Wednesday, September 28, 2011

ವೈದ್ಯಕೀಯದಲ್ಲಿ ಹಾಸ್ಯ-"ಮಜ್ಜಿಗೆ ಎನೀಮಾ"

ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ಆಗ ನಾನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಸರ್ಜೆನ್ಸಿ ಮಾಡುತ್ತಿದ್ದೆ.ಮೆಡಿಸಿನ್ ಪೋಸ್ಟಿಂಗ್ ಇತ್ತು.ಒಂದು ದಿನ ಬೆಳಿಗ್ಗೆವಾರ್ಡಿನ ರೌಂಡ್ಸ್ ನಲ್ಲಿ  ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕಂಪ್ಲಿ ಯಿಂದ ಬಂದ ಸುಮಾರು ಎಪ್ಪತ್ತು ವರ್ಷ ವಯಸ್ಸಿನ ರೈತ,ಗೌಡಜ್ಜನಿಗೆ ಟ್ರೀಟ್ಮೆಂಟ್ ಹೇಳಿದರು.ಗೌಡಜ್ಜನಿಗೆ ಸುಮಾರು ದಿನಗಳಿಂದ ರಕ್ತ ಬೇಧಿಯಾಗುತ್ತಿತ್ತು.ಸುಮಾರು ಕಡೆ ತೋರಿಸಿಕೊಂಡು ಕಡೆಗೆ ಇಲ್ಲಿಗೆ ಬಂದಿದ್ದ.ನಮ್ಮ ಪ್ರೊಫೆಸರ್ ಅವನಿಗೆ 'ಅಲ್ಸರೇಟಿವ್ ಕೊಲೈಟಿಸ್' ಎನ್ನುವ ದೊಡ್ಡ ಕರುಳಿನ ಖಾಯಿಲೆಯಿದೆ ಎಂದು ರೋಗ ನಿರ್ಧಾರ(DIAGNOSIS) ಮಾಡಿ 'ಮಜ್ಜಿಗೆ ಎನೀಮ 'ಟ್ರೀಟ್ಮೆಂಟ್ ಕೊಡುವುದಕ್ಕೆ ಹೇಳಿದ್ದರು .ಆಗಿನ ಕಾಲದಲ್ಲಿ 'ಅಲ್ಸರೆಟಿವ್ ಕೊಲೈಟಿಸ್'ಖಾಯಿಲೆಗೆ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕೆಲವು ಮಾತ್ರೆಗಳನ್ನು ಪುಡಿ ಮಾಡಿ ರೋಗಿಯ ಕಡೆಯವರಿಂದ ಮಜ್ಜಿಗೆ ತರಿಸಿ,ಅದರಲ್ಲಿ ಮಾತ್ರೆಯ ಪುಡಿಯನ್ನು ಸೇರಿಸಿ ಗುದ ದ್ವಾರದ ಮೂಲಕ  Retention Enema ಕೊಡುತ್ತಿದ್ದರು. ಈ ಟ್ರೀಟ್ ಮೆಂಟಿಗೆ  ನಾವೆಲ್ಲಾ 'ಮಜ್ಜಿಗೆ ಎನೀಮ'ಟ್ರೀಟ್ಮೆಂಟ್  ಎನ್ನುತ್ತಿದ್ದೆವು.ಇದು ನಮ್ಮ ಯುನಿಟ್ಟಿನಲ್ಲಿ ಮಾತ್ರ ಚಾಲ್ತಿಯಲ್ಲಿ ಇದ್ದದ್ದರಿಂದ ಬೇರೆ ಯುನಿಟ್ಟಿನವರಿಗೆ ಹಾಸ್ಯದ ವಿಷಯವಾಗಿತ್ತು. ನಾನು ಕೇಸ್ ಶೀಟಿನಲ್ಲಿ ಟ್ರೀಟ್ಮೆಂಟ್ ಬರೆದು ಅಲ್ಲಿದ್ದ ನರ್ಸ್ ಗೆ ಟ್ರೀಟ್ಮೆಂಟ್ ಶುರು ಮಾಡುವಂತೆ ಹೇಳಿ ಬೇರೆಯ ವಾರ್ಡಿಗೆ ಹೋದೆ.ಅರ್ಧ ಗಂಟೆಯಲ್ಲೇ ಗೌಡಜ್ಜನ ವಾರ್ಡಿನಿಂದ ನನಗೆ ಕರೆ ಬಂತು.ಗೌಡಜ್ಜ ನೋವಿನಿಂದ ಬೊಬ್ಬಿಡುತ್ತಿದ್ದ.ಅವನ ಬಾಯಿಂದ  ಹಳ್ಳಿ ಭಾಷೆಯ ಬೈಗಳು ಪುಂಖಾನು ಪುಂಖವಾಗಿ ಹೊರ ಬರುತ್ತಿದ್ದವು. "ಸಾಯ್....ಕೊಲ್ತಾರಲೇ ಸೂಳೀ ಮಕ್ಳು!! ಇದ್ಯಾವ ಸೀಮೆ ಔಷದೀಲೇ.....ಯಪ್ಪಾ ....ಸಾಯ್ತೀನೋ , ಮುಕುಳ್ಯಾಗ ಉರಿಯಕ್ ಹತ್ತೈತಲೇ !!!"ಎಂದು ಕೂಗುತ್ತಿದ್ದ .ತನ್ನ ಮಗನನ್ನು "ನೀನ್ಯಾವ ಹುಚ್ಚು ಸೂಳೀ ಮಗನಲೇ ...........