Sunday, May 16, 2010

'ಸೊಪ್ಪಿನ ಹಾಡು'

ನಮ್ಮ ಜನಕ್ಕೆ ಇನ್ನೂ 'ಬಾಟಲಿ ಹುಚ್ಚು'ಹೋಗಿಲ್ಲ .ನಮ್ ಹುಡುಗ ತುಂಬಾ 'ಈಕು',ಒಂದು ಒಳ್ಳೇ ಟಾನಿಕ್ ಬರೆದು ಕೊಡಿ ಅಂತಲೋ,
ಒಂದು'ಗುಲ್ಕೊಸ್'ಬಾಟಲಿ ಏರಿಸಿಬಿಡಿ ಅಂತಲೋ ಬರುವವರ ಸಂಖ್ಯೆ ಸಾಕಷ್ಟಿದೆ.1991-93 ರಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ಚಕ್ರಾನಗರದಲ್ಲಿವೈದ್ಯಾಧಿಕಾರಿಯಾಗಿದ್ದಾಗ ಸುತ್ತಮುತ್ತಲಿನ ಹಳ್ಳಿಯವರು ಹಿತ್ತಲಿನಲ್ಲಿ ಸೊಂಪಾಗಿ ಸೊಪ್ಪು ಬೆಳೆದು ,ಅದನ್ನು ಹುಡುಗರ ಕೈಯಲ್ಲಿ ಮಾರಿಸಿಅದರಿಂದ ಬಂದ ಹತ್ತೋ ಇಪ್ಪತ್ತೋ ರೂಪಾಯಿಗಳನ್ನು ಹಿಡಿದು ತಂದು 'ಒಂದು ಒಳ್ಳೇ ಟಾನಿಕ್ ಬರೆದು ಕೊಡಿ ಸಾರ್'ಅನ್ನೋರು .ಅವರಿಗೆ ಟಾನಿಕ್ ಗಿಂತ ಸೋಪ್ಪಿನಲ್ಲೇ ಹೆಚ್ಚು ಪೌಷ್ಟಿಕಾಂಶ ಇದೆ ಎಂದು ಎಷ್ಟು ಹೇಳಿದರೂ ಅರ್ಥವೇ ಆಗುತ್ತಿರಲಿಲ್ಲ .'ಹಿತ್ತಲ ಗಿಡ ಮದ್ದಲ್ಲ 'ಎನ್ನುವ ಗಾದೆ ನಿಜ ಅನ್ನಿಸಿತ್ತು .ಇಂಥವರಿಗಾಗಿ ಸೊಪ್ಪಿನ ಬಗ್ಗೆ ಒಂದು ಹಾಡು ಬರೆದು ಅದಕ್ಕೆ'ಪ್ಯಾಸಾ'ಚಿತ್ರದ 'ಸರ್ ಜೋ ತೆರಾ ಚಕ್ ರಾಯೇ 'ಎನ್ನುವ ಹಾಡಿನ ರಾಗ ಹಾಕಿ ಅಲ್ಲಿನ ಹೈಸ್ಕೂಲಿನಲ್ಲಿ ಮತ್ತು ಹಲವಾರು ವೇದಿಕೆಗಳಲ್ಲಿ ಹಾಡಿದ್ದೆ.'ನಿಮ್ಮ ಸೊಪ್ಪಿನ ಹಾಡು ಕೇಳಿ ನಮ್ಮ ಹುಡುಗರು ಈಗ ಸೊಪ್ಪು, ತರಕಾರಿ ಚೆನ್ನಾಗಿ ತಿನ್ನುತ್ತಾರೆ ಸಾರ್ ' ಎಂದು ತಂದೆ ತಾಯಂದಿರು ಬಂದು ಹೇಳಿದಾಗ ನಿಜಕ್ಕೂ ತುಂಬಾ ಸಂತೋಷವಾಗುತ್ತಿತ್ತು .ನಿಮ್ಮ ಹುಡುಗರೂ ಸೊಪ್ಪು ,ತರಕಾರಿ ತಿನ್ನದಿದ್ದರೆ ಅವರಿಗಾಗಿ ಈ ಹಾಡು;

