Thursday, August 19, 2010

'ಬೇಸಿಗೆಯ -ತಂಗಾಳಿ'

ನಾ  ಇರ ಬಯಸುತ್ತೇನೆ ಹೀಗೇ !
ಬೇಸಿಗೆಯ ತಂಗಾಳಿಯಂತೆ!
ಅಲ್ಲಿ ಇಲ್ಲಿ ಸುತ್ತಿ ಸುಳಿದು ,
ಅಬ್ಬರಿಸದೇ ,ಬೊಬ್ಬಿರಿಯದೇ,
ಹಿತವಾಗಿ ಬೀಸಿ ----------,
ಬೆಂದ ಮನಗಳ ತಣ್ಣಗಾಗಿಸಿ ,
ನೊಂದ ಮನಗಳಿಗೆ ಮುಲಾಮಾಗಿ,
ಸ್ನೇಹಿತರಿಗೆ ಸಲಾಮಾಗಿ ,
ಮಾಗಿ,ತೂಗಿ,ಮಾತಿನಲ್ಲಿ ,
ಬಿರಿದ ಮನಸುಗಳ ಬೆಸೆಯುತ್ತಾ,
ಸ್ನೇಹಗಳ ಹೊಸೆಯುತ್ತಾ,
ಮುದದಿಂದ ಬೀಸುತ್ತಾ ,
ರೋಗಿಗಳಿಗೆ ಪ್ರಾಣವಾಯುವಾಗಿ,
ಸಕಲರಿಗೆ ಸಹಜ ಉಸಿರಾಟವಾಗಿ ,
ಅಬ್ಬರವಿರದೇ,ಆಡಂಬರವಿರದೇ,
ಹಿತವಾಗಿ,ಮಿತವಾಗಿ ಬೀಸಿ,
ಸದ್ದಿಲ್ಲದೇ ಮರೆಯಾಗ ಬಯಸುತ್ತೇನೆ ,
ಗೊತ್ತೇ -------ಆಗದಂತೆ !
ಇರಲೇ -------ಇಲ್ಲವೆಂಬಂತೆ!!
ಬೇಸಿಗೆಯ ------ತಂಗಾಳಿಯಂತೆ!!!

55 comments:

  1. ಗುರುಮೂರ್ತಿ ಹೆಗಡೆ ಯವರಿಗೆ ನಮಸ್ಕಾರ.ನನ್ನ ಕವನವನ್ನು ಓದಿ,ಇಷ್ಟಪಟ್ಟು ತಕ್ಷಣ ಪ್ರತಿಕ್ರಿಯಿಸಿದ್ದಕ್ಕ ಧನ್ಯವಾದಗಳು ಸರ್.ನಿಮ್ಮ ಸ್ನೇಹ ಹೀಗೇ ಇರಲಿ.

    ReplyDelete
  2. ಕೃಷ್ಣಮೂರ್ತಿಯವರೆ...

    ಸುಂದರ ಕವನದ ಆಶಯದಲ್ಲಿ ಹೇಗೆ ಬರೆದಿದ್ದೀರೋ..
    ಹಾಗೇ ಇದ್ದೀರಾ ನೀವು..!

    ಸುಂದರ ಕವನಕ್ಕೆ ಅಭಿನಂದನೆಗಳು... ಡಾಕುಟ್ರೆ...

    ReplyDelete
  3. ಪ್ರಕಾಶಣ್ಣ;ಹಾಗೆಂದು ವಯಸ್ಸಿನಲ್ಲಿ ಹಿರಿಯನಾದ ನಾನು ಕರೆದರೆ ಬೇಸರವಿಲ್ಲ ತಾನೇ?ಯಾಕೋ ಪ್ರೀತಿಯಿಂದ ಹಾಗೆ ಕರೆಯಬೇಕಿನಿಸುತ್ತದೆ.ಕವನದ ಆಶಯದಂತೆ ಬಾಳಬೇಕೆಂಬುದು ನನ್ನ ಆಶಯ!ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೋ ಕಾದು ನೋಡಬೇಕು.ಧನ್ಯವಾದಗಳು.

    ReplyDelete
  4. A nice way of writing :) You've projected your intentions very well :) :)

    ReplyDelete
  5. pratibha bhat;welcome to my blog and thank you so much for your kind comments.

