Monday, April 12, 2010

ಸೈಕಲ್ ಹಿಂದಿನ ಚಕ್ರ ---ತಿರುಗುತ್ತಲೇ ಇತ್ತು !

{ಚೆನ್ನೈನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಸ್ನೇಹಿತನೊಬ್ಬನ ಕ್ಲಿನಿಕ್ ನಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ನೈಜ ಘಟನೆಯನ್ನು ಆಧರಿಸಿದ್ದು }

ಆ ದಿನ  ಸಂಜೆ ಸುಮಾರು ಐದೂವರೆ ಆಗಿತ್ತು .ಕ್ಲಿನಿಕ್ಕಿನಲ್ಲಿ ಹೆಚ್ಚು ರೋಗಿಗಳಿರಲಿಲ್ಲ .ಒಳಗಿನ ಪರೀಕ್ಷಾ ಕೋಣೆಯಲ್ಲಿ ರೋಗಿಯೊಬ್ಬನನ್ನು ಪರೀಕ್ಷೆ ಮಾಡಿ ಹೊರಗೆ ಬಂದೆ .ಆಗ ತಾನೇ ಬಂದಿದ್ದಆರಡಿಯ,ಧಡೂತಿದೇಹದ,ಮೈಯೆಲ್ಲಾ ಬೆವರಿನಿಂದ ತೋಯ್ದು ತೊಪ್ಪೆಯಾಗಿದ್ದ ವ್ಯಕ್ತಿಯೊಬ್ಬ 'ತುಂಬಾ  ಎದೆ ನೋವು ಡಾಕ್ಟರ್ ',ಎನ್ನುತ್ತಾ ,ಎದೆಯನ್ನು ಕೈಯಲ್ಲಿ ಹಿಡಿದು ಕೊಂಡೇ,ಕಡಿದು ಬಿದ್ದ ದೊಡ್ಡದೊಂದು ಮರದಂತೆ ,ಧೊಪ್ಪೆಂದು ಬಿದ್ದ.ಹೃದಯದ ಬಡಿತ ಮತ್ತು ಉಸಿರಾಟ ಸಂಪೂರ್ಣವಾಗಿ ನಿಂತಿತ್ತು .ಅವನ ಜೊತೆ ಯಾರಾದರೂ ಬಂದಿದ್ದಾರೆಯೇ ಎಂದು ನೋಡಲು ಕ್ಲಿನಿಕ್ಕಿನ ಹೊರಗೆ ಬಂದೆ .ಆ ವ್ಯಕ್ತಿ  ಸ್ಟ್ಯಾಂಡ್ ಹಾಕಿ ನಿಲ್ಲಿಸಿದ್ದ  ಸೈಕಲ್ ಅಲ್ಲಿತ್ತು.ಸೈಕಲ್ಲಿನ  ಹಿಂದಿನ ಚಕ್ರ ಇನ್ನೂ ತಿರುಗುತ್ತಲೇ ಇತ್ತು ! ಕ್ಯಾರಿಯರ್ರಿನಲ್ಲಿದ್ದ  ಕೈ ಚೀಲ ಕೆಳಗೆಬಿದ್ದು ,ಅದರಲ್ಲಿದ್ದ ತರಕಾರಿ ,ಹೂವು ,ಹಣ್ಣು ಮತ್ತು ಎರಡು ಪ್ಲಾಸ್ಟಿಕ್ ಗೊಂಬೆಗಳು, ಫುಟ್ ಪಾತ್ ನಲ್ಲಿ  ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು !    

26 comments:

  1. ಸಾವು ಎಷ್ಟು ಆಕಸ್ಮಿಕ. ಓದಿಸಿಕೊಂಡು ಬಂದ ಸೈಕಲ್ ಚಕ್ರ ತಿರುಗುವುದನ್ನು ನಿಲ್ಲಿಸುವ ಮೊದಲೇ ಆತನ ಹೃದಯ ಬಡಿಯುವುದನ್ನು ನಿಲ್ಲಿಸಿತಲ್ಲ. heart attack ಒಂದು ರೀತಿಯಲ್ಲಿ ನಮೆಯದೆ ಆರಾಅಮವ್ವಗಿ ಸಾಯುವ ಸುಖದ ಸಾವು ಅಂತ ಆಗಾಗ ಅನ್ನಿಸಿದ್ದಿದೆ.

