್ 'ಎಂದು ನನ್ನ ಮುಖ ನೋಡುತ್ತಾ ಕುಳಿತ.ಇದ್ದಕ್ಕಿದ್ದಂತೆ ನಡೆದ ಈ ಆಘಾತದಿಂದ ಚೇತರಿಸಿ
ಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಯಿತು.ಅಜ್ಜನದು ಬೇಸಾಯ ಮಾಡಿದ ಬಿರುಸು ಕೈ.ಚಿವುಟಿದ ಕಡೆ ಚುರು ಚುರು ಎನ್ನುತ್ತಿತ್ತು.ವೈದ್ಯನಾಗಿ ಮೂವತ್ತ ನಾಲಕ್ಕು ವರ್ಷಗಳಲ್ಲಿ ಯಾವ ರೋಗಿಯೂ ಈ ರೀತಿ ತನ್ನ ನೋವನ್ನು ನನ್ನ ಅನುಭವಕ್ಕೆತಂದಿರಲಿಲ್ಲ!ಅಜ್ಜಿಯ ಕಡೆ ತಿರುಗಿ 'ಏನಜ್ಜೀ ನಿನ್ನ ಗಂಡ ಹೀಗೆ?'ಎಂದೆ.'ಏನ್ ಮಾಡಬೇಕ್ರೀ ಯಪ್ಪಾ!ಯಾವ ಡಾಕ್ಟರಿಗೂ ಇವನ ನೋವು ಏನು ಅಂತ ತಿಳೀವಲ್ತು!ಅದ್ಕಾ ಹೀಂಗ ಮಾಡ್ಯಾನ ನೋಡ್ರೀ 'ಎಂದಳು ಹುಳ್ಳಗೆ ನಗುತ್ತಾ.ಅವನಿಗೆ ಮುಂಗೈಯಲ್ಲಿ ನೋವಿದ್ದುದು ನನ್ನ ಪುಣ್ಯ ಎಂದು ಸಮಾಧಾನ ಪಟ್ಟುಕೊಂಡೆ.'ಬೇರೆಲ್ಲಾದರೂ ನೋವಿದ್ದಿದ್ದರೆ'!ಎಂದು ನೆನಸಿಕೊಂಡು ಒಂದು ಕ್ಷಣ ಗಾಭರಿಯಾಯಿತು.
@ ಕೃಷ್ಣಮೂರ್ತಿ ಸರ್
ReplyDeleteಹೀಗೂ ಉಂಟೇ !!!!!!!!!...ತುಂಬಾ ಚೆನ್ನಾಗಿದೆ ಸರ್..
bhinna bhinnara prapanchaa!
ReplyDeleteಧನ್ಯವಾದಗಳು ಅಶೋಕ್.ಹೀಗೂ ಉಂಟು!ಇಂತಹ ಅನುಭವಗಳು ಜೀವನಕ್ಕೆಬೆರಗನ್ನೂ
ReplyDeleteಬೆಡಗನ್ನೂ ಕೊಡುತ್ತವೆ.
ಸೀತಾರಾಂ ಸರ್ ,ನಮಸ್ಕಾರ.ನೀವೆನ್ನುವುದು ಸರಿ.ಇಡು ಭಿನ್ನರ ಪ್ರಪಂಚ!
ReplyDeleteಸರ್,
ReplyDeleteನಿಮ್ಮ ಫೋನ್ ನಲ್ಲಿ ಧ್ವನಿ ಕೇಳಿ ತುಂಬಾ ಸಂತೋಷ ಆಯಿತು
ಒಳ್ಳೆಯ ಬರಹ
Eega nimma mungai novu hegide?
ReplyDeleteಗುರುಮೂರ್ತಿಹೆಗ್ಡೆ ಯವರಿಗೆ ನಮಸ್ಕಾರ.ಫೋನಿನಲ್ಲಿ ನಿಮ್ಮ ಹತ್ತಿರ ಮಾತನಾಡಿದ್ದು ಸಂತೋಷವಾಯ್ತು.ನೀವು ನಮ್ಮ ಊರಿಗೆ ಬಂದಿದ್ದರೆ ಇನ್ನ್ನೂ ಹೆಚ್ಚು ಖುಷಿ ಇರುತ್ತಿತ್ತು
ReplyDeleteಮುಂದಿನ ಸಲ ಖಂಡಿತ ಬನ್ನಿ.ಧನ್ಯವಾದಗಳು.
