Saturday, March 26, 2011

"ದೇಹದ ಕರ್ಮ ಯೋಗಿಗಳು!"

ನಮ್ಮ ದೇಹದ ಹಲವಾರು ಅಂಗಗಳು ಯಾವುದೇ ಸದ್ದು ಗದ್ದಲವಿಲ್ಲದೇ,ನಮ್ಮ ಅರಿವಿಗೂ ಬರದಂತೆ ,ನಮಗೆ ಜೀವಮಾನವಿಡೀ ಸಹಾಯ ಮಾಡುತ್ತಾ ,ತಮ್ಮ ಪಾಡಿಗೆ ತಾವು ಕರ್ಮಯೋಗಿಗಳಂತೆ ಕೆಲಸ ಮಾಡುವುದನ್ನು ಕಂಡರೆ ಈ ಸೃಷ್ಟಿಯ ಅದ್ಭುತದ ಬಗ್ಗೆ ಅಚ್ಚರಿಯಾಗುತ್ತದೆ !ಇಂದಿನ ಪ್ರಜಾವಾಣಿಯಲ್ಲಿ ಬಂದ 'ನಿಮ್ಮ ಕಿಡ್ನಿಗಳನ್ನು ಕಾಪಾಡಿಕೊಳ್ಳಿ'ಎನ್ನುವ ಲೇಖನದಲ್ಲಿ ಬಂದ ಅಂಕಿ ಅಂಶಗಳು ಸ್ವಲ್ಪ ಆತಂಕ ಮೂಡಿಸಿತು.ಡಯಾಬಿಟಿಸ್ ಮತ್ತು ಅಧಿಕ ರಕ್ತದ ಒತ್ತಡವಿರುವ ರೋಗಿಗಳಲ್ಲಿ ಶೇ.25-40 ರಷ್ಟು ರೋಗಿಗಳು ತೀವ್ರ ಮೂತ್ರ ಪಿಂಡದ ಖಾಯಿಲೆಯಿಂದ(critical kidney disease) ನರಳುತ್ತಾರೆ ಎನ್ನಲಾಗಿದೆ.ಇವರಲ್ಲಿ ಹೆಚ್ಚಿನವರಿಗೆ ಡಯಾಲಿಸಿಸ್ ಅಥವಾ ಕಿಡ್ನಿ transplant ಬೇಕಾಗುತ್ತದೆ ಎನ್ನಲಾಗಿದೆ. ಈಗೀಗ ಬಿ.ಪಿ. ಮತ್ತು ಶುಗರ್ ಗಳು ಖಾಯಿಲೆಗಳೇ ಅಲ್ಲ ಎನ್ನುವಷ್ಟು ಸಾಮಾನ್ಯವಾಗಿದೆ.ಹೆಚ್ಚಿನ ಜನ ಹಿಂದೆ ವೈದ್ಯರು ಬರೆದು ಕೊಟ್ಟ ಮಾತ್ರೆಗಳನ್ನೇ ,ಮತ್ತೆ ಚೆಕ್ ಮಾಡಿಸಿಕೊಳ್ಳದೆ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿರುತ್ತಾರೆ. ಹೆಚ್ಚಿನ ಶುಗರ್ ರೋಗಿಗಳಿಗೆ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ಹಿಂಜರಿತ.ಮಾತ್ರೆಗಳು ಕೆಲಸ ಮಾಡದಿದ್ದರೂ (primary and secondary failure),insulin dependent ಆಗಿದ್ದರೂ,ಅದೇ   ಮಾತ್ರೆಗಳನ್ನು  ಹೆಚ್ಚಿನ ಪ್ರಮಾಣ ದಲ್ಲೋ ಅಥವಾ ಬೇರೆಯವರಿಗೆ ಬರೆದು ಕೊಟ್ಟ ಮಾತ್ರೆಗಳನ್ನೋ ತೆಗೆದುಕೊಳ್ಳುತ್ತಾರೆ.ವರ್ಷಾನುಗಟ್ಟಲೆ  ಮಾತ್ರೆಗಳನ್ನು ತೆಗೆದುಕೊಂಡರೂ ರಕ್ತದ ಶುಗರ್(P.P.B.S.) ಕಡಿಮೆ ಆಗದ ಪಕ್ಷದಲ್ಲಿ  ವೈದ್ಯರ ಸಲಹೆ ಪಡೆದು ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಇಂಜೆಕ್ಷನ್ ತೆಗೆದು ಕೊಂಡರೆ ಕಿಡ್ನಿ ಗೆ ಆಗುವ ಹಾನಿಯನ್ನು ತಡೆಯಬಹುದು. ಪ್ರತಿ ಸಲ ಮೂತ್ರದಲ್ಲಿ ಸಕ್ಕರೆಯನ್ನು ಪರೀಕ್ಷೆ ಮಾಡಿಸುವಾಗ ,ಮೂತ್ರದಲ್ಲಿ ಆಲ್ಬುಮಿನ್ (ಪ್ರೋಟೀನ್ )ಇದೆಯೇ ಎಂದು ಪರೀಕ್ಷೆ ಮಾಡಿಸಬೇಕು.