ಇಲ್ಲೀಗೆ ನನ್ ...ಎದಕ್ ಕರ್ಕಂಡ್  ಬಂದೀಯಲೇ .......ದಡ್..ಸೂಳೀ ಮಗನೆ!!!'ಎಂದು ಬಾಯಿಗೆ ಬಂದ ಹಾಗೆ ಬೈದು ಸಿಟ್ಟು ತೀರಿಸಿಕೊಳ್ಳುತ್ತಿದ್ದ. ವಾರ್ಡಿನ ಇತರೆ ರೋಗಿಗಳು ಎದ್ದು ಕೂತು ತಮಾಷೆ ನೋಡುತ್ತಿದ್ದರು. ನರ್ಸ್ ಗಳು  ಏನು ಮಾಡಲೂ ತೋಚದೆ, ಮಲಯಾಳಿ ರೀತಿಯ ಕನ್ನಡದಲ್ಲಿ 'ಎಂತ ಆಯ್ತೆ ಮಾರಾಯ್ತಿ!?'ಎಂದು ಮಾತನಾಡುತ್ತ ,ಅತ್ತಿಂದಿತ್ತ ಸರ ಬರನೆ ಏನೂ ಮಾಡದೆ ಗಡಿಬಿಡಿಯಿಂದ ಓಡಾಡುತ್ತಿದ್ದರು. ಗೌಡಜ್ಜನ ಪರದಾಟ ನೋಡಿ ನನಗೆ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನಿಸಿತು.ನರ್ಸ್ "ನಾನು ಎಂತದ್ದೂ ಮಾಡಿಲ್ಲಾ ಡಾಕ್ಟ್ರೆ.......ಪೇಶಂಟ್ ನ  ಮಗ ...ಮಜ್ಜಿಗೆ ತಂದದ್ದು...ನಾನು ಅದರಲ್ಲಿ ಮಾತ್ರೆಯ ಪುಡಿಯನ್ನು ಮಿಕ್ಸ್ ಮಾಡಿ ಎನೀಮಾ ಕೊಟ್ಟದ್ದು !!......ಅಷ್ಟೇ!! "ಎಂದು ಮೊದಲೇ ಅಗಲವಾಗಿದ್ದ ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿ ಭಯ ಭೀತಳಾಗಿ ನಿಂತಳು.ಗೌಡಜ್ಜನ ಮಗ "ಸಿಸ್ಟರ್ ಮಜ್ಜಿಗೀ ತಾ ಅಂದರ್ರೀ ........ನಾನು ಈ  ತಂಬಗೀ ತುಂಬಾ ಆಸ್ಪತ್ರೀ ಎದುರಿನ ಹೋಟೆಲ್ಲಿನಾಗೆ,ಹತ್ತು ರೂಪಾಯಿ ಮಜ್ಜಿಗಿ ತಂದು ಕೊಟ್ಟೀನ್ರೀ !!!"ಎಂದ.'ಹೋಟೆಲಿನ ಮಜ್ಜಿಗಿ!!!........' ನನಗೆ ಜ್ಞಾನೋದಯವಾಯಿತು!! ಗೌಡಜ್ಜನ ಮಗ "ಇನ್ನೂ ಮಜ್ಜಿಗೀ ಉಳಿದೈತೆ ನೋಡ್ರೀ"ಎಂದು  ತಂಬಿಗೆಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ಮಜ್ಜಿಗೆ ತೋರಿಸಿದ.ಅದು ಹೋಟೆಲ್ಲಿನಲ್ಲಿ ಸಿಗುವ 'ಕುಡಿಯುವ ಮಸಾಲಾ ಮಜ್ಜಿಗೆ!'ಅದರಲ್ಲಿ  ಚೆನ್ನಾಗಿ ಅರೆದು ಹಾಕಿದ  ಹಸೀ ಮೆಣಸಿನ ಕಾಯಿ,ಕೊತ್ತಂಬರಿ,ಕರಿಬೇವು ತೇಲುತ್ತಿತ್ತು!!! ಸಿಸ್ಟರ್, ಕುಡಿಯುವ ಮಜ್ಜಿಗೆಯನ್ನೇ ಸರಿಯಾಗಿ ನೋಡದೆ ಎನೀಮಾಗೆ ಉಪಯೋಗಿಸಿ ಬಿಟ್ಟಿದ್ದರು!! ಗೌಡಜ್ಜನ ಬೊಬ್ಬೆಗೆ ಖಾರದ ಮಜ್ಜಿಗೆಯೇ ಕಾರಣವೆಂದು ಗೊತ್ತಾಗಿತ್ತು.ಆದರೆ ಕಾಲ ಮಿಂಚಿತ್ತು!!ಖಾರದ ಮಜ್ಜಿಗೆ ಗೌಡಜ್ಜನ  ಗುದ ದ್ವಾರದಲ್ಲಿ ತನ್ನ ಕೆಲಸ ಶುರು ಮಾಡಿತ್ತು!! ನಿಜಕ್ಕೂ   ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ!!!!! ಪ್ರೊಫೆಸರ್ ಅವರನ್ನೇ ಕೇಳೋಣವೆಂದು ಕೊಂಡು ಓ.ಪಿ.ಡಿ ಕಡೆ ಓಡಿದೆ.

