'ಕುಂಬಾರನಿಗೆ ಒಂದು ವರುಷ,ದೊಣ್ಣೆಗೆ ಒಂದು ನಿಮಿಷ' ಎನ್ನುವ ಗಾದೆಯೇ ಇದೆ.ಸಂಬಂಧಗಳ ವಿಷಯದಲ್ಲೂ ನಮಗೆ ಗೊತ್ತೇ ಆಗದಂತೆ ಹೀಗಾಗಿಬಿಡುತ್ತದೆ.ವರುಷಗಳಿಂದ ಬೆಳೆದು ಬಂದಿದ್ದ ನವಿರಾದ ಸಂಬಧ,ಹಿತಶತ್ರುಗಳ ಒಂದು ಕೊಂಕು ನುಡಿಯಿಂದ ಮುರುಟಿ ಹೋಗುತ್ತದೆ.
ಮನ ನೊಂದುಕೊಳ್ಳುತ್ತದೆ.ಸಂಬಂಧಗಳು ಹಳಸುತ್ತವೆ.
ಸಬಂಧಗಳನ್ನು ಹಾಳುಮಾಡಿ,ಸಂತೋಷಿಸುವ ಇಂತಹ ವಿಕೃತ ಸಂತೋಷಿ,Hackers ಗಳಿಗೆ ಈ ಕವನದ ಸಮರ್ಪಣೆ ; --
ಚಾಣಕ್ಯನಿಗಿಂತಾ ಚಾಣಾಕ್ಷರು ನೀವು!
ನರಮಂಡಲಗಳ ಒಳ ಸುಳಿಗಳಲಿ
ಗೊತ್ತೇ ಆಗದಂತೆ --------,
ಹರಿತ ಆಯುಧಗಳ ಬಚ್ಚಿಟ್ಟವರು!
ನವಿರಾದ ಸಂಬಂಧಗಳ ಮಡಿಕೆಗಳ
ಬಿಡಿಸಿ,ಹದಗೆಡಿಸಿಟ್ಟವರು !
ಬಾಂಧವ್ಯದ ಬೇರುಗಳ
ಗೊತ್ತೇ ಆಗದಂತೆ ಕೊಯ್ದವರು!
ಮೆಚ್ಚಬೇಕು ನಿಮ್ಮ'ಸರ್ಜನಿಕೆ'ಗೆ!
ಸಂಬಧಗಳು ಸತ್ತು ಹೆಣವಾಗಿ ,
ಕೊಳೆತು ನಾರಿದಾಗಲೇ
ಅರಿವಾಗುವುದು --------,
ನಿಮ್ಮ ಕರಾಮತ್ತು ----!
ಕಾಂಡ ಕೊರೆಯುವ ಹುಳಕ್ಕೆ
ಔಷಧಿ ಉಂಟು ನೂರೆಂಟು!
ನೀವೋ ರಕ್ತ ಬೀಜಾಸುರರು !
ಜರಾಸಂಧನ ವಂಶಜರು!
ನಿಮಗೆಲ್ಲಿಂದ ತರೋಣ ಔಷಧಿ?
ನಿಮ್ಮಿಂದ ನಮ್ಮನ್ನು ಕಾಯಲು
ಅವತರಿಸಬೇಕು ಅವನೇ
ಸಂಭವಾಮಿ ಯುಗೇ ಯುಗೇ
ಎಂದ --------ಆ ಕೇಶವನೇ !
ಮೂರ್ತಿಯವರೇ,ಅದಕ್ಕೇ ಹೇಳುವುದು" ಹಿತ್ತಾಳೆ ಕಿವಿಯಾಗಬಾರದು".ಸ್ವ್ಲಲ್ಪವಾದರೂ ಸ್ವ೦ತಿಕೆ ಬೇಕೆ೦ದು ಅಲ್ಲವೇ?.ಬಹುಶ: ಸರ್ವಾ೦ತರ್ಯಾಮಿಯಾಗಿರುವುದು ಇ೦ತವರು ಮಾತ್ರ.
ReplyDeleteಅಭಿನ೦ದನೆಗಳು ಚ೦ದದ ಕವನಕ್ಕೆ.
ಸರ್,
ReplyDeleteಎಷ್ಟು ನಿಜ ನಿಮ್ಮ ಮಾತುಗಳು...ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ..ಸುಂದರ, ಅರ್ಥಪೂರ್ಣ ಕವನ....ಧನ್ಯವಾದಗಳು...