    ReplyDelete
  6. ವೆಂಕಟೇಶ್ ಹೆಗಡೆ ಯವರಿಗೆ;ನಮಸ್ಕಾರ ಮತ್ತು ನನ್ನ ಬ್ಲಾಗಿಗೆ ಸ್ವಾಗತ.ಬ್ಲಾಗಿನ ಭಾಂಧವ್ಯ ಮುಂದುವರಿಯಲಿ.ಧನ್ಯವಾದಗಳು.

    ReplyDelete
  7. ಡಾಕ್ಟ್ರೆ, ತು೦ಬಾ ಚೆನ್ನಾಗಿದೆ, ನಾನು ಕೂಡ ಹಾಗೆ ಇರಬಯಸುತ್ತೇನೆ.

    ReplyDelete
  8. doc

    i will comment on this poem later

    1.i am really angry on u. i have my mobile number on my blog. u might have called me and allowed me to meet u. too bad

    2. i hope kolalu (ur blog name) is symbolic of romantic. i can imagine how much u r romantic in ur young age or might be even today?
    tentcinema@gmail.com
    9972570061

    thanks for coming to my blog

    ReplyDelete
  9. ತುಂಬಾ ಇಷ್ಟವಾಯಿತು.

    ReplyDelete
  10. ಪರಾಂಜಪೆಯವರಿಗೆ;ನಮನಗಳು.ನನ್ನಮನದ ಆಶಯವನ್ನು ನನ್ನ ಕವಿತೆ ಹೇಳಿದೆ.ನಿಮ್ಮ ಮನದ ಆಶಯವೂ ಅದೇ ಆಗಿರುವುದು ಸಂತೋಷ.

    ReplyDelete
  11. ಸೊಗಸಾದ ಸಾಲುಗಳು..ತು೦ಬಾ ಇಷ್ಟವಾಯ್ತು.

    ReplyDelete
  12. ಬದರಿನಾಥ್;ಕೋಪಬಿಡಿ.ತಣ್ಣಗಿರಿ,ನಿಮ್ಮ ಕವನದ ಆಶಯದಂತೆ.ನಾನೇ ಯಾರದೋ ಗೆಸ್ಟ್ ಆಗಿ ಹೋಗಿದ್ದೆ.ಅರ್ಥ ಮಾಡಿಕೊಳ್ಳುತ್ತೆರೆಂದುಕೊಂಡಿದ್ದೇನೆ.ನಮಸ್ಕಾರ.

    ReplyDelete
  13. ಉಮಾ ಭಟ್ ಮೇಡಂರವರಿಗೆ ನಮನಗಳು.ನಿಮ್ಮ ಕಾಮೆಂಟ್ ಹೀಗೇ ಬರುತ್ತಿರಲಿ.ಧನ್ಯವಾದಗಳು.

    ReplyDelete
  14. ಮನಮುಕ್ತಾ ಅವರೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  15. ದಿನದ ವೇಳೆ ನಾನು ಬ್ಲಾಗಿಗೆ ಬರುವುದು ಕಡಿಮೆ, ಆದರೂ ಬಂದೆ, ತತ್ವಜ್ಞಾನವನ್ನು ಹೇಳಿದಿರಿ, ನೀವು ಹೇಳಿರುವುದನ್ನು ನಾನು ನಿಮ್ಮ ಕುರಿತು ಬರೆದ ನಿನ್ನೆಯ ಲೇಖನದಲ್ಲಿ ಮಂಡಿಸಿದ್ದೇನೆ, ಹೌದು ನೀವೊಬ್ಬ ಗಾರುಡಿಗ, ನೀವೊಬ್ಬ ಮಾಂತ್ರಿಕ, ನೀವೊಬ್ಬ ಜನಸೇವಕ ಎಲ್ಲಾ ಅರ್ಥದಲ್ಲೂ, ನಿಮ್ಮ ಅನಿಸಿಕೆಗಳನ್ನು ನಮ್ಮದಾಗಿಸಿಕೊಳ್ಳಲು ನಮಗೊಂದಷ್ಟು ಹರಸುತ್ತಿರಿ, ಆಗಾಗ ಆಗಾಗ ಕೊಳಲಿನ ಉಲಿಯ ಅಲೆಹರಿಸಿ, ಅದು ಅಗಲಗಲ ಮಾರ್ದನಿಸಿ, ನಮ್ಮ ಮದಮಾತ್ಸರ್ಯ[ನಿಮ್ಮ ಥರ ನಾವಿಲ್ಲವಲ್ಲವೆಂಬ ಹೊಟ್ಟೆಕಿಚ್ಚು !] ಗಳನ್ನು ಮರ್ದಿಸಿ, ನಮ್ಮ ದೇಹಕ್ಕೆ ಹೀಲಿಂಗ್ ಕೊಡುವ, ನಮಗೆ ಮೈಂಡ್ ಹೀಲಿಂಗ್ ಕೊಡುವ, ನಮ್ಮ ಸಮಾಜದ ಮಧ್ಯೆ ಶತಶತಮಾನಗಳಿಂದ ಬಂದಿರುವ ಅಂಟುರೋಗಕ್ಕೆ ಮದ್ದುಕೊಡುವ ಲಹರಿ ಬರಿತ, ಲಾಸ್ಯ ಮಿಳಿತ, ಮೋಹಕ, ಮನಮೋಹಕ ಸಾಂಗತ್ಯ ನಮೆಗೆಲ್ಲರಿಗೂ ನಿಮ್ಮಿಂದ ಒದಗಲಿ ಎಂದು ಕಾಣದ ಶಕ್ತಿಯಲ್ಲಿ ಪ್ರಾರ್ಥಿಸುತ್ತೇನೆ, ಮತ್ತು ಅದನ್ನೇ ಹಾರೈಸುತ್ತೇನೆ, ಕವನ ಬಹಳ ರಸವತ್ತಾಗಿದೆ;ತತ್ವಜ್ಞಾನ [ ಪರೋಪಕಾರಾರ್ಥಮಿದಂ ಶರೀರಂ ]ಹೊಂದಿದೆ, ಬರಲಿ, ಮೊಗದಂತೆ, ಚಿಮ್ಮಲಿ ರಸಬುಗ್ಗೆಗಳು ಅನವರತ, ನಮಸ್ಕಾರ

