Monday, June 14, 2010
'ನಗೆ -ಟಾನಿಕ್ '
1)ಸೀರಿಯಸ್ಸಾದ ಖಾಯಿಲೆಯಿಂದ ನರಳುತ್ತಿದ್ದ ರೋಗಿಯೊಬ್ಬ ಎಚ್ಚರ ತಪ್ಪಿದಾಗ ,ನಾಲಕ್ಕು ಕಿರಿಯ ವೈದ್ಯರು ಅವನನ್ನು ಸುಧೀರ್ಘ ಪರೀಕ್ಷೆಯ ನಂತರ ಅವನು ಬದುಕಿಲ್ಲವೆಂಬ ನಿರ್ಧಾರಕ್ಕೆ ಬಂದರು.ಅಷ್ಟರಲ್ಲಿ ಎಚ್ಚರವಾದ ರೋಗಿ ಎದ್ದು ಕೂತು 'ನಾನು ಸತ್ತಿಲ್ಲಾ ,ಇನ್ನೂ ಬದುಕಿದ್ದೇನೆ'ಎಂದ.ಅಲ್ಲೇ ಇದ್ದ ಸಿಸ್ಟರ್ ರೋಗಿಯನ್ನು ಉದ್ದೇಶಿಸಿ ರೂಢಿಯಂತೆ 'ಸುಮ್ನೆ ಬಾಯಿ ಮುಚ್ಚಿಕೊಂಡು ಮಲಕ್ಕೋ.ನಿನಗೇನು ಗೊತ್ತಾಗುತ್ತೆ?ನೀನೇನ್ ಡಾಕ್ಟರ ?'ಎಂದಳು.
2)'ಆ ಹುಡುಗಿಯನ್ನು ನೋಡಿ,ಹೇಗೆ ಸಿಗರೇಟು ಸೇದುತ್ತಿದ್ದಾಳೆ!'
'ಅವಳು ಹುಡುಗಿಯಲ್ಲ ,ಅದು ನನ್ನ ಮಗ'
'Oh!sorry sir ,ನೀವು ಅವರ ತಂದೆ ಅನ್ನೋದು ಗೊತ್ತಾಗಲಿಲ್ಲ'
'ನಾನು ಅವನ ತಂದೆ ಅಲ್ಲಾ,ಅವನ ತಾಯಿ'
3)ಹುಡುಗ ಹುಡುಗಿಯನ್ನು ನೋಡಿ ಹೋದ.'ಹುಡುಗ ಏನೋ ಪರವಾಗಿಲ್ಲಾ ,ಆದರೆ ನಗುವಾಗ ಅವನ ಹಲ್ಲು ಚೆನ್ನಾಗಿ ಕಾಣಿಸೊಲ್ಲಾ'ಎಂದರು ಅಲ್ಲಿದ್ದವರೊಬ್ಬರು. 'ಅಯ್ಯೋ ಅದಕ್ಯಾಕೆ ಅಷ್ಟು ಯೋಚನೆ ಮಾಡ್ತೀರಾ ?ಮದುವೆ ಆದ ಮೇಲೆ ಅವನಿಗೆ ನಗೋ ಅವಕಾಶ ಎಲ್ಲಿರುತ್ತೆ?'ಎಂದರು ಅಲ್ಲೇ ಇದ್ದ ಇನ್ನೊಬ್ಬರು!
4)ಮಹಾ ನಗರದ ಗಲ್ಲಿಯೊಂದರಲ್ಲಿ ಹೋಗುತ್ತಿದ್ದ ಮಹನೀಯರೊಬ್ಬರ ಹಿಂದಿನಿಂದ ವ್ಯಕ್ತಿಯೊಬ್ಬ 'ಬೆಡ್ ರೂಂ ಫೋಟೋಸ್ ,ಬೆಡ್ ರೂಂ ಫೋಟೋಸ್'ಎಂದು ಎರಡೆರಡು ಸಲ ಪಿಸುಗುಟ್ಟಿದ .ಮಹನೀಯರು ಆ ಕಡೆ ಈ ಕಡೆ ನೋಡಿ ಯಾರೂ ಇಲ್ಲದ್ದು ಖಾತ್ರಿ ಪಡಿಸಿಕೊಂಡು ಚೌಕಾಶಿ ಮಾಡಿ ಐನೂರು ರೂಪಾಯಿ ಕೊಟ್ಟು ಚೆನ್ನಾಗಿ ಪ್ಯಾಕ್ ಮಾಡಿದ್ದ ಆಲ್ಬಮ್ ಒಂದನ್ನು ಮನೆಗೆ ತಂದು ರೂಮಿನಲ್ಲಿ ಗುಟ್ಟಾಗಿ ಬಿಡಿಸಿ ನೋಡಿದರೆ , ಆಲ್ಬಮ್ಮಿನ ತುಂಬಾ ಬೇರೆ ಬೇರೆ ರೀತಿಯ ಬೆಡ್ ರೂಮಿನ ಫೋಟೋಗಳು!ಮಂಚ ,ಕನ್ನಡಿ,ಟೀಪಾಯಿ ,ಕರ್ಟನ್,ಕಿಟಕಿ ,ಬಾಗಿಲೂ------!
