Tuesday, May 25, 2010

'ಮದ್ಯ ಸಾರ '----ಅಪಾರ .

ಜಿ.ಪಿ.ರಾಜರತ್ನಂ  ಅವರ 'ರತ್ನನ ಪದಗಳು' ಮೊದಲು ಪ್ರಕಟವಾದದ್ದು 1932 ರಲ್ಲಿ.ಆದರೆ ರತ್ನನ ಪದಗಳು
ಇಂದಿಗೂ ಕಾವ್ಯಾಸಕ್ತರಿಗೆ ಇನ್ನೂ ಆಕರ್ಷಕ.ನನಗೆ ಕನ್ನಡ ಕಾವ್ಯದ ಹುಚ್ಚು ಹಿಡಿಸಿದ್ದೇ 'ರತ್ನನ ಪದಗಳು'!
ಇತ್ತೀಚಿಗೆ ಪ್ರಕಟವಾದ ಇನ್ನೊಂದು ಅದೇ ರೀತಿಯ ಪುಸ್ತಕವೆಂದರೆ ಛಂದ ಪ್ರಕಾಶನದ 'ಅಪಾರ'
 ಅವರ 'ಮದ್ಯ ಸಾರ'.ಪುಟ್ಟ ಪುಸ್ತಕ.ಬಾಟಲಿಯಂತೆಯೇ ಪುಸ್ತಕವನ್ನೂ ಜೋಬಿಗಿಳಿಸಬಹುದು!ಅದನ್ನು
'ನೈಂಟಿ'ಹನಿಗಳು ಎಂದಿದ್ದಾರೆ.ಬೆಲೆಕೂಡ ಒಂದು ವಿಶಿಷ್ಟ.ಬರೀ ಮೂವತ್ತು ರೂಪಾಯಿ!ಮೂರ್ತಿ ಚಿಕ್ಕದಾದರೂ
 ಕೀರ್ತಿ ದೊಡ್ಡದು! 'ಯಾರು ಕೇಳುವರು ನಿಮ್ಮ ಕೊಂಕು,ಸಿಕ್ಕಿರುವಾಗ ಸ್ವರ್ಗದ ಲಿಂಕು !'ಎನ್ನುತ್ತಾರೆ.
ಬೆನ್ನುಡಿಯಲ್ಲಿ 'ಗೀತ ಸಾರ  ವೇದ ಸಾರ,ಗಾದೆ ಸಾರ ಬದುಕಲು,ಮದ್ಯಸಾರ ವೇನು ಕಡಿಮೆ ,
ಗಮನ ಕೊಡಿ ಅತ್ತಲೂ '.ಎನ್ನುತ್ತಾರೆ! ಕುಮಾರ್ ಅವರ ಚಿತ್ರಗಳೂ ಚೆನ್ನಾಗಿವೆ. ಈ ಹನಿಗಳು ಏನಾದರೂ ಕಿಕ್ ಕೊಟ್ಟರೆ ನಾನು ಜವಾಬ್ದಾರನಲ್ಲ! ಇನ್ನು ಮಡಿವಂತರು ಕ್ಷಮಿಸಬೇಕು.ಕೆಂಗಣ್ಣು ಬಿಡಬೇಡಿ !ಕರಗಿ ಬೀರಾಗಿ ಹೋದೇನು!

೧) ಬೀರು ವಿಸ್ಕಿ ಜಿನ್ನು ವೈನು 
ಪರಮಾತ್ಮ  ಒಬ್ನೆ ಹೆಸರು ಬೇರೆ 
ಹೆಂಡ ಅಂದ್ರೆ ಇನ್ನೂ ವೈನು 
ಕನ್ನಡ ಪದಗಳ ಅಮಲೇ ಬೇರೆ 


೨)ಖಾಲಿಯಾಗಿದೆ  ಬದುಕು 
ಖಾಲಿಯಾಗಿದೆ ಬಾಟಲಿ 
ಉನ್ಮತ್ತ ಹೃದಯವನು ಹೊತ್ತು 
ರಸ್ತೆ ಹೇಗೆ ದಾಟಲಿ?


