Wednesday, August 4, 2010

"ಮಕ್ಕಳು"

CHILDREN ;
Your children are not your children.
They are the sons and daughters of
Life longing for itself.
They come through you but not
from you.,And though they are with you ,
yet they belong not to you .
           KHALIL GIBRAN (1883-1931)
           (The Prophet)
     
             ' ಮಕ್ಕಳು '
ಮಕ್ಕಳು -------------------!
ಇವರು   ಜೀವ ಜಾಲದ ----- ,
ಅನಂತ ಸಾಧ್ಯತೆಗಳ ಒಕ್ಕಲು !
ನಮ್ಮ ಮೂಲಕವೇ ಹರಿದರೂ ,
ಈ ನಿರಂತರ ಜೀವ ವಾಹಿನಿ ,
ನಮ್ಮಿಂದ ಬಂದಿದ್ದಲ್ಲ---------!
ನನ್ನಜ್ಜ ,ಮುತ್ತಜ್ಜ,ಮೂಲಜ್ಜರೆಲ್ಲಾ ,
ನನ್ನ ಮಕ್ಕಳ ಮೂಲಕ ಹರಿದು ,
ನಾಳೆ ಅವರ ಮೊಮ್ಮಕ್ಕಳು,
ಮರಿ , ಮರಿಮಕ್ಕಳಲ್ಲೂ -----,
ಹರಿ ಹರಿದು ಬರುತ್ತಿರುತ್ತಾರೆ!
ಆ ಕಾಣದ ಬಿಲ್ಲು ಗಾರ,
ನಮ್ಮ ದೇಹವ ಬಿಲ್ಲಾಗಿಸಿ ---,
ಅನಂತದತ್ತ ಬಿಟ್ಟ ಬಾಣಗಳು ಅವರು!
ಅವರಿಗೆ ನಿಮ್ಮ ಪ್ರೀತಿ ಕೊಡಿ ,
ಅವರಂತೆ ಅವರು ಅರಳಲು ಬಿಡಿ!
ಸಾಧ್ಯವಾದರೆ ನಾವು ಅವರಂತೆ ,
ನಿತ್ಯ ನೂತನವಾಗೋಣ-------!
ಅವರನ್ನು ನಮ್ಮಂತೆ--------,
ಹಳತಾಗಿಸುವುದ ----ಬಿಡೋಣ !
ಜೀವ ಪ್ರವಾಹ ಹರಿಯಲಿ ಮುಂದಕ್ಕೆ !
ಕಾಲ ಚಲಿಸುವುದಿಲ್ಲ ಹಿಂದಕ್ಕೆ !

(ಇದು ನನ್ನ ಬ್ಲಾಗಿನ 75 ನೇ ಪ್ರಕಟಣೆ.ನಾನು ಬ್ಲಾಗ್ ಶುರು ಮಾಡಿದ್ದು 2010 february ಯಲ್ಲಿ.ನನಗೆ ಬ್ಲಾಗ್ ಲೋಕದ ಪರಿಚಯವೇ ಇರಲಿಲ್ಲ..ನನ್ನ ಆತ್ಮೀಯ ಸ್ನೇಹಿತ ನಾರಾಯಣ ಭಟ್ಟರ ಸ್ನೇಹ ಪೂರ್ವಕ ಒತ್ತಾಸೆ ಇಲ್ಲದಿದ್ದರೆ ನಾನು ಬ್ಲಾಗ್ ಶುರು ಮಾಡುತ್ತಿರಲಿಲ್ಲ.ಅವರಿಗೆ ನನ್ನ ಕೃತಜ್ಞತೆಗಳು.ನನ್ನ ಬ್ಲಾಗ್ ಶುರು ಮಾಡಿಕೊಟ್ಟವರು ನನ್ನ ಪತ್ನಿ ಪದ್ಮ ಮತ್ತು ಮಗಳು ಪಲ್ಲವಿ.ನನಗೆ ಮೊದ ಮೊದಲು ಟೈಪ್ ಮಾಡಲೂ ಬರುತ್ತಿರಲಿಲ್ಲ.ತನ್ನೆಲ್ಲಾ ಮನೆ ಕೆಲಸದ ನಡುವೆ ನನ್ನ ಕಿರಿಕಿರಿಯನ್ನೂ ಸಹಿಸಿಕೊಂಡು ಸುಮಾರು ಬರಹಗಳನ್ನು ಬ್ಲಾಗಿಸಿದ ನನ್ನ ಅರ್ಧಾಂಗಿಗೆ ನನ್ನ ನಮನಗಳು.ಇನ್ನು ,ಕಾಣದ ನನ್ನಲ್ಲಿ ಇಷ್ಟೊಂದು ಸ್ನೇಹ,ಪ್ರೀತಿ ಅಭಿಮಾನಗಳನ್ನು ತೋರಿಸಿ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ ಎಲ್ಲಾ ಸಹಬ್ಲಾಗಿಗರಿಗೂ ಅನಂತ ವಂದನೆಗಳು.)