ಮೂತ್ರದಲ್ಲಿ ಆಲ್ಬುಮಿನ್ ಕಂಡು ಬಂದರೆ ರಕ್ತದಲ್ಲಿ creatinin ಮತ್ತು urea ಹೆಚ್ಚಾಗಿದೆಯೇ ಎಂದು ನೋಡಬೇಕು.ಹೆಚ್ಚಿದ್ದ ಪಕ್ಷದಲ್ಲಿ ತಕ್ಷಣವೇ ಮೂತ್ರ ಪಿಂಡದ ತಜ್ಞರನ್ನು(NEPHROLOGIST) ಕಾಣ ಬೇಕು. ಅಧಿಕ ರಕ್ತದ ಒತ್ತಡವಿರುವವರು ರಕ್ತದ ಒತ್ತಡ ಕಡಿಮೆ ಆಗದಿದ್ದರೆ ತಾವು ತೆಗೆದುಕೊಳ್ಳುತ್ತಿರುವ ಮಾತ್ರೆಯ ಜೊತೆಗೆ ಬೇರೆ ಮಾತ್ರೆಗಳನ್ನೂ ತೆಗೆದು ಕೊಳ್ಳ ಬೇಕಾಗ ಬಹುದು. ಹೆಚ್ಚು ರಕ್ದ ಒತ್ತಡವಿದ್ದರೂ(ಉದಾ ;180\ 100 mm.hg) ತಮಗೇನೂ ತೊಂದರೆ ಇಲ್ಲವೆಂದು ಸುಮ್ಮನಿದ್ದರೆ ಮೂತ್ರ ಪಿಂಡದ ರಕ್ತ ನಾಳಗಳ ಒಳ ಪದರ( intimal layer) ಹಾಳಾಗುತ್ತದೆ. ತಕ್ಷಣವೇ ತಜ್ಞರನ್ನು ಕಾಣುವುದು ಒಳ್ಳೆಯದು.ಉಪ್ಪು ,ಉಪ್ಪಿನ ಕಾಯಿ ಮತ್ತು sodium ಅಂಶವಿರುವ ಆಹಾರಗಳನ್ನು ಕಡಿಮೆ ಮಾಡುವುದು ಒಳಿತು.ನೀರೇ ಕುಡಿಯದ ಕೆಲವರನ್ನು ನೋಡಿದ್ದೇನೆ.ಕಿಡ್ನಿ ಸರಿಯಾಗಿ ಕೆಲಸ ಮಾಡಲು ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು.ಆದ್ದರಿಂದ ಕಿಡ್ನಿಯ ಆರೋಗ್ಯದ ದೃಷ್ಟಿ ಯಿಂದ  ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಒಳಿತು.
 ಶುಗರ್ ಮತ್ತು ಬಿ.ಪಿ.ಇರುವವರು  ನೋವಿನ ಮಾತ್ರೆಗಳನ್ನು( analgesics) ಆದಷ್ಟು  ತೆಗೆದು ಕೊಳ್ಳದಿರುವುದು ಒಳ್ಳೆಯದು. ಏನೂ ಆಗುವುದಿಲ್ಲ ಎಂಬ ಭಂಡ ಧೈರ್ಯ ದಿಂದ ಔಷಧಿ ಅಂಗಡಿಯಿಂದ ನೋವಿನ ಮಾತ್ರೆಗಳನ್ನು ತಂದು ನುಂಗುವುದು ಕಿಡ್ನಿಗೆ ತೊಂದರೆ ಉಂಟು ಮಾಡಬಹುದು(nimusulide ಮತ್ತು diclofenac sodiam ನಂತಹ ಮಾತ್ರೆಗಳು)ಒಟ್ಟಿನಲ್ಲಿ ಶುಗರ್ ಮತ್ತು ಬಿ.ಪಿ.ಇರುವವರು ಕಿಡ್ನಿ ತೊಂದರೆ ಬರದಂತೆ ಎಚ್ಚರ ವಹಿಸುವುದು ಒಳ್ಳೆಯದು.ತೊಂದರೆ ಬಂದ ನಂತರ ಬರುವ ಕಷ್ಟ ನಷ್ಟಗಳನ್ನು ಮೊದಲೇ ತೆಗೆದುಕೊಳ್ಳುವ ಎಚ್ಚರಿಕೆ ಯಿಂದ ತಡೆಯ ಬಹುದಲ್ಲವೇ?