ಕೂಸು ಮುಲಿಯಳ ಅವರಿಗೆ ಧನ್ಯವಾದಗಳು.ಯಾರೋ ಹೇಳಿದ್ದನ್ನು ಕೇಳುವವರು ಇರುವ ವರೆಗೂ ಹೇಳುವವರು ಇದ್ದೇ ಇರುತ್ತಾರೆ.
ReplyDeleteAshok kodlady;ನಮಸ್ಕಾರ.ಕವನ ನಿಮಗೆ ಇಷ್ಟವಾಗಿದ್ದು ಸಂತೋಷ.ಮತ್ತೆ ಬನ್ನಿ.ಧನ್ಯವಾದಗಳು.
ReplyDeleteಸರ್
ReplyDeleteಅರ್ಥಪೂರ್ಣ ಕವನ
ಓದಿ ತುಂಬಾ ಹಿತವಾಯಿತು
surgeon shabdada balake arthapurnavagide.
ReplyDeletesurgically seperated can't be easily joined again.manamurukarinda dooravagiruvade olleyadu.
ಗುಗುಮೂರ್ತಿ ಹೆಗ್ಗಡೆಯವರಿಗೆ ನಮನಗಳು.ಸಮಾಜದಲ್ಲಿ ಇಂಥಾ ಮನೆಮುರುಕ ನಯ ವಂಚಕರಿಂದ ಬಹಳಷ್ಟು ಸಂಸಾರಗಳು ಹಾಳಾಗಿವೆ.ಪಾಪಿ ಚಿರಾಯು!ಇಂಥವರಿಗೆ ಏನು ಮಾಡುವುದು?
ReplyDeleteಹೇಮಚಂದ್ರ;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಇಂತಹ ಮನಮುರುಕರಿಗೆ
ReplyDelete'ಸರ್ಜನರು'ಎಂಬ ಪದಕ್ಕಿಂತಾ 'ದುರ್ಜನರು'ಎಂಬ ಪದ ಹೆಚ್ಚು ಸೂಕ್ತ ವಲ್ಲವೇ?
ತುಂಬಾ ದಿನ ಕಷ್ಟ ಪಟ್ಟು ಬೆಳೆಸಿದ ಸಂಬಂದಗಳನ್ನ ಕೆಲವೇ ನಿಮಿಷದಲ್ಲಿ ಹಾಳುಗೆಡುವ ಅವರ ಶಕ್ತಿ ಮೆಚ್ಚಲೇಬೇಕು.ಕೆಶವನೆ ನಮಗೆ ಲಸಿಕೆ ನೀಡಬೇಕು
ReplyDeleteಹಾ ಹಾ ಹಾ ,ಶ್ರೀಕಾಂತ್ ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ! ಕೇಶವ ಆ ರೀತಿಯ ಲಸಿಕೆಯನ್ನು ಕೊಟ್ಟರೆ ಅದನ್ನು ಮೊದಲಿಗೆ ನಾನೇ ತೆಗೆದುಕೊಳ್ಳುತ್ತೇನೆ.
ReplyDeletetumbaa chennaagide kavana....... hudukidare ellelloo siguttaare inthavaru......
ReplyDeleteDinakara mogera;ನಮಸ್ಕಾರ.ಮೊದಲಿಗೆ ,ನಿಮ್ಮ ಬ್ಲಾಗ್ ಯಾಕೆ ಅಪ್ಡೇಟ್
ReplyDeleteಆಗ್ತಿಲ್ಲ ಅನ್ನೋದು ಗೊತ್ತಾಗುತ್ತಿಲ್ಲ.ನೀವೇ ಆಗಾಗ ಬಂದುಹೊಗುತ್ತಿರಿ.ಸಾಧ್ಯ ಅದಾಗೆಲ್ಲಾ ನಾನೂ ನಿಮ್ಮ ಬ್ಲಾಗಿಗೆ ಹಣಿಕಿ ಹಾಕುತ್ತೇನೆ.ಇನ್ನು ಸಂಬಂಧಗಳಿಗೆ ಹುಳಿ ಹಿಂಡುವರ
ವಿಷಯ.ಇಂತಹ ಮಹಾಶಯರು ಎಲ್ಲಾ ಕಾಲದಲ್ಲೂ ,ಎಲ್ಲಾ ಕಡೆಗಳಲ್ಲೂ ಇರುವ
ಸರ್ವಾಂತರ್ಯಾಮಿಗಳು.ಆದ್ದರಿಂದ ಇಡು ನಮ್ಮೆಲ್ಲರ ಸಾಮಾನ್ಯ ಸಮಸ್ಯೆ.