    ReplyDelete
  2. ತಿರುಗುತ್ತಿದ್ದ ಚಕ್ರವೇ ಆತನ ಜೀವದ ಮೇಲಿನ ಆಸೆಯನ್ನು ಹೇಳುತ್ತಿದೆ. ಚಿಕ್ಕದಾಗಿದ್ದರೂ ಮಾರ್ಮಿಕವಾದ ಬರಹ. ಧನ್ಯವಾದ

    ReplyDelete
  3. ಕಾಲಚಕ್ರ ಸೈಕಲ್ ಚಕ್ರದ ಹಾಗೆ, ಯಾರಿದ್ದರೂ ಇಲ್ಲದಿದ್ದರೂ ತಿರುಗುತ್ತಲೇ ಇರುತ್ತದೆ.

    ReplyDelete
  4. ಸಾಗರಿಯವರಿಗೆ ನಮಸ್ಕಾರಗಳು.ಸಾವು ಚೆನ್ನಾಗಿ ಅರ್ಥವಾದಾಗ ಬದುಕು ಮತ್ತಷ್ಟು ಸುಂದರವಾಗಿ ಕಾಣುತ್ತದೆ !ಬದುಕಿನ ಕ್ಷಣಿಕತೆ ಅರಿವಾದಷ್ಟು
    ಬದುಕುವುದೇ ಒಂದು ಅಪೂರ್ವ ಅನುಭೂತಿಯಾಗುತ್ತದೆ!

    ReplyDelete
  5. ತಿರುಗುತ್ತಿರುವ ಚಕ್ರ ಇಲ್ಲಿ ಕಾಲದ ರೂಪಕ.ಚೆಲ್ಲಾಪಿಲ್ಲಿ ಯಾಗಿ ಬಿದ್ದ ವಸ್ತುಗಳು ನಮ್ಮ ಲೌಕಿಕ ಬದುಕನ್ನು ಬಿಂಬಿಸುತ್ತವೆ.ಕಾಲ ಇರುತ್ತದೆ ,ಈ ಲೋಕ ಇರುತ್ತದೆ ಆದರೆ ನಾವೇ ಇರುವುದಿಲ್ಲ.!ಧನ್ಯವಾದಗಳು ಸುಬ್ರಮಣ್ಯ ಅವರೆ.ನಮಸ್ಕಾರ.

    ReplyDelete
  6. ಗೀತೆಯವರಿಗೆ ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ತಾವು ಹೇಳುವುದು ಸರಿ .ನಾವೆಲ್ಲಾ ಇದನ್ನು ಎಷ್ಟು ಬೇಗ ಅರ್ಥಮಾಡಿ ಕೊಳ್ಳುತ್ತೆವೆಯೋ ಅಷ್ಟು ಒಳ್ಳೆಯದು.

    ReplyDelete
  7. ಬದುಕು ಎಷ್ಟು ಕ್ಷಣಿಕ ಎಂದು ಅರಿತೂ, ತಮ್ಮ ಬದುಕೊಳಗಿನ ಅವ್ಯವಸ್ಥೆಯನ್ನು ಸರಿಪಡಿಸದೇ ಬೇರೆಯವರ ಬದುಕೊಳಗೇ ಮುಳುಗಿರುವವರಿಗೆ ಸಾವು ನಿಶ್ಚಿತ, ಕಾಲಾತೀತ ಎನ್ನುವದು ಎಂದು ಅರಿವಾಗುವುದೋ?! ಸಾವು ಅನಿವಾರ್ಯ ಎಂದು ತಿಳಿದರೂ, ಆಪ್ತರ ಅಗಲಿಕೆ ಎಂತಹವರನ್ನೂ ಅಲುಗಾಡಿಸಿಬಿಡುತ್ತದೆ ಅಲ್ಲವೇ? ಸಾಂಕೇತಿಕಗಳು ತುಂಬಾ ಮಾರ್ಮಿಕವಾಗಿವೆ. ಆ ವ್ಯಕ್ತಿಯ ಮನೆಯವರಿಗೆ ಆತನ ಸಾವು ಎಂತಹ ಆಘಾತ ನೀಡಿರಬಹುದು!!!