27 comments:

  1. ಅಭಿನಂದನೆಗಳು ಸರ್,
    ಬೇಗನೆ ಶತಕ ಬಾರಿಸಿಬಿಡ್ರಿ... ಒಳ್ಳೊಳ್ಳೆ ಲೇಖನಗಳು ಅದ್ಭುತವಾದ ಬರಹಾ ನಿಮ್ಮದು.
    ಇತ್ತೀಚಿಗೆ ಸ್ವಲ್ಪ ಕೆಲಸ ಜಾಸ್ತಿ ಆಗಿರೋದರಿಂದಾ ಬ್ಲಾಗ್ ವಿಸಿಟ್ ಮಾಡಿರಲಿಲ್ಲ... ತುಂಬಾನೇ ಬರೆದಿದ್ದಿರಾ.
    ಕೀಪ್ ಅಪ್ ದಿ ಗುಡ್ ವರ್ಕ್ :)

    ReplyDelete
  2. NIMMINDALE NNANU BLOG BHETI SHURUMADIDDU.HALEYA,MAAGIDA GELETANADA JOTHEGE ANEKA VISHAYAGALA AVALOKANADA BHAGYA DORETIDE.NIMMA BLOG NIRANTARA NADEYALI.NIMMA BLOGIGE SAHAKARISIDA,SAHAKARISUTTIRUVA NIMMA NIMMA KUTUMBADA SADASYARIGE DHANYAVAADAGALU.

    ReplyDelete
  3. ಮಾನಸ ನಮಸ್ಕಾರ.ನಿಮ್ಮ ಅಭಿನಂದನೆಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇದ್ದರೆ ಶತಕ ಬಾರಿಸುವುದು ಖಂಡಿತ ಕಷ್ಟವಾಗುವುದಿಲ್ಲ.ಬ್ಲಾಗಿಗೆ ತಪ್ಪದೆ ಬರುತ್ತಿರಿ.

    ReplyDelete
  4. ಹೇಮಚಂದ್ರ;ನೀವು ಪ್ರತಿಸಲ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿ ಪ್ರೋತ್ಸಾಹ ನೀಡಿದ್ದಕ್ಕೆ ಅನಂತ ವಂದನೆಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಧನ್ಯವಾದಗಳು.