ಅರಿವಳಿಕೆ ನೀಡುತ್ತ, ಒಳಹೊಕ್ಕು ಇರಿಯುವ ಹಿತಶತ್ರುಗಳ ಬಗ್ಗೆ ಒಳ್ಳೆಯ ಕವನ. ಇವರು ಕಪಟನಾಟಕ ಸೂತ್ರಧಾರಿಗಳಾಗಿದ್ದದ್ದು, ನಾವು ಅವರ ಕೈಯಲ್ಲಿ ಪಾತ್ರಧಾರಿಗಳಾಗಿ ಹೋದದ್ದು, ಎಲ್ಲವೂ ನಮಗೆ ನಾಟಕ ಮುಗಿದ ಮೇಲೆಯೇ ಅರಿವಿಗೆ ಬರುತ್ತದೆ ಅಲ್ಲವೇ?
ReplyDeleteಕೃಷ್ಣಮೂರ್ತಿ ಸರ್,
ReplyDeleteಹೇಳುವವ ಮೂರ್ಖ ಕೇಳುವವ ಶತಮೂರ್ಖ! ಈ ಎರದ್ದು ಪಂಗಡಗಳು ಒಬ್ಬ ಶಾಂತಿಯುತ ಮನುಷ್ಯನ ಜೀವನವನ್ನೇ ಹಾಳುಮಾಡುತ್ತವೆ, ಪಾಪದವನೊಬ್ಬ ಇಂತಹವರ ಕಪಿಮುಷ್ಟಿಗೆ ಸಿಲುಕಿ ಪಡುವ ಪಾಡು ದೇವರಿಗೆ ಪ್ರೀತಿ!
ಅಂತಹವರು ನಿಮ್ಮ ಈ ಕವನ ಓದಿದರೆ ಮುಂದೇ ಖಂಡಿತ ಚಾಡಿ ಹೇಳುವ ಗೋಜಿಗೆ ಹೋಗುವುದಿಲ್ಲ!
ಎಂಥಾ ಸೊಗಸಾದ ಮಾತು ಭಟ್ಟರೇ!ನಿಜಕ್ಕೂ ನಾನು ಕ್ಲೀನ್ ಬೋಲ್ಡ್!ನಾಟಕ ಅಂತಾ ಗೊತ್ತೇ ಆಗದ ಹಾಗೆ ನಾಟಕ ಆಡುತ್ತಾರಲ್ಲಾ!ಇವರ ನಾಟಕಕ್ಕೆ ಮರುಳಾಗಿ
ReplyDeleteಸಂಬಂಧಗಳನ್ನು ಹಾಳು ಮಾಡಿಕೊಳ್ಳು ವರಿಗೆ ಪಾಪ ಎನ್ನೋಣ.ಅಲ್ಲವೇ?
ಪ್ರವೀಣ್ ಅವರಿಗೆ ನಮಸ್ಕಾರಗಳು.ಸರಿಯಾದ ಮಾತನ್ನೇ ಹೇಳಿದ್ದೀರಿ.ಚಾಡಿ ಹೇಳುವವರೂ ಹಾಳು,ಚಾಡಿ ಕೇಳುವವರೂ ಹಾಳು.ಧನ್ಯವಾದಗಳು.
ReplyDeleteNice one sir, after reading this i remembered so many people who come under this category.
ReplyDeleteಡಾ.ಡಿ.ಟಿ.ಕೆ ಸರ್ ಬಹಲ ನಯವಾದ ಮಂಥನ..
ReplyDeleteಸಂಬಧಗಳು ಸತ್ತು ಹೆಣವಾಗಿ ,
ಕೊಳೆತು ನಾರಿದಾಗಲೇ
ಅರಿವಾಗುವುದು --------,
ನಿಮ್ಮ ಕರಾಮತ್ತು ----!
ಈ ಮಾತುಗಳು ಎಷ್ಟು ವಾಸ್ತವಕ್ಕೆ ಹತ್ತಿರವಾದವು,,,,??!! ವಾವ್...
Dear UDAY HEGDE;Thanks for your kind comments.You will naturally remember lot of people who come under this category because such people are omnipresent!they are there everywhere!
