Monday, August 23, 2010

' ಖುಷಿಯ -ಕ್ಷಣಗಳು !!'




ಎಲ್ಲರ ಹಲ್ಲುಗಳೂ ಹೇಗೆ ಮಿಂಚುತ್ತಿವೆ ನೋಡಿ!.........ಫಳ...ಫಳ ...ಅಂತಾ ! ಯಾವುದೋ ....ಟೂತ್ ಪೇಸ್ಟಿಗೆ advertisement ಕೊಟ್ಟ ಹಾಗೆ!!! ಎಲ್ಲರಿಗೂ ಏನೋ ಖುಷಿ !!ಏನೋ ಆನಂದ !! ಅದನ್ನು ಬಣ್ಣಿಸೋದು ಹೇಗೆ?
ಏನೂ ನಿರೀಕ್ಷಣೆ  ಇಟ್ಟುಕೊಳ್ಳದೆ,ಎಲ್ಲರ ಸಂತೋಷವನ್ನು ತಾನೂ ಅನುಭವಿಸಿದಾಗ ಸಿಗುವ ಸಂತೋಷವೇ 
ನಿಜವಾದ ಸಂತೋಷ ಅಂತ ಅನಿಸುತ್ತದೆ.ಈ ಸಂತೋಷ ನಿನ್ನೆ 'ನಯನ'ಸಭಾಂಗಣದಲ್ಲಿ  ಶಿವೂ ಮತ್ತು ಆಜಾದ್ ರವರ 
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಮ್ಮೆಲ್ಲರ ಅನುಭವ.ಈ ಕಾರ್ಯ ಕ್ರಮವನ್ನು ಸೊಗಸಾಗಿ ನಡೆಸಿಕೊಟ್ಟು ,ನಮ್ಮೆಲ್ಲರ 
ಸಂತೋಷಕ್ಕೆ ಕಾರಣರಾದ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು.

31 comments:

  1. ಕಾರ್ಯಕ್ರಮ ಬಹಳ ಅದ್ಬುತವಾಗಿ ಸಂಪನ್ನಗೊಂಡಿತು, ಬಹಳ ಖುಷಿ ತಂದಿತು. ಸಮಾನ ಶೀಲೇಶು ವ್ಯಸನೇಶು ಸಖ್ಯಂ ಎಂಬುದು ಸಂಸ್ಕೃತ ಗಾದೆ, ಅದರಂತೆ ನಾವೆಲ್ಲಾ ಸಮಾನ ಮನಸ್ಕರು ಸೇರಿದೆವು, ಪುಸ್ತಕ ಬಿಡುಗಡೆಯ ಅಂಚಂಚಿನಲ್ಲೇ ನಮ್ಮ ಬ್ಲಾಗ್ ಮಿತ್ರರೆಲ್ಲರ ಸ್ನೇಹವನ್ನೂ ಹೊಂಚಿದ್ದೆವು! ಅದು ಸಾಧ್ಯವಾಯಿತು. ನಿಮ್ಮೆಲ್ಲರ ಜೊತೆಗೆ ಕಳೆದ ಕ್ಷಣಗಳು ಮನದ ಪಟಲದಲ್ಲಿ ಹಸಿಗೋಡೆಗೆ ಒತ್ತಿದ ಹರಳುಗಳಾದವು, ಮತ್ತೂ ಇರಲಿ ಇನ್ನೂ ಇರಲಿ ಎಂದುಕೊಳ್ಳುತ್ತಿರುವಂತೆಯೇ ಹೊರಟು ನಮ್ನಮ್ಮ ಜಾಗ ಸೇರುವ ಅನಿವಾರ್ಯತೆ ಇತ್ತು, ಆ ಅವಸರದಲ್ಲಿ ಮತ್ತೆ ಹಾಗೆ ಹೊರಬಂದೆವು. ಮತ್ತೆ ಒಂದಷ್ಟು ಖುಷಿ ಪಡೆಯಬೇಕೆನ್ನುವ ಆ ತಹತಹ ಮತ್ತೊಂದು ಕಾರಯಕ್ರಮ ಎಂದಾಗುವುದೋ ಎಂಬ ನಿರೀಕ್ಷಣೆಗೆ ತೊಡಗಿದೆ, ನಿಮಗೆ ಸಲಾಂ, ಫಿರ್ ಮಿಲೇಂಗೇ ಹಮ್ , ಜೈ ಹೋ ! Thank you Sir.

    ReplyDelete
  2. ಫೋಟೋ ನೋಡಿ ಖುಶಿ ಅನುಭವಿಸಿದೆ!