    ReplyDelete
  16. ಭಟ್ಟರೇ;ನಿಮ್ಮೆಲ್ಲಾ ಹೊಗಳಿಕೆಗೆ ನಾನೆಷ್ಟು ಅರ್ಹನೋ ತಿಳಿಯದು.ನನ್ನ ಬರವಣಿಗೆಯಲ್ಲಿರುವುದು,ನನ್ನ ಬದುಕಾಗಬೇಕು.ಅದರಂತೆಯೇ ಬದುಕಬೇಕು.ಅದೇ ನನ್ನ ಆಶಯ.ಅದು ಎಷ್ಟರಮಟ್ಟಿಗೆ ಪೂರೈಸುತ್ತದೋ ಅದು ಆ ಭಗವಂತನ ಅನುಗ್ರಹ.ನಿಮ್ಮಂತಹ ಆತ್ಮೀಯರು,ಸ್ನೇಹಪರರು,ಜ್ಞಾನಿಗಳು ಇರುವಾಗ ಅದು ಕಷ್ಟವಾಗಲಾರದು ಎಂದು ನನ್ನ ಅನಿಸಿಕೆ.ಇಷ್ಟರಮೇಲೆಅವನಇಚ್ಛೆ.ಧನ್ಯವಾದಗಳು.

    ReplyDelete
  17. ಸರ್‍, ಸುಂದರವಾದ ಕವನ - ತಂಗಾಳಿ ಬೀಸಿದಂತೆಯೆ ಭಾಸವಾಯಿತು.
    ಸ್ನೇಹದಿಂದ,

    ReplyDelete
  18. ಚಂದ್ರು;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಮ್ಮೆಲ್ಲರ ಸ್ನೇಹ ನೂರ್ಕಾಲ ತಂಗಾಳಿಯಂತೆ ಬೀಸುತ್ತಿರಲಿ.ಧನ್ಯವಾದಗಳು.

    ReplyDelete
  19. ಮಾನ್ಯ ಡಾ.ಕೃಷ್ಣಮೂರ್ತಿಯವರಿಗೆ ನಮಸ್ಕಾರ. ಶ್ರೀನಿಧಿಯ ಪ್ರಪಂಚಕ್ಕೆ ಬಂದು ಮಾತಾಡುವ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಇವತ್ತು ನಿಮ್ಮ ಬ್ಲಾಗು ನೋಡಿದೆ, ಖುಷಿಯಾಯ್ತು.