ಹಿತ್ಲಲ್ ಎಷ್ಟೊಂದ್ ಸೊಪ್ಪು!
ನೋಡೋಕೆಷ್ಟೊಂದ್ ಸೊಂಪು!
ತಾನೂ ತಿನ್ನದೇ, ಮಕ್ಳಿಗೂ ತಿನ್ಸದೇ 
ಕಾಸಿಗ್ ಮಾರ್ತಾನ್ ಬೆಪ್ಪು! 
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಅದೋ ನೋಡು ದಂಟು !
ಗೊತ್ತಿಲ್ಲೇನೋ ಬಂಟು!
ಇದರಲ್ಲಿದೆ ಏ ಬಿ ಸಿ ಡಿ 
ಎಲ್ಲಾ ವಿಟಮಿನ್ ಗಂಟು!
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಇತ್ಲಾಗ್ ನೋಡು ಮೆಂತ್ಯ !
ತಿಂದರೆ ಖಾಯಿಲೆ ಅಂತ್ಯ !
ಇದನ್ನು ಬಿಟ್ಟು ದಿನ ಬೆಳಗಾದ್ರೆ 
ಟಾನಿಕ್ ಕುಡೀತ ಕುಂತ್ಯ!
ಹಿತ್ಲಲ್ಎಷ್ಟೊಂದ್ಸೊಪ್ಪು -------! 


ಅತ್ಲಾಗ್ ನೋಡು ಬಸಳೇ!
ತಿಂದರೆ ಗರ್ಭಿಣಿ ಮಹಿಳೆ 
ಹೊಟ್ಟೇಲಿರೋ ಹಸುಳೆ 
ಗಟ್ಟಿಯಾಗುತ್ತೆ ನಾಳೆ!
ಹಿತ್ಲಲ್ ಎಷ್ಟೊಂದ್ ಸೊಪ್ಪು -----!

22 comments:

  1. ನಮ್ಮ ಹಿತ್ತಿಳಲ್ಲಿರೋ ಸೊಪ್ಪನ್ನೇ ಮಾರಿ ಅಗ್ಗದ ಟಾನಿಕ್ ಕುಡಿಯೋ ಮೂಢರು ನಾವು!
    ಹ್ಹ ಹ್ಹ ಹ್ಹಾ!
    ಚೆನ್ನಾಗೆ ಹೆಣೆದಿದ್ದೀರಾ ಸರ್ ಹಾಡನ್ನು!
    ಮಾಹಿತಿಯುಕ್ತ ಕವನ!

    ReplyDelete
  2. ಒಳ್ಳೆ ಕೆಲಸ ಮಾಡುತ್ತಿದ್ದೀರಿ. ತಮಗೆ ಒಳ್ಳೆಯದಾಗಲಿ

    ನೀವು ಹೇಳುವುದನ್ನು ಕೇಳಿದರೆ ಜನರು ಹದುಳದಿಂದ ಇರುತ್ತಾರಲ್ಲದೆ ಕನ್ನಡದ ಕಂಪು ಹೆಚ್ಚುತ್ತದೆ.

    ಬರತ್
    http://ybhava.blogspot.com

    ReplyDelete
  3. ಧನ್ಯವಾದಗಳು ಪ್ರವೀಣ್.ಈ ಹಾಡನ್ನು ಹದಿನೆಂಟು ವರ್ಷಗಳ ಹಿಂದೆ ಮಕ್ಕಳಿಗೋಸ್ಕರ
    ಬರೆದದ್ದು.ಈಗ ಅದು ಎಷ್ಟು ಪ್ರಸ್ತುತವೋ ತಿಳಿಯದು.ನಮಸ್ಕಾರಗಳು.

    ReplyDelete
  4. ಥ್ಯಾಂಕ್ಸ್ ಭರತ್.ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರಗಳು.

