Wednesday, April 21, 2010

' ಮಾಸಿದ ಕೋಟು '{ ಭಾಗ -1}

ಹೀಗೊಂದು ಪುಟ್ಟ ಕಥೆ .ಎಂದೋ ಓದಿದ್ದು.ನಿಮಗೆಲ್ಲಾ ಹೇಳಬೇಕು ಅಂತ ಅನ್ನಿಸಿತು .ಹೇಳಿಬಿಡುತ್ತೇನೆ .ಹೀಗೆಲ್ಲಾ ನಡಿದಿರಲಿಕ್ಕೂ ಸಾಧ್ಯ ಅನ್ನಿಸುತ್ತದೆ.ಒಮ್ಮೊಮ್ಮೆ ಇದು ಬರೀ ಒಂದು ಕಾಲ್ಪನಿಕ ಘಟನೆ ಇರಬಹುದು ಅಂತಲೂಅನ್ನಿಸುತ್ತದೆ .ನೀವೇ ಓದಿ ನೋಡಿ.ಆತ ಸದಾ ಆ ಮಾಸಿದ ಕೋಟನ್ನು ಧರಿಸುತ್ತಿದ್ದ.ಅದರ ಜೊತೆ ಏನೇನು ನೆನಪುಗಳು ಅಂಟಿಕೊಂಡಿದ್ದವೋ ಅವನಿಗೇ ಗೊತ್ತು.ಸುಮಾರು ಮೂರು ತಿಂಗಳಿಂದ ಅವನು ಆ ವೈದ್ಯರ ಬಳಿಗೆ ಚಿಕಿತ್ಸೆಗೆ ಬರುತ್ತಿದ್ದ.ಅವರುಫೀಸುಕೇಳಿದಾಗಲೆಲ್ಲಾ 'ಮುಂದಿನ ಸಾರಿ ಖಂಡಿತ ಕೊಡುತ್ತೀನಿ ಸಾರ್'ಎಂಬ ಉತ್ತರ ಅವನ ಬಳಿ ಸಿದ್ದವಾಗಿರುತ್ತಿತ್ತು.ಆದಿನ ಅವನು'ನನಗೆ ಪೂರ್ತಿ ಗುಣವಾಗಿದೆ ಸರ್ 'ಎಂದ.ವೈದ್ಯರು 'ನನ್ನ ಫೀಸು ನಾಲಕ್ಕು ಸಾವಿರ ವಾಗಿದೆ ,ಈಗಲಾದರೂ ಕೊಡುತ್ತೀಯೇನಪ್ಪಾ 'ಎಂದರು.ಆತನ ಮುಖದಲ್ಲಿ ದೈನ್ಯ ಭಾವ ಇತ್ತು.ತನ್ನ ಖಾಯಿಲೆಗುಣ ಮಾಡಿದ್ದಕ್ಕೆವೈದ್ಯರ ಬಗ್ಗೆ  ಕೃತಜ್ಞತೆಇತ್ತು.ತಾನು ಬಹಳವಾಗಿ ಇಷ್ಟಪಡುತ್ತಿದ್ದ ಕೋಟನ್ನು ಬಿಚ್ಚಿ, ಟೇಬಲ್ ಮೇಲೆ ಇಟ್ಟು'ನೀವು ದೇವರು ಇದ್ದ ಹಾಗೆ ಸರ್'ಎಂದ.ವೈದ್ಯರಿಗೆ ಅಸಾಧ್ಯ ಕೋಪ ಬಂತು.ಇನ್ನೂ ಏನೋ ಹೇಳಬೇಕೆಂದಿದ್ದ ಅವನನ್ನು ಅರ್ಧಕ್ಕೇ ತಡೆದು ಸಿಟ್ಟಿನಿಂದ 'ಎತ್ಕೊಂಡು ಹೋಗಯ್ಯ ನಿನ್ ಹಾಳು  ಕೋಟು ಯಾವೋನಿಗೆ ಬೇಕು,ನನ್ನ ನಾಲ್ಕು ಸಾವಿರ ರೂಪಾಯಿ ತಂದುಕೊಡು'ಎಂದು ,ಆ ಮಾಸಿದ ಕೋಟನ್ನು ಕೆಳಗೆ ಬಿಸಾಕಿದರು .ಆತನಿಗೆ ತುಂಬಾ ನೋವಾಗಿತ್ತು.ಕಣ್ಣಿನಲ್ಲಿ ನೀರಿತ್ತು.ಏನೂ ಮಾತಾಡದೆ ನಿಧಾನವಾಗಿ ಕೋಟನ್ನುನೆಲದಿಂದ ಎತ್ತಿಕೊಂಡು ಧರಿಸಿ,ಅದರ ಒಳ ಜೇಬಿನಲ್ಲಿದ್ದ ಹತ್ತು ಸಾವಿರ ರೂಪಾಯಿಯ ಹೊಸ ನೋಟುಗಳ ಕಟ್ಟನ್ನು ಬಿಡಿಸಿ,ನಾಲಕ್ಕು ಸಾವಿರ ಎಣಿಸಿ,ಟೇಬಲ್ ಮೇಲೆ ಇಟ್ಟು ಇನ್ನುಳಿದ ಆರು ಸಾವಿರವನ್ನು ಕೋಟಿನ ಜೇಬಿನಲಿಟ್ಟು ಮೌನವಾಗಿ ಹೊರನಡೆದ.ಟೇಬಲ್ ಮೇಲಿದ್ದ ನಾಲಕ್ಕು ಸಾವಿರ ನೋಟುಗಳು ಇಷ್ಟು ಹೊತ್ತೂ ಜೊತೆಗಿದ್ದ ಮಾಸಿದ ಕೋಟಿನೊಳಗಿನ ಆರು ಸಾವಿರ ನೋಟುಗಳಿಗೆ 'ಟಾ--ಟಾ' ಮಾಡುತ್ತಿದ್ದವು!ಟೇಬಲ್ ಮೇಲೆ ಇದ್ದ 'ಲಾಫಿಂಗ್ ಬುದ್ಧನ' ಮೂರ್ತಿ ವೈದ್ಯರನ್ನು ನೋಡಿ ನಗುತ್ತಲೇ ಇತ್ತು!                 