    ಸಂಪರ್ಕದಲ್ಲಿರೋಣ,
    ಶ್ರೀನಿಧಿ

    ReplyDelete
  20. ಸಾಲುಗಳನ್ನ ಓದುತ್ತಿದ್ದಂತೆ ಇದೊಂದು ಭಾವಗೀತೆ ಅಂದಿದೆ ನನ್ನ ಭಾವ .
    ಪ್ರತಿ ಸಾಲುಗಳಲ್ಲಿ ನಿಸ್ವಾರ್ಥತೆಯ ಭಾವ ತುಂಬಿದೆ ಸರ್.
    ತಂಗಾಳಿ ಬೀಸುತ್ತಲೇ ಇರಲಿ . . . .

    ReplyDelete
  21. ತಂಗಾಳಿ ನನ್ನ ಮನವನ್ನು ತಾಕಿತು. ಉತ್ತಮ ಕವನ.
    ಧನ್ಯವಾದಗಳು!

    ನನ್ನ ಬ್ಲಾಗ್ www.nallanalle.blogspot.com ಗೆ ಭೇಟಿ ನೀಡಿ.

    ReplyDelete
  22. ಮಾನ್ಯ ಶ್ರೀನಿಧಿಯವರಿಗೆ ;ನನ್ನ ಬ್ಲಾಗಿಗೆ ಸ್ವಾಗತ.ನಿಮಗೆ ಬ್ಲಾಗ್ ಮೆಚ್ಚಿಗೆಯಾದದ್ದು ಸಂತೋಷ.ಬ್ಲಾಗ್ ಭಾಂಧವ್ಯ ಹೀಗೇ ಮುಂದುವರಿಯಲಿ.ನಮಸ್ಕಾರ.

    ReplyDelete
  23. ಆತ್ಮೀಯರಾದ ನಾಗರಾಜ್ ಅವರಿಗೆ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮೆಲ್ಲರ ಸ್ನೇಹ,ಭಾಂಧವ್ಯ,ಹೀಗೇ ಇರಲಿ.ನಮಸ್ಕಾರ.

    ReplyDelete
  24. ಗುಬ್ಬಚ್ಚಿ ಸತೀಶ್ ಅವರಿಗೆ ;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಬ್ಲಾಗಿಗೆ ಬರುತ್ತಿರಿ.ಧನ್ಯವಾದಗಳು.

    ReplyDelete
  25. KAVANADA ASHAYA HALAVARA BADUKINA DAARAIDEEPAVAGALI.NAVELLA HEEGEYE ERALU PRYATNISONA. NERA HDHRUDAYAKKE THATTUVA KAVITE.
    DHANYAVADAGALU.

    ReplyDelete
  26. ಧನ್ಯವಾದಗಳು ಹೇಮಚಂದ್ರ.ಈ ಸಲ ಬಂದಾಗ ನಿಮ್ಮನ್ನು ಭೇಟಿಯಾಗದೆ ಇದ್ದದ್ದಕ್ಕೆ ಬೇಸರವಿದೆ.ಮುಂದಿನ ಸಲ ಖಂಡಿತ ಭೇಟಿಯಾಗುತ್ತೇನೆ.

    ReplyDelete
  27. Murthy Sir...Simplyyyyyyyyyyy Superbbbb...iste helaballe.....Tumbaane ista aitu.....

    ReplyDelete
  28. ಡಾ. ಸರ್,
    ಸಂಶಯವೇ ಬೇಡ...... ನಿಮ್ಮ ಕವನದ ಹಾಗೆ ನೀವು ಇದ್ದೀರಾ...... ಎಲ್ಲಾ ಆಶಯವೂ ನಿಮ್ಮದೇ..... ನಿಮ್ಮಿಂದ ಬಂದ ಕವನ ನಿಮ್ಮ ಹಾಗೆ ಇದೆ.....
    ತುಂಬಾ ಇಷ್ಟ ಆಯ್ತು ಸರ್...

    ನಾನು ಬರೆದ ಕಥೆ ಇನ್ನು ನೀವು ಓದಿಲ್ಲ ಸರ್....

    ReplyDelete
  29. ಸರ್ಜನರೆ...........
    ನಿಮ್ಮ ಕವನ ನಿಮ್ಮಂತೆ ಇದೆ. ನಿಮ್ಮ ಬಗ್ಗೆ ಹೇಳಲು ನನ್ನಲ್ಲಿ ಏನು ಇಲ್ಲ, ಇರುವುದೆಲ್ಲಾ ಮನದೊಳಗೆ ಮಂಜುಗಡ್ಡೆಯಾಗಿ ಕುಳಿತಿದೆ. ಆಗೊಮ್ಮೆ ಈಗೊಮ್ಮೆ ಕರಗಿ ಕಣ್ಣೀರ ಹನಿಯಾಗಿ ಬರುತ್ತದೆ ನಿಮ್ಮ ಸ್ನೇಹ ಪಡೆದ ಸಾರ್ಥಕತೆಯಾಗಿ ಹರಿಯುತ್ತದೆ ಭಾವಗಳ ರೂಪದಲ್ಲಿ.........
    ಧನ್ಯನಾದೆ ಪ್ರಭುವೇ,,,,,