    ReplyDelete
  5. ಶಿಶು ಸಾಹಿತ್ಯ ಕಡಿಮೆಯಾಗಿ ಬಿಟ್ಟಿದೆ ಇತ್ತೀಚಿನ ದಿನಗಳಲ್ಲಿ .ನಿಮ್ಮ ಪ್ರಯತ್ನ ಚೆನ್ನಾಗಿದೆ.ಖುಷಿಯಾಯ್ತು:) ಹದಿನೆಂಟು ವರ್ಷದ ಹಿಂದೆ ಬರದ್ರಿ ಸರಿ.ಈಗ ಯಾಕೆ ಬಿಟ್ರಿ?:)

    ReplyDelete
  6. ಗೌತಮ್ ಹೆಗ್ಗಡೆ ;ನಿಮ್ಮ ಪ್ರಶ್ನೆ ಚೆನ್ನಾಗಿದೆ.ಹದಿನೆಂಟು ವರ್ಷಗಳ ಹಿಂದೆ ಬರೆದ್ರಿ ,ಈಗ ಯಾಕ ಬಿಟ್ರಿ?ಬಹಳ ಚೆನ್ನಾಗಿ ಕೇಳಿದ್ರಿ.ಉತ್ತರ ಹುಡುಕುವ ಪ್ರಯತ್ನ ಮಾಡುತ್ತೇನೆ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  7. ತುಂಬ ಚೆನ್ನಾಗಿದೆ ಸರ್. ವಿಶಿಷ್ಟ ಪ್ರಯತ್ನ ಮತ್ತು ಅರ್ಥಪೂರ್ಣ ಕವತೆ.

    ReplyDelete
  8. ಡಾ. ಕೃಷ್ಣಮೂರ್ತಿಯವರಿಗೆ ಸೊಗಸಾದ ನೈಸರ್ಗಿಕ ಮತ್ತು ತರಕಾರಿಗಳ ಹಾಗೇ ಅವಿಗಳಿಂದಾದ ಖಾದ್ಯಗಳ ವಿಶೇಷತೆಗಳನ್ನು ಬಹಳ ಚನ್ನಾಗಿ ಪದ್ಯದರೂಪದಲ್ಲಿ ಮುಂದಿಟ್ಟಿದ್ದೀರಿ... ಇಂತಹ ವಿಷಯಗಳನ್ನು ಮಕ್ಕಳಿಗೆ ತಿಳಿಸುವ ದಿಶೆಯಲ್ಲಿ ನಿಮ್ಮ ಈ ಪ್ರಯೋಗ ಬಹು ಪ್ರಭಾವಶಾಲಿಯಾಗಬಹುದೆಂದು ನನ್ನ ಅನಿಸಿಕೆ.

    ReplyDelete
  9. ಸುಬ್ರಮಣ್ಯ ಅವರಿಗೆ ನಮಸ್ಕಾರಗಳು.ಮೊದಲಿಗೆ ನಮ್ಮ ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿಯನ್ನೂ ಅಭಿಮಾನವನ್ನೂ ಬೆಳಸಬೇಕು .ಇಂಗ್ಲೀಶ್ ಕಲಿಕೆಯ ಜೊತೆ ಕನ್ನಡದ ಸವಿಯನ್ನೂ ಉಣಿಸಬೇಕು.ಇದು ನಮ್ಮ ಪೀಳಿಗೆಯ ಅತಿ ಮುಖ್ಯ ಕೆಲಸ ಎನಿಸುತ್ತಿದೆ.

    ReplyDelete
  10. ಅಜಾದ್ ಅವರಿಗೆ ನಮಸ್ಕಾರಗಳು.ಆರೋಗ್ಯದ 'ಕಾನ್ಸೆಪ್ಟೇ' ಬದಲಾಗುತ್ತಿರುವ ಈ ಕಾಲದಲ್ಲಿ ನಮ್ಮಂತಹ ವೈದ್ಯರು ಜನರಲ್ಲಿ ಅದರಲ್ಲೂ ಹಳ್ಳಿಯ ಜನರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕಾಗಿದೆ ಎನ್ನುವುದು ನನ್ನ ಅನಿಸಿಕೆ.ಧನ್ನ್ಯವಾದಗಳು.

