Wednesday, June 9, 2010

'ಮನೆಯೊಡತಿಯರಿಗೊಂದು -ನುಡಿನಮನ'

ನಾವು,ಬದುಕಿನ ರಂಗ ಸ್ಥಳದಲ್ಲಿ 
ಹೊನಲು ಬೆಳಕಿನಲ್ಲಿ ,
ಹಾ ಹಾ ,ಹೋ ಹೋ ಎಂದು 
ಹೊಗಳಿಸಿ ಕೊಳ್ಳುತ್ತಾ ,
ಕೀರ್ತಿ ಪತಾಕೆಗಳ ಮುಡಿಗೇರಿಸಿ,
ಉಬ್ಬುತ್ತಾ ,ಕೊಬ್ಬುತ್ತಾ ,
ಅಟ್ಟಕ್ಕೆ ಏರುತ್ತಿರುವಾಗ ,
ನೀವು ನಾಲಕ್ಕು ಗೋಡೆಗಳ ಮಧ್ಯೆಯೇ 
ತಾಯಿ ಬೇರಿನಂತೆ ,ಕತ್ತಲಲ್ಲಿಯೇ 
ಆಳಕ್ಕಿಳಿದಿರಿ-----------,
ನಮ್ಮ ಬುನಾದಿಗಳ ಭದ್ರಪಡಿಸಲು!
ನೆಲದ ಸಾರವ ಹೀರಿ ,
ನಿಮಗಾಗಿ ಏನೂ ಉಳಿಸಿಕೊಳ್ಳದೆ,
ರೆಂಬೆ ಕೊಂಬೆಗಳಿಗೆ,
ಹೂವು ,ಹಣ್ಣುಗಳಿಗೆ ,
ಉಣಬಡಿಸುವುದರಲ್ಲೇ ಸವೆಯಿತು 
ನಿಮ್ಮ ಬಾಳು !
ಬಿಸಿಲು ,ಬೆಳಕು ಗಾಳಿಗಳಿಗೆ 
ಮೈಯೊಡ್ಡದೇ ---------,
ಬೇರಾಗಿಯೇ ಉಳಿದು ,
ತೆರೆಯ ಮರೆಯಲ್ಲೇ ,
ಅಹರ್ನಿಶಿ ದುಡಿದ ನಿಮ್ಮೆಲ್ಲರಿಗೆ ,
ಇದೋ ---------ನನ್ನ ,
ನುಡಿ ---------- ನಮನ!

38 comments:

  1. ನಿಜ ಸರ್
    ಅವರ ತ್ಯಾಗ ಬಹಳ ದೊಡ್ಡದು
    ನಮ್ಮ ನಮನ

    ReplyDelete
  2. ಗುರುಮೂರ್ತಿಯವರಿಗೆ ನಮಸ್ಕಾರ.ನನ್ನ ಪ್ರಕಾರ ಅವರೆಲ್ಲಾ ನಿಜ ಜೀವನದ 'unsung heroes'(or you can call them the real life heroines).ನಮ್ಮೆಲ್ಲರ ಸಾಧನೆಗಳ ಹಿಂದೆ ಅವರ ದುಡಿಮೆ ಇದೆ. ಧನ್ಯವಾದಗಳು.

    ReplyDelete
  3. ಯಾವಾಗಲೂ ಹೀಗೇ, ಜಗತ್ತೇ ಹೀಗೇನೋ, ಅಲ್ಲಿ ಗಡಿಯ ಕಾಯ್ವ ಯೋಧರಿಗೆ ಜೀವವೇ ಪಣ! ಅವರಿಗಿಲ್ಲ ಪರ್ಯಾಯದ ಅಂಕಣ. ಇಲ್ಲಿ ಸಿನಿಮಾದಲ್ಲಿ ಹಾಗೊಮ್ಮೆ ಹಾಡು ಹೋದವ ಸ್ಟಾರು! ಮನೆಯಲ್ಲಿ/ಹೊಲದಲ್ಲಿ ಹಗಲಿರುಳು ಮರೆಯದೇ ದುಡಿವ ಕೃಷಿಕರಿಗೆ/ಮಹಿಳೆಯರಿಗೆ ಇಲ್ಲ ಯಾವೊಂದೂ ಮಹತ್ತರ ಪಾರಿತೋಷಕ,ಪುರಸ್ಕಾರ, ಅವಿಗೆ ನಮ್ಮೆಲ್ಲರ ಮನಸ್ಸಲ್ಲಾದರೂ ಇರಲಿ ನಮನ,ನಮಸ್ಕಾರ

