Tuesday, June 8, 2010

'ಮಾಂತ್ರಿಕ ಪ್ರೀತಿ!'

ನಾವು ಕೊಳೆತದ್ದೆಂದು
ಹೇಸಿ ,ಬೀಸಿ ಒಗೆದದ್ದನ್ನು  
ಪ್ರೀತಿಯಿಂದ  ತಬ್ಬಿ ,
ಕಾಪಿಡುವಂತೆ ಒಳಗೆ ದಬ್ಬಿ,
ನೆಲದ ಹಾಸಿಗೆಯೊಳಗೆ 
ತಣ್ಣಗೆ ಮಲಗಿಸಿ ,
ಜೀವ ಸೆಲೆಯ ಊಡಿಸಿ ,
ಹಸಿರ ಉಸಿರು ತುಂಬಿ ,
ಹಳೆ ಉಡುಗೆಗಳ ಕಿತ್ತೆಸದು,
ಚಿಗುರಿನ ಹೊಸ ಬಟ್ಟೆ ತೊಡಿಸಿ ,
ನಳ ನಳಿಸುವಂತೆ ಮಾರ್ಪಡಿಸಿ ,
ನವ ಜೀವನ ನೀಡಿ !
ಆಚೆ ಕಳಿಸುತ್ತದೆ ,
ಆ ಭೂಮಿ ತಾಯಿಯ 
ಮಾಂತ್ರಿಕ ಪ್ರೀತಿ!


16 comments:

  1. ವಾವ್............
    ಅತೀ ಸುಂದರ..........
    ಭೂಮಿಯ ಪ್ರೀತಿಯ ಪರಿಗೆ ಸಾಟಿಯುಂಟೆ?

    ReplyDelete
  2. ಪವೀಣ್ ನಮಸ್ಕಾರ.ನೀವೆನ್ನುವುದು ಸತ್ಯ.ಭೂತಾಯಿಯ ಪ್ರೀತಿಗೆ ಅವಳೇ ಸಾಟಿ.ನಮ್ಮ ಭೂಮಿಯ ಬಗ್ಗೆ ನಾವು ಯೋಚಿಸಿದಷ್ಟೂ ಅಧ್ಬುತ ಅನಿಸುತ್ತದೆ!ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  3. ತುಂಬಾ ಚನ್ನಾಗಿದೆ ....ಅವಳ ಪ್ರೀತಿಗೆ ನಾವು ಮಾತ್ರ ಕೊಟ್ಟಿರುವುದು ಶೂನ್ಯ ಮಾತ್ರ.ವಿಪರ್ಯಾಸದ ವಿಷಯ ನಾವು ಪ್ರೀತಿಯ ಬದಲಿಗೆ ಆಕೆಯ ಒಡಲಿಗೆ ವಿಷ ತುಂಬುತಿದ್ದೇವೆ.

    ReplyDelete
  4. ನಮಸ್ಕಾರಗಳು ಶ್ರೀಕಾಂತ್ .ನಿಮ್ಮ ಪ್ರಕೃತಿಯ ಕಾಳಜಿಗೆ ಧನ್ಯವಾದಗಳು.ನಮಗೆ
    ಪ್ರಾಣವಾಯು ಕೊಡುತ್ತಿರುವ ಮರಗಳ ಮಾರಣ ಹೋಮ ನಡೆಯುತ್ತಿದೆ!ನಮ್ಮ ಕೈಯಲಿ ಸಾಧ್ಯವಿದ್ದಷ್ಟೂ ವಿರೋಧ ವ್ಯಕ್ತಪಡಿಸಬೇಕು.

    ReplyDelete
  5. ಸುಂದರ ಕವಿತೆ. ನಾವು ವಿಷವನ್ನೇ ಒಡಲಿಗೆ ಸುರಿದರೂ , ಆವಳ ಜೀವಜಲಕ್ಕೇ ಕನ್ನ ಹಾಕುತ್ತಿದ್ದರೂ ನಮ್ಮನ್ನು ಪೊರೆಯುತ್ತಿರುವವಳು ಈ ಭೂತಾಯಿ.

    ReplyDelete
  6. "ಮೇದಿನಿ ದೇವಿ ವಸುಂಧರ" ಎಂದು ವೇದಗಳಲ್ಲಿ ಎಷ್ಟು ಅರ್ಥಪೂರ್ಣವಾಗಿ ಹೇಳಿದ್ದಾರಲ್ಲವೆ ? ಅದೆಷ್ಟು ಗಬ್ಬೆಬ್ಬಿಸುತ್ತಿದ್ದೇವೆ ನಮ್ಮ ಧರೆಯನ್ನು !. ಯಥೋಚಿತವಾಗಿದೆ ನಿಮ್ಮ ನುಡಿಕವನ.

    ReplyDelete
  7. ನನ್ನ ಮನೆಗೂ ಒಮ್ಮೆ ಬನ್ನಿ ಸ್ವಾಮಿ. ನಿಮಗೋಸ್ಕರ ಪಂಚಗವ್ಯ ತಯಾರಿಸಿಟ್ಟಿದ್ದೇನೆ.

    ReplyDelete
  8. ಸುಮಾ ಅವರೆ ;ನಮಸ್ಕಾರ ಮತ್ತು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.'ಧರೆ ಇಲ್ಲದೆ ನರನಿಲ್ಲ'ಎನ್ನುವ ಸರಳ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳುವುದು ಯಾವಾಗ?

    ReplyDelete
  9. ಸುಬ್ರಮಣ್ಯ ಅವರೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಮನೆಗೆ ಬಂದಿದ್ದೆ.
    ಪಂಚಗವ್ಯ ಸೇವಿಸಿದೆ.ಮಾಹಿತಿಗೆ ಧನ್ಯವಾದಗಳು.ನಮಸ್ಕಾರ.

    ReplyDelete
  10. ಕ್ರೂರ ಮಕ್ಕಳಿರಬಹುದು... ಅದರೆ ತಾಯಿ ಇರಲಾರಳು ಅಲ್ಲವೇ.. ಅದರಲ್ಲೂ ಭೂತಾಯಿ ಅವಳ ಪ್ರೇಮ ಮಧುರ ಅತೀ ಮಧುರ. ಚೆ೦ದದ ಕವನ.

    ReplyDelete
  11. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಸೀತಾರಾಮ್.ಮತ್ತೆ ಬನ್ನಿ.ನಮಸ್ಕಾರ.

    ReplyDelete
  12. wishes of environment day
    nice lines
    ಮಣ್ಣಿನ ಋಣ ಮರಣದವರೆಗೆ

    ReplyDelete
  13. NICE LINES ASHOK.THANK YOU VERY MUCH FOR YOUR KIND WORDS.

    ReplyDelete
  14. ಬಣ್ಣಿಸಲಸದಳವು ..........ಭೂಮಿ ತಾಯಿಯ ಮಹಿಮೆಯನ್ನು......ಅಂತಹ ತಾಯಿಯನ್ನೇ ಮಲೀನ ಮಾಡುತ್ತಿರುವ ಮನುಕುಲಕ್ಕೆ ಏನೆಂದು ಹೇಳಬೇಕು??? ಸೊಗಸಾಗಿದೆ ನಿಮ್ಮಕವನ...ಧನ್ಯವಾದಗಳು....

    ReplyDelete
  15. ಅವಳ ಕರುಣೆಯಿಂದಲೇ ಅಲ್ಲವೇ ನಾವೆಲ್ಲಾ ಇನ್ನೂ ಇಲ್ಲಿರೋದು?ಧನ್ಯವಾದಗಳು.

    ReplyDelete

Note: Only a member of this blog may post a comment.