36 comments:

  1. ಉತ್ತಮ ಮಾರ್ಗದರ್ಶಕ ಲೇಖನ. ಧನ್ಯವಾದಗಳು ಸರ್.

    ReplyDelete
  2. ಮೇಡಂ;ಜನಗಳು ಸಾಮಾನ್ಯ ತಪ್ಪುಗಳನ್ನು ಮಾಡಿ ಬರಬಾರದ ಕಾಯಿಲೆಗಳನ್ನು ಬರಿಸಿಕೊಂಡು,ಪಡಬಾರದ ಕಷ್ಟಗಳನ್ನು ಪಡುತ್ತಿರುವುದನ್ನು ನೋಡಿ ಬೇಸರವಾಗುತ್ತದೆ.ಸ್ವಲ್ಪ ಎಚ್ಚರಿಕೆ ವಹಿಸಿದರೆ ಮುಂದೆ ಬರಬಹುದಾದ ತೊಂದರೆಗಳನ್ನು ತಡೆಯಬಹುದಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  3. ಸರ್, ತುಂಬಾ ಉಪಯುಕ್ತ ಮಾಹಿತಿ. ಅಧಿಕ ರಕ್ತದೊತ್ತಡದ ಪ್ರಾರಂಭಿಕ ಹಂತದಲ್ಲಿ ಅದನ್ನು ಆಹಾರ/ವ್ಯಾಯಾಮ/ಧ್ಯಾನದಿಂದ ಹಿಡಿತದಲ್ಲಿ ಇದಬಹುದೇ?

    ReplyDelete
  4. tumbaa tumbaa tumbaa upayukta maahiti.......
    nanna maavanige ide tondare ide....
    thanks for the details sir.......

    ReplyDelete
  5. Very informative. I just had a question, i sweat a lot and this is happening from my younger days. Is this a symptom of high BP? My family has big history of hypertension. My father had bleeding in his ears and nose. I am bit concerned. I am overweight too. So I am going for gym and aerobics to reduce my weight but I had a history of mind black out when i was just 25 years old due to heavy stress. Do you think i need to do something extra to prevent the worse which is heart attack.?

    ReplyDelete
  6. ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು.