35 comments:

  1. ಕಥೆ ಚೆನ್ನಾಗಿದೆ. ಹೊರನೋಟದಿಂದ ಏನನ್ನೂ ನಿರ್ಧರಿಸಬಾರದು ಎಂದು ತಿಳಿಸುತ್ತದೆ

    ReplyDelete
  2. Deepasmitha;Thanks for your kind comments.
    Oh---yes,you are right!At times looks are deceptive!

    ReplyDelete
  3. ಚೆನ್ನಾಗಿದೆ, ಕಥೆಯೊಳಗೊ೦ದು ನೀತಿ ಇದೆ. ನನ್ನ ಬ್ಲಾಗಿಗೂ ಬರುತ್ತಿರಿ

    ReplyDelete
  4. ಸರ್‍, ಪುಟ್ಟ ಕಥೆ ಚೆನ್ನಾಗಿದೆ.
    ಸ್ನೇಹದಿಂದ,

    ReplyDelete
  5. ಪರಾಜಪೆಯವರಿಗೆ ನನ್ನ ಬ್ಲಾಗಿಗೆ ಸ್ವಾಗತ.ಧನ್ಯವಾದಗಳು .

    ReplyDelete
  6. ಚಂದ್ರು ಅವರಿಗೆ ;ನನ್ನ ಬ್ಲಾಗಿಗೆ ಸ್ವಾಗತ .ಧನ್ಯವಾದಗಳು .

    ReplyDelete
  7. ಮನಮುಕ್ಥಾ ಅವರಿಗೆ ಧನ್ಯವಾದಗಳು.

    ReplyDelete
  8. ಡಾಕ್ಟರ ಸ್ವಲ್ಪ ಸಹನೆ ಇಟ್ಕೊಂಡಿದರೆ ಚೆನ್ನಾಗಿತ್ತು, ಅಷ್ಟು ದಿನನೇ ತಡಕೊಂಡಿರೋ ಒಂದೆರಡು ನಿಮಿಷ ಸುಮ್ನಿದ್ದಿದ್ರೆ ಒಂದು ಪಾರ್ಟಿ ಮಾಡಬಹುದಿತ್ತು. ಛೆ
    ಕಥೆ ತುಂಬಾ ಚೆನ್ನಾಗಿದೆ.

