Thursday, September 15, 2011

"ಟ್ರೀಟ್ ಮೆಂಟ್ ಚೆನ್ನಾಗಿದೆ "

೧)ಮುಲ್ಲಾ ನಸೀರುದ್ದೀನನಿಗೆ ಎಲ್ಲಾ ವಿಷಯಕ್ಕೂ ವಿಪರೀತ ಭಯವಾಗುತ್ತಿತ್ತು .ಅವನ ಸ್ನೇಹಿತ ಅವನನ್ನು ಮನೋವೈದ್ಯರೊಬ್ಬರ ಬಳಿಗೆ ಕಳಿಸಿದ.ಕೆಲ ತಿಂಗಳುಗಳ ಬಳಿಕ ಸ್ನೇಹಿತ ಮುಲ್ಲಾನನ್ನು ಭೇಟಿಯಾದಾಗ ಕೇಳಿದ "ಈಗ ಹೇಗಿದ್ದೀಯ ಮುಲ್ಲಾ?".ಅದಕ್ಕೆ ಮುಲ್ಲಾ ಹೇಳಿದ  "ಮೊದಲೆಲ್ಲಾ  ಟೆಲಿಫೋನ್ ರಿಂಗ್ ಆದರೆ ಟೆಲಿಫೋನ್ ಎತ್ತಲು ಹೆದರುತ್ತಿದ್ದೆ "ಎಂದ.ಸ್ನೇಹಿತ ಕೇಳಿದ"ಈಗ?".ಅದಕ್ಕೆಮುಲ್ಲಾ ಉತ್ತರಿಸಿದ "ಈಗ ತುಂಬಾ improve ಆಗಿದ್ದೀನಿ.ಟೆಲಿ ಫೋನ್ ರಿಂಗ್ ಆಗದಿದ್ದರೂ ಅದರಲ್ಲಿ ಮಾತನಾಡುತ್ತೇನೆ ! ". .........ಚಿಕಿತ್ಸೆಯ ಫಲ !

೨)ನಮ್ಮ ದಿನ ನಿತ್ಯದ ವ್ಯವಹಾರಗಳು ಹೇಗಿರುತ್ತವೆ ನೋಡಿ;

ಕಮಲಮ್ಮ(ಸಿಟ್ಟಿನಿಂದ );"ಏನ್ರೀ ರಾಧಮ್ಮ .......!ನನಗೆ ಶಾಂತಮ್ಮ ಹೇಳಿದರು.....,ನಾನು ಅವರಿಗೆ ಹೇಳಬೇಡಿ ಎಂದು ನಿಮಗೆ ಹೇಳಿದ ವಿಷಯವನ್ನು ನೀವು ಅವರಿಗೆ ಹೇಳಿ ಬಿಟ್ಟಿರಂತೆ!ಹೌದೇ!!"
ರಾಧಮ್ಮ ;"ಛೆ !ಛೆ!ಎಂತಹ ಕೆಟ್ಟ ಹೆಂಗಸೂ ರೀ ಆ ಶಾಂತಮ್ಮ!ನಾನು ನೀವು ಹೇಳಿದಿರಿ ಅಂತ ಅವಳಿಗೆ  ಹೇಳಿದ ವಿಷಯವನ್ನುನಿಮಗೆ ಹೇಳಬೇಡಿ ಎಂದು ಹೇಳಿದ್ದೆ!"
ಕಮಲಮ್ಮ;"ಆಯಿತು ಬಿಡಿ....,ಅವಳು ಈ ವಿಷಯ ನನಗೆ ಹೇಳಿದಳು ಅಂತನಾನು ನಿಮಗೆ ಹೇಳಿದೆ ಅಂತ ಅವಳಿಗೆ ಹೇಳಬೇಡಿ....ಆಯ್ತಾ!!"............(.ದೇವರೇ ಗತಿ!!!)
(ಇದು ಓಶೋ ರವರ yoga-the science of living ಪುಸ್ತಕದಿಂದ ಆಯ್ದುಕೊಂಡಿದ್ದು .ಅಭಿಪ್ರಾಯ ತಿಳಿಸಿ.)