    ReplyDelete
  7. ನಾರಾಯಣ್ ಭಟ್ ಸರ್;ವಯಸ್ಸಾದಂತೆ ನಮ್ಮ ದೇಹದ ರಕ್ತನಾಳಗಳು ಸ್ವಲ್ಪ
    ಪೆಡಸಾಗುವುದರಿಂದ ರಕ್ತದ ಒತ್ತಡ ಸ್ವಲ್ಪ ಮಟ್ಟಿಗೆ ಹೆಚ್ಚುವುದು ಸ್ವಾಭಾವಿಕ.ಅರವತ್ತು ವರ್ಷದಲ್ಲಿ ,ಇಪ್ಪತ್ತು ವರ್ಷದ ರಕ್ತದ ಒತ್ತಡ ಇರುವುದಿಲ್ಲ.ಸ್ವಲ್ಪ ಮಟ್ಟಿಗೆ ಹೆಚ್ಚು ಇರುತ್ತದೆ.ಆದರೆ ತೀರ ಹೆಚ್ಚಾಗದಂತೆ ನೋಡಿಕೊಳ್ಳಬೇಕು.ಪ್ರಾರಂಭಿಕ ಹಂತದಲ್ಲಿ ಯೋಗ,ಧ್ಯಾನ,ಪ್ರಾಣಾಯಾಮ,ಸರಿಯಾದ ಆಹಾರ ಖಂಡಿತಾ ಸಹಕಾರಿ.ಒಳ್ಳೆಯ ವೈದ್ಯರ ಸಲಹೆ ಅವಶ್ಯ.ಧನ್ಯವಾದಗಳು.

    ReplyDelete
  8. Bhaavana;Excessive sweating is known as Hyper hydrosis in medical terminology.It is due to over activity of sympathetic nervous system.It is a harmless condition and has nothing to do with high blood pressure or heart attack.the black out which you have mentioned is a common condition known as syncope-nothing serious.IF YOU ARE PHYSICALLY ACTIVE,moderate in your diet and stop worrying, you should live long enough to see your great grand children.heredity just shows the proneness of a particular disease.you may not get it at all.so you don't have to worry.regular praanaayaama and dhyaana in addition to your exercise may help.

    ReplyDelete
  9. ದಿನಕರ್;ನಾನು ಕೊಟ್ಟ ಮಾಹಿತಿಯಿಂದ ಯಾರಿಗಾದರೂ ಉಪಯೋಗವಾದರೆ ಬರೆದದ್ದು ಸಾರ್ಥಕವಾಗುತ್ತದೆ.ಅಲ್ಲವೇ? ನಿಮಗಿನ್ನೇನಾದರೂ ಮಾಹಿತಿ ಬೇಕಿದ್ದರೆ ತಿಳಿಸಿ.ಧನ್ಯವಾದಗಳು.

    ReplyDelete
  10. ಅಪ್ಪ ಅಮ್ಮ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಮುದ್ದು ಸಾನ್ವಿ ನಿಮ್ಮ ಬ್ಲಾಗ್ ನಿಂದ ನಮಗೂ ಕಣ್ಮಣಿ ಆಗಿದ್ದಾಳೆ.ಅವಳ ಹೋಳಿ ಹಬ್ಬದ ಫೋಟೋ ತುಂಬಾ ಚೆನ್ನಾಗಿದೆ.ನಮಸ್ಕಾರ.

    ReplyDelete
  11. ಉಪಯುಕ್ತ ಲೇಖನ.....
    ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  12. ಮಾಹಿತಿಪೂರ್ಣ ಲೇಖನ ಡಾಕ್ಟ್ರೆ.. ಧನ್ಯವಾದಗಳು .. ಹೀಗೆ ಮಾಹಿತಿ ಬರುತ್ತಿರಲಿ.

    ಇನ್ನೊಂದು ವಿಷಯ.

    ಕಿಡ್ನಿಯನ್ನು ಕರ್ಮ ಯೋಗಿಗೆ ಹೊಲಿಸಿದ್ದೀರ ..... ತುಂಬಾ ಅರ್ಥಪೂರ್ಣವಾಗಿದೆ.

    ReplyDelete
  13. ಸವಿಗನಸು ಮಹೇಶ್;ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬಜ್ ನಲ್ಲಿ ನಿಮ್ಮ ಫೋಟೋ ಚನ್ನಾಗಿ ಮೂಡಿಬಂದಿದೆ.