    ReplyDelete
  9. ಎನ್.ಅರ್.ಕೆ.ಅವರಿಗೆ ಧನ್ಯವಾದಗಳು.ನಮ್ಮೆಲ್ಲರಲ್ಲೂ ಸೇರಿಕೊಂಡಿರುವ ತಾಳ್ಮೆ ಇಲ್ಲದ ಗಿರಾಕಿಯೊಬ್ಬ ಆಗಾಗ ಇಂತಹ ಎಡವಟ್ಟು ಕೆಲಸ ಮಾಡಿ ಆಮೇಲೆ ನಾವು ಪಶ್ಚಾತಾಪ ಪಡುವಂತೆ ಮಾಡುತ್ತಾನೆ .ಏನ್ಮಾಡೋದು !ಅವನ ಕಾಟ ಸಹಿಸ್ಕೊಬೇಕು !ಅಷ್ಟೇ !ನೀವು ಹೇಳಿದ ಹಾಗೆ ಸ್ವಲ್ಪ ಸುಮ್ಮನಿದ್ದಿದ್ದರೆ ಒಳ್ಳೇಪಾರ್ಟಿ ಆಗುತ್ತಿತ್ತು .

    ReplyDelete
  10. ಕಥೆ ಪುಟ್ಟ ದಾದರೂ ಚೊಕ್ಕವಾಗಿದೆ
    ಒಳ್ಳೆಯ ಕಥೆ

    ReplyDelete
  11. ಧನ್ಯವಾದಗಳು ಗುರು ಸರ್ .

    ReplyDelete
  12. ಕಥೆ..ಹೊರನೋಟಕ್ಕೆ ತಪ್ಪಿದ ಅದೃಷ್ಟ ಅನಿಸ ಬಹುದು...ವೈದ್ಯನಿಗೆ ತನ್ನ ರೋಗಿಯ ಮೇಲಿನ ಅಸಹನೆಯ ಫಲ ಎನಿಸಬಹುದು...ಆದ್ರೆ ..ಎಲ್ಲವನ್ನ ನಿರೂಪೈಸಲೆಂದೇ ಆ ರೋಗಿ ಕೊಡುತ್ತೇನೆ ಕೊಡುತ್ತೇನೆ ಎನ್ನುತ್ತಾ ಕೊನೆಗೆ ಕೋಟನ್ನು ಕೊಟ್ಟ ದೈನ್ಯತೆ ತೋರಿದಾಗ ವೈದ್ಯ ರೋಗಿಅಯ ರೋಗ ವಾಸಿಯಾದುದಕ್ಕೆ ಸಂತೃಪ್ತನಾಗಿದ್ದರೆ ಬಹುಶಃ ಕೋಟನ್ನು ತೆಗೆದು ಆತನಿಗೇ ಕೊಡುತ್ತಾ ಪರ್ವಾಯಿಲ್ಲ ಹೋಗು ಎನ್ನುತ್ತಿದ್ದ...ಅಥವಾ.....??? ಏನೇನೋ ಯೋಚನೆಯನ್ನು ತರುತ್ತೆ ನಿಮ್ಮ ಪುಟ್ಟ ಕಥೆ...

    ReplyDelete
  13. ಜಲನಯನ ಅವರಿಗೆ ನಮಸ್ಕಾರಗಳು..ಮೊದಲಿಗೆ ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ಒಂದು ಕಥೆ ಬೇರೆ ಬೇರೆ ಸಾಧ್ಯತೆಗಳನ್ನು ಹುಟ್ಟುಹಾಗಿದರೆ ಅದರ ಚೆಂದ ಹೆಚ್ಚುತ್ತದೆ .ಬೇರೆ ಹೊಳಹುಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು .ಆಗಾಗ ಬರುತ್ತಿರಿ .

