Wednesday, June 30, 2010

'ಕನ್ನಡಿಯೊಳಗಿನ ಗಂಟು '

ಬಾತ್ ರೂಮಿನ 
ಕನ್ನಡಿಯ ಮೇಲೊಂದು 
ಹಲ್ಲಿ---------!
ಕುಳಿತೇ  ಇತ್ತು
ಅಲ್ಲಿ -------!
ಯುಗ ಯುಗಗಳ 
ಅಲಸಿಕೆಯ
ಪಳೆಯುಳಿಕೆಯಂತೆ !
ಪ್ರತಿಬಿಂಬವೇ ಸಂಗಾತಿ 
ಎನಿಸಿತೋ ಏನೋ !
ಬಿಟ್ಟರೆ------- ಮತ್ತೆ 
ಸಿಗದೆಂದೋ ಏನೋ !
ಹಾಗೇ---- ಕುಳಿತಿತ್ತು 
ಬಹಳ------ ಹೊತ್ತು !
ಒಂದರೆ ಕ್ಷಣ ಮಾತ್ರ 
ಹೊರಳಿತ್ತು---- ಚಿತ್ತ !
ಕನ್ನಡಿಯಲಿ   ಕುಳಿತ 
ಚಿಟ್ಟೆಯತ್ತ---------- !
ಜಾರಿಬಿತ್ತು -----ಹಲ್ಲಿ !
ಗೊರ,ಗೊರನೆ ಕ್ಯಾಕರಿಸಿ
ಉಗಿದಿತ್ತು -------ನಲ್ಲಿ !
ಪಾಪ  ಪರದಾಡುತಿದೆ 
ಹಲ್ಲಿ ----------------!
ಕೆಳಗೆ -----ಸಿಂಕಿನಲ್ಲಿ!


27 comments:

  1. hhaa...hhaaa. sakkattaagide sir..... praasabaddavaagide, arthabaddavaagide....

    ReplyDelete
  2. ಪಾಪ ಹಲ್ಲಿ..

    ದಯವಿಟ್ಟು ತಪ್ಪು ತಿಳಿಯಬೇಡಿ.. ನನ್ನದೊಂದು ಚಿಕ್ಕ ಪ್ರಶ್ನೆ...
    "ಅಲಸಿಕೆ" ಹೀಗಂತ ಬೇಕಂತಲೇ ಬರೆದಿದ್ದಾ..? ಅಥವಾ ಬೆರಳಚ್ಚಿನ ಕೈವಾಡವಾ..?? ಬೇಕಂತಲೇ ಬರೆದಿದ್ದರೆ "ಅಲಸಿಕೆ" ಅಂತಂದ್ರೆ ಏನು..?

    ReplyDelete
  3. ಓ.. ಅರ್ಥವಾಯ್ತು.. ಅಲ್ಲಿ ಇಲ್ಲಿ ಸ್ವಲ್ಪ ಹುಡುಕಿದ ಮೇಲೆ ಗೊತ್ತಾಯ್ತು. ಆಲಸ್ಯ, ಸೋಮಾರಿತನ ಅನ್ನೋಕೆ ಅಲಸಿಕೆ ಅಂತಲೂ ಹೇಳ್ತಾರೆ ಅಂತ... ಪ್ರಶ್ನಿಸಿ ತಲೆ ತಿಂದದ್ದಕ್ಕೆ ಕ್ಷಮೆಯಿರಲಿ...

    ReplyDelete
  4. ದಿನಕರ ಮೊಗೇರರವರಿಗೆ ;ಪ್ರತಿಕ್ರಿಯೆಗೆ ಧನ್ಯವಾದಾಗಳು.ಅರ್ಥ,ಪ್ರಾಸ ಎರಡನ್ನೂ ಹೊಂದಿಸುವಷ್ಟರಲ್ಲಿ ತಲೆ ಇನ್ನಷ್ಟು ಬೋಳಾಗಿದೆ!ಹಾ --ಹಾ --ಹಾ !

    ReplyDelete
  5. ದಿಲೀಪ್ ಹೆಗ್ಡೆ;ನಮಸ್ಕಾರ.ನೀವು ಹೇಳುವುದು ಸರಿ.ಬೇರೆ ಪದಗಳನ್ನು ಹೊಂದಿಸಲಾಗದೆ ಸ್ವಲ್ಪ ವಿರಳವಾಗಿ ಬಳಸುವ ಪದವನ್ನು ಬಳಸಿದ್ದೇನೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. ಕೃಷ್ಣಮೂರ್ತಿಯವರೆ...