    ReplyDelete
  14. Deepak;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಹಾಗೆ ನೋಡಿದರೆ ದೇಹದ ಪ್ರತಿಯೊಂದು ಅಂಗವೂ ಕರ್ಮಯೋಗಿಯೇ!ಆದರೆ ಆ ಎಲ್ಲಾ ಅಂಗಗಳೂ ಒಟ್ಟಾಗಿ ಆಗಿರುವ ಮನುಷ್ಯ ಮಾತ್ರ ಕರ್ಮ ಯೋಗಿಯಾಗಿರುವುದು ಅಪರೂಪ!ವಿಚಿತ್ರವಲ್ಲವೇ?

    ReplyDelete
  15. ಉತ್ತಮ ವೈದ್ಯ ಮಾಹಿತಿಗಳನ್ನು ನೀಡುತ್ತಿರುವ ವೈದ್ಯಮಿತ್ರರಿಗೆ ನಮನಗಳು. ದೇಹದ ಕರ್ಮಯೋಗಿಗಳು ಎ೦ಬ ಶೀರ್ಷಿಕೆಯಡಿ ದೈನ೦ದಿನ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ತಿಳಿಸಿದ್ದೀರಿ. ವ೦ದನೆಗಳು ಸರ್.

    ಅನ೦ತ್

    ReplyDelete
  16. ಭಾವನ;ಧನ್ಯವಾದಗಳು.

    ReplyDelete
  17. ಅನಂತ್ ಸರ್;ದಿನ ನಿತ್ಯದ ವೈದ್ಯಕೀಯ ಜೀವನದಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳನ್ನು ಬ್ಲಾಗಿನಲ್ಲಿ ಬರೆದರೆ ಯಾರಿಗಾದರೂ ಉಪಯೋಗವಾಗಬಹುದು ಎನ್ನುವುದು ನನ್ನ ಉದ್ದಿಶ್ಯ.ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.

    ReplyDelete
  18. ಉಪಯುಕ್ತ ಮಾಹಿತಿ ಸರ್..
    ವ೦ದನೆಗಳು

    ReplyDelete
  19. ಚುಕ್ಕಿಚಿತ್ತಾರ ಮೇಡಂ;ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  20. ಉಪಯುಕ್ತ ಮಾಹಿತಿ ಗುರುಗಳೇ

    ReplyDelete
  21. ಆತ್ಮೀಯರೇ,
    ವೈದ್ಯರಾಗಿ ತಾವು ಆರೋಗ್ಯದ ಬಗೆಗೆ ತಿಳುವಳಿಕೆ ನೀಡುವ ಲೇಖನ ನೀಡುತ್ತಿರುವುದಕ್ಕೆ ಧನ್ಯವಾದಗಳು. ಇವತ್ತಿನ ತರಕಾರಿ, ಆಹಾರಧಾನ್ಯಗಳಲ್ಲಿ ರಾಸಾಯನಿಕಗಳು ಸೇರಿ ಎಲ್ಲವೂ ವಿಷಾವೃತವಾಗಿವೆ. ಏನು ತಿನ್ನುವುದು? ಏನು ತಿನ್ನಬಾರದು? ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಿದೆ.ನನ್ನ ಒಂದು ಸಮಸ್ಯೆಯನ್ನು ತಿಳಿಸಿ ಬಿಡುವೆ. ಅದರ ಉತ್ತರವು ಹಲವರಿಗೆ ಉಪಯೋಗವಾಗಲೂ ಬಹುದು.
    ನನಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ. ಬೆಳಿಗ್ಗೆ ಉಪಹಾರಕ್ಕೆ ದೋಸೆ, ಇಡ್ಳಿ, ಅವಲಕ್ಕಿ, ತಿನ್ನುವಂತಿಲ್ಲ. ಹೊಟ್ಟೆ ಉರಿ ಶುರುವಾಗುತ್ತೆ. ಬಿಸ್ಕತ್ ಬ್ರೆಡ್ ತಿನ್ನುವಂತೆಯೇ ಇಲ್ಲ ಬಿಡಿ. ಕೇವಲ ಅಕ್ಕಿತರಿ ಉಪ್ಪಿಟ್ಟು ಅಥವಾ ಮೃದುವಾದ ಒಂದು ಚಿಕ್ಕ ಅಕ್ಕಿರೊಟ್ಟಿ ಆಗಬಹುದು.ನನಗೀಗ ೫೭ ವರ್ಷ ವಯಸ್ಸು. ಸೌಮ್ಯ ರುಚಿಯ ಊಟ ತೊಂದರೆ ಇಲ್ಲ. ನನ್ನ ಆಹಾರದ ವಿಷಯದಲ್ಲಿ ನಿಮ್ಮ ಸಲಹೆ ಏನು? ನನಗೆ ಸಾಕಷ್ಟು ಹಸಿತರಕಾರಿ ತೆಗೆದುಕೊಳ್ಳುವ ಅಭ್ಯಾಸವಿದೆ.