೩ )ನಡು ನೀರಲ್ಲಿ ಕೈ ಬಿಟ್ಟವಳೆ
ನಡು ರಾತ್ರಿ ನೆನಪಾಗದಿರು 
ಬದುಕಲು ಬಿಡು ಒಂಚೂರು 
ಹನ್ನೊಂದಕ್ಕೇ ಮುಚ್ಚುತ್ತೆ ಬಾರು 


೪) ಬೇಕಾ ಬಿಟ್ಟಿ ಕುಡೀತಾ ಹೋದ್ರೆ 
ಬದುಕೇ ಸರ್ವ ನಾಶ 
ಮನಸ್ಸು ಕೊಟ್ಟು ಕುಡಿದು ನೋಡಿ 
ಶೀಷ ದಲ್ಲೂ  ಈಶ 


೫) ರೊಕ್ಕ ಇದ್ದರಷ್ಟೇ ಸಾಲದು 
ದುಃಖ ಇರಬೇಕು ಕುಡಿಯುವನಿಗೆ 
ನಕ್ಕರೇನು ಚೆಂದ ಕುಡುಕ 
ಬಿಕ್ಕಬೇಕು ಎರಡು ಗುಟುಕು ನಡುವೆ 


೬)ಕುಡುಕನ ಮಾತಿದು ಏನು ಕೇಳುವಿರಿ 
ವಚನದ ಸಾಲಲ್ಲ ,ವಾಚನವೂ ಸರಿಯಿಲ್ಲ 
ದಾಸರ ಪದವಲ್ಲ ,ಉದಾಸರ ಪದವೇ ಎಲ್ಲ
ಭಜನೆ ತರವಲ್ಲ ,ವಿಭಜನೆ ವಿರಹದವು.


೭) ಬೇಡ್ಕೊತೀನಿ ಬಾರಂಗಳದಲಿ 
ನೆರದಿರೋ ಸಮಸ್ತ ಜನಕೆ 
ಕುಡಿದು ಮಾಡದಿರಿ ಉಪದ್ರವ  
ಕಳೀಬೇಡಿ ದ್ರವದ ಘನತೆ.


೮) ಎಷ್ಟನೇ ರೌಂಡೋ  ಯಾರಿಗೆ ಗೊತ್ತು 
ಎಲ್ಲ ಮರೆಯಲು ಬಾರಿಗೆ ಬಂದವನು 
ಖಾಲಿ ಮಾಡಿದ ಬಾಟಲುಗಳ 
ಲೆಕ್ಕ ಮಾತ್ರ ಹೇಗೆ ನೆನಪಿಡಲಿ? 

೯) ಶೇಂಗಾ,ಪಾಪಡ್,ಚಿಪ್ಸ್,ಪಕೋಡ
ಯಾವುದು ಗುಂಡಿಗೆ ಸರಿಯಾದ ಜೋಡಿ ?
ತಿಳಿಯದು ಏನೋ ಎಂತೋ,ನಿಮ್ಮ ರೀತಿ
ನನ್ನ ಆಯ್ಕೆ ಇದು :ಮುಗಿದು ಹೋದ ಪ್ರೀತಿ  

೧೦) ನೊಂದವನ ತಾಪ ,ಸೋತವನ ಶಾಪ
ಮರೆತವಳ ರೂಪ ,ಇಡೀ ಹಗಲ ಪಾಪ
ಸಂಜೆಯಾದೊಡನೆ ತಣ್ಣಗೆ ಕರಗುವುದು
ಬಿಯರು ಎಂಬ ಸಾರ್ವರ್ತಿಕ ದ್ರಾವಣದಲ್ಲಿ

೧೧) ಕರಗುತಿವೆ ಕೊರಗು ಬಾಟಲಿಯಲ್ಲಿ 
ಕಡೆಗೊಂದೇ ಉಳಿದಿದೆ ಚಿಂತೆ 
ಕುಡಿಯಲಾರದ ಅವಳು ಈ ಕ್ಷಣವ  
ಹೇಗೆ ನಿಭಾಯಿಸುವಳಂತೆ ?


೧೨)ಕುಡುಕರು ಅನ್ನಿ ಪರವಾಗಿಲ್ಲ 
ಕೆಡುಕರು ಅನ್ನಿ ಪರವಾಗಿಲ್ಲ 
ಯಾರು ಕೇಳುವರು ನಿಮ್ಮ ಕೊಂಕು 
ಸಿಕ್ಕಿರುವಾಗ ಸ್ವರ್ಗದ ಲಿಂಕು !
(WARNING; Drinking may be injurious to health 
in some.so don't drink .Reading kannada poetry
is healthy.so read as much as you can!)

24 comments:

 1. ಸಕತಾಗಿವೆ ಸಾರು...
  ಕೆಲಸಾ ಮಾಡಲಿಕ್ಕೆನೋ ಕಿಕ್ಕು
  ಸರಾಯಿ ಕುಡುದ ಮ್ಯಾಲಿನ ಕಿಕ್ಕ ಅಲ್ಲರೀ
  ಲೇಖನ ಓದಿದ ಮ್ಯಾಲಿನ ಕಿಕ್ಕ :)

  fantabulous book... India bandaaga maride tugobeku anastide

  ReplyDelete
 2. Thanks Maanasa for your kind comments.ಕನ್ನಡ ಸಾಹಿತ್ಯ ಬೆಳೆಯಲಿ.ಕನ್ನಡ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಹೆಚ್ಚಾಗಲಿ ಎನ್ನುವುದು
  ನನ್ನ ಆಶಯ.ನಮಸ್ಕಾರ .