    ReplyDelete
  8. ಆಡಿಸುವಾತ ಬೇಸರ ಮೂಡಿ ಆಟ ನಿಲಿಸಿದ
    ಸೂತ್ರವ ಹರಿದ ಗೊಂಬೆಯ ಮುರಿದ........ಕೇಳಿದಿರಲ್ಲ, ಅದು ಹುಟ್ಟಿದ್ದು ಇಂತಹ ಸಂದರ್ಭದಲ್ಲೇ! ನಾನು ಇಂತಹ ಅನೇಕ ಘಟನೆಗಳನ್ನು ಕೇಳಿದ್ದೇನೆ, ಬದುಕು ಎಷ್ಟು ಅಸ್ಥಿರ ! ಹೀಗೆ ಹೇಳೋಣ, ಭಾರತಕ್ಕೆ ಸ್ವಾತಂತ್ರ್ಯ ಬಂತು, ಆದರೆ ನಮ್ಮ ಬದುಕಿಗೆ ಸ್ಪೀಡ್ ಕಂಟ್ರೋಲರ್ ಇರುವ ಸ್ವಾತಂತ್ರ್ಯ ಬಂತು! LIC ಯವರು ನೋಡಿದರೆ ನಿಮ್ಮನ್ನು ಭಾಷಣಕ್ಕೆ ಕರೆಯುತ್ತಾರೆ ಹುಷಾರು ! ಚೆನ್ನಾಗಿದೆ

    ReplyDelete
  9. ಓದಿ ಎರಡು ನಿಮಿಷ ಸ್ತಬ್ಧನಾಗಿಬಿಟ್ಟೆ!

    ReplyDelete
  10. ತೇಜಸ್ವಿಯವರಿಗೆ ನಮಸ್ಕಾರಗ್ಗಳು .ಹೆಚ್ಚು ಹೇಳಿದಷ್ಟೂ ಘಟನೆ ಮಾರ್ಮಿಕತೆ ಕಳೆದುಕೊಳ್ಳುತ್ತದೆ.The event must unfold itself .!
    Thank you.

    ReplyDelete
  11. ನಮಸ್ಕಾರ ಭಟ್ ಸರ್ ,ನಾನು ವೈದ್ಯನಾಗಿ ಎಸ್ಟೋ ಸಾವುಗಳನ್ನು ಹತ್ತಿರದಿಂದ ನೋಡಿದವನು .ಆದರೆ ಇದು ,it was something different.The situation stands out for its poignancy.A man suddenly dropping dead , the rear wheel of his bicycle still in motion, though his life cycle had suddenly stopped ! The toys and flowers he bought for his wife and children lying scattered on the foot path! It is heart rending ! It is only that we as human beings have become
    a bit insensitive to such events. regards . D.T.K.

    ReplyDelete
  12. Balu sir ;Thank you for your kind comments.keep visiting the blog .

    ReplyDelete
  13. ಸಾವು ವಿಚಿತ್ರವೂ ಹೌದು, ಬೆರಗು ಕೂಡ.
    ಚಿಕ್ಕದಾಗಿದೆ ಅಂತ ತುಂಬಾ ವೇಗವಾಗಿ ಓದಿದೆ.
    ನಿಮ್ಮ ಬರಹ ಮತ್ತೊಮ್ಮೆ ಓದಿಸಿಕೊಂಡಿದ್ದು ಸುಳ್ಳಲ್ಲ.
    ಸಾವು ಎಷ್ಟೇ ಹಳೆಯದಾದರೂ, ]
    ಕೇಳಿದ ಮೇಲೆ ಅದರ ಬಗ್ಗೆ ಎಲ್ಲರೂ ಸುಮ್ಮನೆ ಯೋಚಿಸಲಾರಂಭಿಸುತ್ತಾರೆ ಅನ್ನೋದೇ ವಿಸ್ಮಯ.

    ReplyDelete
  14. ಎನ್.ಅರ್.ಕೆ .ಅವರಿಗೆ ನಮಸ್ಕಾರಗಳು ಮತ್ತು ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.

    ReplyDelete
  15. ಬರಹ ಚಿಕ್ಕದಾದರೂ ಬಹಳಷ್ಟು ಅರ್ಥವನ್ನು ಹಿಡಿದಿಟ್ಟಿದೆ
    ಹುಟ್ಟು ನಿಶ್ಚಿತ ಆದರೆ ಸಾವು ಯಾರಿಗೂ ತಿಳಿಯದು
    ಸುಂದರ ಮನಸ್ಸಿಗೆ ತಟ್ಟುವ ಬರಹ

    ReplyDelete
  16. Thanks Uday.welcome to my blog.keep visiting.