    ReplyDelete
  22. ಡಾಕ್ಟ್ರೇ,

    ಇದಂತು ಉತ್ತಮ ಮಾಹಿತಿ...ಹದಿನೈದು ದಿನದ ಹಿಂದೆ ನಮ್ಮ ಓಣಿಯ ಮಹಡಿ ಮನೆಯ ಸುನೀತ ಎನ್ನುವವರಿಗೆ ಅಪಘಾತವಾಗಿ ಬಲಗೈ ಮುರಿದಿತ್ತು. ಅದಕ್ಕಾಗಿ ಚಿಕಿತ್ಸೆ ಮಾಡಿಕೊಂಡರೂ ನೋವು ನಿವಾರಣೆಗಾಗಿ ಡಾಕ್ಟ್ರರ್ ಮಾತ್ರೆಗಳನ್ನು ಕೊಡಲಿಲ್ಲ. ಕಾರಣವನ್ನು ಕೇಳಿದರೆ ನಿತ್ಯ ನೋವು ನಿವಾರಕ ಮಾತ್ರೆಗಳನ್ನು ನುಂಗಿದರೆ ಅದು ಕಿಡ್ನಿಗೆ ತೊಂದರೆಯಾಗುತ್ತದೆ ಎಂದರಂತೆ. ಆದ್ದರಿಂದ ಸುನೀತರವರು ಮೊದಲ ನಾಲ್ಕು ದಿನ ಆ ಭಯಂಕರ ನೋವನ್ನು ಸಹಿಸಿಕೊಂಡಿದ್ದಾರೆ. ಈಗ ಒಂದು ತಿಂಗಳಾಗಿದೆ. ನೋವು ಪೂರ್ಣ ಕಡಿಮೆಯಾಗಿದೆ. ಅವತ್ತು ತಾತ್ಕಾಲಿಕ ಪರಿಹಾರಕ್ಕಗಿ ಮಾತ್ರೆ ನುಂಗದೇ ಇದ್ದುದ್ದಕ್ಕೆ ಅವರಿಗೆ ನೆಮ್ಮದಿಯಿದೆ ಅವರಿಗೆ...
    ಮಾತ್ರೆ ವಿಚಾರವಾಗಿ ನೀವು ಬರೆದ ಈ ಮಾಹಿತಿಯಂತೂ ತುಂಬಾ ಉಪಯುಕ್ತವೆನಿಸಿದೆ..

    ReplyDelete
  23. doctor sir, good article.
    i have read many times that albunium test is must
    but my doctor has not insisted it so far. also i consult my doctor 3-5 times year but have regular check ups of urine, blood. i want to take test about proper functioning of kidneys. isnt it good?

    ReplyDelete
  24. ಸುಬ್ರಮಣ್ಯ;ಧನ್ಯವಾದಗಳು.

    ReplyDelete
  25. ಗಿರೀಶ್;ಧನ್ಯವಾದಗಳು.

    ReplyDelete
  26. ಪರಾಂಜಪೆ ಸರ್;ಅನಂತ ಧನ್ಯವಾದಗಳು.

