Saturday, May 29, 2010

'ಮನ್ಸರ್ ಮಾತು '

ಮಾತಿನ ಬಗ್ಗೆ ಎರಡು ಮಾತು.ಮಾತು ಮನುಷ್ಯನಿಗೆ ವರವೂ ಹೌದು,ಶಾಪವೂ ಹೌದು. ಹೇಳುವಂತಹ ಮಾತುಗಳನ್ನು ಹೇಳಬಹುದಾದಲ್ಲಿ ಹೇಳಿದರೆ ಅರ್ಥ.ಹೇಳಬಾರದಲ್ಲಿ ಹೇಳಿದರೆ ವ್ಯರ್ಥ.ಇನ್ನು ಕೆಲವೆಡೆ ಅನರ್ಥ! ಹೇಳಬಾರದನ್ನು ಹೇಳಿ,ಎಡವಟ್ಟು ಮಾಡಿಕೊಂಡು 'ಅಯ್ಯೋ ನಾನು ಹೀಗೆ ಹೇಳಬಾರದಿತ್ತು ,ಹಾಗೆ ಹೇಳಬೇಕಾಗಿತ್ತು' ಎಂದು ಪರದಾಡುವರೇ ಹೆಚ್ಚು.ಕೆಲವರ ಮಾತು ಕೇಳುತ್ತಲೇ ಇರಬೇಕುಎನಿಸುತ್ತದೆ.ಕೆಲವರು ಮಾತು ಶುರು ಮಾಡಿದರೆ ಎದ್ದು ಓಡಿ ಹೊಗಬೇಕಿನಿಸುತ್ತದೆ.ಮಾತನಾಡುವುದೂ ಒಂದು ಕಲೆ.ಈ ಕಲೆಯನ್ನು ಸಿದ್ಧಿಸಿ ಕೊಂಡವರಲ್ಲಿ ನಮ್ಮ ಹಿರಿಯ ಕವಿ ಜಿ.ಪಿ.ರಾಜ ರತ್ನಂಕೂಡಒಬ್ಬರು.ಅವರ'ರತ್ನನಪದಗಳು'
ಪುಸ್ತಕದಲ್ಲಿ ಮಾತಿನ ಬಗ್ಗೆಯೇ ಒಂದುಕವನವಿದೆ.ಕವನದ ಹೆಸರು'ಮನ್ಸರ್ ಮಾತು'.ಈ ಕವನವನ್ನು ಮಾತಿನ ಬಗ್ಗೆ
ಉಪನ್ಯಾಸ ಕೊಡುವಾಗಲೆಲ್ಲಾ quote ಮಾಡಬಹುದು.
ಮಾತು ಪರಿಣಾಮ ಕಾರಿಯಾಗಿರುತ್ತೆ.ನಾನು ಹಲವಾರು
ವೇದಿಕೆಗಳಲ್ಲಿಈ ಪದ್ಯವನ್ನು ಕೋಟ್ ಮಾಡಿದ್ದೇನೆ.
ಬನ್ನಿ ಓದೋಣ,'ಮನ್ಸರ್ ಮಾತು';-
'ಮನ್ಸರ್ ಮಾತು '

ಹೇಳಾದ್ ಏನ್ರ,ಹೇಳಾದ್  ಇದ್ರೆ
ಜಟ್ ಪಟ್ನ ಹೇಳಿ ಮುಗೀಸು .
ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ
ಆಮೇಕ್ ದೊಣ್ಣೆ ಬೀಸು.

ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ
ಕೇಳಾಕ್  ಬಲ್ ಪಜೀತಿ .
ಬೈರ್ಗೆ ಕೊರದಂಗ್ ಕೊರಿತಾನಿದ್ರೆ
ಯಾವ್ ದೇವರ್ಗೆ ಪ್ರೀತಿ ?

ಕುಂಬಾರ್ ಗೌಡನ್ ಚಕ್ರಕ್ಕೂನೆ
ಗಾಳ ನೋಡಿದ್ ಮೀನ್ಗೂ
ಸುತ್ಕೊಂಡ್ ಸುತ್ಕೊಂಡ್ ಹೋಗೋದ್ ಸಹಜ
ಅದ್ಯಾಕ್ ನನಗೂ  ನಿನಗೂ ?

ಕೇಳೋರ್  ಇನ್ನಾ  ಕೇಳಬೇಕಂತಾ
ಕುಂತ್ಕಂಡ್ ಇದ್ದಂಗೇನೇ
ಹೇಳೋದ್ನ ಎಷ್ಟೋ ಅಷ್ಟರಲ್ ಹೇಳಿ
ಮನೇಗೆ ಹೋಗೋನ್ಗೆ ಮೇನೆ!

ಮಾತ್ ಇರಬೇಕು ಮಿಂಚ್ ಹೊಳದಂಗೆ !
ಕೇಳ್ದೋರ್ 'ಹಾಂ 'ಅನಬೇಕು !
ಸೋನೆ ಹಿಡದ್ರೆ ಉಗದ್ ಅಂದಾರು
'ಮುಚ್ಕೊಂಡ್ ಹೋಗೋ ಸಾಕು'!

ಮನ್ಸನ್ ಮಾತು ಎಂಗಿರಬೇಕು ?
ಕವಣೆ ಗುರಿ ಇದ್ದಂಗೆ !
ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !

15 comments:

  1. ನಿಜ ನಿಮ್ಮ ”ಮಾತು”
    ಜಿ.ಪಿ.ರಾಜ ರತ್ನಂ ರವರ ಕವಿತೆ ಪರಿಚಯಿಸಿದ್ದಕ್ಕೆ ವ೦ದನೆಗಳು.