    ReplyDelete
  3. ಖುಷಿಯ ಕ್ಷಣ ಗಳನ್ನು ಹಾಗೆ ಹಿಡಿದಿಟ್ಟು ಬ್ಲಾಗಲ್ಲಿ ಹಾಕಿ ಹ೦ಚಿಕೊ೦ಡಿದೀರಿ. ಹೌದು, ನೀವು ಹೇಳಿದ್ದು ನಿಜ. ನನಗೂ ಅದೇ ಅನುಭವ ಆಯ್ತು.

    ReplyDelete
  4. ಹೌದು ಸರ್, ಅದೊಂದು ಅವಿಸ್ಮರಣೀಯ ಸಮಯ..... :-)

    ReplyDelete
  5. ಸರ್ ನಿಮ್ಮ ಹಾಡುಗಳು ಸೂಪರ್. . .
    ಪುಸ್ತಕ ಬಿಡುಗಡೆ ಕಾರ್ಯಕ್ರಮ ಸುಂದರವಾಗಿತ್ತು.
    ಬ್ಲಾಗ್ ಭಾಂದವರಿಗೆ 22-08-2010 ಮರೆಯಲಾಗದ ದಿನವೇ ಸರಿ.
    ಎಲ್ಲರೂ ತಮ್ಮ ತಮ್ಮ ಗಿಫ್ಟ್ ಗಳನ್ನೂ ಎಂಜಾಯ್ ಮಾಡಿದರು ಅಲ್ವಾ ಸರ್?
    ನಿಮ್ಮ ಉತ್ಸಾಹಕ್ಕೆ ನನ್ನದೊಂದು ಸಲಾಂ

    ReplyDelete
  6. ಭಟ್ ಸರ್;ನೀವು ಹೇಳಿದ ಹಾಗೆ ಮತ್ತೆ ಸೇರೋಣ.ಇಂತಹ ಇನ್ನಷ್ಟು,ಮತ್ತಷ್ಟು ಅವಿಸ್ಮರಣೀಯ ಅನುಭವಗಳು ನಮ್ಮದಾಗಲಿ ಎನ್ನುವ ಹಾರೈಕೆ.ಧನ್ಯವಾದಗಳು ಸರ್.

    ReplyDelete
  7. ಸುನಾಥ್ ಸರ್;we really missed you.ಮುಂದಿನ ಸಲ ಖಂಡಿತಾ ಬನ್ನಿ.

    ReplyDelete
  8. ಪರಾಂಜಪೆ ಸರ್;ನಮ್ಮೆಲ್ಲರ ನೆಚ್ಚಿನ,ಮೆಚ್ಚಿನ ಪ್ರಕಾಶಣ್ಣನ ಬಗ್ಗೆ ನೀವು ಬರೆಯುತ್ತಿರುವ ಕವನ ನಿಮ್ಮ ಬ್ಲಾಗಿನಲ್ಲಿ ಬೇಗ ಕಾಣಿಸಿಕೊಳ್ಳಲಿ.

    ReplyDelete
  9. ಪ್ರಗತಿ ಮೇಡಂ;ನಿಮ್ಮನ್ನೆಲ್ಲಾ ನೋಡಿ ,ಮಾತನಾಡಿಸಿ ,ತುಂಬಾ ಖುಷಿ ಪಟ್ಟಿದ್ದೇನೆ. ನಿಜಕ್ಕೂ ಇದೊಂದು ಅವಿಸ್ಮರಣೀಯ ಅನುಭವ.ನಮ್ಮ ಪ್ರಕಾಶಣ್ಣನಂತಹವರ ಸಾರಥ್ಯದಲ್ಲಿ ಮತ್ತೆ ಸೇರೋಣ.ನಮಸ್ಕಾರ.

    ReplyDelete
  10. ನಾಗರಾಜ್;ಪ್ರಕಾಶ್ ಅವರ ನೇತೃತ್ವದಲ್ಲಿ ನೀವೆಲ್ಲಾ ತುಂಬಾ ಕಷ್ಟಪಟ್ಟಿದ್ದೀರ.ನಿಮಗೆಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು.

    ReplyDelete
  11. ಆಝಾದ್ ಅವರಿಗೆ ಹಾಗೂ ಶಿವು ಅವರಿಗೆ ಹಾರ್ದಿಕ ಅಭಿನಂದನೆಗಳು...:) ಬಂದವರ ಒಂದು ಝಲಕ್ ತೋರಿದ ನಿಮಗೂ ಕೂಡ..:)

    ReplyDelete
  12. ತೇಜಸ್ವಿನಿ ಮೇಡಂ;ನೀವೆಲ್ಲ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.ಮುಂದಿನ ಬ್ಲಾಗಿಗರ ಕೂಟದಲ್ಲಿ ಎಲ್ಲರೂ ಸೇರೋಣ.ಧನ್ಯವಾದಗಳು.