    ReplyDelete
  27. ಹರಿಹರಪುರ ಶ್ರೀಧರ್;ನಿಮಗೆ ಸಕ್ಕರೆ ಖಾಯಿಲೆ ಇದೆಯೇ ,ಇಲ್ಲವೇ ಎನ್ನುವ ಮಾಹಿತಿಯನ್ನೂ ತಿಳಿಸಿಲ್ಲ.ನಿಮ್ಮ ಆಹಾರ ಸರಿಯಾಗಿದೆ.ನಿಮಗೆ ಒಗ್ಗುವ ಸೂಕ್ತ ಆಹಾರವನ್ನು ಮುಂದುವರಿಸಿ.ನಮಸ್ಕಾರ.

    ReplyDelete
  28. ಶಿವು;ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ಸಕ್ಕರೆ ಖಾಯಿಲೆ ಇಲ್ಲದವರು ಫ್ರ್ಯಾಕ್ಚರ್ ಅಂತಹ ತೀವ್ರ ನೋವುಗಳಲ್ಲಿ ನೋವಿನ ಮಾತ್ರೆಗಳನ್ನು ಸ್ವಲ್ಪ ಕಾಲದವರೆಗೆ ಉಪಯೋಗಿಸಿದರೆ ಯಾವ ತೊಂದರೆಯೂ ಇಲ್ಲ.ಸಕ್ಕರೆ ಖಾಯಿಲೆ ಇದ್ದವರು ಸ್ವಲ್ಪ ಎಚ್ಚರಿಕೆ ವಹಿಸಬೇಕು.ತಾವೇ ನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಒಳಿತಲ್ಲ.ನಮಸ್ಕಾರ.

    ReplyDelete
  29. ಉಮೇಶ್ ದೇಸಾಯ್ ಸರ್;ಶುಗರ್ ತೊಂದರೆ ಇರುವವರು ಪ್ರತಿ ಆರು ತಿಂಗಳಿಗೋ ಅಥವಾ ವರ್ಷಕ್ಕೆ ಒಮ್ಮೆಯಾದರೂ end organs functioning tests ಮಾಡಿಸಬೇಕಾಗುತ್ತದೆ.ಕಿಡ್ನಿ,ಹೃದಯ,ಕಣ್ಣು ,ರಕ್ತನಾಳಗಳ ಪರೀಕ್ಷೆ ಮಾಡಿಸ ಬೇಕಾಗುತ್ತದೆ.ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಂಡು ಆರೋಗ್ಯವಾಗಿ ನೂರ್ಕಾಲ ಬಾಳಿ.ನಮಸ್ಕಾರ.