  ReplyDelete
 3. ಚೆ೦ದದ ಚುಟುಕಿನ ಸ೦ಗ್ರಹದ ಪರಿಚಯ ಮಾಡಿಸಿದ್ದಿರಿ!

  ReplyDelete
 4. ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಸೀತಾರಾಮ್.ಹೀಗೇ ಬ್ಲಾಗಿಗೆ ಬರುತ್ತಿರಿ .ನಮಸ್ಕಾರ.

  ReplyDelete
 5. ತೆರೆದು ಬಿಟ್ಟೆ ನೋಡಿ ನಿಮ್ಮ ಬ್ಲಾಗಿನ ಲಿಂಕು
  ಕೊಟ್ಟಿತು ನನಗೂ ಸ್ವಲ್ಪ ಲಿಕ್ಕರಿನ ಕಿಕ್ಕು :)
  ಚೆನ್ನಾಗಿದೆ ಸರ್ .

  ReplyDelete
 6. ತುಂಬಾ ಮಜವಾಗಿದೆ.... ಆಳವಾದ ಅರ್ಥವನ್ನೂ ಬಿಂಬಿಸುತ್ತವೆ ಹಲವು ಚುಟುಕುಗಳು. ಕೆಲವನ್ನು ಅಪಾರ ಬ್ಲಾಗಿನಲ್ಲೇ ಓದಿದ್ದೆ. ಧನ್ಯವಾದಗಳು.

  ReplyDelete
 7. ವಿನಯ್ ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ಬ್ಲಾಗ್ ನಿಮಗೆ ಇಷ್ಟವಾಗಿದೆಯೆಂದುಕೊಂಡಿದ್ದೇನೆ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ನಮಸ್ಕಾರ.

  ReplyDelete
 8. ಧನ್ಯವಾದಗಳು ತೇಜಸ್ವಿನಿ ಮೇಡಂ.ಅಪಾರ ಅವರ ಮತ್ತಿನ ಚುಟುಕುಗಳ ಗಮ್ಮತ್ತೇ ಬೇರೆ.ಕಾವ್ಯದಲ್ಲಿ ಆಸಕ್ತಿ ಉಳ್ಳಎಲ್ಲರೂ ಒಮ್ಮೆ ಓದಬೇಕಾದ ಪುಸ್ತಕ.ನಮಸ್ಕಾರ.

  ReplyDelete
 9. super .....gr8 lines .Murthy sir thanks for sharing such a wonderful lines ...

  ReplyDelete
 10. Ishwar,welcome to my blog and thanks for your kind
  comments.keep visiting.warm regards.

  ReplyDelete
 11. MODALONDIPE CHHANDA PUSTAKADA SRIVASUDHENDRARIGE,NANTARA ADARALLINA HANIGALANNU SIMPADISIDA HAGU DOCTORKI SALAHE KOTTA NIMAGE.HEEGEYE PARICHAYISUTTIRI.DHANYAVADAGALU.

  ReplyDelete
 12. ಹೇಮಚಂದ್ರ ;ನಲುಮೆಯಿಂ ಬಂದು ಓದಿ ಆನಂದಿಪ ನಿಮ್ಮೆಲ್ಲರಿಗೆ ವಂದಿಪೆನು ಅನುನಯದಿ,ಎಂದು ಪೇಳಿದನು ಈ ಅಲ್ಪ ಬ್ಲಾಗಿಗನು.

  ReplyDelete
 13. ನಕ್ಕರೇನು ಚೆಂದ, ಕುಡುಕ ಬಿಕ್ಕಬೇಕು ಎರಡು ಗುಟುಕು ನಡುವೆ..ಎಂತಹ ಸತ್ಯದ ಮಾತು ಅಲ್ವ?..ಪುಸ್ತಕದ ಓದು ನಿಮಗೆ ನೀಡಿದ ಸಂತಸವನ್ನು ನಮಗೂ ಹಂಚುತ್ತಿರುವದಕ್ಕೆ ಕೃತಜ್ಞತೆಗಳು.