    ReplyDelete
  4. ವಿ.ಆರ್.ಭಟ್ ರವರಿಗೆ ನಮನಗಳು.'they also serve,who work
    behind the lime light'.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  5. ಬಹಳ ಚೆನ್ನಾಗಿದೆ ಕವನ, ಮತ್ತು ಅದರೊಳಗಿನ ಆಶಯ

    ReplyDelete
  6. ಮೂರ್ತಿಯವರೆ,ಎಲ್ಲರ ಸಾದನೆಯ ನಿಜವಾದ credit ಸಲ್ಲಬೇಕಾದ್ದು ಅವರಿಗೇ.
    ಚೆ೦ದದ ಕವನಕ್ಕೆ ಅಭಿನ೦ದನೆ.

    ReplyDelete
  7. ಪರಾಂಜಪೆ ಯವರಿಗೆ ನಮಸ್ಕಾರಗಳು.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  8. ಕೂಸು ಮುಲಿಯಳ ಅವರಿಗೆ ನಮನಗಳು.ಇಡೀ ಸಂಸಾರಕ್ಕಾಗಿ ತೆರೆಯ ಮರೆಯಲ್ಲೇ
    ತಮ್ಮ ಜೀವವನ್ನು ತೇಯುತ್ತಾರಲ್ಲಾ,ಅವರನ್ನು ಕಂಡು ಮನ ಮಿಡಿಯುತ್ತದೆ.ಅಂಥವರಿಗಾಗಿ ನನ್ನದೊಂದು ಸಣ್ಣ ನುಡಿ ನಮನ.

    ReplyDelete
  9. ಅನಿವಾರ್ಯ ಕಾರಣಗಳಿಂದ ತಮ್ಮ ಹಿಂದಿನ ಎಲ್ಲಾ ಬರಹಗಳನ್ನು ಇಂದು ಓದುತ್ತಾ ಕುಳಿತಿದ್ದೇನೆ(ಬ್ಲಾಗಿನ ಯಾವ ಲೇಖನಗಳನ್ನು ಓದಲಾಗಿರಲಿಲ್ಲ.). ನುಡಿ ನಮನವಂತೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮಡದಿಯ ಮೇಲಿನ ತಮ್ಮ ಪ್ರೀತಿಯನ್ನು ನೋಡಿದಾಗ ಕೆ.ಎಸ್.ಎನ್ ರ ಕವನಗಳು ನೆನಪಾದವು. ಎಂತಹ ನವಿರಾದ ಪ್ರೀತಿ ಅದು. ತಮ್ಮ ಕವನದಲ್ಲೂ ಅದೆಷ್ಟು ಚೆಂದವಾಗಿ ಬಂದಿದೆ.

    ReplyDelete
  10. ಸಾಗರಿಯವರಿಗೆ ನಮನಗಳು.ಈ ನುಡಿನಮನ ಮನೆಯಲ್ಲೇ ಇದ್ದು ಇಡೀ ಸಂಸಾರಕ್ಕಾಗಿ ಹೆಣಗುವ,ತಮ್ಮ ಜೀವವನ್ನೇ ಸವೆಸುವ ಕೋಟಿ ,ಕೋಟಿ ಹೆಣ್ಣುಮಕ್ಕಳಿಗೆ.ಅವರೆಲ್ಲರ ನಿಸ್ವಾರ್ಥ ಸೇವೆ ಸಾಟಿಯಿಲ್ಲದ್ದು!ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  11. dr. sir,
    nija sir, naaveno horagadeyinda bandu computer munde kuLitu kuttuttirutteve....... aadaroo adannu sahisikondu, namma hitachintane, mane toogisikondu hoguva ellarigoo namma namana.......... tumbaa naviraada kavana sir....