    ReplyDelete
  30. ಬ್ಲಾಗಿಗೆ ಬರುವುದು ಅಪರೂಪವೆಂದು ತಾವು ಭಾವಿಸಿವುದು ಬೇಡ, ಆಗಾಗ ಬರುತ್ತಲೇ ಇರುತ್ತೇನೆ, ಆಗಾಗ ಪ್ರತಿಕ್ರಿಯಿಸುತ್ತೇನೆ, ತಾವು ಹೇಳಿದ ಹಾಗೇ || ಶರೀರಮಾದ್ಯಂ ಖಲು ಧರ್ಮ ಸಾಧನಂ || ಎಂಬ ಸಂಸ್ಕೃತದ ಮಾತು ನೆನಪಾಯ್ತು. ನಮ್ಮ ದೇಹದಲ್ಲೂ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಿವೆ! ಮನಸ್ಸೆಂಬ ಶಾಸಕಾಂಗಕ್ಕೆ ಅರೆಕ್ಷಣದ ಮರೆಯ ಆಮಿಷ /ಲಂಚ ಸಿಕ್ಕರೆ ಅದು ರಾಜಕಾರಣಿಗಳಾಡಿದ ರೀತಿಯೇ ಆಡುತ್ತದೆ. ಅದರ ಒತ್ತಡಕ್ಕೆ ಒಳಗಾಗುವ ಅಂತರಾತ್ಮವೆಂಬ ನ್ಯಾಯಾಂಗ ಸುಮ್ಮನೇ ಎಲ್ಲವನ್ನೂ ಕೂತು ನೋಡುತ್ತದೆ, ಸಹಿಸಿಕೊಳ್ಳುತ್ತದೆ, ಶಾಸಕಾಂಗ ವಿಧಿಸಿದ ಅಪ್ಪಣೆಯನ್ನು ಭೌತಿಕ ಶರೀರದ ಹೃದಯ, ಪುಪ್ಪುಸ, ಮೂತ್ರಕೋಶಾದಿ ಕಾರ್ಯಾಂಗಾಧೀನ ಅಂಗಗಳು ಶಿರಸಾವಹಿಸುತ್ತವೆ. ನೋವು ಕಡಿಮೆಮಾಡುವ ಔಷಧಗಳು ಮತ್ತು ಜ್ವರ ನೀಗಿಸುವ ಔಷಧಗಳು ತಕ್ಷಣದ ಪರಿಣಾಮವನ್ನು ಮನಸ್ಸಿಗೆ ಮನದಟ್ಟು ಮಾಡಿಕೊಟ್ಟು ಅದನ್ನು ದಾರಿತಪ್ಪಿಸುತ್ತವೆ. ಪಾನಮತ್ತ ವ್ಯಕ್ತಿಯಂತೇ ಆದ ಆ ಮನಸ್ಸು ಮತ್ತದನ್ನೇ ಬಯಸುತ್ತಾ ಮೊರೆಹೋಗುತ್ತಾ ಕಾರ್ಯಾಂಗದ ಮೇಲೆ ಕ್ರಮೇಣ ಅವು ಮಾಡುವ ದುಷ್ಪರಿಣಾಮವನ್ನು ಕಡೆಗಣಿಸುತ್ತದೆ-ಇದೇ ಇಂದಿನ ಜೀವನದ ವಿಪರ್ಯಾಸ. ಈ ವಿಷಯದಲ್ಲಿ ನೋವು ಹಾಗೂ ತಾಪಮಾನ ಸೇರಿದಂತೇ ಹಲವು ’ ಕ್ರಾನಿಕ್’ ಕಾಯಿಲೆಗಳಿಗೆ ಆಯುರ್ವೇದದಲ್ಲಿ ತ್ವರಿತಗತಿಯ ಉಪಶಮನ ನೀಡುವ ಔಷಧಗಳ ಆವಿಷ್ಕಾರವಗಿದೆ ಎನ್ನಲು ಹೆಮ್ಮೆ ಎನಿಸುತ್ತದೆ. ತಮಗೆ ಆಯುರ್ವೇದದ ಬಗ್ಗೆ ಸಾಕಷ್ಟು ತಿಳುವಳಿಕೆಯಿರುವುದರಿಂದಲೂ ಮತ್ತು ಯವುದೇ ದುಷ್ಪರಿಣಾಮವಿಲ್ಲದ ಆಯುರ್ವೇದ ಹಲವರಿಗೆ ನೆನಪಿಗೆ ಬರಲಿ ಎಂಬ ಅನಿಸಿಕೆಯಿಂದಲೂ ಇಲ್ಲಿ ಅದನ್ನು ಉಲ್ಲೇಖಿಸಿದ್ದೇನೆ. ತಮ್ಮ ಲೇಖನ ಸತ್ತಂತಿರುವವರನ್ನು ಈ ವಿಷಯದಲ್ಲಿ ಬಡಿದೆಬ್ಬಿಸುತ್ತದೆ. ಎಚ್ಚರಿಸುವ ನಿಮ್ಮ ಕಾರ್ಯಕ್ಕೂ ಮತ್ತು ಪ್ರಸ್ತುತಪಡಿಸುವ ವಿಷಯಗಳಲ್ಲಿ ತಾವು ತೋರುವ ಹೃದಯವಂತಿಕೆಗೂ ನನ್ನ ನಮಸ್ಕಾರಗಳು

    ReplyDelete
  31. ನಮಸ್ತೆ,
    ನನಗೆ ಶುಗರ್ ಇಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಇದೆ.

    ReplyDelete
  32. Murthy Sir,

    upakukta maahitigalannolagonda uttama lekhana,Dhanyavadagalu....

    ReplyDelete

Note: Only a member of this blog may post a comment.