    ReplyDelete
  30. ತಮ್ಮ ಬದುಕಿನ ಆಶೋತ್ತರವನ್ನ ಚೆನ್ನಾಗಿ ಭಾವಪೂರ್ಣ ಕವನದಲ್ಲಿ ಹೊರಹಾಕಿದ್ದಿರ...ಚೆಂದದ ಕವನ.

    ReplyDelete
  31. ಸಾರ್, ಹೃದಯ ತುಂಬಿದ ಭಾವ ಕವನದ ತುಂಬೆಲ್ಲ ಹರಿದು ಮನದಾಳದವರೆಗೂ ತಂಪ ಹರಿಸಿದೆ...

    ReplyDelete
  32. ಕೃಷ್ಣಮೂರ್ತಿಯವರೆ,
    ನಿಮ್ಮ ಕವನವನ್ನು ಓದಿ ನನ್ನ ಮನಸ್ಸಿನ ಮೇಲೂ ಸಹ ತಂಗಾಳಿ ಬೀಸಿದ ಅನುಭವವಾಯಿತು. ನಿಮ್ಮ ಸದಾಶಯದ, ಸ್ನೇಹದ ತಂಗಾಳಿ ಸದಾ ಬೀಸುತ್ತಲಿರಲಿ ಎಂದು ಆಶಿಸುತ್ತೇನೆ.

    ReplyDelete
  33. ಅಶೋಕ್ ಕವನ ನಿಮಗೆ ತುಂಬಾ ಹಿಡಿಸಿದೆ ಎಂದು ಕೇಳಿ ಸಂತಸವಾಯಿತು.ನಮ್ಮ ಸ್ನೇಹ ಹೀಗೇ ಮುಂದುವರಿಯಲಿ.ಧನ್ಯವಾದಗಳು.

    ReplyDelete
  34. ದಿನಕರ್ ಮೊಗೇರ;ನಿಮ್ಮ ಕತೆ ಓದಿದೆ.ತುಂಬಾ ಇಷ್ಟ ಆಯಿತು.ನನ್ನ ಕವಿತೆ ಓದಿ ಸಂತೋಷ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಕ್ಕೆ ಅನಂತ ಧನ್ಯವಾದಗಳು.

    ReplyDelete
  35. ಪ್ರವೀಣ್;ನಿಮ್ಮ ಬಗ್ಗೆ ಹೇಳುವುದಕ್ಕೆ ನನ್ನಲ್ಲಿ ಏನೂ ಉಳಿದಿಲ್ಲ.ನನ್ನ ಮನದಾಳದ ಮಾತುಗಳು ನಿಮಗೆ ತಿಳಿದಿದೆ.ನಿಮ್ಮಂತಹ ಸಹೃದಯ ಆಪ್ತರು ಭೇಟಿಯಾಗಿದ್ದು ನನ್ನ ಅದೃಷ್ಟವೇ ಸರಿ.ಧನ್ಯವಾದಗಳು.

    ReplyDelete
  36. ಸೀತಾರಾಂ ಸರ್;ನಿಮ್ಮೆಲ್ಲರ ಪ್ರೋತ್ಸಾಹ ನನಗೆ ಪ್ರಾಣವಾಯು ಇದ್ದಂತೆ.ಕವನವನ್ನುಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.

    ReplyDelete
  37. ನಾರಾಯಣ್ ಭಟ್ ಸರ್;ನಿಮ್ಮ ಬಗ್ಗೆ ಏನು ಹೇಳೋಣ?ನಿಮ್ಮ ಸ್ನೇಹಕ್ಕೆ ಸಾಟಿ ಇಲ್ಲ.ನಿಮ್ಮ ಆತ್ಮೀಯತೆಯ ನೆನಪೇ ಬಾಳಿಗೆ ತಂಪನ್ನೀಯುತ್ತದೆ.ನಮಸ್ಕಾರ.