ReplyDeleteಆಜಾದ್ ಸರ್;ನಿಮಗೆ ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮಂತಹ ಅನುಭವಿ ಲೇಖಕರಿಂದ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ನನಗೆ ನಿಜಕ್ಕೂ ತುಂಬಾ ಸಂತೋಷವಾಗಿದೆ.Normalಆಗಿ behave ಮಾಡುತ್ತಿದ್ದ ವ್ಯಕ್ತಿಗಳು ಇದ್ದಕ್ಕಿದ್ದಂತೆ ಯಾರದೋ ಮಾತು ಕೇಳಿಕೊಂಡು ಅಪರಿಚಿತರಂತೆ ನಡವಳಿಕೆ ತೋರಲು ಶುರು ಮಾಡಿದ ಘಟನೆಗಳು ಆಘಾತ ಉಂಟುಮಾಡಿವೆ.ಈ ಟ್ರೆಂಡ್ ಒಂದು ಸಾಮಾಜಿಕ ಪಿಡುಗಿನಂತೆ ಹರಡುತ್ತಿದೆ.ಇದಕ್ಕೆ ಏನು ರೆಮಿಡಿಯೋ ಆ ದೇವರೇ ಬಲ್ಲ!ಧನ್ಯವಾದಗಳು.
ReplyDeletegood write up..
ReplyDeleteplease visit my blog also
vanisribhat;I have visited your blog and iam your follower.Are you in my follower list?regards.
ReplyDeleteತುಂಬಾ ತೀಕ್ಷ್ಣವಾದ ಕವನ.
ReplyDeleteಭಾಶೆಯವರಿಗೆ ನಮನಗಳು.ನೀವು ಹೇಳುವುದು ಸರಿ.ನನಗೂ ಅದೇ ರೀತಿ ಅನಿಸಿತ್ತು.
ReplyDeleteಕಡೆಗೂ ಧೈರ್ಯ ಮಾಡಿ ಪೋಸ್ಟ್ ಮಾಡಿದೆ.ಆದರೆ ಈ ನಯ ವಂಚಕರು ಮಾಡುವ ಇಂತಹ ಕೆಲಸಕ್ಕೆ ಇಡು ಸರಿಯಾದ ಪ್ರತಿಕ್ರಿಯೆ ಎನಿಸುವುದಿಲ್ಲವೇ?
Super kavan....nimma maatu nija sir...
ReplyDeleteಜ್ಯೋತಿ ಯವರಿಗೆ ನಮನಗಳು.ಕವನ ನಿಮಗಿಷ್ಟವಾದದ್ದು ಸಂತೋಷ ಮೇಡಂ.ಮತ್ತೆ ಬನ್ನಿ.ಧನ್ಯವಾದಗಳು.
ReplyDeleteNICE POEM
ReplyDeleteಸೀತಾರಾಮ್ ಸರ್ ರವರಿಗೆ ನಮನಗಳು.ಸರ್,ತಾವು ಭೂ ವಿಜ್ಞಾನಿ.ತಾವು ನನ್ನ ಕವನದ ಕಲ್ಲುಗಳನ್ನು ಇನ್ನೂ ಸ್ವಲ್ಪ ಹೆಚ್ಚು ಉಜ್ಜಿ,ತಿಕ್ಕಿ,ಪರೀಕ್ಷಿಸಿ ನೋಡಿ ಹೇಗಿದೆಯೆಂದು ಹೇಳಿದರೆ ಮನಸ್ಸಿಗೆ ಸಮಾಧಾನ.ಬರುತ್ತಿರಿ.ಧನ್ಯವಾದಗಳು.
ReplyDeleteಕವನ ಬಹಳ ಚೆನ್ನಾಗಿದೆ.
ReplyDeleteಸಾಗರಿಯವರಿಗೆ ನಮಸ್ಕಾರ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ReplyDelete’ಮಾತು ಮನೆ ಕೆಡಿಸಿತು’ ಅನ್ನೋ ಹಾಗೆ ಒಂದು ಕೆಟ್ಟ ನುಡಿಯ ಕಿಚ್ಚು ಮನಸನ್ನು ಸುಡುವ ಜ್ವಾಲೆಯೇ ಆಗಬಹುದು. ಉತ್ತಮ ವೈಚಾರಿಕ ಕವನ ಬರೆದು ಹಂಚಿಕೊಂಡಿದ್ದಕ್ಕೆ ತುಂಬ ಧನ್ಯವಾದಗಳು.
ReplyDeleteನಿಮ್ಮ ಹಿತನುಡಿಗಳಿಗೆ ಧನ್ಯವಾದಗಳು ಸುಬ್ರಮಣ್ಯ ಅವರೇ.ಬರುತ್ತಿರಿ.ನಮಸ್ಕಾರ.
ReplyDeletevery well said sir; while we are all aware of these facts we still continue to use our tongue the way we want!
ReplyDeleteThank you, these kind of statements should be read again and again so that one stops and thinks before uttering anything.