  ReplyDelete
 14. ನಾರಾಯಣ್ ಭಟ್ ಅವರಿಗೆ ಧನ್ಯವಾದಗಳು.'ಮದ್ಯ ಸಾರ'ಎಂಬ ಈ ಪುಟ್ಟ ಪುಸ್ತಕದಲ್ಲಿ ಮದಿರೆಗೆ ದಾಸರಾದವರ ಕಥೆ ಮತ್ತು ವ್ಯಥೆಯನ್ನು ಅವರದೇ ಭಾಷೆಯಲ್ಲಿ
  ಬಹಳ ಸುಂದರ ಹನಿಗವನಗಳಲ್ಲಿ 'ಭಟ್ಟಿ'ಇಳಿಸಿದ್ದಾರೆ.ಹನಿಗವನಗಳನ್ನು ಇಷ್ಟ ಪಡುವವರಿಗೆ ಖುಷಿಯ 'ಕಿಕ್'ಕೊಡುವ ಪುಸ್ತಕ.ಇದಕ್ಕೆ ಕಾರಣರಾದ ಅಪಾರರಿಗೆ ನಮ್ಮೆಲ್ಲರ ಅಭಿನಂದನೆಗಳು ಸಲ್ಲಬೇಕು.ನಮಸ್ಕಾರ.

  ReplyDelete
 15. what a supper ಕಿಕ್ಕು :)
  ಮದ್ಯ ಸಾರ wonderful ನಿಜಕ್ಕೂ...

  ReplyDelete
 16. ಕೃಷ್ಣಮೂರ್ತಿಯವರೆ..

  ಅಪಾರವರ ಈ ಪುಟ್ಟ ಪುಸ್ತಕವನ್ನು ನಾನು ನನ್ನ ಅನೇಕ ಗೆಳೆಯರಿಗೆ ಪ್ರೆಸೆಂಟ್ ಮಾಡಿದ್ದೇನೆ..

  ಹೊಸತನದ..
  ಕುಡುಕರ
  ಗುಟುಕುಗಳು..
  ಸ್ವಲ್ಪ..
  ಸ್ವಲ್ಪವಾಗಿ..
  ಮತ್ತೇರಿಸುವ..
  ನಶೆಯ..
  ಪೆಗ್ಗುಗಳು..

  ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು...

  ReplyDelete
 17. ಧನ್ಯವಾದಗಳು ಪ್ರಶಾಂತ್ .ಪ್ರೆಸೆಂಟ್ ಮಾಡುವುದಕ್ಕೆ ಒಳ್ಳೆಯ ಪುಸ್ತಕ.ನನಗಿದು
  ಹೊಳೆದಿರಲಿಲ್ಲ.ನಮಸ್ಕಾರ.

  ReplyDelete
 18. tumbaa dhanyavaada sir... khandita ee pustaka khareedisi oduttene.... ನನ್ನ ಬ್ಲಾಗ್ ಗೆ ಬನ್ನಿ........

  ReplyDelete
 19. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರಗಳು.

  ReplyDelete
 20. @ ಕೃಷ್ಣಮೂರ್ತಿ ಸರ್

  ತುಂಬಾ ಸುಂದರ ಚುಟುಕುಗಳ ಸಂಗ್ರಹ...ಓದಲು ಅವಕಾಶ ಮಾಡಿಕೊಟ್ಟ ನಿಮಗೆ ಧನ್ಯವಾದಗಳು ...

  ReplyDelete
 21. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಅಶೋಕ್.

  ReplyDelete
 22. ಯಾವತ್ತು ಎಣ್ಣೆ ಹೊಡೆಯದ ರಾಜರತ್ನಂ ಅವರಿಗೆ
  ಎಣ್ಣೆ ಹೊಡೆದವರ ಗಮ್ಮತ್ತು ಗೊತ್ತಾಗಿದ್ದು ಹೆಂಗೆ

  ರಾಜರತ್ನಂ ಅವರು
  ಎಲ್ಲೂ ಎಣ್ಣೆ ಹೊಡಿರೀ ಅನ್ನಲ್ಲಿಲ್ಲ
  ಎಲ್ಲೂ ಎಣ್ಣೆ ಹೊಡಿ ಬೇಡಿ ಅನ್ನಲ್ಲಿಲ್ಲ
  ಆದರೆ ಎಣ್ಣೆ ಗಮ್ಮತ್ತನ್ನ ಎಲ್ಲಾ ಕಡೆ
  ಹರಡಿದ್ದೇ ಅವರ ಗತ್ತು

  ReplyDelete
 23. ಅಶೋಕ್ ಸರ್;ತುಬಾ ಒಳ್ಳೇ ಪ್ರಶ್ನೆ.ಕೇಳೋಣ ಅಂದರೆ ರಾಜರತ್ನಂ ಇಲ್ಲ.
  ಬಹುಷಃ ಅವರಿಗೆ ಪರಕಾಯ ಪ್ರವೇಶ ಮಾಡುವ ಶಕ್ತಿ ಇತ್ತು ಅಂತ ಕಾಣುತ್ತೆ.

  ReplyDelete