    ReplyDelete
  14. ನಮಸ್ಕಾರ ಕಿ.ಮೂ.ಗಂ ವೈದ್ಯರಿಗೆ,

    ನವಿರಾದ ಹಾಸ್ಯದ ಹಿಂದೆ ವೈಂಗ್ಯದುಬ್ಬರ ಹಂಗಿಸುವಂತಿತ್ತು ಸಾರ್, ಕರೀ ಕೋಟು ಅಲ್ಲಿಂದ ಹೊರ ಬಂದಾಗ ನಕ್ಕಿದ್ದು ಮಾತ್ರ ಯಾರಿಗೂ ಕೇಳಿಸಲಿಲ್ಲ.

    ಚೆನ್ನಾಗಿತ್ತು.

    ನನ ಬ್ಲಾಗಿಗೆ ಬಂದು ಪದ್ಯ ಓದಿದ್ದಕ್ಕೆ thanks doc, ಮುಂದೆಯೂ ಈ ಓದಿನ ವಿನಿಮಯ ಸಾಗುತಿರಲಿ.

    www.badari-poems.blogspot.com

    - ಬದರಿನಾಥ ಪಲವಳ್ಳಿ

    ReplyDelete
  15. masida kotu mattu laughing buddha
    hidisitu
    good line

    ReplyDelete
  16. ಬದರಿನಾಥ್ ಅವರಿಗೆ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು .ಮತ್ತೆ ಬನ್ನಿ.

    ReplyDelete
  17. Ashok ,Thanks for your kind comments.Iam glad you appreciate the finer points.please keep visiting.It is your blog dear!

    ReplyDelete
  18. ಡಾಕ್ಟರೆ..ಸಕತ್ತಾಗಿದೆ ಕಥೆ..ನಿಜವಾಗಲೂ ಹೊರನೋಟಕ್ಕೆ ಯಾರನ್ನೂ ಜಡ್ಜ್ ಮಾಡಬಾರದು..ನಿಮ್ಮ ಫೀಲ್ಡ್ ನ ಒಳ್ಳೆಯ ವಿವರಗಳನ್ನು ಮುಂದೆಯೂ ತಿಳಿಸುತ್ತಿರಿ:)

    ReplyDelete
  19. ವನಿತಾ ಅವರಿಗೆ ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ .ಕಥೆ ನಿಮಗೆ ಇಷ್ಟ ಆಗಿದ್ದು ಸಂತೋಷವಾಯ್ತು .ಮತ್ತೆ ಬ್ಲಾಗಿಗೆ ಬನ್ನಿ .ಧನ್ಯವಾದಗಳು .

    ReplyDelete
  20. ನವಿರಾಗಿ ನಿರೂಪಿತವಾದ ಪುಟ್ಟಕಥೆಯಲ್ಲಿ ಹಲವಾರು ಚಿ೦ತನೆ ಮತ್ತು ಪಾಠಗಳನ್ನು ಹೇಳಿದ್ದಿರಾ.... ಚೆ೦ದದ ಕಥೆ. ಚಿ೦ತನೆಗೆ ಹಚ್ಚುತ್ತೆ. ತಾಳಿದವನು ಬಾಳಿಯಾನು, ಪಾಲಿಗೆ ಬ೦ದದ್ದು ಪ೦ಚಾಮೃತ, ಅತುರಕ್ಕೆ ಭುದ್ಧಿ ಕೊಡಬಾರದು, ಹೊರವೇಷದಿ೦ದ ವ್ಯಕ್ತಿಗಳನ್ನು ನಿರ್ಧರಿಸಬಾರದು, ಪ್ರಯತ್ನಕ್ಕೆ ತಕ್ಕ ಫ಼ಲ ಇದ್ದೇ ಇರುತ್ತೆ, ಇತ್ಯಾದಿ ಹತ್ತು ಹಲವು ಊಕ್ತಿಗಳಿಗೆ ಉದಾಹರಣೆ ತಮ್ಮ ಪುಟ್ಟ ಕಥೆ.