    ReplyDelete
  17. ಬದುಕಿನ ಸೂತ್ರ ನಮ್ಮ ಕೈಯಲ್ಲಿ ಇಲ್ಲ...ಆದರೂ ಒಂದು ಕ್ಷಣ ಮೊದಲು ಬಂದಿದ್ದರೆ.. ಛೆ, ಹೀಗಾಗಬಾರದಿತ್ತು...ಅಂತ ನೋವಿನಿಂದ ಎದೆ ಹಿಂಡದೇ ಇರುವದಿಲ್ಲ. ಎಲ್ಲವೂ ವಿಧಿಲಿಖಿತ ಅನ್ನುವದು ಸುಲಭದ ಮಾತು. ಎದೆ ನೋವು ಬಂದ ಮೇಲೂ ಸೈಕಲ್ಲು ಹೊಡೆದುಕೊಂಡು ಬಂದದ್ದು ಈ ಘಟನೆಗೆ ಕಾರಣವಾಗಿರಬಹುದು..ಒಂದು ಕ್ಷಣ ಸುಧಾರಿಸಿಕೊಂಡು ಯಾರದಾದರೂ ಸಹಾಯದಿಂದ ಆಸ್ಪತ್ರೆಗೆ ಬಂದರೆ ಹೀಗಾಗುತ್ತಿರಲ್ಲವೇನೋ. ಅದಕ್ಕೇ, ಎದೆನೋವು ಕಂಡು ಬಂದ ಸಂಧರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂದುವಂತಾದರೆ, ವಿಧಿಗೆ ಸವಾಲು ಹಾಕಲು ಸಾಧ್ಯವೇನೋ..

    ReplyDelete
  18. ಭಟ್ಟರಿಗೆ ನಮಸ್ಕಾರಗಳು.;ತುಂಬಾ ಅರ್ಥಪೂರ್ಣಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ.ಈ ಕೇಸಿನಲ್ಲಿ ಸೈಕಲ್ ಹೊಡೆದು ಶ್ರಮದಿಂದ ವ್ಯಕ್ತಿಗೆ ಎದೆ ನೋವು ಬಂದಿರಬಹುದು .ಆದರೆ ಅದಕ್ಕೂ ಮೊದಲು ಸಾವಿರಾರು ಸಲ ಅವನು ಸೈಕಲ್ ಹೊಡೆದಿರಬಹುದು.ಈ ಸಲ ಎದೆ ನೋವು ಬರುತ್ತದೆ ಎಂದು ಮೊದಲೇ ತಿಳಿಯುವುದು ಹೇಗೆ?ಕೆಲವೊಮ್ಮೆ ಯಾವುದೇ ಶಾರೀರಿಕ ಶ್ರಮವಿಲ್ಲದೇ ಹೃದಯಾಘಾತ ಆಗುವುದುಂಟು .ಇಲ್ಲಿ ನಾನು ಈ ಘಟನೆಯನ್ನು ಅದರ Allegory ,ಮತ್ತು poignancy ಗಾಗಿ ಪ್ರಾಮುಖ್ಯತೆ ಕೊಡುತ್ತಿದ್ದೇನೆ.ಇದನ್ನು ಕನ್ನಡದಲ್ಲಿ ಹೇಳಲು ನನ್ನ ಪದ ಭಂಡಾರ ಸಾಲದು.ಬದುಕಿನ ಒಂದು ephemeral state, high light ಮಾಡಬೇಕಾಗಿತ್ತು .ಬದುಕು ನೋಡ ನೋಡುತ್ತಿದ್ದಂತೆ ಇಬ್ಬನಿ ಕರಗುವಂತೆ ಮಾಯವಾಗುವುದು ವಿಸ್ಮಯ ಮೂಡಿಸುತ್ತದೆ .ಆಗಾಗ ಬಂದು ತಮ್ಮ ಅನಿಸಿಕೆಗಳನ್ನು ತಿಳಿಸಿದರೆ ಖುಷಿಯಾಗುತ್ತೆ .ಧನ್ಯವಾದಗಳು .