    ReplyDelete
  38. ಸುನಾಥ್ ಸರ್;ಕವನ ಓದಿ ತಂಗಾಳಿ ಬೀಸಿದ ಅನುಭವವಾಯಿತು ಎಂದಿದ್ದೀರಿ.ತಮ್ಮಂತಹ ಹಿರಿಯರ ಆಶೀರ್ವಾದ ನಮ್ಮೆಲ್ಲರಿಗೆ ಸದಾ ಇರಲಿ ಎಂದು ಹಾರೈಸುತ್ತೇನೆ.ನಮಸ್ಕಾರ.

    ReplyDelete
  39. ತುಂಬಾ ಚೆನ್ನಾಗಿದೆ......:)

    ReplyDelete
  40. ರಾಜಿಯವರಿಗೆ;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  41. ಸದಾಶಯದ ನಿಮ್ಮ ಕವನ ಆದರ್ಶನೀಯವಾಗಿದೆ. ನಿಮ್ಮ೦ತೆಯೇ ಎಲ್ಲರೂ ನಿರಹ೦ಕಾರಿಗಳಾದರೆ ಎಷ್ಟು ಚೆನ್ನ! ಬೇಸಿಗೆಯಲ್ಲಿ ತ೦ಗಾಳಿ ಎಷ್ಟು ಅಲಭ್ಯವೋ ಹಾಗೇ ಆಗಿದೆ ನಮ್ಮ ಸುತ್ತಮುತ್ತ ನಿಗರ್ವಿಗಳನ್ನು ಹುಡುಕುವುದು. ತು೦ಬಾ ಚ೦ದದ ಕವನ ಬರೆದಿದ್ದೀರಿ ಸರ್. ಧನ್ಯವಾದಗಳು.

    ReplyDelete
  42. ತುಂಬಾ ಚೆನ್ನಾಗಿದೆ.. ಇಷ್ಟವಾಯಿತು....

    ReplyDelete
  43. ಪ್ರಭಾಮಣಿ ನಾಗರಾಜ್ ಅವರಿಗೆ ನಮನಗಳು.ನನ್ನ ಕವನದ ಆಶಯ ನನ್ನ ಆಶಯ ಕೂಡ ಹೌದು.ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂದು ಕಾದು ನೋಡಬೇಕು.ನಾನೇ ವಿದ್ಯಾರ್ಥಿ,ನಾನೇ ನನ್ನ ಪರೀಕ್ಷಕ!It is a bit strange!ಧನ್ಯವಾದಗಳು ಮೇಡಂ.

    ReplyDelete
  44. ಪ್ರಗತಿ ಹೆಗಡೆಯವರಿಗೆ ;ನಮನಗಳು.ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ.

    ReplyDelete
  45. Appa,
    Thumba chennagidhe. Ee kavana oodi illi US alli kannadada thangali bisidanthe aaythu.
    Love,
    Deepu

    ReplyDelete
  46. ದೀಪಕ್;ನಿನ್ನ ಕಾಮೆಂಟ್ಸ್ ಓದಿ ತುಂಬಾ ಖುಷಿ ಆಯಿತು.ಥ್ಯಾಂಕ್ಸ್ ಕಂದಾ.

    ReplyDelete
  47. ಸರ್
    ನಿಮ್ಮ ಕವಿತೆ ಮುದ್ದು ಮುದ್ದಾದ ಪ್ರೇಮಿಯ ಪತ್ರದಂತೆ ಇದೆ
    ಓದಿ ತುಂಭಾ ಖುಷಿ ಆಯ್ತು ಧನ್ಯವಾದಗಳು..!!

    ReplyDelete
  48. ಡಾಕ್ಟರ್ ಸಾಹೇಬರೆ ನಿಮ್ಮ ಬ್ಲಾಗಿಗೆ ಮೊದಲಸಲ ಬಂದಿರುವೆ. ನಿಮ್ಮ ತಂಗಾಳಿ ಕವನ ಹಿಡಿಸ್ತು ಹಾಗೆಯೇ ಇಂದೇ ತಮ್ಮ ಮುಖತಃ ಭೇಟಿಯೂ ಆಗಿತ್ತು. ಡಬಲ ಖುಷಿ...! ಸಮಯವಿದ್ದಾಗ usdesai.blogspot.comಗು ಬರ್ರಿ

    ReplyDelete
  49. ಕನಸು ಮೇಡಂ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  50. ವಸಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  51. ಉಮೇಶ್ ಸರ್;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಶಾಯರಿಗಳು ತುಂಬಾ ಸೊಗಸಾಗಿವೆ.

    ReplyDelete

Note: Only a member of this blog may post a comment.