    ReplyDelete
  5. ಕವನ ಅರ್ಥಪೂರ್ಣ, ತಮ್ಮ ಬ್ಲಾಗಿನಲ್ಲಿ ೭೫ ನೇ ಕೃತಿ ಎಂದಿರಿ, ನೇರವಾಗಿ ಟೈಪ್ ಮಾಡಲೂ ಸಹ ಬರುತ್ತಿರಲಿಲ್ಲ ಎಂದಿರಿ, ನಿಮ್ಮ ಈ ಬ್ಲಾಗಿನ ಕೆಲಸದಲ್ಲಿ ನಿಮಗೆ ಸಹಕರಿಸದ ನಿಮ್ಮನೆಯ ಟೀಮಿಗೂ [ತಂಡಕ್ಕೂ] ನಿಮಗೂ ಹಾರ್ದಿಕ ಶುಭಾಶಯಗಳು, ನಿಮ್ಮ ಬ್ಲಾಗಿನಲ್ಲಿ ಅನವರತ 'ಕಾವ್ಯ ಶರಾವತಿ' ಮೈದುಂಬಿ ಹರಿಯಲಿ, ಸ್ನೇಹಕ್ಕೆ ಇಂದಿನ ಕಾಲದಲ್ಲಿ ನೇರ ಪರಿಚಯವೇ ಬೇಕೆಂಬುದಿಲ್ಲ, ನಿಮ್ಮ ಚಿತ್ರಗಳಲ್ಲೂ, ಕಾವ್ಯಗಳಲ್ಲೂ ನೀವು ಕಾಣ ಸಿಗುತ್ತೀರಲ್ಲ ! ಧನ್ಯವಾದಗಳು

    ReplyDelete
  6. ವಿ.ಆರ್.ಭಟ್ ಸರ್;ನಿಮ್ಮೆಲ್ಲರ ಪ್ರೀತಿಪೂರ್ವಕ ಪ್ರೋತ್ಸಾಕ ಪ್ರತಿಕ್ರಿಯೆಗಳಿಂದ ಬ್ಲಾಗ್ ಇಲ್ಲಿಯ ತನಕ ಸುಸೂತ್ರವಾಗಿ ನಡೆದು ಬಂದಿದೆ.ವಂದನೆಗಳು ಸರ್.

    ReplyDelete
  7. DR. sir,
    modalige, nimma kavana soopar....eradanedaagi, nimma mane tanDakke abhinandane , nimmannu namage parichaya maadiddakkaagi..... munduvariyali nimma kaavya yaatre.....

    ReplyDelete
  8. ಡಾಕ್ಟರ್ ಸರ್,
    ನಿಮ್ಮ ಕವನಕ್ಕೆ ಎರೆಡು ಮಾತೆ ಇಲ್ಲ..........!
    ಅಭಿನದನೆಗಳು...... ಬೇಗ ಕವನ ಶತಕ ಬಾರಿಸಿ,
    ಹಾಗೆ ನಿಮ್ಮ ಬ್ಲಾಗ್ ರಸದೌತಣ ಸವಿಯಲು ಕಾರಣರಾದ ನಿಮ್ಮ ಮನೆಯವರಿಗೆ ಧನ್ಯವಾದಗಳು.....

    ReplyDelete
  9. ಕೊಳಲ ಗಾನ ೭೫ ರ ಮೆಟ್ಟಿಲು ಹತ್ತಿ ನಮ್ಮೆಲ್ಲರ ಮಾನಸ ಸರೋವರದಲ್ಲಿ ಧುಮ್ಮಿಕ್ಕುತ್ತಿದೆ.. ಅಭಿನ೦ದನೆಗಳು ನಿಮ್ಮೆಲ್ಲರಿಗೂ...
    ಧನ್ಯವಾದಗಳು

    ReplyDelete
  10. ೭೫ ಓಟಗಳು ಬೇಗನೇ ನೂರಾಗಲಿ ಎಂದು ಹಾರೈಸುತ್ತೇನೆ. ನಿಮ್ಮೊಡನೆ ಸಹಕರಿಸಿ, ನಮಗೆಲ್ಲರಿಗೂ ಕೊಳಲಗಾನ ಕೇಳಿಸಿದ ನಿಮ್ಮ ಕುಟುಂಬದವರಿಗೂ ಸಹ ಅಭಿನಂದನೆಗಳು.
    ಖಲೀಲ ಗಿಬ್ರಾನನ ಸತ್ಯವಾಕ್ಯವನ್ನು ಸುಂದರವಾಗಿ ಕನ್ನಡಿಸಿದ್ದೀರಿ.