    ಇದುವೇ.. ಜೀವನಾ...
    ಹೀಗೆಯೇ,, ಜೀವನಾ..

    ಬಹಳ ಸುಂದರವಾಗಿದೆ..
    ಬದುಕಿನ ಪ್ರತಿಕ್ಷಣದಲ್ಲೂ..
    ಮೃತ್ಯು..
    ಪಕ್ಕದಲ್ಲೇ..
    ಸಮೀಪದಲ್ಲಿ ಹೊಂಚಿಕಾದುಕುಳಿತಿರುತ್ತದೆ ಅಲ್ಲವಾ?

    ಅಭಿನಂದನೆಗಳು...

    ReplyDelete
  7. ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಕಾಶ್.ನನ್ನ ಕವಿತೆ ತಮಗೆ ಬೇರೆಯದೇ ಅರ್ಥ ಕೊಟ್ಟಿದೆ!That is the beauty of any poetry!ಇಲ್ಲಿ ಹಲ್ಲಿಯ
    ಪರಿಸ್ಥಿತಿಯನ್ನು ಸಂಗಾತಿಯೊಬ್ಬಳಿದ್ದೂ ಬೇರೊಂದು ಹೆಣ್ಣಿನ ಜಾಲಕ್ಕೆ ಬೀಳುವ ಗಂಡಿನ
    ಸ್ಥಿತಿಗೆ ಉಪಮೆಯಾಗಿ ಬಳಸಿಕೊಂಡಿದ್ದೇನೆ.ನಿಮಗೆ ಬೇರೆಯೇ ಅರ್ಥ ಕೊಟ್ಟಿದ್ದು ಕವಿತೆಯ ಬೇರೆ ಸಾಧ್ಯತೆಗಳನ್ನೂ explore ಮಾಡುತ್ತದೆಯಲ್ಲವೇ? ನಮಸ್ಕಾರ ,ಬರುತ್ತಿರಿ.

    ReplyDelete
  8. NAMMA DESHADA MADHYAMA VARGADA SADHYADA PADU.
    DHANYAVADAGALU

    ReplyDelete
  9. ಹೇಮಚಂದ್ರ ;ಕವಿತೆಗೆ ಹೊಸದಾದ ಬೇರೊಂದು ಅರ್ಥ ಕೊಟ್ಟಿದ್ದೀರ.ಆ ದಿಕ್ಕಿನಲ್ಲಿ
    ನಾನು ಯೋಚಿಸಿರಲಿಲ್ಲ.ಧನ್ಯವಾದಗಳು.

    ReplyDelete
  10. ಅಚೀಚೆ ಕಣ್ಣು
    ತಲೆ ತಿಂತು ಮಣ್ಣು

    ಚೆನ್ನಾಗಿದೆ ಕವನ!

    ReplyDelete
  11. ಸರ್, ಎಲ್ಲಿಂದ ಕ್ರಿಯೆಟ್ ಮಾಡುತ್ತೀರಿ ಇಂತ ಕವನವನ್ನ....??

    Every time i visit here, get something new and refreshing ....Hats off sir.

    ReplyDelete
  12. ಕವನ ಬಹಳ ಚೆನ್ನಾಗಿದೆ

    ReplyDelete
  13. ಸೀತಾರಮ ಸರ್;ಅದ್ಭುತ ಗಾದೆ!ಎಷ್ಟು ಸೊಗಸಾಗಿ ಹೇಳಿದಿರಿ!ಧನ್ಯವಾದಗಳು.

    ReplyDelete
  14. uday hegde;Thanks for your kind compliments.I feel the same way whenever I visit your blog!Your photographs are so good and so refreshing!In fact I will be eagerly waiting to see your next posting.THANKS AGAIN.

    ReplyDelete
  15. ಸಾಗರಿಯವರಿಗೆ ನಮನಗಳು.ನಿಮ್ಮ ಪ್ರೋತ್ಸಾಹ ಪೂರ್ವಕ ಅನಿಸಿಕೆಗಳಿಗೆ ಧನ್ಯವಾದಗಳು.

    ReplyDelete
  16. ಅಲ್ಲಾ,
    ಪಾಪ ಆ ಹಲ್ಲಿ ಸಿಂಕಿನಲ್ಲಿ ಬಿದ್ದು ಒದ್ದಾಡುವಾಗ ನೀವು ನೋಡುತ್ತಾ ಸುಮ್ಮನಿರುವುದಾ?
    ಚಂದದ ಕವನ........