23 comments:

  1. ಡಾಕುಟ್ರೆ....

    ಅಯ್ಯೊಯ್ಯೊ... !!
    ಎಂಥಾ ಟ್ರೀಟ್ ಮೆಂಟು ಮಾರಾಯ್ರೆ....

    ಮೆಣಸಿನಕಾಯಿ ಮಜ್ಜಿಗೆ ಎನಿಮಾ? !!

    ಹ್ಹಾ ಹ್ಹಾ ಹ್ಹಾ !!

    ನಗು ತಡೊಕೊಳ್ಳಿಕ್ಕೆ ಆಗ್ತ ಇಲ್ಲಾ !!!

    ಹ್ಹೊ ಹ್ಹೊ ಹ್ಹೋ !!

    ಪಾಪ ಆ ಅಜ್ಜನ ಅವಸ್ಥೆ ಏನಾಗಿರ ಬಹುದು !!!

    ಹ್ಹಾ ಹ್ಹಾ !!
    ಬೆಳಿಗ್ಗೆ ಬೆಳಿಗ್ಗೆ ನಗಸಿದ್ದಕ್ಕೆ ಜೈ ಹೋ !!

    ಇನ್ನೂ ಎಂತೆಂತಾ ಅನುಭವ ಇದೆ? ಎಲ್ಲಾ ಬರಿರಿ....

    ReplyDelete
  2. ಇನ್ಮೇಲೆ ಮಸಾಲಾ ಮಜ್ಜಿಗೆ ಕುಡಿದ್ಹಂಗೆ ಮಾಡ್ಬಿಟ್ರಲ್ಲ ಡಾಕ್ಟ್ರೇ!

    ಅಂದಹಾಗೆ ಈ "ಗುದೋಪನಿಷತ್" ತಾತ್ಪರ್ಯವೇನೆಂದರೆ, ಕಾಸು ಜಾಸ್ತಿ ಕೊಟ್ಟಷ್ಟು ಮಜ್ಜಿಗೆ ಖಾರ...

    ಹ್ಹಹ್ಹಹ್ಹ...