    ReplyDelete
  12. nimma nudi namana dinda navu hemme inda beeguvanthe madiddakke nimage namma namana.

    ReplyDelete
  13. ದಿನಕರ ಮೊಗೇರ ಅವರಿಗೆ ನಮನಗಳು.ನಾವು ಸಣ್ಣವರಿದ್ದಾಗ ಕೂಡು ಕುಟುಂಬಗಳ ಹೆಣ್ಣುಮಕ್ಕಳ ಕೆಲಸದ ರೀತಿಯನ್ನು ಕಣ್ಣಾರೆಕಂಡವರು.ಜೀವನವನ್ನೆಲ್ಲಾ ಮನೆಯವರಿಗಾಗಿ ,ಮನೆಯವರ ಒಳಿತಿಗಾಗಿ ಮುಡುಪಿಟ್ಟವರು.ಅವರ ತ್ಯಾಗದ ನಿಸ್ವಾರ್ಥದ ,ವಾತ್ಸಲ್ಯಮಯ ಜೀವನವನ್ನು ನೆನಸಿಕೊಂಡರೆ ಈಗಲೂ ಕಣ್ಣುಗಳು ಒದ್ದೆಯಾಗುತ್ತವೆ!ಯಾವ ಹೆಸರಿನ ಆಸೆಯೂ ಇಲ್ಲದೆ,ಗಂಡ ,ಮಕ್ಕಳ ಅಭಿವೃದ್ಧಿ ಯಲ್ಲಿಯೇ ಸಂತೋಷ ಪಡುವ ಈ ಹೆಣ್ಣು ಜೀವರಿಗೆ ನಮ್ಮ ನಮನ ಸಲ್ಲಬೇಕಲ್ಲವೇ ?ಧನ್ಯವಾದಗಳು.

    ReplyDelete
  14. ನಿಶಾ ಅವರಿಗೆ ನಮನಗಳು.ನಾವೆಲ್ಲಾ ನಮ್ಮ ನಮ್ಮ ಸ್ವಾರ್ಥದ ಪರಿಧಿಯಲ್ಲೇ ಹೆಣ್ಣನ್ನು ಅರ್ಥ ಮಾಡಿಕೊಳ್ಳುತ್ತೇವೆ.ಹೆಣ್ಣಿಗೆ ವಿಶಿಷ್ಟ ಸ್ಥಾನವಿದೆ.ಆಕೆ ಪ್ರಕೃತಿಯ ಪ್ರತಿರೂಪ.ಆಕೆಗೆ ದೈವದತ್ತವಾಗಿ ಪ್ರೀತಿ, ಕರುಣೆ,ವಾತ್ಸಲ್ಯ,ತಾಳ್ಮೆ,ಸಂಸಾರವನ್ನು
    ತೂಗಿಸಿಕೊಂಡು ಹೋಗುವ ಜಾಣ್ಮೆ,ಎಲ್ಲವೂ ಇವೆ.THIS IS FOR THE LIFE TO GO ON! ಇದನ್ನು ನಾವೆಲ್ಲಾ ಅರ್ಥೈಸಿಕೊಳ್ಳ ಬೇಕಾಗಿದೆ.ನಿಮ್ಮ ಅನಿಸಿಕೆಗಳಿಗೆ
    ಧನ್ಯವಾದಗಳು.

    ReplyDelete
  15. ಕೇವಲ ಭೋಗವಸ್ತುವಂತೆ ಚಿತ್ರಿಸಲ್ಪಡುತ್ತಿರುವ ಈ ಕಾಲದಲ್ಲಿ ಹೆಣ್ಣಿನ ಇಂತಹ ಚಿತ್ರಣ ಹೆಚ್ಚು ಪ್ರಸ್ತುತ .

    ReplyDelete
  16. ಸುಮ ಅವರಿಗೆ ನಮನಗಳು.'ಅರ್ಥ ಮಾಡ್ಕೊಂಡ್ ,ಅಂಗಿಲ್ ಇಂಗೆ ,ಅನ್ನೋರ ಮಾತು ಗಂಗೆ!'ಧನ್ಯವಾದಗಳು.

    ReplyDelete
  17. ತುಂಬ ಒಳ್ಳೆಯ ಆಶಯದ ಕವನ.