    ReplyDelete
  13. ವನಿತ ಮೇಡಂ;ಬ್ಲಾಗಿಗಗರ ಕೂಟದಲ್ಲಿ ಸ್ನೇಹ ಹೀಗೇ ತುಂಬಿ ಹರಿಯಲಿ.ಇದಕ್ಕೆಲ್ಲಾ ಕಾರಣರಾದ ಪ್ರಕಾಶಣ್ಣ ಮತ್ತು ಬಳಗಕ್ಕೆ ನಮ್ಮೆಲ್ಲರ ಧನ್ಯವಾದಗಳು ಸಲ್ಲಬೇಕು.ನಮಸ್ಕಾರ.

    ReplyDelete
  14. ಡಾ. ಟಿಡಿಕೆ..ವಾವ್..ನನಗೆ ಪುಸ್ತಕ ಬಿಡುಗಡೆಕೊಟ್ಟ ಆನಂದಕ್ಕಿಂತ ನಿಮ್ಮ ಆತ್ಮೀಯತೆ ಆ ಸಖ್ಯತೆ ಆ ಆಪ್ಯಾಯತೆ ಅಭಿಮಾನದ ಮಹಾಪೂರ, ಆ ನಿಕಟತೆ, ಆ ನಿಷ್ಕಲ್ಮಶ ಪ್ರೇಮ, ಆ ತನ್ನತನದ ನಿಕಟತೆ, ಎಲ್ಲಾ ನನ್ನ ರಾತ್ರಿಯ ಕನಸನ್ನು ಅಲಂಕರಿಸಿದ್ದು....ಈಗಲೂ ಆ ಅನುಭವವಾಗುತಿದೆ...ಖಂಡಿತಾ ಇನ್ನೊಂದು ಇಂತಹ ಅವಕಾಶ ಬಂದದೇ ಆದರೆ..ನಾನು ಕುವೈತ್ ನಿಂದ ಇದಕ್ಕಾಗಿಯೇ ಬರಲೂ ಸಿದ್ಧ. ಧನ್ಯವಾದ ನಮ್ಮ ಮೇಲಿನ ಆತ್ಮೀಯತೆಗೆ.

    ReplyDelete
  15. ಬರಲಾಗದ ನಮಗೂ ಸ೦ತಸ ಹ೦ಚಿದ ಡಾ. ಸರ್ ಗೆ ಧನ್ಯವಾದಗಳು. ಫೋಟೊ ನೋಡಿ ಸ೦ಭ್ರಮ ಪಡುವ ಸರದಿ ಈಗ ನಮ್ಮದು. ಜೊತೆಯಲ್ಲಿ ಹೆಸರೂ ದಾಖಲಿಸಿದ್ದರೆ ಹೆಚ್ಚು ಪರಿಚಯವಾಗುತ್ತಿತ್ತು..!

    ReplyDelete
  16. ಅಜಾದ್ ಸರ್;ನಿಮ್ಮೆಲ್ಲರ ಸ್ನೇಹಕ್ಕೆ ,ಪ್ರೀತಿಗೆ,ಆತ್ಮೀಯತೆಗೆ ಧನ್ಯವಾದಗಳು.ಮತ್ತೆ ಸೇರೋಣ.ನಮಸ್ಕಾರ.

    ReplyDelete
  17. ಶಿವಶಂಕರ್;ನಮಸ್ಕಾರ.ಹಾಡು ನಿಮಗೆಲ್ಲಾ ಇಷ್ಟವಾಗಿದ್ದು ಸಂತೋಷ.ಮುಂದಿನ ಸಲ ಹೆಚ್ಚಿನ ತಯಾರಿಯೊಂದಿಗೆ ಬರುತ್ತೇನೆ.ಧನ್ಯವಾದಗಳು.

    ReplyDelete
  18. ಅನಂತ್ ಸರ್ ನೀವೂ ಬಂದಿದ್ದರೆ ಚೆನ್ನಾಗಿರುತ್ತಿತ್ತು.ಮುಂದಿನ ಸಾರಿ ಎಲ್ಲ ಸೇರೋಣ.ಪ್ರಕಾಶ್ ಅವರ ಬ್ಲಾಗಿನಲ್ಲಿ ಹೆಸರು ಸಹಿತ ಫೋಟೋಗಳಿವೆ.ಧನ್ಯವಾದಗಳು.