    ReplyDelete
  21. ಸೀತಾರಾಮ ಸರ್ ಅವರಿಗೆ ನಮಸ್ಕಾರಗಳು.ಕೆಲವೊಂದು ಘಟನೆಗಳು ತಾವಾಗಿಯೇ ಘಟಿಸಿಬಿಡುತ್ತವೆ .ಘಟನೆ ನಡೆದ ನಂತರದಲ್ಲಿ ಹಾಗಾಗಿದ್ದರೆ ಸರಿಯಿರುತ್ತಿತ್ತು ,ಇವರು ಹೀಗೆ ಮಾಡಿದ್ದು ತಪ್ಪು ಎಂದೆಲ್ಲಾ ಹೇಳಬಹುದು.ಇಲ್ಲಿ ವೈದ್ಯರು ತಾಳ್ಮೆಗೆಡಬಾರದಿತ್ತು ಎಂದು ಬಹಳಷ್ಟು ಜನರ ಅಭಿಪ್ರಾಯ.ಮೂರು ತಿಂಗಳು ಚಿಕೆತ್ಸೆ ಪಡೆದು ನಾಲಕ್ಕು ಸಾವಿರದ ಬದಲಾಗಿ ಯಾವುದೋ ಮಾಸಿದ ಕೋಟನ್ನು ಕೊಟ್ಟರೆ ಯಾರಿಗಾದರೂ
    ತಕ್ಷಣಕ್ಕೆ ಸಿಟ್ಟು ಬರುವುದು ಸ್ವಾಭಾವಿಕ.ಅದನ್ನು ಅರ್ಥ ಮಾಡಿಕೊಂಡು ಅವರು ಸಿಟ್ಟಿನಲ್ಲಿ ಕೋಟನ್ನು ಬಿಸಾಡಿದ್ದರೂ ಅವರು ಕೊಟ್ಟ ಚಿಕಿತ್ಸೆ ಬಗ್ಗೆ
    ಅವನಿಗೆ ನಿಜಕ್ಕೂ ಕೃತಜ್ಞತೆ ಇದ್ದಿದ್ದರೆ ,ಈ ಘಟನೆ ನಡೆದ ಮೇಲೂ ಅವನು ಹತ್ತು ಸಾವಿರವನ್ನೇ ನೀಡಿದ್ದರೆ ನಮ್ಮೆಲ್ಲರ ದೃಷ್ಟಿಯಲ್ಲಿ ಆ ವ್ಯಕ್ತಿ
    ದೇವತಾ ಮನುಷ್ಯನೇ ಆಗಿಬಿಡುತ್ತಿದ್ದನಲ್ಲವೇ?

    ReplyDelete
  22. Thank you Nisha.Thanks for your kind comments.Kindly keep visiting the blog.namaste.

    ReplyDelete
  23. Dr.ಕೃಷ್ಣ ಮೂರ್ತಿ ಗಳೇ ,

    ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ .

    ಚೆನ್ನಾಗಿದೆ ಚಿಕ್ಕಹಾಗೂ ಚೊಕ್ಕ ಕತೆ .
    ಈ ಸಂದರ್ಭದಲ್ಲಿ "ಬುಟ್ಟಿಯಷ್ಟು ಬುದ್ದಿಗಿಂತ ಮುಷ್ಠಿ ಯಷ್ಟು ತಾಳ್ಮೆ ಲೇಸು "ಅನ್ನುವ ಮಾತು ಎಷ್ಟು ಸತ್ಯ ಅನಿಸುತ್ತಲ್ಲ .. ಕೆಲವೊಮ್ಮೆ ನಾವು ವ್ಯಕ್ತಿಯ ವೇಷಭೂಷಣ ನೋಡಿ ಹೇಗೆ ವ್ಯವಹರಿಸುತ್ತೆವಲ್ಲ !!

    ReplyDelete
  24. ಕೃಷ್ಣಮೂರ್ತಿಯವರೆ...

    ಕಥೆ ತುಂಬಾ ಚೆನ್ನಾಗಿದೆ...

    "ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯ ಬಾರದು.."

    ಕಥೆ ಇಷ್ಟವಾಯಿತು.......

    ನಿಮ್ಮ ಬ್ಲಾಗ್ ಸ್ವಾರಸ್ಯಕರವಾಗಿದೆ...

    ಅಭಿನಂದನೆಗಳು...