ಹೇಮಚಂದ್ರ;ಹೇಗಿದೆ ವೈದ್ಯನ ವಿಶಿಷ್ಟ ಅನುಭವ?ಅಜ್ಜ ನೋವನ್ನ ನನಗೆ ಅರ್ಥ ಮಾಡಿಸಿದ ರೀತಿ innovative ಆಗಿತ್ತು.ಅದಕ್ಕೆ ಅದನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು.ಧನ್ಯವಾದಗಳು.
ReplyDeleteಅಬ್ಬ.ಹೀಗೂ ಉಂಟೆ??!!..ಓದ್ತಾ ಇದ್ದ ಹಾಗೆ ಬ್ರೇಕ್ ಬಿದ್ದಿದ್ದು ತುಂಬಾ ಬೇಜಾರಾಯ್ತು:(
ReplyDeleteಲೋಕೋ ಭಿನ್ನ ರುಚಿಃ !
ReplyDeleteಪಾಪ....!
ReplyDeleteಯಾವ ವೈಧ್ಯರೂ ಆ ಅಜ್ಜನ ನೋವನ್ನು ಅರ್ಥಮಾಡಿಕೊಳ್ಳದೆ ಇದ್ದಾಗ ಆತನ ಪಾಡು ಹೇಗಿರಬೇಕು. ಅಜ್ಜನ ರೀತಿ ಸರಿಯಾಗಿದೆ. ಇಲ್ಲವಾದರೆ ನಿಮಗೆ ಅಜ್ಜನ ನೋವು ಅರ್ಥ ಆಗ್ತಿರ್ಲಿಲ್ಲ!
ನಿಮಗೆ ನೋವಾಗಿದ್ದಕ್ಕೆ ವಿಷಾದವಿದೆ!!!!!!!!!!!!!!!!!!!
ಟ್ರೀಟ್ಮೆಂಟ್ ಏನ್ ಕೊಟ್ರಿ?
ReplyDeleteವನಿತಾ ಮೇಡಂ;ಇಲ್ಲಿ ಬೇಜಾರುಮಾದಿಕೊಳ್ಳುವಂತ ವಿಷಯವೇನೂ ಇಲ್ಲ.It has to be taken in a lighter vein.ಇಲ್ಲಿ I just wanted to
ReplyDeleteshow case a strange human behaviour.ಪಾಪ ಅಜ್ಜ!there was nothing personal.just laugh it off madame.
ಸುಬ್ರಮಣ್ಯ ;ನೀವು ಹೇಳಿದ್ದು ಸರಿ.ಒಬ್ಬೊಬ್ಬರ ಸಂವಹನ ರೀತಿ ಒಂದೊಂದು ತರ!
ReplyDeleteIt is quite an interesting study in human behaviour which has always intrigued me.
ಪ್ರವೀಣ್ ;ಅಜ್ಜ ನೋವನ್ನು ಅರ್ಥ ಮಾಡಿಸಿದ ರೀತಿ ನಮಗೆಲ್ಲಾ ವಿಚಿತ್ರ ಅನಿಸ ಬಹುದು.But, it was a very practical way of making the other person understand.At least from his point of view.
ReplyDeleteಸುಬ್ರಮಣ್ಯ ಮಾಚಿಕೊಪ್ಪ ಅವರೆ.ಇಲ್ಲಿ ಅಜ್ಜನ ಪ್ರಸಂಗವನ್ನು ಮನುಷ್ಯನ ವಿಶಿಷ್ಟ ನಡವಳಿಕೆಗಾಗಿ ಉಲ್ಲೇಖಿಸಲಾಗಿದೆ.ಚಿಕಿತ್ಸೆಯ ವಿವರಗಳು ಇಲ್ಲಿ ಪ್ರಸ್ತುತವಲ್ಲ ಎನಿಸುತ್ತದೆ.ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ReplyDeleteಹೌದಲ್ಲ ಸರ್... ಹೀಗೂ ಅರ್ಥ ಮಾಡಿಸಬಹುದೆಂದು ಹೊಳೆದೇ ಇರಲಿಲ್ಲ.