    ReplyDelete
  19. ಸರ್

    ನನಗೆ ಬರಲಾಗಲಿಲ್ಲ ಎಂಬ ನೋವು

    ಬ್ಲಾಗ್ ಕುಟುಂಬದ ಪ್ರೀತಿ ಎಷ್ಟು ದೊಡ್ಡದು ಅಲ್ವಾ

    ReplyDelete
  20. ಡಾಕ್ಟ್ರೇ,

    ನಾನಿನ್ನು ಭಾನುವಾರದ ಅವಿಸ್ಮರಣೀಯ ಆನಂದದಿಂದ ಹೊರಬರಲಾಗಿಲ್ಲ. ಕಾರ್ಯಕ್ರಮ ಇಷ್ಟು ಹೃದಯಪೂರ್ವಕವಾಗಿರುತ್ತದೆ ಅಂತ ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಬಗ್ಗೆ ನಮ್ಮ ಹುಡುಗರು ಹೇಳಿದ್ದರು. ನಿಮ್ಮ ಜೊತೆ ಮಾತಾಡಿದಾಗ ನನಗಾದ ಆನಂದ ಹೇಳತೀರದು. ಒಟ್ಟಾರೆ ನಿಮ್ಮನ್ನು ಬೇಟಿಯಾಗಿದ್ದು ನನಗಂತೂ ತುಂಬಾ ಆಯಿತು.

    ReplyDelete
  21. Yes sir its nice moments. i am very happy that am also being with You.

    ReplyDelete
  22. Yes sir.. unforgettable happiest moment of ours :)

    ReplyDelete
  23. ತುಂಬಾ ಆತ್ಮೀಯ ಕ್ಷಣಗಳು ಡಾಕ್ಟ್ರೆ ಅದು... ಸದಾ ಹಸಿರಾಗಿರುವ ನೆನಪು ಹೊತ್ತು ತಂದೆವು... ಈಗ ಮೆಲುಕುತ್ತಿದ್ದೇವೆ... ಜೀವನವೀಡಿ ಮೆಲುಕುತ್ತಿರುತ್ತೇವೆ...ಅಲ್ಲವೇ!

    ReplyDelete
  24. Murthy Sir,

    ayyo naan hodmele poto tegedbittiddira...naane illa photodalli.....really elrunu bheti maadi tumbaa tumbaa santosha aitu....ee namma bandha heege munduvariyali...

    ReplyDelete
  25. ಶಿವೂ;ನಿಮ್ಮ ಪುಸ್ತಕ ಬಿಡುಗಡೆಯಾದರೂ ಅದರ ಗುಂಗಿಂದ ನಾವು ಇನ್ನೂ ಬಿಡುಗಡೆ ಹೊಂದಿಲ್ಲಾ.ಇದು ನಮ್ಮೆಲ್ಲರ ಮನೆಯ ಹಬ್ಬದಂತೆ ನಡೆದು ಹೋಯಿತು.ಇಷ್ಟು ಸ್ನೇಹಮಯ ವಾತಾವರಣವನ್ನು ಮೊದಲೆಲ್ಲೂ ನೋಡಿರಲಿಲ್ಲ.ನಿಮ್ಮ ತುಂತುರು ಪ್ರಕಾಶನದ ಸ್ನೇಹ ಸಿಂಚನ ಹೀಗೇ ಮುಂದುವರೆಯಲಿ.ಧನ್ಯವಾದಗಳು.

    ReplyDelete
  26. ವೆಂಕಟೇಶ್ ಹೆಗ್ಡೆಯವರಿಗೆ;ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಸ್ನೇಹ ಕೂಟದ ಸವಿ ಸೊಗಸಾಗಿತ್ತು.ಧನ್ಯವಾದಗಳು.

    ReplyDelete
  27. ಶಿವ ಪ್ರಕಾಶ್;ಕಾರ್ಯಕ್ರಮದ ಯಶಸ್ಸಿಗೆ ನೀವೆಲ್ಲಾ ಕಷ್ಟಪಟ್ಟಿದ್ದೀರಿ.ಧನ್ಯವಾದಗಳು.

    ReplyDelete
  28. ಸೀತಾರಾಂ ಸರ್;ನಮ್ಮೆಲ್ಲರ ಸ್ನೇಹದ ನೆನಪು ಸದಾ ಹಸಿರಾಗಿರಲಿ.ಧನ್ಯವಾದಗಳು.

    ReplyDelete
  29. ಅಶೋಕ್ ಕೊಡ್ಲಾದಿಯವರೇ;ಗ್ರೂಪ್ ಫೋಟೋಗೆ ನೀವೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.ಧನ್ಯವಾದಗಳು.

    ReplyDelete

Note: Only a member of this blog may post a comment.