    ReplyDelete
  11. ಸದಭಿರುಚಿಯಿಂದ ಕೂಡಿರುವ ನಿಮ್ಮ ಕವನಗಳು ಮತ್ತು ಲೇಖನಗಳು ೭೫ ನ್ನು ಮುಟ್ಟಿದಂತೆ ೧೫೦ ನ್ನೂ ಮುಟ್ಟಲೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಉತ್ತಮ ಕವನಗಳನ್ನು ನಮಗೆ ಕೊಟ್ಟ ನಿಮಗೆ ಮತ್ತು ನಿಮ್ಮ ಕುಟುಂಬದವರೆಲ್ಲರಿಗೂ ಧನ್ಯವಾದಗಳು.

    ReplyDelete
  12. ಅಭಿನಂದನೆಗಳು ಸರ್... ಕವನ ಚೆನ್ನಾಗಿ ಮೂಡಿಬಂದಿದೆ...

    ReplyDelete
  13. ದಿನಕರ್ ಮೊಗೇರ;ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.

    ReplyDelete
  14. ಪ್ರವೀಣ್ ;ನಿಮ್ಮ ಮನದಾಳದ ಮಾತು ಕೇಳಿ ಸಂತೋಷವಾಯಿತು.ನಿಮ್ಮ ಆಶಯದಂತೆ ನಿಮ್ಮೆಲ್ಲರ ಪ್ರೋತ್ಸಾಹದಿಂದ ನನ್ನ ಬ್ಲಾಗ್ ನಿಮಗೆಲ್ಲಾ ಒಳ್ಳೆಯ ಕವನಗಳನ್ನೂ ,ಒಳ್ಳೆಯ ಲೇಖನಗಳನ್ನೂ ಕೊಡಲಿ ಎಂದು ಹಾರೈಸುತ್ತೇನೆ.ಧನ್ಯವಾದಗಳು.

    ReplyDelete
  15. ಚುಕ್ಕಿ ಚಿತ್ತಾರರವರಿಗೆ;ನಮನಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  16. ಸುನಾತ್ ಸರ್;ನಿಮ್ಮೆಲ್ಲರ ಹಾರೈಕೆಗಳಿಗೆ,ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  17. ಸುಬ್ರಮನ್ಯರವರಿಗೆ;ನಮಸ್ಕಾರ.ತಮ್ಮೆಲ್ಲರ ಹಾರೈಕೆಯಿಂದ ನನ್ನ ಬ್ಲಾಗಿನಿಂದ ಎಲ್ಲರಿಗೂ ಮುದ ನೀಡುವಂತಹ ಲೇಖನಗಳೂ,ಕವನಗಳೂ ಬರುತ್ತಿರಲಿ.ಧನ್ಯವಾದಗಳು.

    ReplyDelete
  18. ಪ್ರಗತಿ ಹೆಗಡೆಯವರಿಗೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರಿಯಲಿ.

    ReplyDelete
  19. ಸಾರ್, ನಿಮ್ಮ "ಮಕ್ಕಳು" ಕವನ ತುಂಬಾ ಹಿಡಿಸಿತು..ಸತ್ವ, ತತ್ವ ಭರಿತ ಸರಳ ನಿರೂಪಣೆ ಎಲ್ಲವೂ ಚೆನ್ನಾಗಿದೆ. "ಕೊಳಲು" ಬ್ಲಾಗ್ ಪ್ರಾರಂಭಕ್ಕೆ ನನ್ನ ಸಲಹೆ ನಿಮಿತ್ತ ಮಾತ್ರ..ನನಗೆ ಹಾಗನ್ನಿಸಲು ಪ್ರೇರಕ ಶಕ್ತಿ ನಿಮ್ಮ ಸ್ನಿಗ್ಧ ಸ್ನೇಹ.. ಸಾಹಿತ್ಯದಲ್ಲಿ ನಿಮಗಿರುವ ಪ್ರೀತಿ, ಅದನ್ನು ಸಹಮನಸ್ಕರಿಗೆ ತಲುಪಿಸುವ ಕಾಳಜಿ ಮತ್ತು "ಕೊಳಲು" ಸಾಹಿತ್ಯ ಸೃಷ್ಟಿಯೊಂದಿಗೆ ಇನ್ನಷ್ಟು ಬ್ಲಾಗ್ ಸ್ನೇಹಿತರ ಸಂಪರ್ಕ ಸೇತುವಾಗಿ ಬೆಳೆಯುತ್ತಿರುವ ಪರಿ ಎಲ್ಲವೂ ಸಂತಸಕ್ಕೆ ಕಾರಣವಾಗುತ್ತವೆ. "ಕೊಳಲು" ಹೀಗೆಯೇ ಚಿರಂತನವಾಗಿ, ನಿತ್ಯನೂತನವಾಗಿ ಬೆಳೆಯುತ್ತಿರಲಿ.