ReplyDeleteಹೀಗೂ ಅರಿವುಂಟು ಮಾಡಿಸಬಹುದೆಂದು ಹೊಳೆಯಿತು.... ಆದರೂ ಅಜ್ಜನ ವರ್ತನೆಯನ್ನು ಓದಿ ನಗು ಬಂತು :)
ReplyDeleteಸುಮಾ ಮೇಡಂ ;ಹೊಸ ವಿಧಾನವೊಂದು ಗೊತ್ತಾಯಿತಲ್ವಾ !ಆದರೆ ದಯವಿಟ್ಟು
ReplyDeleteಯಾರ ಮೇಲೂ ಪ್ರಯೋಗ ಮಾಡಬೇಡಿ.
ತೇಜಸ್ವಿನಿ ಮೇಡಂ;ನೋವಿನ ಅರಿವು ಮೂಡಿಸುವ ಈ ಹೊಸ ವಿಧಾನದ ಬಗ್ಗೆ ಹೇಳಿದಾಗ ಆಸ್ಪತ್ರೆಯಲ್ಲಿ ಎಲ್ಲರೂ ನಕ್ಕಿದ್ದೇ ನಕ್ಕಿದ್ದು.ಅಜ್ಜನ'ತಲೆ'ಗೆ ಭಲೇ ಎನ್ನಬೇಕು.
ReplyDeleteಅಜ್ಜನಿಗೆ ಬಹುಶಃ ಉಳುಕು
ReplyDeleteಕಿ.ಮೂ.ಗಂ ಡಾಕ್ಟರ್ ಹತ್ತಿರ
ಉಳುಕು ಬಗ್ಗೆ ಹೇಳಿದ ರೀತಿ ವಿಬಿನ್ನ ವಾಗಿದೆ.
ಲೇಖನ ಉತ್ತಮವಾಗಿದೆ
Dear Sir,
ReplyDeleteI am researcher in veterinary animal diseases.., hence I was more interested or curious about your treatment for the same!!!ಅದಕ್ಕೆ ಕೊನೆಯಲ್ಲಿ ಅದರ ಬಗ್ಗೆ ಏನು ವಿವರಿಸದೆ ಇದ್ದುದು ಬೇಜಾರಾಯಿತು ಎಂದು ತಿಳಿಸಿದೆ.
ನಮಸ್ಕಾರ ಅಶೋಕ್ ಸರ್ ;ನಿಮಗೆ ತಿಳಿದ ಹಾಗೆ ನಮ್ಮ ಪೆರಿಫೆರಲ್ ಹೆಲ್ತ್ ಸೆಂಟರ್
ReplyDeleteಗಳಲ್ಲಿ ಎಲ್ಲ ಡಾಕ್ಟರ್ಗಳು ಎಲ್ಲಾ ರೋಗಿಗಳನ್ನು ನೋಡ ಬೇಕಾಗುತ್ತದೆ.ಹಾಗಾಗಿ ಅಜ್ಜನಂತಹ ನೋವಿನ ರೋಗಿಗಳೂ ಬರುತ್ತಾರೆ.ಆ ವಯಸ್ಸಿನಲ್ಲಿ ನೋವು ಮಾಮೂಲಿ.ಆದರೆ ಅದನ್ನು ವೈದ್ಯರಿಗೆ ಅರಿವು ಮಾಡಿಸಿದ ರೀತಿ ವಿಶೇಷ.
vanita madame;thanks for your kind comments and interest evinced.This old man had associated long standing uncontrolled diabetes and probably suffers from diabetic neuropathy.Hehas been asked to get the relevent investigations done.
ReplyDeleteThank you Sir for your response:))
ReplyDelete