1)ರವಿ-ಕವಿ
ಮೂಡಣದಲ್ಲಿ
ಮೂಡಿದ ರವಿಗೆ
'ಮೂಡ್ 'ಬಂದು
ಬಾನಂಚಿನಲ್ಲಿ ಬರೆದ ,
ಹಕ್ಕಿಗಳ
ಸಾಲು ಸಾಲು
ಕವಿತೆ!
2)'ನಿಗೂಢ'
ಸೂರ್ಯ -------!
ನೀ ನನಗೆ ನಿಗೂಢ!
ಸಂಜೆ ಸೇರಿದರೆ
ನೀ -------ಗೂಡ ,
ಮತ್ತೆ ಕಾಣುವುದು
ಮರುದಿನ ಮುಂಜಾನೆಯೇ !
3)ಸೂರ್ಯ -ಟೈಟು
ಸೂರ್ಯ -----------,
ಸಂಜೆ ಪಡಖಾನೆಗೆ
ಬರುವಾಗಲೇ ಟೈಟು!
ಮತ್ತೊಂದು 'ಸಿಕ್ಸ್ಟಿ'ಏರಿಸಿದ !
'ಬ್ಲ್ಯಾಕ್-ಔಟ್ 'ಆಗಿ ,
ಎಚ್ಚರ ಆದದ್ದು
ಮಾರನೇ ದಿನ
ಬೆಳಿಗ್ಗೆನೇ---!!
4)'ಬೋರು '
ಯಾಕೋ
ಬೋರು !
ಮನದ
ಬೋರಿನಲ್ಲಿ
ಕವಿತೆಯ
ನೀರು
ಖಾಲಿ!
Very nice sir, i liked ಸೂರ್ಯ -ಟೈಟು most.
ReplyDeleteಸೂರ್ಯ -ಟೈಟು ಓದಿ ತುಂಬಾ ನಗು ಬಂತು...:D ರವಿ-ಕವಿ ತುಂಬಾ ಇಷ್ಟವಾಯಿತು.
ReplyDeleteಚೆನ್ನಾಗಿದೆ ಸ್ವಾಮಿ....
ReplyDeleteರವಿ-ಕವಿಯಾದ ಸಂಜೆ ಚೆನ್ನಾಗಿದೆ.
ಸೂರ್ಯನಿಗೆ ಸ್ವಲ್ಪ ಬುದ್ದಿ ಹೇಳಿ, ದಿನಾ ಹಾಗೆ ಕುಡಿದು ಟೈಟ್ ಆಗೋದು ಬೇಡ ಅಂತ!
ಸುಂದರ ಹನಿಗವನಗಳು.
Thanks uday.it is nice some one likes what we write.it spreads joy!cool!keep coming.
ReplyDeleteತೇಜಸ್ವಿನಿಯವರಿಗೆ ನಮಸ್ಕಾರಗಳು .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಮೇಡಂ.
ReplyDeleteಮತ್ತೆ ಬನ್ನಿ.
ಪ್ರವೀಣ್ ಅವರೆ;
ReplyDeleteನಮ್ಮ ಸೂರ್ಯಣ್ಣನ್ಗೇ ಭಾಳ ಸಿಟ್ಟು
ಬುದ್ಧಿ ಎಳೋದ್ ಕಷ್ಟ!
ಅವನೇನಾದ್ರೂ ಮುನಿಸ್ಕೊಂಡ್ ಬಿಟ್ರೆ
ನಮ್ಗೆ ಆಲ್ವಾ ನಷ್ಟ!
ರವಿ - ಕವಿ
ReplyDeleteಫೋಟೋಗೆ ತುಂಬ ಹೊಂದಿಕೊಳ್ಳುವ ಕವಿತೆ
ಹನಿಗವನ ಚೆನ್ನಾಗಿವೆ.
thank you Ashok.keep visiting the blog.
ReplyDeleteಚೆ೦ದದ ಮುದನೀಡುವ ಚುಟುಕುಗಳು.
ReplyDeleteಧನ್ಯವಾದಗಳು ಸೀತಾರಾಂ .ಮತ್ತೆ ಬನ್ನಿ.ನಮಸ್ಕಾರಗಳು.
ReplyDeleteಪ್ರಚಂಡರು ನೀವು...ಕವಿಯಂತೆ ಕಂಡ ಸೂರ್ಯಂಗೇ ಹೆಂಡ ಕುಡಿಸಿ ಬಿಟ್ಟಿದ್ದೀರಿ! ಎಲ್ಲ ಚುಟುಕಗಳು ಹಂಗೇ ಪ್ರತಿಕ್ರಿಯೆಯಲ್ಲೂ ಹರಿದ ರತ್ನನ ಪದದ ಝಲಕ್ ಎಲ್ಲವೂ ಚೆನ್ನಾಗಿದೆ...ನಿಮ್ಮ ಮನದ ಬೋರಿನಲ್ಲಿ ಕವಿತೆಯ ಒರತೆ ಮಾತ್ರ ಜೋರು.
ReplyDeleteಭಟ್ಟರೇ ನಮಸ್ಕಾರ .'ರತ್ನನ ಪದಗಳು'-೧೫ ನೇ ಕವನ 'ಸಮಾಧಾನ'ದಲ್ಲಿ ೪ ನೇ ಪ್ಯಾರ ಹೀಗಿದೆ ;ತೂರಾಡ್ತಾ ಮೋರೀಗೆ ಮೊಚ್ತಾನೆ ಸೂರ್ಯಪ್ಪ
ReplyDeleteಚಿಲ್ಲಂತ ಕೆಸರೆಲ್ಲ ಮೇಲ್ ಆರ್ತದೆ !
ಅದ ಕಂಡು'ಕತ್ಲಾತು' 'ಕತ್ಲಾತು'ಅನ್ಕೊಂಡಿ
ಬೆಪ್ತಕ್ಡಿ ಲೋಕೆಲ್ಲ ಕೂಗ್ ಆಕ್ತದೆ!
ಮುಂದಿನ ಪ್ಯಾರದಲ್ಲಿ 'ಚಿಕ್ಕೋರ್ ಸಿಕ್ಕಿದ್ದಾರಣ್ಣ ಎಲ್ಲಾರು ನಗೋಕೆ,ದೊಡ್ಡೋರು
ಹೆಂಗಾಡಿದರೂ ಎಲ್ಲಾನೂ ಸೈ'ಅಂತಾನೆ ರತ್ನ!ನೀವು ಬ್ಲಾಗಿಗೆ ಬಂದಿದ್ದು ಖುಷಿ ಆಯಿತು.ಧನ್ಯವಾದಗಳು.
superb :)
ReplyDeleteThanks Manasa.please keep visiting.
ReplyDeleteಸರ್ ತುಂಬಾ ಚೆನ್ನಾಗಿದೆ ನಿಮ್ಮ ಹನಿ ಗವಿತೆಗಳು ...ಸೂರ್ಯ ನು ಗೂಡು ಸೇರಿದ ಮೇಲೆ ಬೋರ ಆಗದಿರಲು ನಿಮ್ಮ ಹನಿಗಳನ್ನು ತೋರಿಸಬೇಕು ಏನಂತೀರಾ :) ,
ReplyDelete