    ನಕ್ಕು ನಕ್ಕು ಸಾಕಾಗಿ ಹೋಯ್ತು.

    ReplyDelete
  3. ಡಾಕ್ಟ್ರೇ,
    ನಿಮ್ಮಲ್ಲೂ ಅನೇಕ ಹಾಸ್ಯ ಪ್ರಸಂಗಗಳು ನಡೆಯುತ್ತವೆ ಅನ್ನುವುದಕ್ಕೆ ಇದು ಸಾಕ್ಷಿ. ಮಜ್ಜಿಗೆ ಎನಿಮಾ ಪ್ರಸಂಗವನ್ನು ಓದಿ ಸಕ್ಕತ್ ನಗುಬಂತು...ನೆನೆಸಿಕೊಂಡಾಗಲೆಲ್ಲಾ ನಗು ಬರುತ್ತಿದೆ...ಇಂಥವನ್ನು ನೆನಪಿಸಿಕೊಂಡು ಬರೆಯಿರಿ..

    ReplyDelete
  4. ಅಯ್ಯೋ.. ನಗದೇ ಇರೋಕ್ಕೆ ಆಗುತ್ತಾ...!! ಸಿರ್ ಕೊನೆಗೆ ಏನಾಯ್ತು.. ಪಾಪ ಅಜ್ಜ ಸುಸ್ತಾಗಿ ಹೋಗಿರ್ತಾರೆ.

    ReplyDelete
  5. ayyo deva....nakku nakku saakaagi hoyithu

    ReplyDelete
  6. gurugale............
    nakku nakku saakaaytu............
    paap ajja.............

    neevomme ee story heliddiri. aaga nakku aada hottenovu eega matte shuru aytu :)

    ReplyDelete
  7. ಈ ಟ್ರೀಟ್‍ಮೆಂಟನ್ನು terroristಗಳಿಗೆ ಕೊಟ್ಟರೆ ಪ್ರಯೋಜನವಾಗುವದರಲ್ಲಿ ಸಂಶಯವೇ ಇಲ್ಲ!

    ReplyDelete
  8. ಹ ಹ ಹ ಹೋ ಹೋ ಹೋ ಯಾಕ್ಸ್ವಾಮಿ ಮಜ್ಜಿಗೆ ಮೇಲೆ ಇಂತಹ ಸೇಡು ನಿಮಗೆ , ನವರಾತ್ರಿಗೆ ಇಂತಹ ಹಾಸ್ಯರಸಾಯನದ ಉಡುಗೊರೆ ನಿಮ್ಮಿಂದ!!!! ಆದರೂ ಚಿಕಿತ್ಸೆ ನೀಡಿದ ಡಾಕ್ಟರ್ ಮಹಾಶಯರು ಚಿಕಿತ್ಸೆ ನೀಡುವ ಮೊದಲು ಒಮ್ಮೆ ಮಜ್ಜಿಗೆ ಕುಡಿದು ನಂತರ ಚಿಕಿತ್ಸೆ ನೀಡಬಹುದಿತ್ತು ಹೋಗ್ಲಿ ಬಿಡಿ ಈಗಲೂ ಈ ಚಿಕಿತ್ಸೆ ಹಾಲಿ ಉಳಿದುಕೊಂಡಿದ್ದಾರೆ ಮಜ್ಜಿಗೆಯನ್ನು ಕುಡಿದು ನಂತರ ಚಿಕಿತ್ಸೆ ಶುರುಮಾಡಬಹುದು.ಆದರೂ ಮಸಾಲೆ ಮಜ್ಜಿಗೆ ಕರಾಮತ್ತು ಪಾಪ ಆ ರೋಗಿಯ ಬೈಗುಳಕ್ಕೆ ಸಾಥ್ ನೀಡಿದ್ದು ಅವನು ಹೇಗೆ ಬೈದಿರಬಹುದು , ರೆಮ್ಬುದನ್ನು ನೀಸಿಕೊಂದರೆ ನಗು ಬರುತ್ತದೆ ಹೊಟ್ಟೆ ಹುಣ್ಣಾಗುತ್ತದೆ ಹ ಹ ಹ ನಮ್ಮ ನಗುವಿನ ಹೊಟ್ಟೆ ಹುಣ್ಣಿಗೆ ಮತ್ತೆ ಮಜ್ಜಿಗೆ ಟ್ರೀಟ್ ಮೆಂಟ್ ಕೊಟ್ರೆ ಅನ್ನೋ ಭಯ ಕೂಡ ಆಗುತ್ತದೆ. ಆದರೂ ನಿಮ್ಮ ಹಾಸ್ಯ ಪ್ರಜ್ಞೆಗೆ ಜೈ ಹೋ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  9. Dear Sir,
    I remember that, When we met on 15Aug 2010 for the first time, you shared this with us. The same words came out while reading now 'Oh man'& 'Oh My God'. Thanks for sharing such informative funny incidents. Thank u