    ReplyDelete
  18. ಸುಬ್ರಮಣ್ಯ ಅವರಿಗೆ ನಮನಗಳು.ಕವಿತೆಯ ಬಗ್ಗೆಯ ತಮ್ಮ ಹಿತ ನುಡಿಗಳಿಗೆ ಧನ್ಯವಾದಗಳು.

    ReplyDelete
  19. ಹೆಣ್ಣು ಸಂಸಾರದ ಕಣ್ಣು.
    ಸುಂದರವಾಗಿ ಚಿತ್ರಿಸಿದ್ದೀರ ಹೆಣ್ಣಿನ ಬಗ್ಗೆ. ಹೆಣ್ಣಿನ ನಿಸ್ವಾರ್ಥ ಪ್ರೀತಿಯೇ ಅಂತಹುದು..........

    ReplyDelete
  20. ನಮಸ್ಕಾರ ಪ್ರವೀಣ್.ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.ಬರುತ್ತಿರಿ.

    ReplyDelete
  21. ಮನೆಯೊಡತಿಯ ಮೌಲ್ಯಯುತ ಬದುಕಿನ ಉತ್ತಮ ಚಿತ್ರಣ. 'ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು' ಎಂಬ ಸಾಲು ನೆನಪಿಗೆ ಬರುತ್ತಿದೆ.

    ReplyDelete
  22. tumbachennagide,hennu jeevada upakarakke enu kottaroo samanagadu.kavanada koneyardha bhaga tumba chennagi bandide.dhanyavadagalu.

    ReplyDelete
  23. ಈಗ ಕಾಲ ಬದಲಾಗಿದೆ.ಹೆಣ್ಣು ಗಂಡಿನಂತೆ ಹೊರಗೂ ದುಡಿಯುವುದರಿಂದ ಅವಳೂ ವೃತ್ತಿಯಲ್ಲಿಯ ಸಾಧನೆಯಿಂದ ಹೆಸರು,ಹಣ ಗಳಿಸಿ 'lime light'ನಲ್ಲಿ ಇರುವ ಸಾಧ್ಯತೆ ಇದೆ.ನಮ್ಮ ಹಿಂದಿನ ಪೀಳಿಗೆಯಲ್ಲಿ ಹೆಣ್ಣು 'house wife'ಆಗಿ ನಾಲ್ಕು ಗೋಡೆಗಳ ನಡುವೆಯೇ ಜೀವನ ಸವೆಸುತ್ತಿದ್ದುದು ಸಾಮಾನ್ಯವಾಗಿತ್ತು.ಇವರಲ್ಲಿ ಸುಮಾರು ಜನಕ್ಕೆ ತಾವು ಹೊರಗೆ ದುಡಿಯಲಿಲ್ಲ,ಏನೂ ಸಾಧನೆ ಮಾಡಲಿಲ್ಲವಲ್ಲ ಎಂಬ ಕೊರಗು,ಕೀಳರಿಮೆ ಕಾಡುತ್ತಿರುತ್ತಿತ್ತು.ಹೊರಗೆ ದುಡಿದು name and fame ಗಳಿಸುತ್ತಿದ್ದ ಗಂಡಿನ
    ಸಾಧನೆಗೆ ಮನೆಯಲ್ಲಿನ ಹೆಣ್ಣಿನ ಸಾಧನೆ ಪೂರಕವಾಗಿರುತ್ತಿತ್ತು.ಅವರಿಗೆ ಒಂದು
    recognition ಇರುತ್ತಿರಲಿಲ್ಲ ಅಷ್ಟೇ.ಧನ್ಯವಾದಗಳು ಭಟ್ಟರೆ.

    ReplyDelete
  24. ಹೇಮಚಂದ್ರ ;ಕವನ ನಿಮಗೆ ಇಷ್ಟವಾಗಿದೆ ಎಂದು ಹೇಳಿದ್ದೀರಿ.ಧನ್ಯವಾದಗಳು.

    ReplyDelete
  25. Dear Ashok;Thank you very much for your kind comments.

