Monday, May 10, 2010

'ಕಾಗೆ'

ಮಧ್ಯಾಹ್ನದ ಉರಿ ಬಿಸಿಲು
ಹಿತ್ತಿಲ ಬೇಲಿಯ ಮೇಲೆ ಕುಳಿತು
ಕೂಗುತ್ತಿರುವ 'ಕಾ '----'ಕಾ'
ಎಂಬ ಕರ್ಕಶ ಕೂಗಿಗೆ ,
ರಾತ್ರಿ ಎತ್ತಲೋ ಹಾರಿಹೋಗಿ
ಹಗಲಲ್ಲಿ ಒತ್ತರಿಸಿಕೊಂಡು ಬಂದ
ನಿದ್ದೆಯ ಹೊದ್ದಿಕೆ ಸರಿಸಿ ಎದ್ದು,
ಕಿಟಕಿಯಲ್ಲಿ ನೋಡಿದರೆ ,
ಸತ್ತ ಇರುಳಂತಿರುವ
ಇಲಿಯ ಕಾಲಲಿ ಮೆಟ್ಟಿ ,
ಹಗಲಿನ ಹಾ ಹಾ ಕಾರದಂತೆ
ತನ್ನ ಕೂಟವ ಕರೆಯುತ್ತಿದೆ
ಊಟಕ್ಕಾಗಿ ------ಕಾಗಿ!
ಭೋಜನ -----ಕೂಟಕ್ಕಾಗಿ!
 ಬೆಂದ  ಇಳೆ ಮೌನದಲ್ಲೇ
ಬೊಬ್ಬಿಡುವಂತೆ--------!
ಕಾ ಕಾ --ಎಂಬ ಕೂಗು ,
ಮಳೆಯ ----ಬರುವಿಗಾಗಿ !              

12 comments:

  1. Excellent, beyond expression, very nice-the way you have used 'Kaage' to see what you want..

    ReplyDelete
  2. Thank you madame.thaks for your appreciative words.kindly keep visiting.Regards.

    ReplyDelete
  3. ವ್ವಾವ್,
    ಕಾಗೆ ತನ್ನ ಬಳಗವನ್ನು ಊಟಕ್ಕೆ ಕರೆದು ಕಾಯುವುದನ್ನು ಭೂಮಿ ಮಳೆಗಾಗಿ ಕಾಯುವಂತೆ ಎಂದು ಹೋಲಿಸಿರುವುದು ಅದ್ಭುತ! ಒಳ್ಳೆಯ ಪರಿಕಲ್ಪನೆ!

    ReplyDelete
  4. ಧನ್ಯವಾದಗಳು ಪ್ರವೀಣ್.ಕವಿತೆ ನಿಮಗೆ ಇಷ್ಟವಾದದ್ದು ಸತೋಷ.ಬರುತ್ತಿರಿ ,ನಮಸ್ಕಾರ.

    ReplyDelete
  5. ಕಾಗೆ ಬಳಗವ ಕರೆವದಕ್ಕೆ -ಇಳೆಯು ಮಳೆಯ ಕರೆಯುವದಕ್ಕೆ ಹೋಲಿಕೆ ಅಪರೂಪದ್ದು. ತಮ್ಮ ಕಥಾಶೈಲಿ ನವ್ಯ ಕಾವ್ಯ ಚೆನ್ನಾಗಿದೆ.

    ReplyDelete
  6. ಸೀತಾರಾಂ ಅವರಿಗೆ ನಮಸ್ಕಾರಗಳು.ಕಾಗೆಯ ಕೂಗನ್ನು ಭೂಮಿಯ ಮಳೆಯ ಕೂಗಿನಂತೆ ಬಳಸಿಕೊಂಡಿದ್ದು ನಿಮಗೆ ಇಷ್ಟವಾಗಿದೆಯೆಂದು ತಿಳಿದು ಸಂತೋಷವಾಯ್ತು.ಈಗ ಸುಮಾರು ಎರಡು ತಿಂಗಳಿಂದ ನವ್ಯ ಮತ್ತು ನವೋದಯ ಎರಡನ್ನೂ ಓದುತ್ತಿದ್ದೇನೆ.ಬಹಳಷ್ಟು ನವ್ಯದ ಪ್ರಯೋಗಗಳು ಅರ್ಥವಾಗದ ರೀತಿಯಲ್ಲಿ ಇವೆ.ಕಾವ್ಯ ಒಬ್ಬ ವ್ಯಕ್ತಿಗೆ ಅರ್ಥವೇ ಆಗದಿದ್ದರೆ ಅದರಿಂದ ಖುಷಿ ಸಿಗುವುದು ಹೇಗೆ?ಖುಷಿ ಸಿಗದಿದ್ದರೆ ಜನ ಕಾವ್ಯವನ್ನು ಓದುತ್ತಾರಾದರೂ ಏಕೆ?ನವ್ಯದ ಶೈಲಿಯಲ್ಲೇ ಜನಸಾಮಾನ್ಯರಿಗೆ ಅರ್ಥವಾಗುವ ,ಇಷ್ಟವಾಗುವ ಕಾವ್ಯ ಬರೆಯಲು ಸಾಧ್ಯವಿಲ್ಲವೇ? ಸಾಹಿತ್ಯ ಜನರಿಗೆ ಹತ್ತಿರವಾಗಬೇಕು ಎನ್ನುವುದು ನನ್ನ ಅನಿಸಿಕೆ.ಧನ್ಯವಾದಗಳು.

    ReplyDelete
  7. NRKಅವರಿಗೆ ನಮಸ್ಕಾರಗಳು ಕಾಗೆಯ ಪದ ಬಳಕೆ ನಿಮಗೆ ಹಿಡಿಸಿತು ಎನ್ನುವುದು
    ತಿಳಿದು ಸಂತೋಷವಾಯಿತು.ಓದಿದವರಿಗೆ ಸಂತೋಷ ಕೊಡುವುದರಲ್ಲೇ ಕಾವ್ಯದ ಸಾರ್ಥಕತೆ ಎನ್ನುವುದು ನನ್ನಅನಿಸಿಕೆ.

    ReplyDelete
  8. ತುಂಬಾ ಚೆನ್ನಾಗಿದೆ...... ಉಪಮೆ ಬಲು ಇಷ್ಟವಾಯಿತು.

    ReplyDelete
  9. ಧನ್ಯವಾದಗಳು ಮೇಡಂ.ಮತ್ತೆ ಬನ್ನಿ.ನಮಸ್ಕಾರ.

    ReplyDelete
  10. ಕವನ ಚೆನ್ನಾಗಿದೆ.
    ಈ ಕಾಕೆ ಫೋಟೋ ಎಲ್ಲಿ ತೆಗೆದದ್ದು?
    ರವಿ

    ReplyDelete
  11. ರವಿಹೆಗ್ದೆ ಅವರಿಗೆ ನನ್ನ ಬ್ಲಾಗಿಗೆಸ್ವಾಗತ.ಕಾಗೆ ಫೋಟೋ 'ನೆಟ್' ನಿಂದ ತೆಗೆದದ್ದು!
    ಧನ್ಯವಾದಗಳು.ಮತ್ತೆ ಬನ್ನಿ.

    ReplyDelete

Note: Only a member of this blog may post a comment.