Friday, May 21, 2010

'ನಗೆ -----ಗುಳಿಗೆಗಳು '

ವೈದ್ಯಕೀಯ  ರಂಗದಲ್ಲಿ  ಹಾಸ್ಯ  ಹಾಸುಹೊಕ್ಕಾಗಿದೆ .ಹೆಚ್ಚಾಗಿ ನೋವು ಖಾಯಿಲೆ ,ನರಳುವಿಕೆಗಳೇ ಇರುವ ಈ ಕ್ಷೇತ್ರ ದಲ್ಲಿ ಕೆಲವು ಹಾಸ್ಯ ಪ್ರಂಗಗಳು ನಡೆದು ಬದುಕನ್ನು ಹಸನುಗೊಳಿಸುತ್ತವೆ.ವೈದ್ಯಕೀಯ  ಕ್ಷೇತ್ರದಲ್ಲಿಯ  ಹಾಸ್ಯ ಕುರಿತೇ ಅನೇಕ ಪುಸ್ತಕಗಳು ಬಂದಿವೆ.ಹಲವಾರು ಖ್ಯಾತ ವೈದ್ಯರೂ ಇಂತಹ ಪುಸ್ತಕಗಳನ್ನು ಬರೆದಿದ್ದಾರೆ .ದಿನ ನಿತ್ಯದ ಜಂಜಡಗಳ ,ಒತ್ತಡದ ಬದುಕಿನಲ್ಲಿ ನಕ್ಕು ಹಗುರಾಗೋಣ ಬನ್ನಿ.ನಗೆ ಗುಳಿಗೆಗಳನ್ನು ದಿನಕ್ಕೆ ಕನಿಷ್ಠ ಮೂರು ಸಲವಾದರೂ ಸೇವಿಸಬೇಕು .
ಆಪರೇಶನ್  ಥೀಯೇಟರಿನೊಳಗೆ ಟ್ರಾಲಿಯ ಮೇಲೆ ಡ್ರಿಪ್ ಸಮೇತ ಮಲಗಿದ್ದ ರೋಗಿಯನ್ನು ಇಬ್ಬರು ವಾರ್ಡ್ ಬಾಯ್ ಗಳು ಕರೆದು ಕೊಂಡು ಹೋದರು .ಒಳಗೆ ಹೋಗುವಾಗಲೇ ರೋಗಿ ವಿಪರೀತ ಗಾಭರಿಯಾಗಿದ್ದ .ಅವನ ಸಂಬಂಧಿಗಳುಅವನಿಗೆ ಧೈರ್ಯ ಹೇಳಿ ಒಳಗೆ ಕಳಿಸಿದರು.ಒಳಗೆ ಏನು ನಡೆಯಿತೋ ಏನೋ ರೋಗಿ ಅವನಿಗೆ ಹಾಕಿದ್ದ ಪೈಪು ಗಳನ್ನೆಲ್ಲಾ ಕಿತ್ತು ಆಪರೇಶನ್ ಥೀಯೆಟರ್ ನಿಂದ ಹೊರಗೋಡಿ ಬಂದ .ಅಲ್ಲಿದ್ದ ಕೆಲವರು ಅವನನ್ನು ತಡೆದು  ನಿಲ್ಲಿಸಿ 'ಯಾಕಪ್ಪಾ ಹೀಗೆ ಓಡ್ತಾ ಇದ್ದೀಯ ? ಏನು ಕಥೆ 'ಎಂದು ಕೇಳಿದರು.ಅದಕ್ಕೆ  ರೋಗಿ ಉಬ್ಬಸ ಪಡುತ್ತಲೇ ಉತ್ತರ  ಕೊಟ್ಟ 'ಮತ್ತೆ ,ಮತ್ತೆ ----ಅಲ್ಲಿದ್ದ ಸಿಸ್ಟರ್ ಒಬ್ಬರು ,ನೀವೇನೂ ಹೆದರಬೇಡಿ ,ಮೊದಲ ಸಲ ಆಪರೇಶನ್ ಅಂದ್ರೆಹೀಗೆಲ್ಲಾ ಕೈ ನಡಗೋದು ,ಮೈ ವಿಪರೀತ ಬೆವರೋದು,ಎಲ್ಲಾ ಆಗುತ್ತೆ .ನಾನಿದ್ದೇನೆ ಧೈರ್ಯವಾಗಿರಿ ಅಂತೆಲ್ಲಾ ಧೈರ್ಯ ಕೊಡುತ್ತಿದ್ದರು 'ಎಂದ. ಅದಕ್ಕೆ ಅಲ್ಲಿದ್ದವರು 'ಅಲ್ಲಪ್ಪಾ ಸಿಸ್ಟರ್ ಧೈರ್ಯ ಹೇಳಿದ್ದರಲ್ಲಿ ತಪ್ಪೇನಿದೆ?ಅವರು ಎಲ್ಲಾ ರೋಗಿಗಳಿಗೂ ಹಾಗೇ ಧೈರ್ಯ ಹೇಳುತ್ತಾರೆ'ಎಂದರು.ಅದಕ್ಕೆ ರೋಗಿ 'ಅಯ್ಯೋ ,ಸಿಸ್ಟರ್ ಧೈರ್ಯ ಹೇಳಿದ್ದು ನನಗಲ್ಲ!ಆಪರೇಶನ್ ಮಾಡಬೇಕಿದ್ದ ಡಾಕ್ಟರಿಗೆ!'ಎಂದು ಹೇಳಿ ಅಲ್ಲಿಂದ ಓಟ ಕಿತ್ತ .ಅಂತಹ ಸಂದರ್ಭ ಬಂದರೆ ನಾನೂ ಅದನ್ನೇ ಮಾಡುತ್ತಿದ್ದೆ.ನೀವು? 