    ReplyDelete
  25. ಶಶಿ ಜೋಯಿಸ್ ಅವರಿಗೆ ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಗಾದೆ ಮಾತು ಚೆನ್ನಾಗಿದೆ.ಪ್ರೊ .ಕಾಳೇಗೌಡ ನಾಗವಾರ ಎನ್ನುವರು ಬರೆದ 'ಬೀದಿ ಮಕ್ಕಳು ಬೆಳೆದೋ 'ಎನ್ನುವ ಗಾದೆಗಳ ಪುಸ್ತಕವನ್ನು ಈಗ ಓದುತ್ತಿದ್ದೇನೆ .ಈ ಪುಸ್ತಕ ಮೂವತ್ತು ವರ್ಷಗಳ ಸಂಶೋಧನೆಯ ಫಲ !ಇದನ್ನು ಐ.ಎ .ಎಸ್.ಪರೀಕ್ಷೆಗೆ ಟೆಕ್ಸ್ಟ್ ಬುಕ್ ಮಾಡಿದ್ದಾರೆ!ಧನ್ಯವಾದಗಳು.ಮತ್ತೆಬನ್ನಿ.

    ReplyDelete
  26. ಸಿಮೆಂಟು ಮರಳಿನ ಮಧ್ಯೆಯ ಪ್ರಕಾಶ್ ಅವರಿಗೆ ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮಗೆ ನನ್ನ ಕಥೆ ಹಾಗೂ ಬ್ಲಾಗ್ ಇಷ್ಟವಾಗಿದ್ದು ಸಂತೋಷ ವಾಯಿತು .ಧನ್ಯವಾದಗಳು.ಮತ್ತೆ ಬನ್ನಿ .

    ReplyDelete
  27. ಕಥೆ ಪುಟ್ಟದಾಗಿದ್ದರೂ ಬಹು ದೊಡ್ಡ ನೀತಿ ಪಾಠವನ್ನು ಹೇಳುತ್ತದೆ. ಇಷ್ಟವಾಯಿತು.

    ReplyDelete
  28. ತೇಜಸ್ವಿನಿಯವರಿಗೆ; ನಮಸ್ಕಾರ .ಮಾಸಿದ ಕೋಟು -ಭಾಗ ಎರಡು ನೋಡಿ.ಧನ್ಯವಾದಗಳು.

    ReplyDelete
  29. ವೈದ್ಯ ಮಿತ್ರರೇ,ನಮಸ್ಕಾರ,ಮರಳಿ ಬಂದಿದ್ದೇನೆ,ಬರುತ್ತಿದ್ದೇನೆ, ಕೆಲವು ದಿನ ನನ್ನ ಬ್ಲಾಗ್ ಪಾರ್ಶ್ವವಾಯು ಪೀಡಿತರ ರೀತಿ ಆಗಿತ್ತು,ಆ ಗ್ರಹಣ ಶೀಘ್ರ ಹೋಗಲಿದೆ,ನಿಮ್ಮ ಈ ಕಥಾಭಾಗ ಚೆನ್ನಾಗಿದೆ,ಬಹಳ ಸಮಯವಿರದ್ದರಿಂದ ಸ್ವಲ್ಪ ಬೇಗ ಓದಿದ್ದೇನೆ,ನಾವೊಂಥರಾ ವೈದ್ಯರಲ್ಲಿ ಹೊಟ್ಟೆನೋವೂ ಇದೆ ಆದ್ರೆ ಕೇಸರಿಬಾತ್ ಕೂಡ ಬೇಕು ಅನ್ನೋ ಜನ ಮಾರಾಯರೆ! ಸ್ವತಃ ಗಣಕ ಯಂತ್ರದ ವೈದ್ಯನಾಗಿ ಒಂದಿಡೀದಿನ ನನ್ನದೇ ಬ್ಲಾಗ್ ಸಿಗದೇ ತಿಪ್ಪೆಗೆ ಎಸೆಯಲ್ಪಟ್ಟಿದ್ದೆ, ತಮಗೆ ತಮ್ಮ ಕಾಳಜಿಗೆ ಸದಾ ಋಣಿ.

    ReplyDelete
  30. fine sir though the story is short,it is touching

    ReplyDelete
  31. Nice heart touching story. Dr would have understood the feelings of the patient towards his coat. May be now Dr is thinking "kaige bandha tutthu bayige baralilla".

    ReplyDelete

Note: Only a member of this blog may post a comment.