Subscribe to:
Post Comments (Atom)
ಹೊಹೊಹೊ...ಮೂರು, ನಾಲ್ಕನೆಯದಂತೂ ಸೂಪರ್.
ReplyDeletehe he he he Superb sir :)
ReplyDeleteಎಲ್ಲಾ ನಗೆ ಹನಿಗಳು ಚೆನ್ನಾಗಿದೆ.
ReplyDeleteMast sir mast
ReplyDelete:-) :-) sihiyaada tonic
ReplyDeleteನಕ್ಕು ನಕ್ಕೂ ಸುಸ್ತಾಯಿತು. ಚೆ೦ದದ ನಗೆಬುಗ್ಗೆಗಳು.
ReplyDeleteಹ್ಹೊಹ್ಹೊಹ್ಹೋ.........
ReplyDeleteನಗೆಟಾನಿಕಿನ ಪ್ರಭಾವ ಭಯಂಕರ ಡಾಕ್ಟ್ರೆ..........
ನಕ್ಕು ನಕ್ಕು ಹೊಟ್ಟೆ ನೋವು ಸುರು ಆಯ್ತು, ಅದಕ್ಕೆ ಮದ್ದು ಕೊಡಿ ಬೇಗ.........!
3 and 4 super, ha ha ha . .
ReplyDelete:D :D ತುಂಬಾ ನಗು ತರಿಸಿತು ನಿಮ್ಮ ನಗೆ ಟಾನಿಕ್ :) ಹಿಂದಿನ ಪೋಸ್ಟಿನಲ್ಲಿರುವ ಕವನ ಕೂಡ ತುಂಬಾ ಚೆನ್ನಾಗಿದೆ.
ReplyDeletehahahah
ReplyDeletesuperb sir
೧ & ೨ನೇ ನಗೆಹನಿಗಳು ಇಷ್ಟವಾದವು. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.
ReplyDeleteಹ ಹ ಹ.. ನಗೆಹನಿಗಳು ಚೆನ್ನಾಗಿವೆ.. ನಗಿಸಿದ್ದಕ್ಕೆ ಧನ್ಯವಾದಗಳು.. :)
ReplyDeleteಹಹಹಹ..ಸೂಪರ್:)
ReplyDeleteಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.ಇದೆ ರೀತಿ ಬಂದು ಪ್ರತಿಕ್ರಿಯೆ ನೀಡಿ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.ನಮಸ್ಕಾರ.
ReplyDeleteನಿಮ್ಮ ನಗೆ ಟಾನಿಕ್ ತೆಗೆದುಕೊಂಡು ನಿದ್ದೆ ಮಾಡಿದ್ದೆ, ಮತ್ತೆ ಈಗ ಬಂದೆ. ನಗೆಯಾಡಿ ಸುಸ್ತಾಯಿತು, ಜೋಗದ ಸಿರಿಯಲ್ಲಿ ಕುಳಿತ ಸಿರಿಕೃಷ್ಣ ಕೊಳಲು ಜೋರಾಗಿ ದನಿಸುತ್ತಿದೆ, ಭೋರ್ಗರೆವ ಜಲಲಧಾರೆಗೂ ಮೀರಿ!
ReplyDeleteಮೂರ್ತಿ ಸರ್,
ReplyDeleteತಡವಾಗಿ ಪ್ರತಿಕ್ರಿಯಿಸುತಿದ್ದೇನೆ. ಕ್ಷಮೆ ಇರಲಿ....ಎಲ್ಲಾ ನಗೆಹನಿಗಳು ತುಂಬಾ ಚೆನ್ನಾಗಿವೆ. ಧನ್ಯವಾದಗಳು...