    ReplyDelete
  26. ನಿಜ... ಇದನ್ನು ತಿಳಿದರೂ ಒಪ್ಪಿಕೊಂಡು, ಗುರುತಿಸಿ ನಮಿಸುವವರು ಬಹಳ ಕಡಿಮೆ.
    ನಿಮ್ಮ ಬ್ಲಾಗ್ ಗೆ ಬಂದು ಸಂತೋಷವಾಯಿತು. ಧನ್ಯವಾದಗಳು

    ReplyDelete
  27. ಭಾಶೇಯವರಿಗೆ ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಹೆಂಗಸರಿಗೆ ನಿಜವಾಗಿ ಸಲ್ಲಬೇಕಾದ ಗೌರವವನ್ನು ನೀಡುವುದು ಸಮಸ್ತ ಮನುಕುಲಕ್ಕೇ ಒಳ್ಳೆಯದು ಎನ್ನುವುದು ನನ್ನ ಅಭಿಮತ.ಧನ್ಯವಾದಗಳು,ಬ್ಲಾಗಿಗೆ ಬರುತ್ತಿರಿ.

    ReplyDelete
  28. Uttama abhiruchiya Kavana
    Thanks
    ನಮಗೆಲ್ಲ ಕನ್ನಡ ಪ್ರೀತಿ ಅನಿವಾರ್ಯ. ಡಾ.ಗೂ ಪ್ರಿತಿ ಇದ್ದದ್ದು ಅತೀವ ಸಂತೋಷ

    ReplyDelete
  29. ಶರ್ಮ ಅವರಿಗೆ ನಮನಗಳು.ಪ್ರಜಾವಾಣಿಯಲ್ಲಿ ನಿಮ್ಮ ಕಥೆ ಓದಿದ್ದೆ.ಇಷ್ಟವಾಗಿಟ್ಟು .ನೀವು ಇಲ್ಲೇ ತಳವಾಟದಲ್ಲಿ ಇರುವುದರಿಂದ ಒಮ್ಮೆ ಭೆಟ್ಟಿ ಆಗೋಣ.ನಿಮ್ಮ ಬ್ಲಾಗ್ ಫಾಲೋಯರ್ ಆಗುವುದು ಹೇಗೆಂದು ತಿಳಿಯಲಿಲ್ಲ.ಫಾಲೋಯರ್ಸ್ ಲಿಸ್ಟ್ ಇಲ್ಲ.
    ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  30. ಚಿತ್ರಾ ಸಂತೋಷ್ ಅವರಿಗೆ; ನನ್ನ ಬ್ಲಾಗಿಗೆ ಸ್ವಾಗತ.ಬರುತ್ತಿರಿ.ಧನ್ಯವಾದಗಳು.

    ReplyDelete
  31. ಬಹಳ ಸುಂದರವಾದ ಕವನ. ಹೆಣ್ಣು ಜೀವಕ್ಕೆ ಸಾರ್ಥಕ ವಾ ಇತು.

    http://gadhyapadhya.blogspot.com [kannada Blog]
    http://arsahana.blogspot.com [Poetry Blog]
    http://rpsahana.blogspot.com [Prose Blog].

    ReplyDelete
  32. creativity;welcome to my blog and thank you very much for your kind comments.

    ReplyDelete
  33. ಸರ್,
    ಹೆಣ್ಣಿನ ಮಹಾನತೆಯನ್ನು ಎಷ್ಟು ವರ್ಣಿಸಿದರೂ ಕಡಿಮೆನೇ ಅಲ್ವಾ ಸರ್....ತುಂಬಾ ಚೆನ್ನಾಗಿದೆ....

    ReplyDelete
  34. ಧನ್ಯವಾದಗಳು ಅಶೋಕ್.ನಮ್ಮ ಸುತ್ತಮುತ್ತಲಿನ ಹೆಣ್ಣು ಮಕ್ಕಳನ್ನೇ ನೋಡಿ!ಅವರ ತ್ಯಾಗವೇನು ಸಣ್ಣದೆ?

    ReplyDelete
  35. ಚೆ೦ದದ ಕವನ ತೆರೆಮರೆಯ ಜೀವಿಗಳಿಗೆ ನುಡಿನಮನ ಅವಶ್ಯ!

    ReplyDelete

Note: Only a member of this blog may post a comment.