    ReplyDelete
  11. ಸೂಪರ್ ಸರ್ :)
    ಮೆಂತೆ , ಬಸಳೆ , ದಂಟು ... ಎಲ್ಲವು ಹಿತ್ತಲದಲ್ಲಿದ್ರು ... ಅದರ ರುಚಿ ಗೊತ್ತಿಲದ್ದಿದವರು ಹಸುಳೆ :)

    ReplyDelete
  12. ಮಾನಸ ;ಅದಕ ನಿಮ್ಮ ಹುಬ್ಬಳ್ಳಿ ಧಾರವಾಡದ ಮಂದಿ ರೊಟ್ಟಿ ,ತಪ್ಪಲ ಪಲ್ಲೆ ತಿಂದು ಗಟ್ಟಿ ಮುಟ್ಟಾಗಿ ಇರ್ತಾರ!ಅದರ ಜೋಡಿ ಕಾಳು ಪಲ್ಯ,ಶೇಂಗಾ ಪುಡಿ ,ಮೊಸರು
    ಇದ್ದರ ಅದರ ಕತೀನ ಬ್ಯಾರೆ!ಧನ್ಯವಾದಗಳು.ನಮಸ್ಕಾರ.

    ReplyDelete
  13. ಧನ್ಯವಾದಗಳು ಕೂಸು ಮುಲಿಯಳಅವರೆ .ಬರುತ್ತಿರಿ.ನಮಸ್ಕಾರಗಳು.

    ReplyDelete
  14. ತುಂಬಾ ಚೆನ್ನಾಗಿದೆ ಸೊಪ್ಪಿನ ಹಾಡು... ಓದಿ ನನಗೇ ಸೊಪ್ಪು ತಿನ್ನಬೇಕೆನ್ನಿಸಿತು :) ತಪ್ಪದೇ ನನ್ನ ಮಗಳಿಗೂ ಈ ಹಾಡನ್ನು ಕಲಿಸುವೆ... ಧನ್ಯವಾದಗಳು.

    ReplyDelete
  15. ತೇಜಸ್ವಿನಿ ಮೇಡಂ ನಮಸ್ಕಾರ.ಹಾಡು ಇಷ್ಟವಾಗಿದ್ದು ಸಂತೋಷವಾಯ್ತು.ಮಕ್ಕಳಿಗೆ ಈ
    ಹಾಡು ಖಂಡಿತ ಖುಷಿ ಕೊಡುತ್ತೆ.ಧನ್ಯವಾದಗಳು.

    ReplyDelete
  16. tumba chennagide...

    elligomme visit madi

    www.vanishrihs.blogspot.com

    ReplyDelete
  17. sarvakalakku yogya-soppu mattu adara haadu.nimma ee prayatna kannadakke haage soppige ondu merugannu tandide.munduvariyali.

    ReplyDelete
  18. ವಾಣಿಶ್ರೀ ಭಟ್;ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಬ್ಲಾಗಿನ ಫಾಲೋಯರ್ ಆಗಿದ್ದೀನಿ.ನೀವೂ ನನ್ನ ಬ್ಲಾಗಿನ ಫಾಲೋಯರ್ ಆದರೆ ಆಗಾಗ ಬರಹಗಳು ಅಪ್ಡೇಟ್
    ಆಗುತ್ತಿರುತ್ತವೆ.ಮತ್ತೆ ಬನ್ನಿ.ನಮಸ್ಕಾರ.

    ReplyDelete
  19. ನಮಸ್ಕಾರ ಹೇಮಚಂದ್ರ.ನಿಮ್ಮಂಥ ಸ್ನೇಹಿತರು ಬ್ಲಾಗಿಗೆ ಬಂದು ಉತ್ತೇಜಕ ಮಾತುಗಳನ್ನು ಆಡಿ ಬ್ಲಾಗನ್ನು ಮುಂದುವರೆಸಲು ಪ್ರೇರಣೆ ನೀಡುತ್ತಿರುತ್ತೀರಿ.
    ಧನ್ಯವಾದಗಳು.

    ReplyDelete

Note: Only a member of this blog may post a comment.