12 comments:

  1. ಎರಡನೆಯದು ನಮ್ಮ ಕೆಲಸಗಳೂ ಹೌದು :) ಒಳ್ಳೆ ಮಾತುಗಳು ..

    ReplyDelete
  2. ಈಶ್ವರ್ ಭಟ್ ;ಧನ್ಯವಾದಗಳು.our mind is a mess,full of such trash!

    ReplyDelete
  3. 1. ಈ ಪುಟ್ಟ ಕಥೆಯನ್ನು ಬಳಸಿಕೊಂಡು ತೆನಾಲಿ ಅಂತ ಒಂದು ಸಕ್ಕತ್ ಕಾಮಿಡಿ ಸಿನಿಮಾ ಮಾಡಿದ್ದಾರೆ.
    2. ಓಶೋ ಅತ್ಯಂತ ಉತ್ಕೃಷ್ಟ ಬೋಧನೆಗಳನ್ನು ದಾಖಲಿಸಿದ್ದಾರೆ. ಅವರ ಧ್ವನಿಯ ಏರಿಳಿತ, ವಾಕ್ಪುಟತ್ವ ಮನಸಿಗೆ ನಾಟುವಂತೆ ಇರುತ್ತವೆ.

    ನಿಮ್ಮ ಟ್ರೀಟ್ಮೆಂಟ್ ಯಶಸ್ವಿಯಾಯಿತು.

    ReplyDelete
  4. ಬದರಿ;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಹಾ ಹಾ...ಚೆನಾಗಿದೆ..ಬರೆಯುತ್ತಿರಿ.. ಓಶೋ ಅವರ ಪ್ರತಿ ಕಥೆಗಳೂ ನೀತಿಯ ಪಾಕ..
    ಧನ್ಯವಾದ ಉತ್ತಮವಾದ ಲೇಖನಕ್ಕಾಗಿ..

    ನಮ್ಮ ಮನೆಗೆ ಬಂದಿದ್ದಕ್ಕೆ ಸಂತೋಷ ಆಯ್ತು..

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  6. Hahaha.....hengasaralli guttu guttagi uliyalvante..!!

    ReplyDelete
  7. ಚಿನ್ಮಯ್;ನೀವು ಹೇಳುವುದು ಸರಿ.ಓಶೋ ಅವರ ವಿಚಾರಗಳು ಸಾಗರದಷ್ಟು ಆಳ.ಸಾಧ್ಯವಾದಾಗಲೆಲ್ಲ ಬ್ಲಾಗಿಸುತ್ತೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಮೌನ ರಾಗ ಮೇಡಂ;ಗುಟ್ಟು ಹೆಂಗಸರಲ್ಲಿ ಮಾತ್ರವಲ್ಲಾ.ಗಂಡಸರಲ್ಲೂ ಇದೇ ಹಣೆ ಬರಹ.ಪ್ರತಿಕ್ರಿಯೆಗೆಧನ್ಯವಾದಗಳು.

    ReplyDelete
  9. ಡಾಕ್ಟ್ರೇ,
    ನಾವು ಬದುಕಿನಲ್ಲಿ ಮೈಮರೆತಾಗ ಓಶೋ ಪುಸ್ತಕದಿಂದ ಆರಿಸಿತಂದ ಇಂಥ ನೀತಿಗಳು ನಮಗೆ ಬೇಕು..

    ReplyDelete
  10. ಶಿವು ಸರ್;ನನ್ನ ಬ್ಲಾಗಿನಲ್ಲಿ ಇಂತಹ ಆಯ್ದ ನೀತಿ ಕಥೆಗಳು ಅಥವಾ ಘಟನೆಗಳನ್ನು ಖಂಡಿತಾ ಹಾಕುತ್ತೇನೆ.ಧನ್ಯವಾದಗಳು.

    ReplyDelete
  11. ಮಹೇಶ್ ಸರ್;ಥ್ಯಾಂಕ್ಯೂ !

    ReplyDelete

Note: Only a member of this blog may post a comment.