16 comments:

  1. ಹ ಹ ಹ ಹ.... ಅಲ್ಲ ರೀ ಹಿಂಗಾದ್ರೆ ರೋಗಿಗಳು ಓಡದೆ ಇನ್ನೆನ್ನು
    ಗುಡ್ ಒನ್... ಚೆನಾಗಿ ಬರದಿರಿ :)

    ReplyDelete
  2. ತು೦ಬಾ ಚೆನ್ನಾಗಿದೆ.

    ReplyDelete
  3. :D :D ನಿಜವಾಗಿಯೂ ಈ ಗುಳಿಗೆಯ ಅವಶ್ಯಕತೆ ಬಹಳವಿದೆ... ಎಲ್ಲರಿಗೂ. ಧನ್ಯವಾದಗಳು ಫ್ರೀಯಾರಿ ಕೊಟ್ಟಿದ್ದಕ್ಕೆ :)

    ReplyDelete
  4. ಹ್ಹ ಹ್ಹ ಹ್ಹಾ!
    ಅಲ್ಲಾ ರೀ, ಪಾಪ ರೋಗಿ ಎದ್ದು ಓಡದೆ ಇನ್ನೇನು ಮಾಡ್ತಾನೆ ಪಾಪ! ಆ ಕ್ಷಣ ಅವನ ರೋಗ ಮರೆತು ಹೋಯಿತಲ್ಲ!
    ದೂರದಿಂದಲೇ ಒಳ್ಳೆಯ ಗುಳಿಗೆ ಕೊಟ್ಟಿದ್ದೀರಾ, ಧನ್ಯವಾದಗಳು.

    ReplyDelete
  5. DINAKKONDU NAGEGULIGE
    BLOGNALLONDU GALIGE
    ULLASA NAMAGE.GULIGEGALANNU NEEDUTTHIRI.

    ReplyDelete
  6. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.ಹೀಗೇ ಬರುತ್ತಿರಿ.ನಮಸ್ಕಾರ.

    ReplyDelete
  7. ಸೀತಾರಾಂ ,ಅಶೋಕ್,ನಿಶಾ ;ನಿಮ್ಮೆಲ್ಲರ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆಗಳಿಗೆ
    ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  8. ನಗುವೇ ಉತ್ತಮ ಔಷಧಿ. ವೈದ್ಯರಿಗೆ ಹಾಸ್ಯಪ್ರಜ್ಞೆ ಮತ್ತು ನಗುಮುಖ ಇದ್ದರೆ ಅರ್ಧ ರೋಗ ಮಾಯ

    ReplyDelete
  9. ನಿಮ್ಮ ಅನಿಸಿಕೆ ನಿಜ ದೀಪಸ್ಮಿತ ಅವರೆ .ಆದರೆ ಇಂದಿನ ಒತ್ತಡದ ಬದುಕಿನಲ್ಲಿ ಜೀವನದ ಸಂತೋಷವನ್ನೇ ಕಳೆದು ಕೊಂಡಿದ್ದೇವೆ !

    ReplyDelete
  10. ಡಾಕ್ಟರು ಹೊಸಬರಾಗಿ ಸಿಸ್ಟರು ಹಲಬರಾದಾಗ ಇದು ಸಹಜವೇ ಇರಬಹುದು ! ಆದರೆ ಯುವ ಸಿಸ್ಟರು ಹಳೇ ಡಾಕ್ಟರಿಗೆ ಇದನ್ನು ಹೇಳಿದರೆ ಬಹುಶಃ ಕ್ಷಣಗಳನಂತರ ಆ ಡಾಕ್ಟರನ್ನೇ ಅಡ್ಮಿಟ್ ಮಾಡಬೇಕಾಗಿ ಬರಬಹುದು! ಅಂತೂ ವೈದ್ಯರೇ ನಿಮ್ಮ ಹಾಸ್ಯಪ್ರಜ್ಞೆಗೆ ನೂರೆಂಟು ಸಲಾಮು ಕಣ್ರೀ ! ನಿಮ್ಮಂಥ ವೈದ್ಯರಿದ್ದರೆ ರೋಗಿಗೆ ಅರ್ಧಕಾಯಿಲೆ ನೋಡಿದ ತಕ್ಷಣವೇ ವಾಸಿಯಾಗುವುದರಲ್ಲಿ ಸಂದೇಹವಿಲ್ಲ,ನಿಮ್ಮಲ್ಲಿ ಇದೆ ಲವಲವಿಕೆ ಸದಾ ತುಂಬಿ ನಮ್ಮೆಲ್ಲರವರೆಗೆ ಹರಿದು ತಲುಪಲಿ,ನಮಸ್ಕಾರ.

    ReplyDelete
  11. ನಮಸ್ಕಾರ ಭಟ್ಟರೇ .ನಿಮ್ಮಂಥ ಸಹೃದಯರ ಪ್ರೋತ್ಸಾಹಕ ನುಡಿಗಳು ನನ್ನಂತಹವರಲ್ಲಿ
    ಹೆಚ್ಚಿನ ಲವಲವಿಕೆ ತರುತ್ತದೆ.ಧನ್ಯವಾದಗಳು.

    ReplyDelete

Note: Only a member of this blog may post a comment.