    ReplyDelete
  2. ಚುಕ್ಕಿ ಚಿತ್ತಾರ ಅವರಿಗೆ ಬ್ಲಾಗಿಗೆ ಮತ್ತೊಮ್ಮೆ ಸ್ವಾಗತ.'ರತ್ನನ' ಮಾತು ನಿಜಕ್ಕೂ
    ರತ್ನದಂತಹ ಮಾತುಗಳು!ಎಲ್ಲರಿಗೂ ಇಷ್ಟವಾಗಬಹುದು ಎಂದುಕೊಂಡಿದ್ದೇನೆ.ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  3. ಚೆ೦ದವಾಗಿ ಮಾತು ಹೇಗಿರಬೇಕು ಅ೦ದಿದ್ದಿರ್ರಾ ಜೊತೆಗೆ ರತ್ನನ ಕಾವ್ಯ! ಹೋಳಿಗೆನೆ ಸೀಕರಣೆಲ್ಲಿ ಅದ್ದಿ ತಿ೦ದ ಹಾಗಿದೆ.

    ReplyDelete
  4. nimma kolalu iga nanna kavanadalli sEride nOdidraa...

    ReplyDelete
  5. ನಮಸ್ಕಾರ ಸೀತಾರಾಮ್ ಸರ್.ನಿಮ್ಮ ಕವಿತೆಯಲ್ಲಿ 'ಒಂದು ಚೂರು' ಕೊಳಲಿನ ದನಿಯನ್ನೂ ಸೇರಿಸಿದ್ದಕ್ಕೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರಿಯಲಿ.

    ReplyDelete
  6. ಮಾತು ಆಡಿದರೆ ಮುಗಿಯಿತು
    ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಇರುವುದು ಇದಕ್ಕೆ ಇರಬೇಕು. ನಾವು ಮಾತನ್ನು ಯೋಚಿಸಿ ಆಡಬೇಕು.
    ರಾಜರತ್ನಂ ಅವರ "ಮನ್ಸರ್ ಮಾತು" ಅತೀ ಸುಂದರ. ಅದನ್ನು ಪರಿಚಯಿಸಿದ ನಿಮಗೆ ನಮಸ್ಕಾರ.

    ReplyDelete
  7. ರಾಘು ಅವರಿಗೆ ನಮಸ್ಕಾರ.ನಿಮಗೆ ರತ್ನನ ಪದದ 'ಮನ್ಸರ್ ಮಾತು'ಇಷ್ಟವಾಗಿದ್ದು
    ಸಂತೋಷ.ಬ್ಲಾಗಿಗೆ ಹೀಗೇ ಬರುತ್ತಿರಿ.ಧನ್ಯವಾದಗಳು.

    ReplyDelete
  8. ನಮಸ್ಕಾರ ಪ್ರವೀಣ್ .ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.

    ReplyDelete
  9. Thumba chennagide. Rathnana pada odi kushiyayithu

    ReplyDelete
  10. ನಿಶಾ ಅವರಿಗೆ ನಮಸ್ಕಾರಗಳು.ಬ್ಲಾಗಿನಲ್ಲಿ ಪೋಸ್ಟ್ ಮಾಡಿದ ಕವನಗಳನ್ನು ಓದಿ
    ಎಲ್ಲರೂ ಖುಷಿ ಪಟ್ಟರೆ ಸಂತಸವಾಗುತ್ತದೆ.ಬ್ಲಾಗಿಗೆ ಬರುತ್ತಿರಿ.ಧನ್ಯವಾದಗಳು.

    ReplyDelete
  11. @ ಕೃಷ್ಣಮೂರ್ತಿ ಸರ್

    ಜಿ. ಪಿ. ರಾಜರತ್ನಂ ರವರ 'ಮನ್ಸರ್ ಮಾತು ' ಮೂಲಕ ಮಾತಿನ ಮಹತ್ವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ...ಧನ್ಯವಾದಗಳು.

    ReplyDelete
  12. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು ಅಶೋಕ್ ಅವರೆ.ಹೀಗೇ ಬ್ಲಾಗಿಗೆ ಬರುತ್ತಿರಿ.

    ReplyDelete
  13. ಅತ್ಯತ್ತಮ
    ಮಾನ್ಸರ್ ಮಾತು ಅತ್ಯತ್ತಮ

    ರಾಜರತ್ನಂ ಅವರ ಕೊನೆ ಪ್ಯಾರ

    "ಮನ್ಸನ್ ಮಾತು ಎಂಗಿರಬೇಕು ?
    ಕವಣೆ ಗುರಿ ಇದ್ದಂಗೆ !
    ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
    ಮಕ್ಕಳ ಮುತ್ತಿದ್ದಂಗೆ ! "

    ಬಸವಣ್ಣ ಅವರು ನಯವಾಗಿ ಹೇಳಿದ್ದನ್ನ
    ರತ್ನಂ ಅವರು ಕವಣೆ ಗುರಿ ಇದ್ದಂಗೆ ಹೇಳಿದ್ದು
    ಅತ್ತ್ಯುತ್ತಮ

    ReplyDelete
  14. ಅವರು ಕೊನೆಯ ಸಾಲಿನಲ್ಲಿ 'ಕೇಳದೋರ್ ಮನಸ್ಸಿಗೆ ಲಗತ್ ಆಗಬೇಕು ಮಕ್ಕಳ
    ಮುತ್ತಿದ್ದಂಗೆ'ಅಂತ ಹೇಳಿದ್ದು ತುಂಬಾ ಇಷ್ಟವಾಯಿತು.ಧನ್ಯವಾದಗಳು ಅಶೋಕ್.

    ReplyDelete

Note: Only a member of this blog may post a comment.