    ReplyDelete
  19. ತನ್ನ ಮಗುವಿಗಾಗಿ ಪ್ಲಾಸ್ಟಿಕ್ ಗೊಂಬೆ, ಹಬ್ಬಕ್ಕೋ ಪೂಜೆಗೋ ಹೂವು ಹಣ್ಣು!
    ಸಂತೋಷದ ಸಮಯದಲ್ಲಿ ಸಾವಿನ ಬರಸಿಡಿಲು! ವಿಧಿವಿಲಾಸ!
    ಹೃದಯವನ್ನೇ ಕಲಕಿತು! ಮನ ಮರುಗಿತು! ಸಾವು ನಿಶ್ಚಿತವೆ ಅದರೂ
    ಸಮಯ ಸರಿ ಇರಲಿಲ್ಲ ! ಸ್ಮಶಾನ ವೈರಾಗ್ಯ ತರಿಸಿತು ಲೇಖನ!

    ReplyDelete
  20. ಸರ್
    ಲೇಖನ ಬದುಕಿನ ಸತ್ಯಕ್ಕೆ ಕನ್ನಡಿ ಹಿಡಿದಂತಿದೆ . ಚಿಕ್ಕದಾಗಿ ಚೊಕ್ಕದಾಗಿ ಬದುಕಿನ ಅರ್ಥ ಹೊರ ಹಾಕಿದ ಪರಿ ಅದ್ಭುತವಾಗಿದೆ . ಸಾವು ಯಾರಿಗೂ ಕಾಯುವದಿಲ್ಲ , ಸಾವು ಅರ್ಥ ಆದಾಗ ಬದುಕು ಸುಂದರ ಅನ್ನೋ ಮಾತು ನಾನು ಒಪ್ಪುತ್ತೇನೆ . ಆಗಲೇ ನಾವು ಬದುಕಿನ ಪ್ರತಿ ಕ್ಷಣಗಳ ಮೌಲ್ಯ ಅರಿಯುತ್ತೇವೆ .
    ಅಲ್ಲಿ ಬಿದ್ದ ಎರಡು ಗೊಂಬೆಗಳು ಹೃದಯ ಭಾರ ಮಾಡಿದವು .

    ಮನಸಾರೆ

    ReplyDelete
  21. ಶಿವರಾಂ ಭಟ್ ಅವರಿಗೆ ನಮಸ್ಕಾರಗಳು.ನನ್ನ ಲೇಖನ ಬರೀ ಸ್ಮಶಾನ ವೈರಾಗ್ಯ ಬರಿಸದೆ ಸಾವು ಮತ್ತು ಬದುಕಿನ ಬಗ್ಗೆ ಚಿಂತನೆ ಮೂಡಿಸಿದರೆ ಹೆಚ್ಚು ಸಾರ್ಥಕ ವಾಗುತ್ತದೆ .ಧನ್ಯವಾದಗಳು.

    ReplyDelete
  22. ಮನಸಾರೆಯವರಿಗೆ ನಮಸ್ಕಾರಗಳು.ನಿಮಗೆ ನನ್ನ ಬ್ಲಾಗಿಗೆ ಮನಸಾರೆ ಸ್ವಾಗತ .ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು .ಮತ್ತೆ ಮತ್ತೆ ನನ್ನ ಬ್ಲಾಗಿನ ಚಾವಡಿಗೆ ಬರುತ್ತಿರಿ .

    ReplyDelete
  23. ಚಿಕ್ಕ ಕತೆಯಲ್ಲಿ ಬದುಕಿನ -ಕಾಲದ ನಿಲ್ಲದ ಓಟ, ಎಲ್ಲಿ ನಿಲ್ಲುವುದೊ ಮನುಜ ಬದುಕಿನ ಆಟ,ನಿ೦ತ ಬದುಕಿನ ಜೀವದ ಸುತ್ತೆಲ್ಲ ಚೆಲ್ಲಿದ ಲೌಕಿಕದ ನೋಟ, ವೈದ್ಯರ ಬಳಿ ಬ೦ದರೂ ವೈದ್ಯರಿಗಿಲ್ಲ ಶುಶ್ರೂಷೆಯ ಅವಕಾಶ ಇತ್ಯಾದಿ ಇತ್ಯಾದಿ. ಬದುಕಿನ ಕ್ಷಣಿಕತೆಯ ಅರಿವನ್ನು ಆಪ್ತವಾಗಿ ಮಾಡಿಸಿದೆ ಕತೆ.

    ReplyDelete
  24. ಸೀತಾರಾಮ ಅವರಿಗೆ ನಮನಗಳು.ಇದು ಕಥೆಯಲ್ಲ------ಜೀವನ!ಧನ್ಯವಾದಗಳು.

    ReplyDelete

Note: Only a member of this blog may post a comment.