    ReplyDelete
  10. SAALA MASALA MAJJIGE KARAMATTU SAKATH NAGU BARISITU

    ReplyDelete
  11. ಡಾಕ್ಟರ್ ಸರ್,
    ನಕ್ಕು ನಕ್ಕು ಸಾಕಾಯ್ತು..... ಈ ಘಟನೆಯನ್ನು ನಿಮ್ಮ ಬಾಯಲ್ಲೇ ಒಮ್ಮೆ ಕೇಳಿದ್ದೆ.... ಆದ್ರೆ ಓದಿ ಇನ್ನೂ ನಗು ಬಂತು....ಬರೆದ ರೀತಿ ಇಷ್ಟ ಆಯ್ತು ಸರ್.....

    ReplyDelete
  12. ಹ್ಹಹ್ಹ್ಹ ಹ್ಹ.. ವರ್ಣನೆ ಬೇಡ ನಗುವಿನದ್ದು :) :) ತುಂಬಾ ನಗು !! :)

    ReplyDelete
  13. ಬರಹವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ ಎಲ್ಲಾ ಬ್ಲಾಗ್ ಬಾಂಧವರಿಗೂ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಬರಹಗಳಿಗೆ ಟಾನಿಕ್ ಇದ್ದ ಹಾಗೆ.ಬರುತ್ತಿರಿ.ನಮಸ್ಕಾರ.

    ReplyDelete
  14. Hehehe.... Tumba chennagide incidentu.... :) :)

    ReplyDelete
  15. ಯಪ್ಪೋ....ಹಹಹ ಮುಕ್ಳ್ಯಾಗ ಕುಡಿಯೋ ಮಜ್ಜಿಗೆ ಅಂತ ಕೇಳಿದ್ರೆ ಸಾದಾ ಮಜ್ಜಿಗೆ ಸಿಕ್ತಿತ್ತೇನೋ...ಹಹಹಹಹ್ ಸಕ್ಕತ್ ಅನುಭವದ ಪ್ರಸಂಗ....ಡಾಕ್ಟ್ರೇ...ಮತ್ತೆ ಜ್ನ್ಮೇಪಿ ಮಜ್ಜಿಗೆ ಕುಡಿಯೊಲ್ಲ ತಾತಪ್ಪ

    ReplyDelete
  16. daktre..

    eega taane majjige kudidu bande.. Nimma baraha node..

    Nimma punya.. Majjige horage hoglilla ;-)

    Sakattagide inicidentu..

    eeglu 'ಮಜ್ಜಿಗೆ ಎನೀಮ' chaltiyalli ideyo??

    ReplyDelete
  17. ಹೆಹ್ಹೇ.. ನಕ್ಕು ನಕ್ಕು ಸುಸ್ತಾಯ್ತು.. ಆಸ್ಪತ್ರೆಯ ಎದುರಿನ ಹೋಟೆಲ್ ಕ್ಯಾಂಟೀನ್ ಗಳಲ್ಲಿ ಮಸಾಲೆ ಮಜ್ಜಿಗೆ ನಿಷೇದ ಮಾಡಬೇಕಾದ ಪರಿಸ್ಥಿ ಬರುತ್ತದಯೋ ಹೇಗೆ :) ಸಕತ್ತಾಗಿದೆ

    ReplyDelete
  18. ಹಾ ಹಾ ಡಾಕ್ಟ್ರೆ ಇನ್ನು ಮಸಾಲ ಮಜ್ಜಿಗೆ ಕುಡಿಯೋ ಟೈಮ್ ಗೆ ಅದೇ ನೆನಪಾಗುತ್ತದೆ

    ReplyDelete

Note: Only a member of this blog may post a comment.