    ReplyDelete
  17. ಸೊಗಸಾಗಿ ಮೂಡಿ ಬ೦ದಿದೆ ಹಲ್ಲಿ ಚಿಟ್ಟೆಯ ಬೇಟೆ.. ಪ್ರಾಸ ಬಧ್ಧವಾಗಿ ಚಿತ್ರಿಸಿದ್ದೀರಿ..ಡಾ.ಮೂರ್ತಿಯವರೆ...ಮನ ರ೦ಜಿಸಿತು.

    ಅನ೦ತ್

    ReplyDelete
  18. ಸಾರ್, ನಿಮ್ಮ ಚಿತ್ತ ಎಲ್ಲೆಲ್ಲಿ ಹೊರಳುತ್ತೋ, ಅಲ್ಲೆಲ್ಲ ಒಂದೊಂದು ಕವಿತೆ ಸುಲಲಿತವಾಗಿ ಹರಿಯುತ್ತದೆ....ಅದೇ ಅಚ್ಚರಿಯ ವಿಷಯ!

    ReplyDelete
  19. ಪ್ರವೀಣ್;ನಮಸ್ಕಾರ.ಹಲ್ಲಿ ಸಿಂಕಿನಲ್ಲಿ ಬಿದ್ದು ಒದ್ದಾಡುತ್ತಿತ್ತು!ಕವಿತೆಯ ಸಿಕ್ಕಿನಲ್ಲಿ ನಾನು ಒದ್ದಾಡುತಿದ್ದೆ!

    ReplyDelete
  20. ಅನಂತರಾಜ್ ಅವರಿಗೆ ನಮನಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.ಹೀಗೇ ಬರುತ್ತಿರಿ.ನಮಸ್ಕಾರ.

    ReplyDelete
  21. ನಾರಾಯಣ್ ಭಟ್ ಸರ್;ನಮಸ್ಕಾರ.
    ಚಿತ್ತ ಅರಳಿದಾಗ
    ಹೊರಳಿದೆಡೆ ಕವಿತೆ!
    ಚಿತ್ತ ಮುದುಡಿದರೆ
    ಬೇಸರದ ಜಡತೆ!

    ReplyDelete
  22. ಭಾಶೆ ಮೇಡಂ;ನಮಸ್ಕಾರ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ತಮ್ಮೆಲ್ಲರ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆಯೇ ಕವಿತೆಗಳಿಗೆ ಇಂಧನ.ಹೀಗೇ ಮುಂದೆಯೂ ತಪ್ಪದೇ ಬರುತ್ತಿರಿ.

    ReplyDelete
  23. ಮೂರ್ತಿ ಸರ್,

    ಹಲ್ಲಿಯ ಬಗ್ಗೆ ನಿಮ್ಮ ಕವನ ಇಷ್ಟವಾಯಿತು. ಬರೆಯಲು ಎಲ್ಲೆಲ್ಲಿ ವಿಚಾರಗಳು ಸಿಗುತ್ತವೆ ಅಲ್ವಾ ಸರ್...
    ಚೆನ್ನಾಗಿದೆ.

    ReplyDelete
  24. ನಮಸ್ಕಾರ ಶಿವೂ ಸರ್;ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.ಹೀಗೇ ಬರುತ್ತಿರಿ.ಬ್ಲಾಗಿನ ನಿಮ್ಮಂತಹ ಹಿರಿಯರು ಬರುತ್ತಿದ್ದರೆ ಬರೆಯಲು ಹೊಸಬರಾದ ನಮಗೆ ಪ್ರೋತ್ಸಾಹ ಸಿಗುತ್ತದೆ.ನಿಮ್ಮ ವೆಂಡರ್ ಕಣ್ಣು ಪುಸ್ತಕ ತಂದು ಓದಿದ ಮೇಲೆ ನಾನು ನಿಮ್ಮ ಫ್ಯಾನ್ ಆಗಿದ್ದೇನೆ.ಪುಸ್ತಕ ಬಹಳ ಇಷ್ಟವಾಯಿತು.ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  25. ಸುಂದರ ಕವಿತೆ ,,,, ಅಲ್ಲಿ , ಇಲ್ಲಿ ..ಎಲ್ಲೆಲ್ಲಿ ... ನಾನು ನಗುತಿರುವೆ ಮೆಚ್ಚಿ ನಿಮ್ಮ ಕವನಕುಳಿತಲ್ಲಿ ...

    ನಮ್ಮ ಬ್ಲೊಗಗು ಒಮ್ಮೆ ಬೇಟಿ ಕೊಡಿ

    ReplyDelete
  26. Murthy sir,

    tadavaagi pratikriyisuttiruvudakke kshame irali....

    tumbaa sundara arthaourana kavana....dhanyavadagalu...

    ReplyDelete

Note: Only a member of this blog may post a comment.