    ReplyDelete
  20. ನಾರಾಯಣ್ ಭಟ್ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗಿನ ಮೂಲ ಕಾರಣ ಕರ್ತರು ನೀವು.ನಿಮ್ಮನ್ನು ಸ್ಮರಿಸದಿದ್ದರೆ ಕರ್ತವ್ಯ ಲೋಪವಾಗುತ್ತದೆ.ನಿಜಕ್ಕೂ ಬ್ಲಾಗ್ ಇಷ್ಟೊಂದು ಬೆಳೆಯಬಹುದೆಂಬ ಕಲ್ಪನೆಯೇ ಇರಲಿಲ್ಲ.ಮೊದ ಮೊದಲು ನಾನು ಬ್ಲಾಗ್ ಬರೆದಾಗ ನೀವು ಒತ್ತಾಸೆಯಿಂದ ನೀಡುತ್ತಿದ್ದ ಸ್ನೇಹಪೂರ್ವಕ ಪ್ರತಿಕ್ರಿಯೆ ನನಗೆ ಮತ್ತಷ್ಟು ಬರೆಯಲು ಪ್ರೇರಣೆ ನೀಡಿತು.ಈಗ ಎಪ್ಪತೈದು ಲೇಖನಗಳಾಗಿವೆ ಎಂದರೆ ಆಶ್ಚರ್ಯವಾಗುತ್ತಿದೆ.ಖಲೀಲ್ ಗಿಬ್ರಾನ್ ನ ಈ ಪ್ರಸಿದ್ದ ನುಡಿಗಳನ್ನು ಕವನದಲ್ಲಿ ತರಬೇಕೆಂದು ಬಹಳ ಇಷ್ಟವಿತ್ತು.ಈ ಮೊದಲೇ ಬರೆದಿದ್ದ ಕವನವೊಂದು ಅಷ್ಟು ಖುಷಿ ಕೊಟ್ಟಿರಲಿಲ್ಲ.ಅದಕ್ಕೇ ಮತ್ತೊಮ್ಮೆ ಪ್ಪ್ರಯತ್ನಿಸಿದ್ದೇನೆ.ಮಕ್ಕಳ ಬಗ್ಗೆ ಅವನ ವಿಚಾರಗಳು ಎಷ್ಟು ಅದ್ಭುತವಲ್ಲವೇ.ಎಲ್ಲಾ ತಂದೆ ತಾಯಂದಿರಿಗೆ ಇದೊಂದು ಪಾಠದಂತಿದೆ.ನಮಸ್ಕಾರ.

    ReplyDelete
  21. Hey appa,75th blog, super! way to go!

    ReplyDelete
  22. ಕವನ ಹಿಡಿಸಿತು. ಇಂತ ಸುಂದರ ವಾದ ಕವನಗಳು ಹೀಗೆ ನಿಮ್ಮ blog ನಿಂದ ಬರುತ್ತಿರಲಿ ಎಂದು ಹಾರೈಕೆ.

