Tuesday, April 6, 2010

ಕನ್ನಡಮ್ಮನ -------ಅಳಲು!

ಮೊನ್ನೆ ವಿ .ಆರ್.ಭಟ್ ಅವರ ಬ್ಲಾಗಿನಲ್ಲಿ 'ಕನ್ನಡಮ್ಮನ ಕೈ ತುತ್ತು' ಎನ್ನುವ ಕವಿತೆ ಓದಿ ,ಕೆಲ ವರ್ಷಗಳ ಹಿಂದೆ ನಡೆದ ಮನ ಮಿಡಿಯುವ ಘಟನೆ ನೆನಪಿಗೆ ಬಂತು.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿಹೆಂಗಸೊಬ್ಬಳುತನ್ನಎರಡುಮಕ್ಕಳನ್ನುಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೆನ್ರಿ'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ  ತೋರಿಸಿ ಬಂದೆ. 'ನಿನ್ನ  ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ 'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!ಇದನ್ನು' ಕನ್ನಡಮ್ಮನ ಅಳಲು ಎನ್ನೋಣವೇ?

9 comments:

  1. ಸತ್ಯದ ಮಾತು!! ಇದು ಕನ್ನಡಮ್ಮನ ಅಳಲೇ!!

    ReplyDelete
  2. ಸ್ವಾಮೀ ಮಹಾತ್ಮರೇ, ನಿಮ್ಮಂಥ ಜನ ಇನ್ನೂ ನಮ್ಮಲ್ಲಿ ಇದ್ದರೆ ಎಂಬುದೇ ಸಂತೋಷ, ಬರೇ ತಮ್ಮದನ್ನೇ ನೋಡಿಕೊಳ್ಳುತ್ತಾ ಸಾಗುವ ಪ್ರಯಾಣಿಕರ ನಡುವೆ ನೀವೊಬ್ಬ ಸಹೃದಯಿ ದೇವರ ಥರ ಸಿಕ್ಕಿದಿರಿ ಆ ಮಹಿಳೆಗೆ, ಗಾದೆ ಹೀಗಿದೆ- ಬೆಲ್ಲ ಕೊದಲಾಗದಿದ್ದರೆ ಬೆಲ್ಲ ಕೊಡುವ ಮನೆಯನ್ನಾದರೂ ಸ್ವಲ್ಪ ತೋರಿಸು, ಅಂದರೆ ನೆರವಾಗಿ ನಮ್ಮಿಂದ ಸಹಾಯ ಸಾಧ್ಯವಾಗದಿದ್ದರೂ ಕೊನೆಪಕ್ಷ ಸಹಾಯ ಸಿಗುವ ಜಾಗವನ್ನಾದರೂ ತೋರಿಸು ಅಂತ,ಆದರೆ ಒಂದು ವಿಷಾದ ಮಹನೀಯರೇ ಪ್ಲಾಟ್ ಪಾರ್ಮ್ ಗಳಲ್ಲಿ 'ಹಳ್ಳಿಯಿಂದ ಬಂದಿದ್ದೆ, ದುಡ್ಡು ಕಳೆದುಕೊಂಡು ಬಿಟ್ಟೆ, ವಾಪಸ್ ಹೋಗಲೂ ಖರ್ಚಿಗಿಲ್ಲ, ಒಂದು ೧೦೦ ರೂಪಾಯಿ ಕೊಡಿ, ನಿಮ್ಮ ವಿಳಾಸ ಕೊಡಿ, ಊರಿಗೆ ತಲಪಿದೆ ಮೇಲೆ ಕಳಿಸಿಕೊಡುತ್ತೇನೆ ' ಎನ್ನುವವರಿಗೇನೂ ಕಮ್ಮಿ ಇಲ್ಲ, ಅರ್ಧ ಹೀಗಾಗೆ ಹಾಳಾಗಿದೆ, ಆತ ಕುಡುಕನೋ ಇನ್ನೇನೋ ಆಗಿರುತ್ತಾನೆ, ನಮ್ಮಂಥವರಿಗೆ ಯಾರು ನಿಜವಾದ ಸನ್ಯಾಸಿ, ಯಾರು ನಿಜವಾದ ಆರ್ತ, ಯಾರು ನಿಜವಾಗಿ ತೊದರೆಗೊಳಗಾದವ ಎನ್ನುವುದನ್ನು ಗುರುತಿಸುವುದು ಕಷ್ಟವಾಗಿದೆ, ಏನು ಮಾಡೋಣ, ಆದರೂ ಆದಷ್ಟು ನೋಡಿ ಸಹಾಯ ಮಾಡುವುದು ಒಳಿತು, ತಮಗೆ ಅಭಿನಂದನೆಗಳು

    ReplyDelete
  3. ಧನ್ಯವಾದಗಳು ಸೀತಾರಾಮ ಅವರೆ.ಕನ್ನಡ ಮಾತೃ ಭಾಷೆಯಾಗಿದ್ದರೂ ಕನ್ನಡದಲ್ಲಿ ಮಕ್ಕಳ ಜೊತೆ ಮಾತಾಡಲು ಹಿಂಜರಿಯುವ ತಂದೆ ತಾಯಿಗಳಿಗೆ ಏನನ್ನೋಣ ?ಎಲ್ಲೆಲ್ಲೂ ಕನ್ನಡದಲ್ಲಿ ಮಾತನಾಡೋದು (ಕರ್ನಾಟಕದಲ್ಲಾದರೂ )ಒಂದು ಆಂದೋಳನದ ರೀತಿಯಲ್ಲಿ ಜಾರಿಗೆ ಬರಬೇಕು.ಅದು ನಮ್ಮಿಂದಲೇ ಶುರುವಾಗಲಿ .

