'ಒಗ್ಗಟ್ಟಿನಲ್ಲಿ ಬಲವಿದೆ'!
ಹೀಗೊಂದು ಗಾದೆ !
ಇದ್ದರೆ ಇರಲಿ ಗಾದೆ ,
ನನ್ನದಿಷ್ಟೇ ತಗಾದೆ !
ಆಡು ಮಾತಿನಲ್ಲಿ ಇದೆ ,
ಕೃತಿಯಲ್ಲಿ ಇಲ್ಲ ಒಗ್ಗಟ್ಟು !
ಹುಡುಕುತ್ತಲೇ ಇದ್ದೆ!
ತಿನ್ನುವಾಗ ಕೆಳಗೆ ಬಿತ್ತು
ಒಂದು ಚೂರು ಒಬ್ಬಟ್ಟು!
ಅರೆ!ಕೆಲವೇ ಕೆಲ ಸೆಕೆಂಡು!
ಎಲ್ಲಿತ್ತೋ ಈ ಹಿಂಡು!
ಇರುವಲ್ಲಿ ಇರದಾ ,
ಇರುವೆಗಳ ದಂಡು!
ಚಲಿಸುತ್ತಿದೆ ಒಬ್ಬಟ್ಟು!
ಇಲ್ಲಿದೆ ನೋಡಿ ಒಗ್ಗಟ್ಟು!
ಒಂದಕ್ಕೊಂದು ಬೆನ್ನು ಕೊಟ್ಟು ,
ಕೈ ಕಾಲುಗಳ ಮೀಟಿ ಹೇಗೆ !
ಅನಾಮತ್ತಾಗಿ ಸಾಗಿಸಿವೆ,
ಒಬ್ಬಟ್ಟನ್ನು ಗೂಡಿಗೆ !
ಹಬ್ಬ ಮಾಡಲು,
ತಮ್ಮ ಪಾಡಿಗೆ !
ಘೋಷಣೆಯಿಲ್ಲ, ಗಾದೆಯಿಲ್ಲ !
ಮಾತಿಲ್ಲ ,ಕತೆಯಿಲ್ಲ !
ಇಲ್ಲಿ ಬರೀ ಕೃತಿಯಿದೆ!
ಒಗ್ಗಟ್ಟಿನಲ್ಲಿ ಬಲವಿದೆ!
ಇದು ಸತ್ಯದರ್ಶನದ ಕವನ. !
ReplyDeleteಇರುವೆಗಳ ಒಗ್ಗಟ್ಟಿನ ಬಗ್ಗೆ
ReplyDeleteಮನುಷ್ಯರ ಬಗ್ಗೆ ತುಲನಾತ್ಮಕವಾಗಿ ಚಂದದ ಕವನ
ನಿಮ್ಮ ಸಿಸ್ಟಂ ಸರಿಹೋಗಿ ಮತ್ತೆ ಸಕ್ರಿಯರಾಗಿ
ಬ್ಲಾಗ್ ಮಾಡುತಿರುವುದಕ್ಕೆ ಖುಷಿ ಆಯಿತು.
ಸುಬ್ರಮಣ್ಯ ಅವರಿಗೆ ನಮಸ್ಕಾರಗಳು .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು .
ReplyDeleteಧನ್ಯವಾದಗಳು ಅಶೋಕ್ .ನಿಮ್ಮ ಜೊತೆ ಮತ್ತೆ ಬ್ಲಾಗಿಸುತ್ತಿರುವುದು ಸಂತೋಷ ತಂದಿದೆ .ಬರುತ್ತಿರಿ ,ನಮಸ್ಕಾರ.
ReplyDeleteಮನೋಜ್ಞವಾಗಿ ಒಗ್ಗಟಿನಲ್ಲಿ ಬಲವಿದೆ ಎ೦ಬುದು ಕೃತಿಯಲ್ಲಿ ಬರುವಬಗ್ಗೆ ಸರಳ ಉದಾಹರಣೆಯೊ೦ದಿಗೆ ನಿರೂಪಿಸಿದ್ದಿರಾ!
ReplyDeleteಧನ್ಯವಾದಗಳು.
ಕೃಷ್ಣಮೂರ್ತಿಯವರೆ..
ReplyDeleteಬಹಳ..
ಸರಳವಾಗಿ..
ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವದನ್ನು..
ಕೆಲವೇ ಶಬ್ಧಗಳಲ್ಲಿ ತಿಳಿಸಿದ್ದೀರಿ..
ಅಭಿನಂದನೆಗಳು..
ಸೀತಾರಾಂ ಸರ್ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ನಮನಗಳು .
ReplyDeleteಪ್ರಶಾಂತ್ ಸರ್ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಬ್ಲಾಗಿಗೆ ಬರುತ್ತಿರಿ .ನಮಸ್ಕಾರ.
ReplyDeleteಬರೀ ಬಾಯಿ ಮಾತಿನಲ್ಲಿ ಗಾದೆಗಳನ್ನು ಹೇಳಿಕೊಳ್ಳುವ ಬದಲು ನಿಜವಾಗಿಯೂ ಜೀವನದಲ್ಲಿ ಅಳವಡಿಸಿಕೊಂಡರೆ ಎಷ್ಟು ಚನ್ನ ಅಲ್ವಾ?
ReplyDeleteಇರುವೆಯಿಂದ ನಾವು ಕಲಿಯುವ ಪಾಠ ಬೇಕಾದಷ್ಟಿದೆ.