    ReplyDelete
  23. ಸುಧೀಂದ್ರ ರವರಿಗೆ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಜಲವರ್ಣದ ಚಿತ್ರಗಳು ಅದ್ಭುತವಾಗಿವೆ.ನನಗೂ ಕೂಡ ಚಿತ್ರ ಕಲೆಯಲ್ಲಿ ಆಸಕ್ತಿ ಇದೆ.ಬಿಟ್ಟು ಬಹಳ ವರ್ಷಗಳಾದವು.ಮತ್ತೆ ಶುರುಮಾಡಬೇಕಾಗಿದೆ.ಅದು ಕೊಡುವ ಮಾನಸಿಕ ಶಾಂತಿ ಮತ್ತು ಸಂತೋಷ ಅದನ್ನು ಅನುಭವಿಸಿದವರಿಗೇ ಗೊತ್ತು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

    ReplyDelete
  24. 'ಮಕ್ಕಳು' ಕವನ ಖಲೀಲ್ ಗಿಬ್ರಾನ್ ರ ಆಶಯಕ್ಕೆ ಪೂರಕವಾಗಿ ಬಹಳ ಚೆನ್ನಾಗಿ ಮೂಡಿ ಬ೦ದಿದೆ. ಧನ್ಯವಾದಗಳು. 'ಸಾಧ್ಯವಾದರೆ ನಾವು ಅವರಂತೆ
    ನಿತ್ಯ ನೂತನವಾಗೋಣ-------!' ಎಷ್ಟು ಅರ್ಥವತ್ತಾದ ಮಾತು! ನಾನೂ ಕೂಡ ನಿಮ್ಮ೦ತೆಯೇ ನನ್ನ ಮಗಳಿ೦ದ ಬ್ಲಾಗ್ ಕನಸನ್ನು ನನಸು ಮಾಡಿಕೊ೦ಡೆ! ನಿಮ್ಮ ಬ್ಲಾಗ್ ಶೀಘ್ರವೆ ಶತಕ ಭಾರಿಸಲಿ. ವಿಶಿಷ್ಟ ಕನಸುಗಳನ್ನು ಕಾಣುವ ನನ್ನ ಮಗಳ ಬ್ಲಾಗ್ ಗೊಮ್ಮೆ ಭೇಟಿ ನೀಡಿ. ಲಿಂಕ್ ಹೀಗಿದೆ.
    1. kandenanondhukanasu.blogspot.com
    2. mydreamwritings.blogspot.com
    3. nanaganisidhdhu.blogspot.com

    ReplyDelete
  25. ಖಲೀಲ ಗಿಬ್ರಾನ ನುಡಿಗಟ್ಟು ಆಧರಿಸಿದ ತಮ್ಮ ಕವನ ಮಾರ್ಮಿಕವಾಗಿದೆ.
    ತಮ್ಮ ಪ್ಲಾಟಿನಂ ಲೇಖನಗಳು ಬೇಗ ವಜ್ರಕ್ಕೆ ಸೇರಲಿ. ತಮ್ಮ ಬಳಗಕ್ಕೂ ನಾರಾಯಣ ಭಟ್ಟರಿಗೂ ನಮ್ಮ ವಂದನೆಗಳು. ತಮ್ಮ ಸಾಹಿತ್ಯಾ ಸದಾ ಹೀಗೆ ಹರಿಯುತ್ತಿರಲಿ.

    ReplyDelete
  26. ಮೂರ್ತಿ ಸರ್...

    ಮುಕ್ಕಾಲು ಶತಕ ಬಾರಿಸಿರುವ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು.. ಇದು ಬಹು ಬೇಗ ನೂರರ ಗಡಿ ದಾಟಲಿ..ಸದಭಿರುಚಿಯ ಲೇಖನ ಹಾಗೂ ಕವನಗಳನ್ನು ನಮಗೆಲ್ಲರಿಗೂ ಕೊಡುತ್ತ ಬಂದಿರುವ ನಿಮಗೆ ಮತ್ತೊಮ್ಮೆ ಧನ್ಯವಾದಗಳು.....ಈ ಕವನ ತುಂಬಾ ಚೆನ್ನಾಗಿದೆ....

    ReplyDelete

Note: Only a member of this blog may post a comment.