    ReplyDelete
  4. ವಿ.ಆರ್ .ಭಟ್ಟರಿಗೆ ನಮಸ್ಕಾರ.ತಾವು ಹೇಳುವುದೂ ಸರಿ .ಹಳ್ಳಿಯ ಮುಗ್ಧರಂತೆ ಸೋಗು ಹಾಕಿ ಮೋಸ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಧನ್ಯವಾದಗಳು .

    ReplyDelete
  5. ಕನ್ನಡನಾಡಿನಲ್ಲಿ ಕನ್ನಡ ಅಳುತ್ತಿದೆ. ನನ್ನನ್ನು ಒಬ್ಬ ಮಹನೀಯರು, ಪುರಾತನ ದೇವಾಲಯವೊಂದರ ವಯಸ್ಸನ್ನು ಕೇಳಿದರು, ನಾನು ೯೦೦ ವರ್ಷ ಎಂದೆ. Nine hundred years ಆಗಿದೆಯಾ ?? ಎಂದರು..ಅವರು ಅಪ್ಪಟ ಕನ್ನಡಿಗರು. ಏನ್ಮಾಡೋದು ?

    ReplyDelete
  6. ನಿಜ, ಇತ್ತ, ಎನ್ನಡ, ಅತ್ತ ಎಕ್ಕಡ
    ನಡುವೆ ಕನ್ನಡ ವನ್ನು ಕೆಳುವವರೆಲ್ಲಿ

    ReplyDelete
  7. ಸುಬ್ರಮಣ್ಯ ಅವರಿಗೆ ನಮಸ್ಕಾರಗಳು.ನಮ್ಮ ಸಖತ್ ಹಾಟ್ ಮಗಾ ಟಿ.ವಿ .ಕಾರ್ಯಕ್ರಮಗಳೂ ,ಎಫ್ .ಎಂ .ರೇಡಿಯೋಗಳೂ ಕನ್ನಡವನ್ನು ಗಬ್ಬೆಬ್ಬಿಸಿವೆ .ಎಲ್ಲರಿಗೂ ಅರ್ಥವಾಗುವ ಬಳಕೆಯಲ್ಲಿರುವ ಆಂಗ್ಲ ಪದಗಳ ಹಿತವಾದ ಮಿತವಾದ ಬಳಕೆಗೆ ಯಾರ ಅಭ್ಯಂತರವೂ ಇಲ್ಲ .ಆದರೆ ಅತಿಯಾದ ಇಂಗ್ಲೀಶ್ ಪದಗಳ ಬಳಕೆಯಿಂದಾಗಿ ಕನ್ನಡಪದಗಳನ್ನು ಪಾಯಸದಲ್ಲಿ ದ್ರಾಕ್ಷಿ ಹುಡುಕುವಂತಾಗಿದೆ.ಟಿ.ವಿ.ಯಲ್ಲಿ ನಡೆಸಿಕೊಡುವ
    ಒಂದು ಅಡಿಗೆ ಕಾರ್ಯಕ್ರಮದ ಉದಾಹರಣೆ :ಭಿಂಡಿನ ಕಟ್ ಮಾಡಿ ಪೀಸ್ ಮಾಡಿ ,ಸಾಲ್ಟ್ ಹಾಕಿ ,ಅಯೋದೈಸೆಡ್ ಇದ್ರೆ ಹೆಲ್ತಿ.ಆಯಿಲ್ ಹಾಕಿ ಸ್ಟೌವ್ ಮೇಲಿಟ್ಟು ಲೈಟ್ ಆಗಿ ಫ್ರೈ ಮಾಡಿ.ಈ ಕಾರ್ಯಕ್ರಮ ನೋಡಿದರೆ ಕನ್ನಡಮ್ಮ ತಲೆ ತಲೆ ಚಚ್ಚಿ ಕೊಳ್ಳಬೇಕು!

    ReplyDelete
  8. ನಮಸ್ಕಾರ ಗುರು ಸರ್ .ನಿಮ್ಮ ಅನಿಸಿಸಿಕೆ ಓದಿದರೆ ಅಸಾದ್ ಉಲ್ಲಾ ಬೇಗ್ ಅವರ ಕನ್ನಡ ಶಾಯಿರಿ ನೆನಪಿಗೆ ಬರುತ್ತೆ .'ಅತ್ತ ಎನ್ನಡ,ಇತ್ತ ಎಕ್ಕಡ ,
    ನೀನ್ಯಾಕೆ ಕತ್ತಿ ಹಿಡಿದು ಸುಮ್ಮನೆ ನಿಂತೇ ಕೆಂಪೇ ಗೌಡ ?ಎಲ್ಲರ ಎದೆಯನ್ನೂ ಕೊರೆದು ಬರೆದು ಬಿಡು ,ಕನ್ನಡ ,ಕನ್ನಡ ,ಕನ್ನಡ !

    ReplyDelete
  9. kannadada bagegina nimma kalakali mechugeyayitu. kavanagalu chennagive.sumaru 20 varushagala hinde shivamoggeya banking kammatadalli bhetiyagidda asadulla beg avara chitra kana munde bantu.-K.HEMCHANDRA, SBH RASMECCC, BANGALORE

    ReplyDelete

Note: Only a member of this blog may post a comment.