Sunday, September 11, 2011

"ಮನುಷ್ಯರ .......ಮಾತು"

ಮಾತಿನ ಬಗ್ಗೆ ಎರಡು ಮಾತು.ಮಾತು ಮನುಷ್ಯನಿಗೆ ವರವೂ ಹೌದು,ಶಾಪವೂ ಹೌದು. ಹೇಳುವಂತಹ ಮಾತುಗಳನ್ನು ಹೇಳಬಹುದಾದಲ್ಲಿ ಹೇಳಿದರೆ ಅರ್ಥ.ಹೇಳಬಾರದಲ್ಲಿ ಹೇಳಿದರೆ ಅನರ್ಥ! ಹೇಳಬಾರದನ್ನು ಹೇಳಿ,ಎಡವಟ್ಟು ಮಾಡಿಕೊಂಡು 'ಅಯ್ಯೋ ನಾನು ಹೀಗೆ ಹೇಳಬಾರದಿತ್ತು ,ಹಾಗೆ ಹೇಳಬೇಕಾಗಿತ್ತು' ಎಂದು ಪರದಾಡುವರೇ ಹೆಚ್ಚು.ಕೆಲವರ ಮಾತು ಕೇಳುತ್ತಲೇ ಇರಬೇಕುಎನಿಸುತ್ತದೆ.ಕೆಲವರು ಮಾತು ಶುರು ಮಾಡಿದರೆ ಎದ್ದು ಓಡಿ ಹೊಗಬೇಕಿನಿಸುತ್ತದೆ.ಮಾತನಾಡುವುದೂ ಒಂದು ಕಲೆ.ಈ ಕಲೆಯನ್ನು ಸಿದ್ಧಿಸಿ ಕೊಂಡವರಲ್ಲಿ ನಮ್ಮ ಹಿರಿಯ ಕವಿ ಜಿ.ಪಿ.ರಾಜ ರತ್ನಂಕೂಡಒಬ್ಬರು. ಅವರ'ರತ್ನನಪದಗಳು'
ಪುಸ್ತಕದಲ್ಲಿ ಮಾತಿನ ಬಗ್ಗೆಯೇ ಒಂದುಕವನವಿದೆ.ಕವನದ ಹೆಸರು'ಮನ್ಸರ್ ಮಾತು'.ಕವನ ಓದಿ ನಿಮ್ಮ ಅಭಿಪ್ರಾಯ ತಿಳಿಸಿ;


'ಮನ್ಸರ್ ಮಾತು '

ಹೇಳಾದ್ ಏನ್ರ,ಹೇಳಾದ್  ಇದ್ರೆ
ಜಟ್ ಪಟ್ನ ಹೇಳಿ ಮುಗೀಸು .
ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ
ಆಮೇಕ್ ದೊಣ್ಣೆ ಬೀಸು.

ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ
ಕೇಳಾಕ್  ಬಲ್ ಪಜೀತಿ .
ಬೈರ್ಗೆ ಕೊರದಂಗ್ ಕೊರಿತಾನಿದ್ರೆ
ಯಾವ್ ದೇವರ್ಗೆ ಪ್ರೀತಿ ?

ಕುಂಬಾರ್ ಗೌಡನ್ ಚಕ್ರಕ್ಕೂನೆ
ಗಾಳ ನೋಡಿದ್ ಮೀನ್ಗೂ
ಸುತ್ಕೊಂಡ್ ಸುತ್ಕೊಂಡ್ ಹೋಗೋದ್ ಸಹಜ
ಅದ್ಯಾಕ್ ನನಗೂ  ನಿನಗೂ ?

ಕೇಳೋರ್  ಇನ್ನಾ  ಕೇಳಬೇಕಂತಾ
ಕುಂತ್ಕಂಡ್ ಇದ್ದಂಗೇನೇ
ಹೇಳೋದ್ನ ಎಷ್ಟೋ ಅಷ್ಟರಲ್ ಹೇಳಿ
ಮನೇಗೆ ಹೋಗೋನ್ಗೆ ಮೇನೆ!

ಮಾತ್ ಇರಬೇಕು ಮಿಂಚ್ ಹೊಳದಂಗೆ !
ಕೇಳ್ದೋರ್ 'ಹಾಂ 'ಅನಬೇಕು !
ಸೋನೆ ಹಿಡದ್ರೆ ಉಗದ್ ಅಂದಾರು
'ಮುಚ್ಕೊಂಡ್ ಹೋಗೋ ಸಾಕು'!

ಮನ್ಸನ್ ಮಾತು ಎಂಗಿರಬೇಕು ?
ಕವಣೆ ಗುರಿ ಇದ್ದಂಗೆ !
ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !

11 comments:

  1. ಮನಸು ಮೇಡಂ;ಪೋಸ್ಟ್ ಮಾಡುತ್ತಿದ್ದ ಹಾಗೆ ಕಾಮೆಂಟ್ ಬಂತು.ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  2. ಡಾಕ್ಟರೆ ಚೆಂದ ಉಂಟು
    http://www.komal1231.blogspot.com/

    ReplyDelete
  3. ಮತ್ತೆ "ಅವಳ ಕಳೆದು ಹೋದ ’ಮುತ್ತು’ ಹುಡುಕಿಕೊಟ್ಟಿರಿ ನನಗೆ"

    ತನ್ನ ಶೈಲಿಯಿಂದ ಮತ್ತು ಅದರ ಅನನ್ಯ ಹೂರಣದಿಂದ ಇಂದಿಗೂ ಜೀವಂತವಾಗಿರುವ ಕವಿವರ್ಯ ಜೀ.ಪಿ.ರಾಜರತ್ನಂ. ಈವತ್ತಿಗೂ ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ರವಿ ಮೂರೂರು ಮತ್ತು ಎಲ್.ಎನ್. ಶಾಸ್ತ್ರಿ ಕಂಠದಲ್ಲಿ ರಾಜರತ್ನ ಮತ್ತೇರಿಸುತ್ತಲೇ ಇರುತ್ತಾರೆ.

    ಈ ಕವನದ ಕ್ಲೈಮ್ಯಾಕ್ಸ್ ಒಂದು ಒಳ್ಳೆ ನೀತಿ ಪಾಠ :
    "ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
    ಮಕ್ಕಳ ಮುತ್ತಿದ್ದಂಗೆ !"

    ReplyDelete
  4. ಡಾಕ್ಟ್ರೆ, ಸೂಪರ್............


    ಮಾತನಾಡಿದರೆ ಸ್ಪಟಿಕದ ಮಣಿಯಂತಿರಬೇಕು.
    ಮಾತನಾಡಿದರೆ ವೈಧ್ಯರ ಮದ್ದಿನಂತಿರಬೇಕೆ ಹೊರತು
    ಮಾತನಾಡಿದರೆ ಮದ್ದು ನೀಡುವ ವೈಧ್ಯರಂತಿರ ಬಾರದು!!!!!!!

    (ಸುಮ್ನೆ ತಮಾಷೆಗೆ)

    ReplyDelete
  5. ಬದರಿ;ಒಳ್ಳೆಯ ಕವನಗಳು ಯಾವ ಕಾಲಕ್ಕೂ ಖುಷಿ ಕೊಡುತ್ತವೆ ಎನ್ನುವುದಕ್ಕೆ ಜೀಪಿಯವರ ಈ ಕವಿತೆಯೇ ಸಾಕ್ಷಿ.ಧನ್ಯವಾದಗಳು.

    ReplyDelete
  6. ಪ್ರವೀಣ್;ಯಾಕಪ್ಪಾ ವೈದ್ಯರ ಮೇಲೆ ಇಷ್ಟೊಂದು ಕೋಪ?ಯಾರಾದರೂ ವೈದ್ಯರು ತಪ್ಪು ಔಷಧ ಕೊಟ್ಟರೆ? 'ವೈದ್ಯರ ಮಾತು ಔಷಧಿಯಂತೆ ಇರಬೇಕು'ಎನ್ನುವುದು ಒಪ್ಪುವ ಮಾತು.ಧನ್ಯವಾದಗಳು.

    ReplyDelete
  7. ಡಾ. ಟಿ.ಡಿ.ಕೆ... ಎಲ್ಲದಕ್ಕೂ ಒಂದೇ ಮಾತು ಕಡೆಯ ಸಾಲುಗಳಲ್ಲಿ...ರತ್ನಂ ಗೆ ರತ್ನಂ ನೇ ಸಾಟಿ ಬೇರೆ ಪರ್ಯಾಯ ಇಲ್ಲ...
    ಮನ್ಸನ್ ಮಾತು ಎಂಗಿರಬೇಕು ?
    ಕವಣೆ ಗುರಿ ಇದ್ದಂಗೆ !
    ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
    ಮಕ್ಕಳ ಮುತ್ತಿದ್ದಂಗೆ !

    ಮಾತ್ ಬಂದ್ರೆ ನಾಲ್ಗೆ ಚಿಮ್ಮಿ
    ಕಮಾನ್ನಿಂದೊಂಟ್ಬಾಣ ಕಣಮ್ಮಿ

    ReplyDelete
  8. ಅಜಾದ್ ಸರ್;ನಿಮ್ಮ ಕಡೆಯ ಸಾಲು ಅದ್ಭುತವಾಗಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete

Note: Only a member of this blog may post a comment.