ಇರುವೆಗಳ ಒಗ್ಗಟ್ಟಿನ ಉದಾಹರಣೆಯೊಂದಿಗೆ ಚುಟುಕಾಗಿ ಜೀವನ ಮೌಲ್ಯವೊಂದರ ನೆನಪು ಮಾಡಿಕೊಟ್ಟಿದ್ದೀರಾ!
ಧನ್ಯವಾದಗಳು.
ಧನ್ಯವಾದಗಳು .ಬರೀ ಮಾತು ಘೋಷಣೆ ಕೇಳಿ ಕೇಳಿ ಸಾಕಾಗಿದೆ.ಕೃತಿಯಲ್ಲಿ ಕಾಣುತ್ತಿಲ್ಲ.ಮಾತಿಲ್ಲದೆ ಕೃತಿಯಲ್ಲಿ ಕಾರ್ಯಗತ ಗೊಳಿಸುವ ಉದಾಹರಣೆ ಗಳನ್ನು ನಾವು ಹುಡುಕಬೇಕಾಗಿದೆ.
ReplyDeleteತುಂಬಾ ಚೆನ್ನಾಗಿದೆ ಅರ್ಥ - ಒಳಾರ್ಥ
ReplyDeleteಸುಮ್ಮನೆ ಮಾತಿಗೆ ಮಾತು ಸೇರಿಸುವ ಬದಲು, ಇರುವೆಗಳ ಹಾಗಾದರೆ ತುಂಬಾ ಒಳ್ಳೆದಾಗುತ್ತೆ. ಎಲ್ಲರಿಗೂ
'ಏನೇ ಬರಲಿ ಒಗ್ಗಟ್ಟಿರಲಿ'ಎನ್ನುವ ಘೋಷಣೆ ಕೂಗುತ್ತಲೇ ತಮ್ಮ ತಮ್ಮಲ್ಲಿ ಕಚ್ಚಾದುವರನ್ನು ಕಂಡು ಬೇಸರವಾಗುತ್ತದೆ.ಮನುಷ್ಯರು ಏಕೆ ಹೀಗೆ
ReplyDeleteಎನ್ನುವ ಜಿಜ್ಞಾಸೆ ಕಾಡುತ್ತದೆ.namaskaara.dhanyavaadagalu.
ಚಿಕ್ಕ ಜೀವಿಗಳಲ್ಲಿರುವ ಒಗ್ಗಟ್ಟು ನಮ್ಮಂತಹ ದೊಡ್ಡವರಲ್ಲಿ ಕಾಣುವುದು ಅಪರೂಪ. ಹಣ ಬಲ, ಅಧಿಕಾರ ಬಲಗಳ ಮುಂದೆ ಜನ ಬಲ ಕ್ಷೀಣವಾಗುತ್ತಿದೆ. ಈಗ ದುಡ್ಡಿದ್ದವರ ಕಡೆಯೇ ಒಗ್ಗಟ್ಟು ಜಾಸ್ತಿ....
ReplyDeleteಉತ್ತಮ ಕವಿತೆ.
ಧನ್ಯವಾದಗಳು ಮೇಡಮ್.ಇರುವೆಯಂತಹ ಸಣ್ಣ ಜೀವಿಗಳಲ್ಲೂ ಎಂತಹ ಅರಿವು ತುಂಬಿದೆಯಲ್ಲಾ ಅಂತ ಅಚ್ಚರಿಯಾಗುತ್ತದೆ .ನಮಸ್ಕಾರ.
ReplyDeleteನಮ್ಮಲ್ಲಿ ಹೇಳುವವರೇ ಹೆಚ್ಚು.ತೊಡಗಿಸಿಕೊಳ್ಳುವವ್ರು ಕಡಿಮೆ.ಕವನವನ್ನು ಸು೦ದರವಾಗಿ ನಿರೂಪಿಸಿದ ನಿಮಗೆ ಅಭಿನ೦ದನೆ.
ReplyDeleteIt is nice seeing you in my blog after a long time sir.thanks for your kind comments.kindly keep visiting.
ReplyDeleteಒಗ್ಗಟ್ಟು - ಒಬ್ಬಟ್ಟು - ಪ್ರಾಸದೊ೦ದಿಗೆ ಅರ್ಥ ತು೦ಬಿ ಚೆನ್ನಾಗಿ ರಚಿಸಿದ್ದೀರಿ.
ReplyDeleteThank you for your kind comments sir.
ReplyDeletesir, tumbaa saraLavaagi, saraaga vaagi baradiree... oggattinalli balavide anta... tumbaa ista aayatu :)
ReplyDeleteಧನ್ಯವಾದಗಳು ಮಾನಸ ಮೇಡಂ .ಬ್ಲಾಗಿಗೆ ಬರುತ್ತಿರಿ.ನಮಸ್ಕಾರ .
ReplyDeleteಸರ್,
ReplyDeleteಸರಳ, ಸುಂದರ, ಅರ್ಥಗರ್ಭಿತ ಕವನ, ಉತ್ತಮ ಪದ ಪ್ರಾಸಗಳ ಜೋಡಣೆ , ಇರುವೆಯ ಉದಾಹರಣೆಯ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸುಂದರವಾಗಿ ನಿರೂಪಿಸಿದ್ದೀರಿ, ಧನ್ಯವಾದಗಳು...
Thank you Ashok kodlady sir.welcome to my blog.please keep visitiing.namaskaar.
ReplyDelete